For Quick Alerts
ALLOW NOTIFICATIONS  
For Daily Alerts

ಮೊಸರು ಹೀಗೆ ಬಳಸಿದರೆ 8 ಬಗೆಯ ಕೂದಲ ಸಮಸ್ಯೆ ಹೋಗಲಾಡಿಸಬಹುದು

|

ಮೊಸರು ತಲೆಗೆ ಹಚ್ಚಿದರೆ ಒಳ್ಳೆಯದು ಎಂದು ನೀವು ಕೇಳಿರಬಹುದು. .ಶ್ಯಾಂಪೂ, ಕಂಡೀಷನರ್ ಇವುಗಳೆಲ್ಲಾ ಈ ಕಾಲದಲ್ಲಿ ಬಂದಂಥ ಕೂದಲ ಆರೈಕೆಯ ವಸ್ತುಗಳಾದರೆ, ಮೊಸರು ಬಳಸಿ ಕೂದಲಿನ ಆರೈಕೆಯನ್ನು ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮೊಸರು ಬಳಸುವ ಪ್ರಯೋಜನವೆಂದರೆ ಇದರಿಂದ ಕೂದಲಿನ ಆರೈಕೆ ಆಗುವುದರ ಜೊತೆಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ

Benefits of curds for hair in Kannada | Boldsky Kannada
 Hair Problem

ವಿಟಮಿನ್ಸ್ ಹಾಗೂ ಖನಿಜಾಂಶಗಳ ಅನೇಕ ಸಮಸ್ಯೆಗಳು ಬರುತ್ತದೆ. ತಲೆ ಹೊಟ್ಟು, ತಲೆ ಕೂದಲು ಒಣಗುವುದು, ಹೇನು ಮುಂತಾದ ಸಮಸ್ಯೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಮೊಸರು ಬಳಸಿ ಹೋಗಲಾಡಿಸಬಹುದು. ಇಲ್ಲಿ ಮೊಸರು ಬಳಸಿ ಕೂದಲಿನ ಸಮಸ್ಯೆ ಹೋಗಲಾಡಿಸಿ, ಕೂದಲಿನ ಆರೋಗ್ಯ ಹೆಚ್ಚಿಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ.

1. ತಲೆ ಹೊಟ್ಟಿನ ನಿವಾರಣೆಗೆ

1. ತಲೆ ಹೊಟ್ಟಿನ ನಿವಾರಣೆಗೆ

ತಲೆಹೊಟ್ಟಿನ ಸಮಸ್ಯೆ ಹೋಗಲಾಡಿಸುವಲ್ಲಿ ಮೊಸರು ತುಂಬಾ ಪರಿಣಾಮಕಾರಿ. ಇದರಲ್ಲಿ ವಿಟಮಿನ್ ಬಿ ಮತ್ತು ಪ್ರೊಟೀನ್ ಇದ್ದು ತಲೆಹೊಟ್ಟು ಕಡಿಮೆ ಮಾಡುತ್ತದೆ. ತಲೆಹೊಟ್ಟು ಕಡಿಮೆ ಮಾಡಲು ಮೊಸರನ್ನು ಹೀಗೆ ಬಲಸಿ.

ಬಳಕೆಯ ವಿದಾನ

* ಮೊದಲಿಗೆ ನಿಮ್ಮ ತಲೆಬುಡವನ್ನು ಒದ್ದೆ ಮಾಡಿ. ನಂತರ ತಲೆಬುಡ ಹಾಗೂ ಕೂದಲಿಗೆ ಹಚ್ಚಿ.

* ಮೊಸರು ಹಚ್ಚಿದ ಬಳಿಕ 30 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೊಸರು ಜೊತೆ ಸ್ವಲ್ಪ ನಿಂಬೆರಸ ಹಾಕಿ ಬೆರೆಸಿ ಹಚ್ಚಬಹುದು.

2. ಕೂದಲು ಉದುರುವ ಸಮಸ್ಯೆ

2. ಕೂದಲು ಉದುರುವ ಸಮಸ್ಯೆ

ಕೂದಲು ಉದುರುವ ಸಮಸ್ಯೆಗೆ ಮೊಸರು ಹಾಗೂ ಮೆಂತೆ ಬಳಸುವುದು ಒಳ್ಳೆಯದು. ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು.

ಬಳಕೆಯ ವಿಧಾನ

* ಮೆಂತೆಯನ್ನು ರುಬ್ಬಿ ಪುಡಿ ಮಾಡಿ. ಈಗ ಒಂದು ಕಪ್ ಮೊಸರಿಗೆ ಅರ್ಧ ಕಪ್ ಮೆಂತೆ ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣವನ್ನು ತಲೆಗೆ ಹಚ್ಚಿ 20 ನಿಮಿಷ ಬಿಡಿ.

* ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ಚೆನ್ನಾಗಿ ತಲೆ ತೊಳೆದು ಒಣಗಿಸಿ.

ತಲೆಸ್ನಾನ ಮಾಡುವಾಗ ಹೀಗೆ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು.

ಕೂದಲು ಬೆಳವಣಿಗೆಯಾಗದಿದ್ದರೆ

ಕೂದಲು ಬೆಳವಣಿಗೆಯಾಗದಿದ್ದರೆ

ಕೂದಲು ಉದ್ದ ಬೆಳೆಯಬೇಕೆಂದು ನೀವು ಬಯಸಿ, ಕೂದಲು ಉದ್ದ ಬೆಳೆಯದಿದ್ದರೆ ನಿರಾಸೆಯಾಗುವುದು. ಕೂದಲು ಉದ್ದ ಬೆಳೆಯಲು ನೆಲ್ಲಿಕಾಯಿ ಹಾಗೂ ಮೊಸರಿನ ಮಿಶ್ರಣ ಒಳ್ಳೆಯದು.

ಬಳಸುವ ವಿಧಾನ

* ಒಂದು ಚಮಚ ಮೊಸರಿಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಹಾಗೂ ಎಣ್ಣೆ ಹಾಕಿ ಮಿಶ್ರ ಮಾಡಿ ಅದನ್ನು ತತಲೆಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆ ಬಿಡಿ.

* ನೆಲ್ಲಿಕಾಯಿ ಹಾಗೂ ಮೊಸರಿನಲ್ಲಿರುವ ವಿಟಮಿನ್ಸ್ ಹಾಗೂ ಖನಿಜಾಂಶವನ್ನು ಕೂದಲಿನ ಬುಡ ಚೆನ್ನಾಗಿ ಹೀರಿಕೊಳ್ಳುತ್ತದೆ.

* ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ಒಣ ಕೂದಲಿಗೆ

ಒಣ ಕೂದಲಿಗೆ

ಒಣ ಕೂದಲಿನ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುವುದು. ಇದಕ್ಕೆ ಮೊಟ್ಟೆಯ ಬಿಳಿ ಹಾಗೂ ಮೊಸರು ಉತ್ತಮ ಪರಿಹಾರ.

ಬಳಕೆಯ ವಿಧಾನ

* ಒಂದು ಕಪ್ ಮೊಸರು ತೆಗೆದುಕೊಂಡು ಅದಕ್ಕೆ ಒಂದು ಮೊಟ್ಟೆಯ ಬಿಳಿ ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣವನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹೀಗೆ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಕೂದಲು ಮೃದುವಾಗುವುದು.

ಒರಟು ಕೂದಲು

ಒರಟು ಕೂದಲು

ಕೂದಲು ತುಂಬಾ ಒರಟಾಗಿದ್ದರೆ ಮೊಸರು ಹಾಗೂ ಮೊಟ್ಟೆ, ರೋಸ್‌ಮೆರ್ರಿ ಎಣ್ಣೆ ಬಳಸಿದರೆ ಸಾಕು. ಕೂದಲು ಮೃದುವಾಗುವುದು ಅಲ್ಲದೆ ಸೊಂಪಾಗಿ ಬೆಳೆಯುವುದು.

ಬಳಕೆಯ ವಿಧಾನ

ಒಂದು ಬೌಲ್‌ನಲ್ಲಿ ಒಂದು ಮೊಟ್ಟೆ ಹಾಕಿ ಚೆನ್ನಾಗಿ ಕದಡಿ. ನಂತರ ರೋಸ್‌ಮೆರ್ರಿ ಎಣ್ಣೆ ಹಾಕಿ ಮಿಶ್ರ ಮಾಡಿ. ನಂತರ ಮೊಸರು ಹಾಕಿ ಮಿಶ್ರ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ತಲೆ ತೊಳೆಯಿರಿ.

ಕೂದಲಿಗೆ ಕಂಡೀಷನರ್‌

ಕೂದಲಿಗೆ ಕಂಡೀಷನರ್‌

ರಾಸಾಯನಿಕವಿರುವ ಕಂಡಿಷನರ್‌ ಹಚ್ಚಿದರೆ ಎಲ್ಲಿ ಕೂದಲು ಹಾಳಾಗುತ್ತದೆ ಎಂಬ ಭಯ ನಿಮಗಿದ್ದರೆ ನೈಸರ್ಗಿಕವಾದ ಈ ಕಂಡೀಷನರ್ ಬಳಸಬಹುದು. ಇದು ಕೂದಲು ಕರ್ಷಕವಾಗಿ ಕಾಣುವಂತೆ ಮಾಡುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುವುದು.

ಬಳಕೆಯ ವಿಧಾನ:

1 ಕಪ್ ಮೊಸರು

2 ಚಮಚ ಜೇನು

ಈ ಎರಡು ಸಾಮಗ್ರಿ ಮಿಶ್ರ ಮಾಡಿ, ನಂತರ ಈ ಮಿಶ್ರಣದಿಂದ ತಲೆಬುಡವನ್ನು ಮಸಾಜ್ ಮಾಡಿ 20 ನಿಮಿಷ ಬಿಡಿ, ನಂತರ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ಕೂದಲು ಕವಲೊಡೆಯುವುದು

ಕೂದಲು ಕವಲೊಡೆಯುವುದು

ಬಾಳೆ ಹಣ್ಣಿನಲ್ಲಿ ಪೊಟಾಷ್ಯಿಯಂ ಅಧಿಕವಿದೆ. ಇದು ಕೂದಲು ಕವಲೊಡೆಯುವುದನ್ನು ತಡೆಗಟ್ಟುತ್ತದೆ. ಮೊಸರು ಹಾಗೂ ಬಾಳೆಹಣ್ಣು ಬಳಸಿ ಕೂದಲು ಕವಲೊಡೆಯುವುದು ಹೇಗೆ ಎಂದು ನೋಡೋಣ:

ಬಳಕೆಯ ವಿಧಾನ:

ಒಂದು ಬೌಲ್‌ನಲ್ಲಿ ಬಾಳೆಹಣ್ಣು ಹಾಗೂ ಮೊಸರು ಹಾಕಿ ಮಿಶ್ರ ಮಾಡಿ, ಅದನ್ನು ಕೂದಲಿ ಬುಡಕ್ಕೆ ಹಾಗೂ ತುದಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ. ಕೂದಲಿಗೆ ಬಾಳೆಹಣ್ಣು ಹಚ್ಚಿದರೆ ಕೂದಲು ಮಂದವಾಗಿ ಕೂಡ ಕಾಣುವುದು.

 ತಲೆಹೇನು ಹೋಗಲಾಡಿಸಲು

ತಲೆಹೇನು ಹೋಗಲಾಡಿಸಲು

ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಕಂಡು ಬರುವುದು ಸಹಜ. ಇದನ್ನು ಹೋಗಲಾಡಿಸಲು ಕೂದಲನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಈರುಳ್ಳಿ ಹಾಗೂ ಮೊಸರು ಮಿಶ್ರ ಮಾಡಿ ಹಚ್ಚಿದರೆ ತಲೆ ಹೇನು ಇಲ್ಲವಾಗುವುದು.

ಬಳಕೆಯ ವಿಧಾನ

* ಈರುಳ್ಳಿಯನ್ನು ರುಬ್ಬಿ ಅದರ ರಸ ತೆಗೆಯಿರಿ.

* ಆ ರಸಕ್ಕೆ ಒಂದು ಕಪ್ ಮೊಸರು ಮಿಶ್ರ ಮಾಡಿ, ತಲೆಗೆ ಹಚ್ಚಿ 10-15 ನಿಮಿಷ ಬಿಡಿ.

* ನಂತರ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

English summary

How To Use Curd To Tackle Different Hair Problems

Curd is the best remedies to cure hair problem. Check out these curd-based home remedies for any hair issue that you might face.
Story first published: Friday, January 10, 2020, 15:01 [IST]
X
Desktop Bottom Promotion