Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಆಲೂಗಡ್ಡೆ ಕೂದಲನ್ನು ನೀಳ ಮತ್ತು ಸೊಂಪಾಗಿಸುತ್ತದೆ-ಒಂದಲ್ಲಾ, ಎರಡಲ್ಲಾ, ಮೂರು ವಿಧಗಳಲ್ಲಿ!
ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ನಮ್ಮ ಕೂದಲು ಹಲವಾರು ಬಗೆಯ ಘರ್ಷಣೆಗೆ ಒಳಗಾಗುತ್ತದೆ. ವಿಶೇಷವಾಗಿ ನೀವು ಮನೆಯಿಂದ ಹೊರಗೆ ಹೆಚ್ಚಿನ ಕಾಲ ಕಳೆಯುವವರಾಗಿದ್ದರೆ ಅಥವಾ ವಿವಿಧ ಬಗೆಯ ಕೇಶಾಲಂಕಾರಗಳನ್ನು ಪ್ರಯತ್ನಿಸುವವರಾಗಿದ್ದರೆ ಈ ಘಾಸಿ ಇನ್ನೂ ಹೆಚ್ಚು. ಕೇಶದ ಅಲಂಕಾರ ಮತ್ತು ಆರೈಕೆಯ ಹೊಣೆ ಹೊತ್ತಿರುವ ಖ್ಯಾತ ಸೌಂದರ್ಯ ಮಳಿಗೆಗಳಲ್ಲಿಯೂ ನೀಡುವ ಕೆಲವು ಸೌಲಭ್ಯಗಳು ಕೂದಲಿಗೆ ಆ ಕ್ಷಣದಲ್ಲಿ ಮೆರುಗು ನೀಡಿದರೂ ಇವುಗಳು ಉಪಯೋಗಿಸುವ ಪ್ರಸಾಧನಗಳಲ್ಲಿರುವ ಪ್ರಬಲ ರಾಸಾಯನಿಕಗಳು ಕೂದಲಿಗೆ ದೀರ್ಘಕಾಲದಲ್ಲಿ ಕೆಡುಕನ್ನುಂಟುಮಾಡುತ್ತವೆ.
ಆದರೆ ಇಂದು ನಾವು ನೀಡುತ್ತಿರುವ ವಿಧಾನ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ. ಅಷ್ಟಕ್ಕೂ ನಾವು ಇಂದು ಉಪಯೋಗಿಸುತ್ತಿರುವುದು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಆಲುಗಡ್ಡೆ. ಆದರೆ ಇದರ ಸರಿಯಾದ ಉಪಯೋಗದಿಂದ ಕೂದಲು ರೇಶ್ಮೆಯಂತೆ ಹೊಳೆಯುವ, ನುಣುಪು, ನೀಳ ಮತ್ತು ಸೊಂಪಾಗಿದ್ದು ಹಿಂದೆಂದೂ ಇಲ್ಲದ ಕೇಶ ಸೊಬಗನ್ನು ಪಡೆಯಲು ಸಾಧ್ಯವಾಗುತ್ತದೆ. ಮೂರು ಬಗೆಯಲ್ಲಿ ಬಳಸಬಹುದಾದ ಈ ಪ್ರಸಾಧನಗಳು ನೀವು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ಕೂದಲ ಉದ್ದವನ್ನು ಹೆಚ್ಚಿಸುವುದು ಮಾತ್ರವಲ್ಲ, ಹೊಳಪು ಮತ್ತು ಆರೋಗ್ಯವನ್ನೂ ಹೆಚ್ಚಿಸುತ್ತದೆ. ಬನ್ನಿ, ಈ ಮೂರು ವಿಧಗಳು ಯಾವುವು ನೋಡೋಣ:

ಕೂದಲ ಹೊಳಪಿಗಾಗಿ
ಆಲೂಗಡ್ಡೆ ಒಂದು ರೀತಿಯ ಸಾರ್ವತ್ರಿಕ ಆಹಾರ. ಇದರ ಜೊತೆಗೂಡಿದ ಇನ್ನೊಂದು ತರಕಾರಿಯೊಂದಿಗೆ ಸುಲಭವಾಗಿ ಬೆರೆತು ವೈವಿಧ್ಯವಾದ ಖಾದ್ಯಗಳನ್ನು ತಯಾರಿಸಬಹುದು. ಇವು ರುಚಿಕರ, ಆರೋಗ್ಯಕರವೂ ಆಗಿವೆ. ಇದೇ ರೀತಿಯಾಗಿ ಆಲುಗಡ್ಡೆ ಕೂದಲ ಹೊಳಪನ್ನು ಹೆಚ್ಚಿಸಲೂ ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
*3-4 ಮಧ್ಯಮ ಗಾತ್ರದ ಆಲೂಗಡ್ಡೆಗಳು
*ತೆಳುವಾದ ಮಸ್ಲಿನ್ ಅಥವಾ ಸೋಸುವ ಇತರ ಯಾವುದೇ ಬಟ್ಟೆ
*ಒಂದು ಮೊಟ್ಟೆಯ ಹಳದಿಭಾಗ
*ಒಂದು ಚಿಕ್ಕ ಚಮಚ ಜೇನು

ತಯಾರಿಕಾ ವಿಧಾನ:
* ಮೊದಲು ಆಲುಗಡ್ಡೆಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ
* ಬಳಿಕ ತೆಳುವಾದ ಬಟ್ಟೆಯಲ್ಲಿ ಹಾಕಿಕೊಂಡು ಸುರುಳಿ ಸುತ್ತಿ ರಸವನ್ನು ಹಿಂಡಿ ತೆಗೆಯಿರಿ.
* ಈ ರಸಕ್ಕೆ ಮೊಟ್ಟೆಯ ಹಳದಿಭಾಗವನ್ನು ಮಿಶ್ರಣ ಮಾಡಿ ಬಳಿಕ ಜೇನನ್ನು ಹಾಕಿ ಚೆನ್ನಾಗಿ ಬೆರೆಸಿ.
* ಈ ಮಿಶ್ರಣವನ್ನು ನೆತ್ತಿಯ ಭಾಗಕ್ಕೆ, ಕೂದಲ ಬುಡಗಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಕೂದಲ ತುದಿಯವರೆಗೂ ಬರುವಂತೆ ಹಚ್ಚಿಕೊಳ್ಳಿ.
* ಬಳಿಕ ಸುಮಾರು ಅರ್ಧ ಘಂಟೆಯವರೆಗೆ ಹಾಗೇ ಒಣಗಲು ಬಿಡಿ.
* ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ.

ಕೂದಲ ಉದ್ದವನ್ನು ಹೆಚ್ಚಿಸಲು ಮತ್ತು ನೆತ್ತಿ ಸ್ವಚ್ಛವಾಗಿರಲು
ಈ ವಿಧಾನ ಕೂದಲು ಉದುರುವುದನ್ನು ತಡೆಗಟ್ಟಬಹುದು, ತಲೆಹೊಟ್ಟು ಮತ್ತು ಇತರ ಕೊಳೆಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
2 ಮಧ್ಯಮ ಗಾತ್ರದ ಆಲೂಗಡ್ಡೆಗಳು
1 -1.5 ಚಿಕ್ಕ ಚಮಚ ತಾಜಾ ಲೋಳೆಸರದ ತಿರುಳು. ತಾಜಾ ಸಿಗದೇ ಇದ್ದಲ್ಲಿ ಲೋಳೆಸರದ ಇತರ ಉತ್ಪನ್ನವೂ ಆಗಬಹುದು.
ತಯಾರಿಕಾ ವಿಧಾನ:
* ಮೊದಲು ಆಲುಗಡ್ಡೆಯನ್ನು ಚಿಕ್ಕದಾಗಿ ತುರಿದು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ ಹಾಗೂ ಬಟ್ಟೆಯಲ್ಲಿ ಸೋಸಿ ರಸ ಸಂಗ್ರಹಿಸಿ
* ಇದಕ್ಕೆ ಲೋಳೆಸರದ ತಿರುಳನ್ನು ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ದಪ್ಪನಾಗಿ ಹಚ್ಚಿ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಹಾಗೇ ಬಿಡಿ.
* ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಸಾರಂಶ: ಲೋಳೆಸರ ಅತ್ಯುತ್ತಮ ಸ್ವಚ್ಛಕಾರಕವಾಗಿರುವ ಕಾರಣ ನೆತ್ತಿಯನ್ನು ಇದು ಸ್ವಚ್ಛಗೊಳಿಸಿ ಆಗತ್ಯ ಪ್ರಮಾಣದ ಆರ್ದ್ರತೆಯನ್ನೂ ನೀಡುತ್ತದೆ ಈ ಮೂಲಕ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ತಲೆಹೊಟ್ಟು ಇಲ್ಲವಾಗಲು
ಆಲೂಗಡ್ಡೆ ವರ್ಷದ ಎಲ್ಲಾ ಸಮಯದಲ್ಲಿ ಸುಲಭವಾಗಿ ಸಿಗುವ ತರಕಾರಿಯಾಗಿದ್ದು ಯಾವಾಗ ತಲೆಹೊಟ್ಟು ಕಾಣಿಸಿಕೊಂಡಿತೋ ಅಗ ಬಳಸಲು ಲಭಿಸುತ್ತದೆ. ಒಂದು ವೇಳೆ ಇತರ ಸಾಮಾಗ್ರಿಗಳು ಆ ಸಮಯದಲ್ಲಿ ಸಿಗದೇ ಹೋದರೂ ಕೇವಲ ಆಲುಗಡ್ಡೆಯ ರಸವನ್ನೇ ನೇರವಾಗಿ ನೆತ್ತಿಯ ಮೇಲೆ ಹಚ್ಚಿಕೊಂಡೂ ಕೂದಲಿಗೆ ಉತ್ತಮವಾದ ಆರೈಕೆಯನ್ನು ಪಡೆಯಬಹುದು.

ಅಗತ್ಯವಿರುವ ಸಾಮಾಗ್ರಿಗಳು
*ಎರಡು ಚಿಕ್ಕಗಾತ್ರದ ಆಲೂಗಡ್ಡೆಗಳು
*ಒಂದು ದೊಡ್ಡಚಮಚ ಮೊಸರು
*ಅರ್ಧ ಚಿಕ್ಕಚಮಚ ಲಿಂಬೆರಸ

ತಯಾರಿಕಾ ವಿಧಾನ
* ಮೊದಲು ಮೇಲಿನ ವಿಧಾನದಂತೆಯೇ ಆಲುಗಡ್ಡೆಯ ರಸವನ್ನು ಸಂಗ್ರಹಿಸಿ ಇದಕ್ಕೆ ಮೊಸರು ಮತ್ತು ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ
* ಈ ಲೇಪನವನ್ನು ಕೂದಲ ಬುಡಗಳಿಗೆ ತಗಲುವಂತೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿ ಕೂದಲ ಬುಡಗಳಷ್ಟೂ ಈ ಮಿಶ್ರಣದಲ್ಲಿ ಆವರಿಸುವಂತೆ ಮಾಡಿ
* ಬಳಿಕ ಸುಮಾರು ಅರ್ಧ ಗಂಟೆ ಹಾಗೇ ಒಣಗಲು ಬಿಡಿ.
* ನಂತನ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
ಸಾರಾಂಶ: ಮೊಸರು ನೆತ್ತಿಯ ಚರ್ಮದಲ್ಲಿರುವ ಎಣ್ಣೆಯನ್ನು ನಿವಾರಿಸುತ್ತದೆ ಹಾಗೂ ಲಿಂಬೆ ತಲೆಹೊಟ್ಟನ್ನು ಸಡಿಲಿಸಿ ನಿವಾರಿಸಲು ನ್ರೆಅವಾಗುತ್ತದೆ ಹಾಗೂ ಆಲುಗಡ್ಡೆ ರಸ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.



Click it and Unblock the Notifications











