For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ ವಾಲ್‌ನಟ್‌ನ ಟಾಪ್ ಪ್ರಯೋಜನಗಳು

|

ಒಣ ಬೀಜಗಳು ಹಾಗೂ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದರಲ್ಲಿ ಇರುವಂತಹ ಪೋಷಕಾಂಶಗಳಿಂದಾಗಿ ಸೌಂದರ್ಯವರ್ಧಕಗಳಲ್ಲೂ ಇದನ್ನು ಬಳಸಿಕೊಳ್ಳಲಾಗುತ್ತದೆ. ವಾಲ್ ನಟ್(ಅಕ್ರೋಡ)ನಲ್ಲಿ ಇರುವಂತಹ ಒಮೆಗಾ3 ಕೊಬ್ಬಿನಾಮ್ಲ ಮತ್ತು ಏಕಪರ್ಯಾಪ್ತ ಕೊಬ್ಬಿನಾಮಗಳು ತುಂಬಾ ಪರಿಣಾಮಕಾರಿ.

ವಾಲ್ ನಟ್ ನ್ನು ಕೂದಲಿನ ಆರೈಕೆಯಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯಾ? ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು. ವಾಲ್‌ನಟ್ ನಿಮ್ಮ ಕೂದಲನ್ನು ಆರೋಗ್ಯವಾಗಿಡುವುದು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು.

ವಾಲ್‌ನಟ್‌ನಿಂದ (ಅಕ್ರೋಟ್) ಕೂದಲಿಗೆ ಆಗುವ ಲಾಭಗಳು

ವಾಲ್‌ನಟ್‌ನಿಂದ (ಅಕ್ರೋಟ್) ಕೂದಲಿಗೆ ಆಗುವ ಲಾಭಗಳು

ತಲೆಹೊಟ್ಟು ನಿವಾರಣೆ ಮಾಡಲು ನೆರವಾಗುವುದು ತಲೆಹೊಟ್ಟು ಎನ್ನುವುದು ನಿಮಗೆ ಒಂದು ಅಚ್ಚರಿಯೇನಲ್ಲ. ಆದರೆ ಕೂದಲಿನಲ್ಲಿ ಇರುವಂತಹ ಮೇದಸ್ಸಿನ ಗ್ರಂಥಿಗಳು ಕಡಿಮೆ ಎಣ್ಣೆಯನ್ನು ಉತ್ಪತ್ತಿ ಮಾಡಿದರೆ ಆಗ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದು. ಕೂದಲು ಮತ್ತು ತಲೆಹೊಟ್ಟಿಗೆ ಸರಿಯಾದ ಪೋಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲವೇ? ಹಾಗಾದರೆ ವಾಲ್ ನಟ್ ಅತ್ಯುತ್ತ ಮವಾಗಿ ಕೆಲಸ ಮಾಡುವುದು ಮತ್ತು ಇದು ತಲೆಹೊಟ್ಟು ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಕೆಲವೊಂದು ಪ್ರಮುಖ ಕೊಬ್ಬಿನಾಮ್ಲಗಳು ಕೂದಲಿಗೆ ಅದ್ಭುತವಾಗಿ ಕೆಲಸ ಮಾಡುವುದು.

Most Read: ವಾಲ್‍ನಟ್ ಎಣ್ಣೆ ಬಳಸಿ, ಕಲೆ ಮುಕ್ತ ತ್ವಚೆ ನಿಮ್ಮದಾಗಿಸಿ!

ಕೂದಲು ಉದುರುವಿಕೆ ತಗ್ಗಿಸುವುದು

ಕೂದಲು ಉದುರುವಿಕೆ ತಗ್ಗಿಸುವುದು

ಮೇದಸ್ಸಿನ ಕೊರತೆಯಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯು ಕಾಣಿಸಿಕೊಳ್ಳುವುದು. ನಿಮ್ಮ ಆಹಾರ ಕ್ರಮದಲ್ಲಿ ಅಕ್ರೋಡವನ್ನು ಸೇರಿಸಿಕೊಂಡಾಗ ದೇಹಕ್ಕೆ ಬೇಕಾಗಿರುವಂತಹ ಸೆಲೆನಿಯಂ ಅಂಶವು ಸಿಗುವುದು. ಇದರೊಂದಿಗೆ ವಾಲ್ ನಟ್ ನಲ್ಲಿ ಉನ್ನತ ಮಟ್ಟದ ಬಿಯೊಟಿನ್(ವಿಟಮಿನ್ ಬಿ7) ಇದೆ. ಇದು ಕೂದಲು ಉದುರುವಿಕೆ ತಡೆಯುವುದು. ಇದರಿಂದಾಗಿ ಆರೋಗ್ಯಕಾರಿ ಮತ್ತು ಉದ್ದ ಕೂದಲಿಗೆ ಪ್ರತಿನಿತ್ಯ ನಿಮ್ಮ ಆಹಾರ ಕ್ರಮದಲ್ಲಿ ವಾಲ್ ನಟ್ ನ್ನು ಸೇರಿಸಿಕೊಳ್ಳಿ.

ಅಕ್ರೋಟ್ ಬೀಜಗಳಲ್ಲಿ ಅಡಗಿದೆ ಸಕಲ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಕೂದಲು ಬಲಗೊಳ್ಳಲು ವಾಲ್ ನಟ್

ಕೂದಲು ಬಲಗೊಳ್ಳಲು ವಾಲ್ ನಟ್

ಬಿಸಿಲಿನೊಂದಿಗೆ ವಾತಾವರಣದಲ್ಲಿ ಇರುವಂತಹ ಕಲ್ಮಷಗಳು ಕೂದಲಿಗೆ ತುಂಬಾ ಹಾನಿ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಉನ್ನತ ಮಟ್ಟದ ಪೊಟಾಶಿಯಂ, ಒಮೆಗಾ-3, ಒಮೆಗಾ-6 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳು ಕೂದಲನ್ನು ಬುಡದಿಂದ ತುದಿಯ ತನಕ ತುಂಬಾ ಬಲಗೊಳಿಸುವುದು. ವಾಲ್ ನಟ್ ನ್ನು ಸೇವನೆ ಮಾಡಲು ಆರಂಭಿಸಿದ ಬಳಿಕ ನಿಮಗೆ ಕೂದಲಿಗೆ ಪೋಷಣೆ ಸಿಗುವುದು ತಿಳಿಯಲಿದೆ. ಒಮೆಗಾ2 ಕೊಬ್ಬಿನಾಮ್ಲವು ಕೂದಲಿಗೆ ಪೋಷಣೆ ನೀಡುವಲ್ಲಿ ಮತ್ತು ಬಲಗೊಳಿಸಲು ತುಂಬಾ ಪ್ರಮುಖ ಪಾತ್ರ ವಹಿಸುವುದು.

ವಾಲ್ ನಟ್ ಸಿಪ್ಪೆಯಿಂದ ಕೂದಲಿಗೆ ಬಣ್ಣ

ವಾಲ್ ನಟ್ ಸಿಪ್ಪೆಯಿಂದ ಕೂದಲಿಗೆ ಬಣ್ಣ

ರಾಸಾಯನಿಕ ಮುಕ್ತವಾಗಿರುವಂತಹ ಹೇರ್ ಡೈಯಿಂದಾಗಿ ಕೂದಲಿಗೆ ಯಾವುದೇ ಹಾನಿ ಮಾಡುವುದಿಲ್ಲ. ವಾಲ್ ನಟ್ ನ ಸಿಪ್ಪೆಯಿಂದ ಕೂದಲಿಗೆ ಬಣ್ಣ ನೀಡಬಹುದು. ತುಂಬಾ ಗಟ್ಟಿಯಾಗಿರುವಂತಹ ವಾಲ್ ನಟ್ ನ ಸಿಪ್ಪೆಯು ಕೂದಲಿಗೆ ಗಾಢ ಬಣ್ಣ ನೀಡುವುದು. ನಿಮಗೆ ಇದರಿಂದ ಕೂದಲಿಗೆ ಬಣ್ಣ ನೀಡಬೇಕಾಗಿದ್ದರೆ ಆಗ ನೀವು ಇದನ್ನು ಬಳಸಿಕೊಳ್ಳಬಹುದು.

Most Read:ವಾಲ್‍ನಟ್ ಎಣ್ಣೆ ಸ್ವಲ್ಪ ದುಬಾರಿಯಾದರೂ, ಲಾಭಗಳು ಅಪಾರ!

ವಾಲ್ ನಟ್ ನ ಸಿಪ್ಪೆಯನ್ನು ಕೂದಲಿಗೆ ಬಣ್ಣ ನೀಡಲು ಬಳಸುವುದು ಹೇಗೆ?

ವಾಲ್ ನಟ್ ನ ಸಿಪ್ಪೆಯನ್ನು ಕೂದಲಿಗೆ ಬಣ್ಣ ನೀಡಲು ಬಳಸುವುದು ಹೇಗೆ?

*10-15 ವಾಲ್ ನಟ್ ಸಿಪ್ಪೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಗಡುಸಾಗಿ ಜಜ್ಜಿಕೊಳ್ಳಿ ಮತ್ತು ಕುದಿಯುವ ನೀರಿಗೆ ಹಾಕಿ 30 ನಿಮಿಷ ಕಾಲ ಹಾಗೆ ಬಿಡಿ.

*ನೀರನ್ನು ತಂಪು ಮಾಡಿ ಮತ್ತು ಸಿಪ್ಪೆಗಳನ್ನು ಸೋಸಿ ತೆಗೆಯಿರಿ. *ಕೂದಲಿಗೆ ಬಣ್ಣ ನೀಡಬೇಕಾದ ಭಾಗವನ್ನು ಬೇರ್ಪಡಿಸಿಕೊಳ್ಳಿ. *ಹತ್ತಿ ಉಂಡೆಯ ನೆರವಿನಿಂದ ಕೂದಲಿಗೆ ಇದನ್ನು ಹಚ್ಚಿಕೊಳ್ಳಿ.

*ಒಂದು ಗಂಟೆ ಕಾಲ ಹಾಗೆ ಬಿಡಿ.

*ಇದರ ಬಳಿಕ ನೀರಿನಿಂದ ತೊಳೆಯಿರಿ ಮತ್ತು ಹಗುರ ಶಾಂಪೂ ಅಥವಾ ಕಂಡೀಷನರ್ ಹಾಕಿ.

*ಒಂದು ವಾರ ತನಕ ಬಿಸಿ ನೀರಿನಿಂದ ಕೂದಲಿಗೆ ಸ್ನಾನ ಮಾಡಬೇಡಿ. ಇಲ್ಲವಾದಲ್ಲಿ ಕೂದಲಿನ ಬಣ್ಣ ಮಾಸುವುದು. ನೈಸರ್ಗಿಕವಾದ ಕಂದು ಬಣ್ಣವನ್ನು ಆನಂದಿಸಿ.

English summary

Top uses of walnut for hair care

Walnuts are enriched with omega 3 fatty acids and mono saturated fats. It is often suggested that you should consume walnuts as they are rich in multiple nutrients. Walnuts are one of the healthiest foods in the world. It also helps in keeping your heart healthy. But do you know you can use walnut for your hair as well? Walnut is another natural way to achieve healthy hair. It will keep your hair healthy as well as will promote your health.
X
Desktop Bottom Promotion