For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಒಂದಿಷ್ಟು ಸರಳ ಟಿಪ್ಸ್

|

ಮಳೆಗಾಲದಲ್ಲಿ ವಾತಾವರಣವು ಹಿತಕರ ಹಾಗೂ ಚಳಿಯಿಂದ ಕೂಡಿರುತ್ತದೆ. ಕೆಲವರು ಈ ಹವಾಮಾನವನ್ನು ಇಷ್ಟಪಟ್ಟರೆ, ಇತರರಿಗೆ ಇದು ಇಷ್ಟವಾಗದು. ಅದರಲ್ಲೂ ಎಣ್ಣೆಯುಕ್ತ ಕೂದಲು ಇರುವಂತಹ ಜನರು ಮಳೆಗಾಲವನ್ನು ಇಷ್ಟಪಡಲಾರರು. ಯಾಕೆಂದರೆ ತಲೆಬುರುಡೆಯಲ್ಲಿ ಬೆವರು ಮತ್ತಷ್ಟು ಧೂಳು ಮತ್ತು ಕಲ್ಮಷವನ್ನು ಸೆಳೆಯುತ್ತದೆ. ಇದರಿಂದ ಕೂದಲಿಗೆ ಹಾನಿ ಆಗುವುದು. ಶಾಂಪೂ ಹಾಕಿದ ಬಳಿಕ ಇದು ತನ್ನ ಕಾಂತಿ ಕಳೆದುಕೊಳ್ಳುವುದು. ಆರ್ದ್ರ ಹವಾಮಾನದಲ್ಲಿ ಕೂದಲು ಬೆವರುವುದು ಮತ್ತು ಒರಟಾಗುವುದು. ಬೆವರು ಮತ್ತು ಬೆವರಿಗೆ ಸ್ರವಿಸುವಿಕೆಯಿಂದ ಹೀಗೆ ಆಗುವುದು. ಬೆವರಿನಲ್ಲಿ ಇರುವಂತಹ ಉಪ್ಪು ವಾತಾವರಣದಲ್ಲಿ ಇರುವಂತಹ ಇತರ ಕಲ್ಮಷಗಳೊಂದಿಗೆ ಸೇರಿಕೊಂಡು ಕೂದಲು ತುಂಬಾ ಒರಟಾಗುವಂತೆ ಮಾಡುವುದು. ಇದರಿಂದಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆಯನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು.

monsoon season

ಆಗಾಗ ಶಾಂಪೂ ಹಾಕುವುದು ನೆರವಾಗುವುದು

ಮಳೆಗಾಲದಲ್ಲಿ ನೀವು ಸಾಮಾನ್ಯಕ್ಕಿಂತ ಹೆಚ್ಚು ಸಲ ಕೂದಲಿಗೆ ಶಾಂಪೂ ಹಾಕಿಕೊಂಡರೆ ಅದರಿಂದ ನೆರವಾಗುವುದು. ಕೂದಲು ಎಣ್ಣೆಯಂಶದಿಂದ ಕೂಡಿದ್ದರೆ ಆಗ ನೀವು ಇನ್ನು ಹೆಚ್ಚು ಸಲ ಮಾಡಿ. ದಿನಿನಿತ್ಯವೂ ಕೂದಲಿಗೆ ಶಾಂಪೂ ಹಾಕಿದರೆ ಒಳ್ಳೆಯದು. ಗಿಡಮೂಲಿಕೆಯ ಲಘು ಶಾಂಪೂ ಬಳಸಿಕೊಳ್ಳಿ. ಶಾಂಪೂವನ್ನು ಸರಿಯಾದ ರೀತಿಯಲ್ಲಿ ಬಲಸಿಕೊಂಡು ಕೂದಲಿಗೆ ನೀರು ಹಾಕಿ ಸಂಪೂರ್ಣವಾಗಿ ಶಾಂಪೂವನ್ನು ತೊಳೆದು ತೆಗೆಯಿರಿ. ಸಣ್ಣ ಕೂದಲಿಗೆ ಕೂಡ ಆಗಾಗ ಶಾಂಪೂ ಹಾಕಿದರೆ ಅದು ತನ್ನ ವಿನ್ಯಾಸವನ್ನು ಉಳಿಸಿಕೊಳ್ಳುವುದು.

ಕಂಡೀಷನರ್ ಬಗ್ಗೆ ಎಚ್ಚರವಿರಲಿ

ತುಂಬಾ ಒಣ ಕೂದಲಿನ ಹೊರತಾಗಿ ನೀವು ರಿಚ್ ಕಂಡೀಷನರ್ ಬಳಸಬೇಡಿ. ಕಂಡೀಷನರ್ ಬಳಸಲು ಇಲ್ಲಿ ಕೆಲವೊಂದು ಸಲಹೆಗಳು ಇವೆ. ಒಂದು ತಟ್ಟೆ ನೀರಿಗೆ ಲಿಂಬೆರಸ ಹಾಕಿಕೊಳ್ಳಿ ಮತ್ತು ಅದನ್ನು ಅಂತಿಮವಾಗಿ ಕೂದಲು ತೊಳೆಯಲು ಬಳಸಿಕೊಳ್ಳಿ. ಲಿಂಬೆಯು ಕೂದಲಿನ ಜಿಡ್ಡು ತೆಗೆಯುವುದು ಮತ್ತು ಕೂದಲಿನಲ್ಲಿ ಸಾಮಾನ್ಯ ಸಮತೋಲನ ಕಾಪಾಡುವುದು. ಮೂರು ಕಪ್ ಬಿಸಿ ನೀರಿಗೆ ತಾಜಾ ಅಥವಾ ಒಣಗಿಸಿದ ಚೆಂಡು ಮಲ್ಲಿಗೆ ಹೂಗಳನ್ನು ಹಾಕಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಇರಲಿ. ಇದರ ಬಳಿಕ ಸೋಸಿಕೊಳ್ಳಿ ಮತ್ತು ನೀರು ತಣ್ಣಗಾಗಲು ಬಿಡಿ ಮತ್ತು ಬಳಿಕ ಇದನ್ನು ಅಂತಿಮವಾಗಿ ಕೂದಲು ತೊಳೆಯಲು ಬಳಸಿ. ತಲೆಹೊಟ್ಟು ಇರುವಂತಹ ಎಣ್ಣೆಯುಕ್ತ ಕೂದಲಿಗೆ ಇದು ನೆರವಾಗುವುದು. ಶಾಂಪೂ ಹಾಕಿಕೊಳ್ಳುವ ಮೊದಲು ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮತ್ತು ಒಂದು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಇದು ಕೂದಲಿಗೆ ಒಳ್ಳೆಯ ವಿನ್ಯಾಸ ನೀಡುವುದು ಮಾತ್ರವಲ್ಲದೆ, ಸ್ವಚ್ಛಗೊಳಿಸುವ ಗುಣ ಇರುವ ಕಾರಣದಿಂದಾಗಿ ಎಣ್ಣೆಯುಕ್ತ ಕೂದಲಿನ ಸಮಸ್ಯೆ ನಿವಾರಣೆ ಮಾಡುವುದು. ಗೋರಂಟಿ ಕಂಡೀಷನರ್ ತುಂಬಾ ಒಳ್ಳೆಯದು. ಇದು ಎಲ್ಲಾ ರೀತಿಯ ಕೂದಲಿಗೆ ಒಳ್ಳೆಯದು ಮತ್ತು ಕೂದಲಿಗೆ ವಿನ್ಯಾಸ ಮತ್ತು ಕಾಂತಿ ನೀಡುವುದು. ಕೂದಲು ಹಾಗೂ ತಲೆಬುರುಡೆಯನ್ನು ಶುದ್ಧಗೊಳಿಸಲು ಇದು ನೆರವಾಗುವುದು. ಕಲ್ಮಷ ಹಾಗೂ ತ್ಯಾಜ್ಯವನ್ನು ಇದು ತೆಗೆಯುವುದು. ವಾರದಲ್ಲಿ ಒಂದು ಸಲ ಕೂದಲಿಗೆ ಗೋರಂಟಿ ಹಚ್ಚಿಕೊಳ್ಳಿ. ಇದಕ್ಕೆ ನಾಲ್ಕು ಚಮಚ ಲಿಂಬೆ ರಸ, ಕಾಫಿ, ಎರಡು ಹಸಿ ಮೊಟ್ಟೆ ಮತ್ತು ಚಹಾ ನೀರು ಹಾಕಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ.

ಈಜುತ್ತಿದ್ದರೆ...

ಈಜುಕೊಳದಲ್ಲಿ ಈಜುತ್ತಿದ್ದರೆ ಆಗ ಕೂದಲು ನೇರವಾಗಿ ಸೂರ್ಯನ ಬಿಸಿಲಿಗೆ ಒಡ್ಡಲ್ಪಡುವುದು ಮತ್ತು ಕೂದಲು ಒಣಗುವುದು. ಈಜು ಕೊಳದಲ್ಲಿ ಇರುವಂತಹ ಕ್ಲೋರಿನ್ ಮತ್ತು ಸಮುದ್ರದ ನೀರಿನಲ್ಲಿ ಇರುವ ಉಪ್ಪಿನಾಂಶವು ಕೂದಲನ್ನು ಒಣಗುವಂತೆ ಮಾಡಿ, ನಿಸ್ತೇಜವಾಗಿಸುವುದು. ಈಜುವ ಮೊದಲು ಮತ್ತು ಬಳಿಕ ಕೂದಲನ್ನು ಸರಿಯಾಗಿ ಒದ್ದೆ ಮಾಡಿ. ಕೂದಲನ್ನು ಈಜುವ ಮೊದಲು ಒದ್ದೆ ಮಾಡಿದರೆ ಆಗ ತುಂಬಾ ನೆರವಾಗುವುದು. ಇದು ಕೂದಲನ್ನು ರಕ್ಷಿಸುವುದು. ಈಜಿನ ಬಳಿಕ ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ.

ಬೆವರುವ ತಲೆಬುರುಡೆಗೆ

ಕೆಲವು ಜನರ ತಲೆಬುರುಡೆಯಲ್ಲಿ ಬೆವರು ಮತ್ತು ಎಣ್ಣೆಯು ಸ್ರವಿಸುವಿಕೆಯಿಂದಾಗಿ ತುಂಬಾ ಕೆಟ್ಟ ವಾಸನೆ ಕೂಡ ಬರುತ್ತದೆ. ಇದಕ್ಕಾಗಿ ನೀವು ಒಂದು ಲಿಂಬೆ ರಸವನ್ನು ಅರ್ಧ ಕಪ್ ರೋಸ್ ವಾಟರ್ ಜತೆಗೆ ಸೇರಿಸಿ ಅದನ್ನು ಒಂದು ತಟ್ಟೆ ನೀರಿಗೆ ಹಾಕಿ. ಅಂತಿಮವಾಗಿ ಈ ಮಿಶ್ರಣದಿಂದ ಕೂದಲು ತೊಳೆಯಿರಿ. ಯೂ ಡಿ ಕಲೋನ್ ನ್ನು ಒಂದು ತಟ್ಟೆ ನೀರಿಗೆ ಹಾಕಿಕೊಂಡು ಬಳಸಿಕೊಳ್ಳಬಹುದು. ಇದು ತಂಪಾದ ಪರಿಣಾಮ ನೀಡುವುದು. ಕೂದಲು ತುಂಬಾ ಎಣ್ಣೆಯುಕ್ತವಾಗಿದ್ದು, ಶಾಂಪೂ ಮಾಡಿಕೊಳ್ಳಲು ಸಮಯವಿಲ್ಲದೆ ಇದ್ದರೆ ಆಗ ನೀವು ಸ್ವಲ್ಪ ಯೂ ಡಿ ಕಲೋನ್ ನ್ನು ಒಂದು ಸ್ವಚ್ಛ ಬಟ್ಟೆಗೆ ಹಾಕಿಕೊಂಡು ಅದರಿಂದ ಕೂದಲನ್ನು ಒರೆಸಿಕೊಳ್ಳಿ. ಇದನ್ನು ಬ್ರಷ್‌ಟಗೆ ಕಟ್ಟಿಕೊಂಡು ಅದರಿಂದಲೂ ಕೂದಲು ಬಾಚಿಕೊಂಡರೆ ಆಗ ಎಣ್ಣೆಯುಕ್ತ ಅಂಶವು ನಿವಾರಣೆ ಆಗುವುದು ಮತ್ತು ಸುವಾಸನೆ ಸಿಗುವುದು.

English summary

Simple hair care tips during monsoon season

Monsoon can be a bane for people with oily hair. Sweat on the scalp also attracts dirt and pollutants from the atmosphere more easily. The look of the hair really suffers. It becomes limp soon after shampoo and loses its shine, body and bounce. In humid conditions, the hair tends to swell and becomes matty and rough. This is due to perspiration and sweat secretions. The salt in your sweat, along with environmental grime, makes the hair rough and robs it of its lustre and body. During the monsoons, therefore, you need to take more care of the hair.
X
Desktop Bottom Promotion