For Quick Alerts
ALLOW NOTIFICATIONS  
For Daily Alerts

ಫೇಶಿಯಲ್ ಹೇರ್ ಶಾಶ್ವತವಾಗಿ ಹೋಗಲಾಡಿಸುವುದು ಹೇಗೆ? ನ್ಯೂಟ್ರಿಷಿಯನಿಸ್ಟ್‌ ರಾಶಿ ಚೌಧರಿ ಏನು ಹೇಳಿದ್ದಾರೆ ನೋಡಿ

|

ಹೆಣ್ಮಕ್ಕಳಿಗೆ ಮುಖದ ಮೇಲೆ ಹಾಗೂ ಕೈ -ಕಾಲುಗಳಲ್ಲಿ ತುಂಬಾ ಕೂದಲಿದ್ದರೆ ಚೆನ್ನಾಗಿ ಕಾಣಲ್ಲ. ಕೆಲವರಿಗೆ ಚಿಗುರು ಮೀಸೆಯಂತೆ ಕೂದಲು ಬಂದಿರುತ್ತದೆ, ಗಲ್ಲ, ಕೆನ್ನೆ
ಭಾಗದಲ್ಲಿ ಕೂದಲು ಬಂದಿರುತ್ತೆ. ಈ ಕೂದಲನ್ನು ವ್ಯಾಕ್ಸ್‌ ಮಾಡಿಸಿದರೆ ತುಂಬಾ ನೋವು ಉಂಟಾಗುವುದು, ಪ್ರತಿ ತಿಂಗಳು ಆ ನೋವು ಅನುಭವಿಸಬೇಕಾಗುತ್ತದೆ, ಏಕೆಂದರೆ ವ್ಯಾಕ್ಸ್ ಮಾಡಿಸಿದರೆ 15-20 ದಿನಕ್ಕೆ ಮತ್ತೆ ಕೂದಲು ಬೆಳೆಯಲಾರಂಭಿಸುವುದು.

ಇನ್ನು ಮನೆಮದ್ದು ಮಾಡಿದರೆ ಅಷ್ಟು ಸುಲಭದಲ್ಲಿ ಆ ಸಮಸ್ಯೆ ಬಗೆಹರಿಯಲ್ಲ, ಹಾಗಾದರೆ ಇಂಥ ಸಮಸ್ಯೆಗೆ ಶಾಶ್ವತ ಪರಿಹಾರವೇನು ಎಂಬುವುದಕ್ಕೆ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರಾಶಿ ಚೌಧರಿ ಟಿಪ್ಸ್ ನೀಡಿದ್ದಾರೆ.

ರಾಶಿ ಚೌಧರಿಯವರಿಗೂ ಮುಖದಲ್ಲಿ ತುಂಬಾ ಕೂದಲು ಬೆಳೆಯುತ್ತಿತ್ತು, ಅದನ್ನು ಹೇಗೆ ಹೋಗಲಾಡಿಸಿದರು, ಯಾವ ವಿಷಯವನ್ನು ನಂಬಬಾರದು ಎಂಬುವುದಾಗಿ ಹೇಳಿದ್ದಾರೆ ನೋಡಿ:

 ಕ್ಲೀನ್‌ ಡಯಟ್‌ನಿಂದ ಮುಖದ ಕೂದಲು ಹೋಗಲಾಡಿಸಬಹುದೇ?

ಕ್ಲೀನ್‌ ಡಯಟ್‌ನಿಂದ ಮುಖದ ಕೂದಲು ಹೋಗಲಾಡಿಸಬಹುದೇ?

ರಾಶಿ ಚೌಧರಿ ಸುಮಾರು 10 ವರ್ಷಗಳಿಂದ ಕ್ಲೀನ್‌ ಡಯಟ್‌ ಮಾಡುತ್ತಾ ಬಂದಿದ್ದಾರೆ, ಹಾಗಾದರೆ ಡಯಟ್‌ನಿಂದ ಮುಖದಲ್ಲಿದ್ದ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೇ ಎಂದು ನೋಡುವುದಾದರೆ ಇಲ್ಲ, ಹಾಗಾದರೆ ಅವರು ಮುಖದಲ್ಲಿ ತುಂಬಾ ಬೆಳೆಯುತ್ತಿದ್ದ ಕೂದಲನ್ನು ಹೇಗೆ ಹೋಗಲಾಡಿಸಿದರು ಎಂದು ನೋಡೋಣ.

ಲೇಝರ್ ಟ್ರೀಟ್ಮೆಂಟ್

ಲೇಝರ್ ಟ್ರೀಟ್ಮೆಂಟ್

ಮುಖದಲಿ ತುಂಬಾ ಕೂದಲು ಬೆಳೆಯುತ್ತಿದ್ದರೆ ಲೇಝರ್‌ ಟ್ರೀಟ್ಮೆಂಟ್‌ ಅಲ್ಲದೆ ಬೇರೇನೂ ವರ್ಕ್‌ ಆಗಲ್ಲ ಎಂಬುವುದಾಗಿ ಚೌಧರಿ ಹೇಳಿದ್ದಾರೆ. ಯಾವುದೇ ಡಯಟ್‌ನಿಂದ ಮುಖದ ಕೂದಲನ್ನು ಹೋಗಲಾಡಿಸಲು ಸಾಧ್ಯವಿಲ್ಲ, ಈ ಬಗ್ಗೆ ಯಾರಾದರೂ ಹೇಳಿದರೆ ಅದನ್ನು ನಂಬಬೇಡಿ ಎಂಬುವುದಾಗಿ ಕಿವಿ ಮಾತನ್ನೂ ಹೇಳಿದ್ದಾರೆ.

ಲೇಝರ್‌ ಟ್ರೀಟ್ಮೆಂಟ್‌ ಮುಖಕ್ಕೆ ಮಾಡಿಸಿದರೆ ಅಡ್ಡಪರಿಣಾಮ ಉಂಟಾಗುವುದೇ?

ಲೇಝರ್‌ ಟ್ರೀಟ್ಮೆಂಟ್‌ ಮುಖಕ್ಕೆ ಮಾಡಿಸಿದರೆ ಅಡ್ಡಪರಿಣಾಮ ಉಂಟಾಗುವುದೇ?

ರಾಶಿ ಚೌಧರಿಯವರು ಮೊದಲು ಫುಲ್‌ ಬಾಡಿ ಲೇಸರ್‌ ಟ್ರೀಟ್ಮೆಂಟ್ ಮಾಡಿ, ಅದಾದ ಬಳಿಕ ಫೇಶಿಯಲ್‌ ಟ್ರೀಟ್ಮೆಂಟ್‌ ಮಾಡಿರುವುದಾಗಿ ಹೇಳಿದ್ದಾರೆ. ಲೇಸರ್‌ ಟ್ರೀಟ್ಮೆಂಟ್‌ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿ ಪಾಲಿಸುತ್ತಿರುವುದರಿಂದ ಮುಖದಲ್ಲಿ ಕೂದಲಿನ ಸಮಸ್ಯೆಯಿಲ್ಲದೆ, ಆರೋಗ್ಯಕರ ಹಾಗೂ ಸುಂದರವಾದ ತ್ವಚೆಯನ್ನು ಪಡೆದಿದ್ದಾರೆ.

ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮುಖದಲ್ಲ ಕೂದಲು ಬೆಳೆಯುತ್ತದೆ

ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮುಖದಲ್ಲ ಕೂದಲು ಬೆಳೆಯುತ್ತದೆ

ಮಹಿಳೆಯರಿಗೆ ಹಾರ್ಮೋನ್‌ಗಳಲ್ಲಿ ಬದಲಾವಣೆಯಾದಾಗ ಮುಖ, ಕೈ ಕಾಲುಗಳಲ್ಲಿ ತುಂಬಾನೇ ಕೂದಲು ಬೆಳೆಯುತ್ತದೆ, ಮುಖದಲ್ಲಿ ತುಂಬಾ ಕೂದಲು ಬಂದರೆ ಆತ್ಮವಿಶ್ವಾಸ ಕೂಡ ಕುಗ್ಗುವುದು. ಯಾರಿಗೆ ಈ ರೀತಿಯ ಸಮಸ್ಯೆ ಇದೆಯೋ ಅವರು ಲೇಸರ್‌ ಟ್ರೀಟ್ಮೆಂಟ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂಬುವುದಾಗಿ ರಾಶಿ ಚೌಧರಿ ಹೇಳಿದ್ದಾರೆ.

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

English summary

How To Get Rid From Hirsutism? Rashi chowdhary Revealed The Secret in kannada

How To Get permanent solution for hirsutism, famous nutritionist Rashi chowdhary revealed, how she get rid from this problem?
Story first published: Friday, September 2, 2022, 11:38 [IST]
X
Desktop Bottom Promotion