Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರಿಶಿನದ ಹೇರ್ ಮಾಸ್ಕ್ ಬಳಸಿ- ಕೂದಲು ಉದ್ದವಾಗಿ ಬೆಳೆಯುತ್ತದೆ!
ಅರಿಶಿನ, ಭಾರತದ ಬಹುತೇಕ ಎಲ್ಲೆಡೆ 'ಹಲ್ದೀ' ಎಂದೇ ಜನಪ್ರಿಯವಾಗಿದ್ದು ಅಡುಗೆಯ ಹೊರತಾಗಿ ಆರೋಗ್ಯ ಮತ್ತು ಸೌಂದರ್ಯ ರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಪ್ರತಿಜೀವಕ ಹಾಗೂ ಗುಣಪಡಿಸುವ ಗುಣಗಳು ಇದನ್ನೊಂದು ಅದ್ಭುತ ಗಿಡಮೂಲಿಕೆಯಾಗಿಸಿವೆ. ಅಲ್ಲದೇ ಮುಖ ಮತ್ತು ದೇಹದ ಇತರ ಭಾಗದಲ್ಲಿರುವ ಅನಗತ್ಯ ಕೂದಲನ್ನು ನಿವಾರಿಸಲು ಅತ್ಯುತ್ತಮ ಪರಿಹಾರ ಎಂದು ಅರಿಶಿನವನ್ನು ಗುರುತಿಸಲಾಗಿದೆ. ಆದರೆ ಈ ಅರಿಶಿನ ನಿಮ್ಮ ಕೂದಲಿಗೂ ಅತ್ಯುತ್ತಮ ಆರೈಕೆ ನೀಡುತ್ತದೆ ಎಂದು ಇದಕ್ಕೂ ಮುನ್ನ ನಿಮಗೆ ತಿಳಿದಿತ್ತೇ? ಬನ್ನಿ, ಇಂದಿನ ಲೇಖನದಲ್ಲಿ ಅರಿಶಿನವನ್ನು ಕೂದಲ ಉದ್ದ ಹೆಚ್ಚಿಸಲು ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ಕೂದಲು ಉದುರುವುದರಿಂದ ರಕ್ಷಿಸುತ್ತದೆ ಹಾಗೂ ಕೂದಲು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ
ನಿಮ್ಮ ನಿತ್ಯದ ಕೂದಲ ಆರೈಕೆಯಲ್ಲಿ ಅರಿಶಿನವನ್ನು ಅಳವಡಿಸಿಕೊಳ್ಳುವ ಮೂಲಕ ಕೂದಲಿಗೆ ಹೆಚ್ಚಿನ ಪೋಷಣೆ ದೊರೆತು ಕೂದಲ ಆರೋಗ್ಯ ವೃದ್ಧಿಗೊಳ್ಳುವುದರ ಜೊತೆಗೇ ಉದುರುವ ಪ್ರಮಾಣವೂ ಕಡಿಮೆಯಾಗುತ್ತದೆ. ಇದಕ್ಕಾಗಿ ಹಸಿ ಹಾಲಿನಲ್ಲಿ ಕೊಂಚ ಅರಿಶಿನ ಪುಡಿಯನ್ನು ಬೆರೆಸಿ. ಒಂದು ವೇಳೆ ನಿಮ್ಮದು ಒಣಗೂದಲಾಗಿದ್ದರೆ ಇದಕ್ಕೆ ಎರಡು ದೊಡ್ಡ ಚಮಚ ಜೇನನ್ನು ಬೆರೆಸಿ. ಉಳಿದ ಬಗೆಯ ಕೂದಲಿರುವವರು ಜೇನು ಬೆರೆಸದೇ ಬಳಸಿ. ಈ ದ್ರವವನ್ನು ನೆತ್ತಿಗೆ ಕೊಂಚಕೊಂಚವಾಗಿ ಸುರಿದುಕೊಂಡು ನಯವಾಗಿ ಮಸಾಜ್ ಮಾಡಿಕೊಳ್ಳಿ. ಎಲ್ಲಾ ಪ್ರಮಾಣ ಖಾಲಿಯಾದ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಅತ್ಯುತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ. ಶೀಘ್ರವೇ ನೀಳ ಮತ್ತು ಸೊಂಪಾದ ಕೂದಲು ನಿಮ್ಮದಾಗುತ್ತದೆ, ಹಾಗೂ ಕೂದಲು ಉದ್ದವಾಗಿ ಬೆಳೆಯುತ್ತದೆ

ತಲೆಹೊಟ್ಟಿನ ನಿವಾರಣೆಗೆ
ಅರಿಶಿನದಲ್ಲಿ ಬ್ಯಾಕ್ಟೀರಿಯಾನಿವಾರಕ, ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳು ತಲೆಹೊಟ್ಟನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ ಕೊಂಚ ಅರಿಶಿನ ಪುಡಿಯನ್ನು ಕೆಲವು ದೊಡ್ಡ ಚಮಚದಷ್ಟು ಅಪ್ಪಟ ಆಲಿವ್ ಎಣ್ಣೆಯಲ್ಲಿ ಬೆರೆಸಿ ದಪ್ಪನಾದ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ತಲೆಗೆ ಹಚ್ಚಿಕೊಂಡು ಕೊಂಚ ಹೊತ್ತು ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ನೆತ್ತಿಯ ಚರ್ಮ ಸ್ವಚ್ಛಗೊಳ್ಳುವುದು ಮಾತ್ರವಲ್ಲ, ತಲೆಹೊಟ್ಟು ಸಹಾ ನಿವಾರಣೆಯಾಗುತ್ತದೆ. ಜೊತೆಗೇ ಚರ್ಮದ ಅಡಿಯಲ್ಲಿ ರಕ್ತಪರಿಚಲನೆಯೂ ಉತ್ತಮಗೊಂಡು ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ.

ಆಕರ್ಷಕ ನೈಸರ್ಗಿಕ ಕೂದಲ ಬಣ್ಣ
ನಿಮ್ಮ ಕೂದಲ ಬಣ್ಣವನ್ನು ಬದಲಿಸಲು ಮದರಂಗಿಯನ್ನು ಬಳಸುತ್ತೀರಾ? ಹಾಗಾದರೆ ಮುಂದಿನ ಬಾರಿ ಮದರಂಗಿಯೊಂದಿಗೆ ಕೊಂಚ ಅರಿಶಿನವನ್ನು ಬೆರೆಸಿ ಬಳಸಿ. ಈಗ ನಿಮ್ಮ ಕೂದಲು ಕೊಂಚವೇ ಚಿನ್ನದ ಬಣ್ಣವನ್ನು ಪಡೆದು ಬೆಳಕಿನಲ್ಲಿ ಹೊಳೆಯತೊಡಗುತ್ತದೆ. ಲೇಪನ ಹಚ್ಚಿಕೊಂಡ ಬಳಿಕ ಸುಮಾರು ಮೂರರಿಂದ ನಾಲ್ಕು ಘಂಟೆಗಳ ಕಾಲ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕ ಸೌಮ್ಯ ಶಾಂಪೂ ಮತ್ತು ಕಂಡೀಶನರ್ ಬಳಸಿ ಸ್ನಾನ ಮಾಡಿ.

ವಿವಿಧ ತಲೆಯ ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ
ತಲೆಬುರುಡೆಯ ಚರ್ಮ ಅತಿ ಹೆಚ್ಚು ಕೂದಲ ಬುಡಗಳನ್ನು ಹೊಂದಿರುವ ಕಾರಣ ಅತಿ ಸೂಕ್ಷ್ಮವಾಗಿದೆ. ತುರಿಕೆ, ಶಿಲೀಂಧ್ರದ ಸೋಂಕು, ಕೂದಲು ತೆಳ್ಳಗಾಗುವುದು, ಅಲ್ಲಲ್ಲಿ ಉದುರುವುದು, ಉರಿ, ಮೊದಲಾದವು ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಇದಕ್ಕಾಗಿ ಅರಿಶಿನದ ಪುಡಿಯನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿ. ಕೊಂಚ ಸಮಯ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನಾರಾವರ್ತಿಸಿ.