For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ ಹರ್ಬಲ್ ಎಣ್ಣೆ ಮಾಡುವುದು ಹೇಗೆ?

|

ಕೂದಲು ಉದುರುವ ಸಮಸ್ಯೆಯಿದೆ ಎಂದು ನೀವೇನು ದುಬಾರಿ ಬೆಲೆಯ ಎಣ್ಣೆ ಖರೀದಿ ಮಾಡಬೇಕಾಗಿಲ್ಲ, ನೀವೇ ಹರ್ಬಲ್ ಎಣ್ಣೆ ಮಾಡಿಕೊಳ್ಳಬಹುದಾಗಿದ್ದು, ಈ ಎಣ್ಣೆ ಕೂದಲು ಉದುರುವುದನ್ನು ತಡೆಗಟ್ಟುವುದರ ಜೊತೆಗೆ ಕೂದಲನ್ನು ಬುಡದಿಂದಲೇ ಬಲವಾಗಿಸುತ್ತದೆ.

How To Prepare homemade herbal oil for hair in Kannada

ಕೆಲವರಿಗೆ ಅಕಾಲಿಕ ನೆರೆ ಕೂದಲು ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿ ಕೂಡ ಈ ಹರ್ಬಲ್ ಎಣ್ಣೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಕನ್ನಡ ಬೋಲ್ಡ್‌ ಸ್ಕೈ ಹರ್ಬಲ್ ಎಣ್ನೆ ತಯಾರಿಸುವುದು ಹೇಗೆ ಎಂದು ವೀಡಿಯೋ ಸಹಿತ ವಿವರಿಸಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ

ಬೇಕಾಗುವ ಸಾಮಗ್ರಿ

200ml ತೆಂಗಿನೆಣ್ಣೆ

ಅರ್ಧ ಕಪ್ ಕರಿಬೇವಿನ ಎಲೆ

ಅರ್ಧ ಕಪ್ ನೆಲ್ಲಿಕಾಯಿ (ಕತ್ತರಿಸಿದ್ದು)

ವಿಟಮಿನ್‌ ಇ ಎಣ್ಣೆ

ಹರಳೆಣ್ಣೆ (optional)

 ಹರ್ಬಲ್ ಎಣ್ಣೆ ಮಾಡುವಾಗ ಗಮನಿಸಬೇಕಾದ ಅಂಶಗಳು

ಹರ್ಬಲ್ ಎಣ್ಣೆ ಮಾಡುವಾಗ ಗಮನಿಸಬೇಕಾದ ಅಂಶಗಳು

  • ಈ ಎಣ್ಣೆ ಮಾಡಲು ಕಬ್ಬಿಣದ ಬಾಣಲೆಯನ್ನೇ ಉಪಯೋಗಿಸಿ, ಯಾವುದೇ ಕಾರಣಕ್ಕೆ ನಾನ್‌ಸ್ಟಿಕ್ ಪ್ಯಾನ್ ಬಳಸಬೇಡಿ.ಕಬ್ಬಿಣದ ಬಾಣಲೆ ಇಲ್ಲದೇ ಹೋದರೆ ದಪ್ಪ ತಳದ ಅಲ್ಯುಮಿನಿಯಂ ಪಾತ್ರೆ ಬೇಕಾದರೆ ಬಳಸಬಹುದು.
  • ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು, ಎಣ್ಣೆ ಸೀದಿ ಹೋಗಬಾರದು ಅಥವಾ ಅದರಲ್ಲಿ ಹಾಕುವ ಪದಾರ್ಥಗಳು ಸುಟ್ಟು ಹೋಗಬಾರದು.
  •  ಮಾಡುವುದು ಹೇಗೆ?

    ಮಾಡುವುದು ಹೇಗೆ?

    • ಕರಿಬೇವು, ಈರುಳ್ಳಿ, ಕತ್ತರಿಸಿದ ಈರುಳ್ಳಿಯನ್ನು ರುಬ್ಬಿ ಇಡಿ, ಕಲ್ಲಿನಲ್ಲಿ ರುಬ್ಬಿದರೆ ತುಂಬಾ ಒಳ್ಳೆಯದು, ಮಿಕ್ಸಿಯಲ್ಲೂ ರುಬ್ಬಬಹುದು. (ರುಬ್ಬುವಾಗ ನೀರು ಹಾಕಬೇಡಿ)
    • ಮಿಶ್ರಣವನ್ನು ತುಂಬಾ ನುಣ್ಣನೆ ರುಬ್ಬಿ.
    • ಮೊದಲಿಗೆ 100ml ಎಣ್ಣೆಯನ್ನು ಪ್ಯಾನ್‌ಗೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದಾಗ ಅದಕ್ಕೆ ರುಬ್ಬಿದ ಸಾಮಗ್ರಿ ಹಾಕಿ. ಕಡಿಮೆ ಉರಿಯಲ್ಲಿ 30-50 ನಿಮಿಷ ಕುದಿಯಲಿ. ಹೀಗೆ ಕುದಿಯುವಾಗ ತಳ ಹಿಡಿಯದಂತೆ ಎಚ್ಚರವಹಿಸಿ, ಅದರಲ್ಲಿರುವ ತೇವಾಂಶ ಆವಿಯಾಗಿ ಮಿಶ್ರಣ ಕಪ್ಪು ಬಣ್ಣಕ್ಕೆ ತಿರುಗಲಿ. ಸಾಮಗ್ರಿ ಕಪ್ಪು ಬಣ್ಣಕ್ಕೆ ತಿರುಗಿದ ಮೇಲೆ ಗ್ಯಾಸ್ ಆಫ್ ಮಾಡಿ, ಅದನ್ನು ಒಂದು ರಾತ್ರಿ ಹಾಗೇ ಬಿಡಿ.

      ಸಂಗ್ರಹಣೆ

      ಸಂಗ್ರಹಣೆ

      • ಎಣ್ಣೆಯನ್ನು ಸೋಸಿ ಡಬ್ಬದಲ್ಲಿ ಹಾಕಿಡಿ.
      • ಈಗ ವಿಟಮಿನ್ ಇ ಮತ್ತು ಹರಳೆಣ್ಣೆ ಹಾಕಿ.
      • ಇಷ್ಟು ಮಾಡಿದರೆ ತಲೆಗೆ ಹಚ್ಚಲು ಎಣ್ಣೆ ರೆಡಿ.

        ಎಷ್ಟು ಸಮಯ ಬಳಸಬಹುದು?

        • ಈ ಎಣ್ಣೆಯನ್ನು ನೀವು 6 ತಿಂಗಳವರೆಗೆ ಇಟ್ಟು ಬಳಸಬಹುದು.
        • ಹರ್ಬಲ್ ಎಣ್ಣೆಯ ಪ್ರಯೋಜನಗಳು

          ಹರ್ಬಲ್ ಎಣ್ಣೆಯ ಪ್ರಯೋಜನಗಳು

          • ಕೂದಲು ಉದುರುವ ಸಮಸ್ಯೆ ಇರುವವರು ಇದನ್ನು ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು.
          • ಕೂದಲು ಮಂದವಾಗಿ ಬೆಳೆಯುವುದು.
          • ಅಕಾಲಿಕ ನೆರೆ (ಬಿಳಿ ಕೂದಲು) ಉಂಟಾಗುವುದಿಲ್ಲ
            • ತೆಂಗಿನೆಣ್ಣೆ: ತೆಂಗಿನೆಣ್ಣೆ ಕೂದಲನ್ನು ನೈಸರ್ಗಿಕವಾಗಿ ಪೋಷಣೆ ಮಾಡುತ್ತದೆ.
              • ಕರಿಬೇವು: ಕರಿಬೇವಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದ್ದು ಇದು ತಲೆಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ, ಅಲ್ಲದೆ ಇದರಲ್ಲಿರುವ ಬೀಟಾ ಕೆರೋಟಿನ್ ಮತ್ತು ಪ್ರೊಟೀನ್ ಅಧಿಕವಿದ್ದು ಇದು ಕೂದಲು ಉದುರುವುದನ್ನು ಹಾಗೂ ಕೂದಲು ತೆಳ್ಳಗಾಗುವುದನ್ನು ತಡೆಗಟ್ಟುತ್ತದೆ.
                • ನೆಲ್ಲಿಕಾಯಿ: ನೆಲ್ಲಿಕಾಯಿ ಕೂಡ ಕೂದಲಿನ ಬೆಳವಣಿಗೆಗೆ ತುಂಬಾನೇ ಸಹಕಾರಿ, ಇದು ಕೂದಲಿನ ಬುಡವನ್ನು ಬಲವಾಗಿಸಿ ಕೂದಲು ಮಂದವಾಗಿ ಬೆಳೆಯುವಂತೆ ಮಾಡುತ್ತದೆ.
                • ವಿಟಮಿನ್ ಇ ಮತ್ತು ಹರಳೆಣ್ಣೆ: ವಿಟಮಿನ್ ಇ ಮತ್ತು ಹರಳೆಣ್ಣೆ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
                • ಈ ಎಲ್ಲಾ ಸಾಮಗ್ರಿಗಳ ಎಣ್ಣೆ ಹಚ್ಚಿದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯುವುದು ನೋಡಿ.

English summary

How To Prepare homemade herbal oil for hair in Kannada

Here are how to prepare homemade herbal oil for hair, Read on...
Story first published: Wednesday, October 14, 2020, 17:51 [IST]
X
Desktop Bottom Promotion