For Quick Alerts
ALLOW NOTIFICATIONS  
For Daily Alerts

ತಲೆಗೂದಲ ಬೆಳವಣಿಗೆಗೆ ಕೊಬ್ಬರಿ ಎಣ್ಣೆಯ ಬಳಕೆಯ ಸರಳ ವಿಧಾನಗಳು

|

ಸಾಮಾನ್ಯಕ್ಕೂ ಕೊಂಚವೇ ಹೆಚ್ಚು ಪ್ರಮಾಣದಲ್ಲಿ ಕೂದಲು ಉದುರುವುದು ಕಂಡರೆ ಎಲ್ಲಿಲ್ಲದ ತಲೆಬಿಸಿ ಎದುರಾಗುತ್ತದೆ. ಕೆಲವೊಮ್ಮೆ ಕೂದಲು ಉದುರುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂತಾಗುತ್ತದೆ ಹಾಗೂ ಇದು ಹೆಚ್ಚು ಹೆಚ್ಚು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಕೂದಲು ಉದುರುವುದನ್ನು ನಿಲ್ಲಿಸುವ ಪ್ರಮಾಣವನ್ನು ಮಾಡುವ ಹಲವಾರು ಜಾಹೀರಾತುಗಳು ಮನಸೆಳೆಯುತ್ತವೆ ಹಾಗೂ ಹೇಗಾದರೂ ಸರಿ, ತಕ್ಷಣವೇ ಇದನ್ನು ನಿಲ್ಲಿಸಬೇಕೆಂದು ಯೋಚಿಸುತ್ತೇವೆ. ಆದರೆ ಜಾಹೀರಾತಿನಲ್ಲಿ ಸುಂದರವಾಗಿ ಕಂಡಷ್ಟು ಈ ಉತ್ಪನ್ನಗಳು ಸುರಕ್ಷಿತವೇ? ಏಕೆಂದರೆ ಈ ಉತ್ಪನ್ನಗಳು ಕೆಲವೊಮ್ಮೆ ವ್ಯತಿರಿಕ್ತವಾಗಿಯೂ ಕಾರ್ಯನಿರ್ವಹಿಸಬಹುದು. ಅಲ್ಲದೇ ಪ್ರತಿಯೊಬ್ಬರ ತ್ವಚೆಯ ರಚನೆಯಲ್ಲಿಯೂ ಕೊಂಚ ಭಿನ್ನತೆ ಇರುತ್ತದೆ ಹಾಗೂ ಕೆಲವರಿಗೆ ಕೆಲವಾರು ಸಾಮಾಗ್ರಿಗಳು ಅಲರ್ಜಿಕಾರಕವಾಗಿರುತ್ತವೆ.

Hair Growth

ಹೀಗಿರುವಾಗ ತಮಗೆ ಯಾವ ಉತ್ಪನ್ನದಲ್ಲಿರುವ ರಾಸಾಯನಿಕ ಅಲರ್ಜಿಕಾರಕವೋ ಅಲ್ಲವೋ ಎಂದು ತಿಳಿಯದೇ ಏಕಾಏಕಿ ಪ್ರಯೋಗಿಸುವುದಾದರೂ ಹೇಗೆ? ಅಲ್ಲದೇ ಇಂದು ನೂರಾರು ಉತ್ಪನ್ನಗಳು ಲಭ್ಯವಿರುವಾಗ ಇದರಲ್ಲಿ ನಮಗೆ ಸೂಕ್ತವಾದುದನ್ನು ಆರಿಸಿಕೊಳ್ಳುವುದಾದರೂ ಹೇಗೆ? ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಸಾಮಾಗ್ರಿಗಳೇ ಅತ್ಯುತ್ತಮವಾಗಿದ್ದು ಇವು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿವೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಆಯ್ಕೆ ಎಂದರೆ ಕೊಬ್ಬರಿ ಎಣ್ಣೆ. ಸಾವಿರಾರು ವರ್ಷಗಳಿಂದ ಕೂದಲು, ತ್ವಚೆ ಹಾಗೂ ಸೌಂದರ್ಯದ ಪೋಷಣೆಗಾಗಿ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತಾ ಬರಲಾಗಿದೆ ಹಾಗೂ ಸರಿಯಾದ ಬಳಕೆಯ ಕೆಲವೇ ದಿನಗಳಲ್ಲಿ ಇದು ಅತ್ಯುತ್ತಮವಾದ ಪರಿಹಾರವನ್ನು ಒದಗಿಸುತ್ತದೆ ಹಾಗೂ ವಿಶೇಷವಾಗಿ ಕೂದಲು ಉದುರುವುದನ್ನು ತಡೆಯುತ್ತದೆ.

ಕೊಬ್ಬರಿ ಎಣ್ಣೆಯೇ ಏಕೆ?

ಕೊಬ್ಬರಿ ಎಣ್ಣೆಯೇ ಏಕೆ?

ಕೊಬ್ಬರಿ ಎಣ್ಣೆಯಲ್ಲಿರುವ ಗುಣಗಳು ಕೂದಲ ಬೆಳವಣಿಗೆಯ ಸಹಿತ ಹಲವಾರು ಬಗೆಯಲ್ಲಿ ಸೌಂದರ್ಯ ಮತ್ತು ಆರೋಗ್ಯವನ್ನು ವೃದ್ದಿಸುತ್ತವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ..

ಕೊಬ್ಬರಿ ಎಣ್ಣೆ ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿದೆ

ಕೊಬ್ಬರಿ ಎಣ್ಣೆ ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿದೆ

ಕೂದಲು ಒಣಗುವುದನ್ನು ತಡೆಯುತ್ತದೆ ಹಾಗೂ ಕೂದಲಿಗೆ ಘಾಸಿಯಾಗುವುದನ್ನು ತಪ್ಪಿಸುತ್ತದೆ

ಕೊಬ್ಬರಿ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ, ಇವು ಕೂದಲ ಬೆಳವಣಿಗೆಗೆ ಪೂರಕವಾಗಿವೆ.

ಅಲ್ಲದೇ ಕೊಬ್ಬರಿ ಎಣ್ಣೆ ಅತ್ಯುತ್ತಮ ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಹೊಂದಿದ್ದು ಕೂದಲು, ಕೂದಲ ಬುಡ ಹಾಗೂ ನೆತ್ತಿಯ ತ್ವಚೆಯನ್ನು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ.

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ಕೂದಲ ಬುಡಕ್ಕೆ ಅತ್ಯುತ್ತಮ ಪೋಷಣೆಯನ್ನು ಒದಗಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನಗಳು

Most Read: ಕೂದಲು ದಪ್ಪವಾಗಿ ಬೆಳೆಯಬೇಕೇ? ಮೊಟ್ಟೆ, ತೆಂಗಿನೆಣ್ಣೆ ಹೇರ್ ಮಾಸ್ಕ್ ಬಳಸಿ

ಕೂದಲ ಬೆಳವಣಿಗೆ ವೇಗವಾಗಿ ಆಗಬೇಕೆಂದರೆ ಹೀಗೆ ಮಾಡಿ

ಕೂದಲ ಬೆಳವಣಿಗೆ ವೇಗವಾಗಿ ಆಗಬೇಕೆಂದರೆ ಹೀಗೆ ಮಾಡಿ

ಕೊಬ್ಬರಿ ಎಣ್ಣೆಯನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಕೂದಲು ಸೊಂಪಾಗಿ ಮತ್ತು ಹೆಚ್ಚು ಉದ್ದವಾಗಿ ಬೆಳೆಯುತ್ತದೆ. ಇದಕ್ಕಾಗಿ ದಿನದ ಕೊನೆಯ ಘಂಟೆಗಳಲ್ಲಿ ಕೊಂಚ ಕೊಬ್ಬರಿ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಅಂದರೆ ಉಗುರುಬೆಚ್ಚಾಗುವಷ್ಟು ಮಾತ್ರ, ಕೈಗೆ ಹಚ್ಚಿಕೊಂಡರೆ ಕೈಗಳು ಉರಿಯಬಾರದು, ಅಷ್ಟು ಬಿಸಿಮಾಡಿದರೆ ಸಾಕು. ಈ ಎಣ್ಣೆ ಬಿಸಿ ಇದ್ದಂತೆಯೇ ನಿಮ್ಮ ನೆತ್ತಿಗೆ ಹಚ್ಚಿಕೊಂಡು ಬೆರಳು ತುದಿಗಳಿಂದ ಮಸಾಜ್ ಮಾಡಿಕೊಳ್ಳಿ. ನಿಧಾನವಾಗಿ ಮಸಾಜ್ ಮಾಡುತ್ತಾ ತಲೆಯ ಕೂದಲಿರುವ ಅಷ್ಟೂ ಭಾಗವನ್ನು ಬಿಡದೇ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ದಪ್ಪ ಟೆವೆಲ್ಲೊಂದನ್ನು ತಲೆಗೂದಲಿಗೆ ಸುತ್ತಿಕೊಂಡು ಸುರುಳಿಯಾಗಿಸಿ ಬೀಳದಂತೆ ಇರಿಸಿ ಮಲಗಿ, ರಾತ್ರಿ ಜಾರಿಹೋಗದಂತೆ ಎಚ್ಚರ ವಹಿಸಿ. ಮರುದಿನ ಮುಂಜಾನೆ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

ಸ್ನಾನಕ್ಕೂ ಮುನ್ನ ಕೂದಲನ್ನು ಕಾಪಾಡಲು (pre-wash protector)

ಸ್ನಾನಕ್ಕೂ ಮುನ್ನ ಕೂದಲನ್ನು ಕಾಪಾಡಲು (pre-wash protector)

ನಮ್ಮ ದೇಹದ ಇತರ ಭಾಗದ ತ್ವಚೆಯಲ್ಲಿರುವುದಕ್ಕಿಂತಲೂ ಹೆಚ್ಚಿನ ತೈಲಗ್ರಂಥಿಗಳು ನಮ್ಮ ತಲೆಯ ತ್ವಚೆಯಲ್ಲಿರುತ್ತವೆ. ಹಾಗಾಗಿ, ಪ್ರತಿ ಬಾರಿ ತಲೆ ಸ್ನಾನ ಮಾಡಿಕೊಂಡಾಗಲೂ ಅನಿವಾರ್ಯವಾಗಿ ಈ ತೈಲ ನಷ್ಟವಾಗುತ್ತದೆ ಹಾಗೂ ಕೂದಲು ಹೆಚ್ಚಿನ ನೀರನ್ನು ಹೀರಿಕೊಂಡು ಸುಲಭವಾಗಿ ತುಂಡಾಗುವಂತಿರುತ್ತದೆ. ಅಲ್ಲದೇ ಕೂದಲ ಬುಡದಲ್ಲಿ ಉಳಿದುಕೊಳ್ಳುವ ನೀರಿನ ಪಸೆ ಕೂದಲ ಬುಡವನ್ನು ಶಿಥಿಲಗೊಳಿಸುತ್ತದೆ ಹಾಗೂ ಇದೂ ಕೂದಲ ಉದುರುವಿಕೆಗೆ ಕಾರಣವಾಗಬಹುದು. ಇದನ್ನು ತಡೆಯಲು ಕೊಂಚ ಕೊಬ್ಬರಿ ಎಣ್ಣೆಯನ್ನು ಸ್ನಾನಕ್ಕೂ ಹದಿನೈದು ಇಪ್ಪತ್ತು ನಿಮಿಷ ಮೊದಲು ಹಚ್ಚಿಕೊಂಡರೆ ಈ ತೊಂದರೆಯನ್ನು ನಿವಾರಿಸಬಹುದು. ಏಕೆಂದರೆ ಕೊಬ್ಬರಿ ಎಣ್ಣೆ ತೆಳುವಾದ ಪದರದಂತೆ ತಲೆಯ ಚರ್ಮವನ್ನು ಆವರಿಸಿ ಇಲ್ಲಿಂದ ಹೆಚ್ಚುವರಿ ನೀರು ತ್ವಚೆಗೆ ಇಳಿಯದಂತೆ ತಡೆಯುತ್ತದೆ. ಸೂಕ್ತ ಪರಿಣಾಮ ಪಡೆಯಬೇಕಾದರೆ ಕೊಬ್ಬರಿ ಎಣ್ಣೆಯನ್ನು ತಲೆಯ ಎಲ್ಲಾ ಭಾಗದ ತ್ವಚೆಗೆ ಮತ್ತು ವಿಶೇಷವಾಗಿ ಕೂದಲ ಬುಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಹಚ್ಚಿಕೊಳ್ಳಬೇಕು.

Most Read: ಕೂದಲು ದಪ್ಪವಾಗಿ ಬೆಳೆಯಬೇಕೆ? ಎಳೆ ನೀರಿನ ಹೇರ್ ಪ್ಯಾಕ್ ಪ್ರಯತ್ನಿಸಿ!

ಕಂಡೀಶನರ್ ಆಗಿ ಕೊಬ್ಬರಿ ಎಣ್ಣೆಯ ಬಳಕೆ

ಕಂಡೀಶನರ್ ಆಗಿ ಕೊಬ್ಬರಿ ಎಣ್ಣೆಯ ಬಳಕೆ

ನೀವು ಈಗಾಗಲೇ ಬಳಸುತ್ತಾ ಬಂದಿರುವ ಕಂಡೀಶನರ್ ಬದಲಿಗೆ ಕೊಬ್ಬರಿ ಎಣ್ಣೆಯನ್ನೂ ಬಳಸಬಹುದು. ಕೊಬ್ಬರಿ ಎಣ್ಣೆ ನೈಸರ್ಗಿಕ ಕಂಡೀಶನರ್ ಆಗಿದೆ ಹಾಗೂ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ. ನಿಮ್ಮ ಕೂದಲನ್ನು ಎಂದಿನಂತೆ ತೊಳೆದುಕೊಂಡ ಬಳಿಕ ತೇವವಾಗಿರುವ ಕೂದಲಿಗೆ ಕಂಡೀಶನರ್ ಬದಲು ಕೆಲವು ತೊಟ್ಟುಗಳಷ್ಟು ಕೊಬ್ಬರಿ ಎಣ್ಣೆಯನ್ನು ನಯವಾಗಿ ಸವರಿಕೊಳ್ಳಬೇಕು. ಬಳಿಕ ಸಾಮಾನ್ಯ ತಾಪಮಾನದ ನೀರಿನಿಂದ ತೊಳೆದುಕೊಳ್ಳಿ. ಈ ಪ್ರಮಾಣ ಹೆಚ್ಚಾಗಬಾರದು, ಏಕೆಂದರೆ ಹೆಚ್ಚಾದರೆ ಇದು ಕೂದಲನ್ನು ಎಣ್ಣೆಪಸೆಯಿಂದ ಕೂಡಿರುವಂತೆ ಮಾಡುತ್ತದೆ.

Most Read: ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ತಲೆಹೊಟ್ಟಿನ ನಿವಾರಣೆಗೆ ಕೊಬ್ಬರಿ ಎಣ್ಣೆಯ ಬಳಕೆ

ತಲೆಹೊಟ್ಟಿನ ನಿವಾರಣೆಗೆ ಕೊಬ್ಬರಿ ಎಣ್ಣೆಯ ಬಳಕೆ

ಇತ್ತೀಚಿನ ದಿನಗಳಲ್ಲಿ ತಲೆಹೊಟ್ಟು ಸಾಮಾನ್ಯ ತೊಂದರೆಯಾಗಿಬಿಟ್ಟಿದೆ. ತಲೆಹೊಟ್ಟಿನ ವಿರುದ್ಧ ಹೋರಾಡಲು ಎಣ್ಣೆಯ ಪೋಷಣೆ ಅಗತ್ಯ. ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ತಲೆಹೊಟ್ಟು ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗಳನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಯ ತ್ವಚೆಯ ಭಾಗಕ್ಕೆ, ವಿಶೇಷವಾಗಿ ತಲೆಹೊಟ್ಟು ಇರುವ ಭಾಗದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಬಳಿಕ ಕೆಲವಾರು ಘಂಟೆ ಕಳೆದು ಅಥವಾ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆದ್ದು ಸಾಮಾನ್ಯ ತಾಪಮಾನದ ನೀರಿನಿಂದ ತೊಳೆದುಕೊಳ್ಳಬೇಕು. ತಲೆಹೊಟ್ಟಿನ ತೀವ್ರತೆಯನ್ನು ಅನುಸರಿಸಿ ನಿತ್ಯವೂ ಹಚ್ಚಿಕೊಳ್ಳುತ್ತಾ ಹೋಗಬೇಕು. ಸಾಮಾನ್ಯವಾಗಿ ಐದಾರು ದಿನಗಳಲ್ಲಿಯೇ ತಲೆಹೊಟ್ಟು ಸಂಪೂರ್ಣವಾಗಿ ಇಲ್ಲವಾಗುತ್ತದೆ ಹಾಗೂ ಇನ್ನೂ ಒಂದೆರಡು ದಿನ ಮುಂದುವರೆಸಿದರೆ ಮತ್ತೆಂದೂ ತಲೆಹೊಟ್ಟು ಕಾಡದು. ಕೊಬ್ಬರಿ ಎಣ್ಣೆಯಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲ ಹಾಗೂ ಎಲ್ಲಾ ಬಗೆಯ ತ್ವಚೆಗಳಿಗೂ ಸೂಕ್ತವಾಗಿದೆ. ಕೊಬ್ಬರಿ ಎಣ್ಣೆ ಅಲರ್ಜಿಕಾರಕವಾಗಿರುವ ವ್ಯಕ್ತಿಗಳು ಈ ಜಗತ್ತಿನಲ್ಲಿಯೇ ಅತ್ಯಂತ ವಿರಳ. ಒಂದು ವೇಳೆ ನೀವು ಆ ವ್ಯಕ್ತಿಯಾಗಿದ್ದರೆ ತಕ್ಷಣವೇ ಕೊಬ್ಬರಿ ಎಣ್ಣೆಯ ಬಳಕೆಯನ್ನು ನಿಲ್ಲಿಸಿ ತಜ್ಞರ ಸಲಹೆ ಪಡೆಯಿರಿ.

English summary

Simple Ways to Use Coconut Oil for Hair Growth

Hair fall can be very stressful. It can make your life difficult. Sometimes hair fall becomes uncontrollable which leads to more and more stress. There are various products in the market which promise to stop hair fall as soon as possible. But are these products trustable enough? Sometimes these products can also give you reverse effects. It is also very confusing when it comes to choosing the right product. Natural methods are the best ways to fight hair fall. Coconut oil is of these remedies. Coconut oil is an ancient method to control hair fall. It can give you noticeable results and can help you fight hair fall.
X
Desktop Bottom Promotion