For Quick Alerts
ALLOW NOTIFICATIONS  
For Daily Alerts

ಭೃಂಗರಾಜ ತೈಲ: ಕೂದಲಿಗೆ ಲಭಿಸುವ ಪ್ರಯೋಜನಗಳು ಮತ್ತು ಉಪಯೋಗಿಸುವ ವಿಧಾನಗಳು

|
Bhringraj Oil
ಕೂದಲ ಆರೋಗ್ಯ ಚೆನ್ನಾಗಿದ್ದು ಸೊಂಪಾಗಿರಬೇಕೆಂದರೆ ಉತ್ತಮವಾದ ತೈಲವನ್ನು ಬಳಸಿ ಮಸಾಜ್ ಮಾಡಿಕೊಳ್ಳುತ್ತಿರಬೇಕು. ತೈಲದ ಅಭ್ಯಂಜನ ಎಂದು ಕರೆಯಲ್ಪಡುವ ಈ ಮಸಾಜ್ ನಮಗೆ ಹೊಸದಲ್ಲವಾದರೂ ಇದಕ್ಕಾಗಿ ಬಳಸಲಾಗುವ ಎಣ್ಣೆಯನ್ನು ಬದಲಿಸಿಕೊಳ್ಳುವ ಮೂಲಕ ಅದ್ಭುತವಾದ ಪರಿಣಾಮಗಳನ್ನೇ ಪಡೆಯಬಹುದು. ಭೃಂಗರಾಜ ತೈಲದ ಬಗ್ಗೆ ನಾವು ಕೇಳಿರಿತ್ತೇವಾದರೂ ಇದನ್ನು ಬಳಸುವ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇದ್ದೇವೆ. ಒಂದು ವೇಳೆ ನೀವು ಇದುವರೆಗೆ ಈ ತೈಲವನ್ನು ಪ್ರಯತ್ನಿಸದೇ ಇದ್ದರೆ ಒಮ್ಮೆ ಪ್ರಯತ್ನಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳ ಬಗ್ಗೆ ಏಕೆ ಯೋಚಿಸಬಾರದು?

ಭೃಂಗರಾಜ ತೈಲ

'ಗಿಡಮೂಲಿಕೆಗಳ ರಾಜ' ಎಂದೇ ಆಯುರ್ವೇದ ಪರಿಗಣಿಸಲ್ಪಟ್ಟಿರುವ ಈ ಮೂಲಿಗೆ ವಿಶೇಷವಾಗಿ ಕೂದಲ ಬೆಳವಣಿಗೆಗೆ ನೀಡುವ ಪೋಷಣೆಯಿಂದಲೇ ಈ ಹೆಸರನ್ನು ಪಡೆದಿದೆ. ಕೇವಲ ಬೆಳವಣಿಗೆ ನೀಡುವುದು ಮಾತ್ರವಲ್ಲ, ಕೂದಲು ಇನ್ನಷ್ಟು ದೃಢ, ಸೊಂಪಾಗಿದ್ದು ಕಾಂತಿಯುಕ್ತವೂ ಆಗಿರುತ್ತದೆ ಹಾಗೂ ಸಿಕ್ಕುತನವಿಲ್ಲದೇ ರೇಶ್ಮೆಯಂತೆ ನಯವಾಗಿರುತ್ತದೆ.

Most Read:ತಲೆ ಕೂದಲಿನ ಸಮಸ್ಯೆಗಳಿಗೆ ರಾಮಬಾಣ ಈ ಭೃ೦ಗರಾಜ ತೈಲ!

ಭೃಂಗರಾಜ ತೈಲ ನೆತ್ತಿಯ ಚರ್ಮದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಕೂದಲ ಬುಡಗಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ತನ್ಮೂಲಕ ಆರೋಗ್ಯಕರ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ನೆತ್ತಿಯ ಚರ್ಮದ ಹೊರಪದರ ಪಕಳೆಯೇಳದಂತೆ ತಡೆದು ಆರೋಗ್ಯಕರ ಚರ್ಮ ಹಾಗೂ ತನ್ಮೂಲಕ ಕೂದಲಿಗೂ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಲೇಖನದಲ್ಲಿ ನಾವು ಭೃಂಗರಾಜ ತೈಲವನ್ನು ಕೂದಲ ಆರೈಕೆಗೆ ಹೇಗೆ ಬಳಸಿಕೊಳ್ಳಬಹುದು ಹಾಗೂ ಉಪಯೋಗಿಸುವ ಸರಿಯಾದ ವಿಧಾನಗಳು ಯಾವುವು ಎಂಬುದನ್ನು ನೋಡೋಣ...

ಭೃಂಗರಾಜ ತೈಲದಿಂದ ಕೂದಲಿಗೆ ಲಭಿಸುವ ಪ್ರಯೋಜನಗಳು

*ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
*ಕೂದಲು ಉದುರುವುದನ್ನು ತಡೆಯುತ್ತದೆ
*ಅವಧಿಗೂ ಮುನ್ನ ಕೂದಲು ನೆರೆಯುವುದನ್ನು ತಡೆಯುತ್ತದೆ
*ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ
*ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ
*ಕೂದಲ ತುದಿಗಳು ಸೀಳುವುದರಿಂದ ತಡೆಯುತ್ತದೆ
*ತಲೆಯಲ್ಲಿ ತುರಿಕೆಯುಂಟಾಗದಂತೆ ತಡೆಯುತ್ತದೆ.
*ಕೂದಲ ಆರೈಕೆಗೆ ಭೃಂಗರಾಜ ತೈಲ ಬಳಸುವ ವಿಧಾನ

ಭೃಂಗರಾಜ ತೈಲದ ಅಭ್ಯಂಜನ

ಭೃಂಗರಾಜ ತೈಲ ಬಳಸಿ ತಲೆಯ ಚರ್ಮವನ್ನು ಮಸಾಜ್ ಮಾಡಿಕೊಳ್ಳುವ ಮೂಲಕ ನೆತ್ತಿಯ ಚರ್ಮದಲ್ಲಿ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಈ ಮೂಲಕ ಕೂದಲ ಬುಡಗಳಿಗೆ ಹೆಚ್ಚಿನ ಪೋಷಣೆ ದೊರೆತು ಕೂದಲು ನೀಳವಾಗಿ ಬೆಳೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

  • ಭೃಂಗರಾಜ ತೈಲ-ಎರಡು ದೊಡ್ಡ ಚಮಚ

ಬಳಕೆಯ ವಿಧಾನ

*ಒಂದು ಚಿಕ್ಕ ಬೋಗುಣಿಯಲ್ಲಿ ಭೃಂಗರಾಜ ತೈಲವನ್ನು ಸಂಗ್ರಹಿಸಿ
*ಒಲೆಯಲ್ಲಿ ಅತಿ ಚಿಕ್ಕ ಉರಿಯಲ್ಲಿ ಈ ಎಣ್ಣೆಯನ್ನು ಕೊಂಚವೇ ಬಿಸಿಯಾಗಿಸಿ. ಪರ್ಯಾಯವಾಗಿ ಮೈಕ್ರೋವೇವ್ ಅವನ್ ನಲ್ಲಿ ಹತ್ತರಿಂದ ಇಪ್ಪತ್ತು ಸೆಕೆಂಡ್ ಬಿಸಿಯಾಗಿಸಬಹುದು
*ಈ ಉಗುರುಬೆಚ್ಚನೆಯ ಎಣ್ಣೆಯನ್ನು ತಲೆಯ ಮೇಲೆ ಸುರಿದುಕೊಂಡು ಬೆರಳ ತುದಿಗಳಿಂದ ವೃತ್ತಾಕಾರದಲ್ಲಿ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿ.
*ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡುತ್ತಾ ತಲೆಯ ಎಲ್ಲಾ ಭಾಗಕ್ಕೂ ಎಣ್ಣೆ ಹರಡುವಂತೆ ಮಾಡಿ.
*ಬಳಿಕ ಸುಮಾರು ಅರ್ಧ ಘಂಟೇ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ

ಭೃಂಗರಾಜ ತೈಲ ಮತ್ತು ಕೊಬ್ಬರಿ ಎಣ್ಣೆ

ಕೂದಲಿಗೆ ಕೊಬ್ಬರಿ ಎಣ್ಣೆಯಿಂದ ಲಭಿಸುವ ಪ್ರಯೋಜನಗಳು ಅಪಾರವಾಗಿದೆ. ಇದರೊಂದಿಗೆ ಭೃಂಗರಾಜ ತೈಲವೂ ಜೊತೆಗೂಡಿದರೆ ಕೂದಲ ಬುಡಕ್ಕೆ ಅತ್ಯುತ್ತಮ ಪೋಷಣೆ ದೊರೆತು ಕೂದಲ ಬೆಳವಣಿಗೆ ಹೆಚ್ಚುತ್ತದೆ ಹಾಗೂ ಘಾಸಿಗೊಂಡಿರುವ ಕೂದಲು ಮತ್ತೆ ಆರೋಗ್ಯವಂತವಾಗಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*ಒಂದು ದೊಡ್ಡ ಚಮಚ ಭೃಂಗರಾಜ ತೈಲ
*ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ

ಬಳಕೆಯ ವಿಧಾನ:

*ಎರಡೂ ಎಣ್ಣೆಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಮಿಶ್ರಣ ಮಾಡಿ
*ಈ ಬೋಗುಣಿಯನ್ನು ಚಿಕ್ಕ ಉರಿಯಲ್ಲಿ ಬಿಸಿಮಾಡಿ ಉಗುರುಬೆಚ್ಚಗಾಗಿಸಿ
*ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ವೃತ್ತಾಕಾರದಲ್ಲಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ.
ಸುಮಾರು ಅರ್ಧ ಘಂಟೆ ಹಾಗೇ ಬಿಡಿ.
ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಿ.

Most Read: ಬ್ಯೂಟಿ ಟಿಪ್ಸ್: ಮೂಲಂಗಿಯಿಂದ ತ್ವಚೆ ಹಾಗೂ ಕೂದಲಿನ ಆರೈಕೆ!

ಭೃಂಗರಾಜ ತೈಲ, ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆ

ಹರಳೆಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಕೂದಲ ಬುಡಕ್ಕೆ ಅಗತ್ಯ ಪ್ರಚೋದನೆ ನೀಡುವ ಮೂಲಕ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಭೃಂಗರಾಜ ತೈಲ, ಕೊಬ್ಬರಿ ಮತ್ತು ಹರಳೆಣ್ಣೆಯ ಮಿಶ್ರಣ ಕೂದಲನ್ನು ದೃಢಗೊಳಿಸಿ ನೀಳವಾಗಿ ಬೆಳೆಯಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*ಎರಡು ದೊಡ್ಡ ಚಮಚ ಭೃಂಗರಾಜ ತೈಲ
*ಒಂದು ದೊಡ್ಡ ಚಮಚ ಹರಳೆಣ್ಣೆ
*ಎರಡು ದೊಡ್ಡ ಚಮಚ ಕೊಬ್ಬರಿ ಎಣ್ಣೆ

ಬಳಕೆಯ ವಿಧಾನ

*ಒಂದು ಬೋಗುಣಿಯಲ್ಲಿ ಎಲ್ಲವನ್ನೂ ಹಾಕಿ ಮಿಶ್ರಣಮಾಡಿ.
*ಈ ಬೋಗುಣಿಯನ್ನು ಚಿಕ್ಕ ಉರಿಯಲ್ಲಿ ಬಿಸಿಮಾಡಿ ಉಗುರುಬೆಚ್ಚಗಾಗಿಸಿ
*ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ವೃತ್ತಾಕಾರದಲ್ಲಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ.
*ಸುಮಾರು ಅರ್ಧ ಘಂಟೆ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸಿ

*ಭೃಂಗರಾಜ ತೈಲ ಮತ್ತು ನೆಲ್ಲಿಕಾಯಿ

ಭೃಂಗರಾಜ ತೈಲವನ್ನು ನೆಲ್ಲಿಕಾಯಿಯ ಪುಡಿಯೊಂದಿಗೆ ಬೆರೆಸಿ ಬಳಸುವ ಮೂಲಕ ಇದು ಕೂದಲಿಗೆ ಟಾನಿಕ್ ನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ವಿಶೇಷವಾಗಿ ತುರಿಕೆ ಇರುವ ತ್ವಚೆಯನ್ನು ಶಮನಗೊಳಿಸಿ ಉತ್ತಮ ಕೂದಲ ಬೆಳವಣಿಗೆ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

ಎರಡು ದೊಡ್ಡ ಚಮಚ ಭೃಂಗರಾಜ ತೈಲ
ಒಂದು ದೊಡ್ಡ ಚಮಚ ನೆಲ್ಲಿಕಾಯಿ ಪುಡಿ

ಬಳಕೆಯ ವಿಧಾನ:

*ಒಂದು ಬಾಣಲೆಯಲ್ಲಿ ಭೃಂಗರಾಜ ತೈಲವನ್ನು ಹಾಕಿ
*ಇದಕ್ಕೆ ನೆಲ್ಲಿಕಾಯಿ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
*ಮಧ್ಯಮ ಉರಿಯಲ್ಲಿ ಬಾಣಲೆಯನ್ನು ಕಾಯಿಸಿ ಸತತವಾಗಿ ತಿರುವುತ್ತಿರಿ. ಈ ಮಿಶ್ರಣ ಯಾವಾಗ ಕಂದು ಬಣ್ಣಕ್ಕೆ ತಿರುಗಳು *ಪ್ರಾರಂಭವಾಯಿತೋ ಆಗ ಉರಿ ಆರಿಸಿ ಹಾಗೇ ತಣಿಯಲು ಬಿಡಿ.
*ತಣಿದ ಬಳಿಕ ಒಂದು ಚಿಕ್ಕ ಪಾತ್ರೆಗೆ ಸೋಸಿಕೊಳ್ಳಿ
*ಈ ಎಣ್ಣೆಯನ್ನುತಲೆಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿಕೊಳ್ಳಿ. ಚಿಕ್ಕ ವೃತ್ತಾಕಾರದ ಮಸಾಜ್ ಅನ್ನು ಸುಮಾರು ಐದರಿಂದ ಹತ್ತು ನಿಮಿಷ ನಿರ್ವಹಿಸಿ ತಲೆಯ ಎಲ್ಲಾ ಕಡೆಗೆ ಎಣ್ಣೆ ಹರಡುವಂತೆ ಮಾಡಿ.
*ಸುಮಾರು ಅರ್ಧ ಘಂಟೆ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ

Most Read: ಕೂದಲಿನ ಕಂಡೀಷನರ್‌ಗೆ ಮೊಟ್ಟೆಯನ್ನು ಬಳಸುವುದು ಹೇಗೆ?

ಭೃಂಗರಾಜ ತೈಲ, ಸೀಗೇಕಾಯಿ ಮತ್ತು ದಾಸವಾಳದ ಹೂವು

ಸೀಗೇಕಾಯಿಯನ್ನು ಬಹಳ ಹಿಂದಿನಿಂದಲೇ ನೈಸರ್ಗಿಕ ಶಾಂಪೂ ರೂಪದಲ್ಲಿ ಬಳಸಲಾಗುತ್ತಿದೆ. ಸೀಗೇಕಾಯಿ ಕೂದಲನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ದಾಸವಾಳದ ಹೂವು ಕೂದಲ ಬೆಳವಣಿಗೆಗೆ ನೆರವಾಗುವ ಜೊತೆಗೇ ಅಕಾಲಿಕ ಕೂದಲು ನೆರೆಯುವುದನ್ನು ತಪ್ಪಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*ಎರಡು ದೊಡ್ಡಚಮಚ ಭೃಂಗರಾಜ ತೈಲ
*ಒಂದು ದೊಡ್ಡ ಚಮಚ ಸೀಗೇಕಾಯಿ ಪುಡಿ
*ಹತ್ತು ದಾಸವಾಳದ ಹೂವುಗಳು

ಬಳಕೆಯ ವಿಧಾನ

*ಒಂದು ಬಾಣಲೆಯಲ್ಲಿ ಭೃಂಗರಾಜ ತೈಲವನ್ನು ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ
*ದಾಸವಾಳದ ಹೂವುಗಳನ್ನು ಚೆನ್ನಾಗಿ ಚಜ್ಜಿ ಬಾಣಲೆಗೆ ಹಾಕಿ ಚೆನ್ನಾಗಿ ತಿರುವುತ್ತಾ ಬಿಸಿಮಾಡಿ.
*ಯಾವಾಗ ಈ ಮಿಶ್ರಣದ ಬಣ್ಣ ಬದಲಾಯಿಸಲು ಪ್ರಾರಂಭಗೊಂಡಿತೋ ಆಗ ಉರಿ ಆರಿಸಿ.
*ಇದಕ್ಕೆ ಸೀಗೇಕಾಯಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
*ಬಳಿಕ ಈ ಮಿಶ್ರಣವನ್ನು ತಣಿಯಲು ಬಿಡಿ. ತಣಿದ ಬಳಿಕ ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ.
*ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿಕೊಳ್ಳಿ. ಚಿಕ್ಕ ವೃತ್ತಾಕಾರದ ಮಸಾಜ್ ಅನ್ನು ಸುಮಾರು ಐದರಿಂದ ಹತ್ತು ನಿಮಿಷ ನಿರ್ವಹಿಸಿ ತಲೆಯ ಎಲ್ಲಾ ಕಡೆಗೆ ಎಣ್ಣೆ ಹರಡುವಂತೆ ಮಾಡಿ.
*ಸುಮಾರು ಅರ್ಧ ಘಂಟೆ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಳಿಕ ಕಂಡೀಶನರ್ ಬಳಸಿ ಸ್ನಾನ ಪೂರ್ಣಗೊಳಿಸಿ
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ

*ಭೃಂಗರಾಜ ತೈಲ ಮತ್ತು ಎಳ್ಳೆಣ್ಣೆ

ಎಳ್ಳೆಣ್ಣೆ ತೆಳುವಾಗಿದ್ದು ಕೂದಲ ಬುಡಕ್ಕೆ ಸುಲಭವಾಗಿ ತಲುಪುವ ಮೂಲಕ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ತನ್ಮೂಲಕ ಆರೋಗ್ಯಕರ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ಒಂದು ದೊಡ್ಡಚಮಚ ಭೃಂಗರಾಜ ತೈಲ
ಒಂದು ದೊಡ್ಡ ಚಮಚ ಎಳ್ಳೆಣ್ಣೆ

ಬಳಕೆಯ ವಿಧಾನ

*ಎರಡೂ ಎಣ್ಣೆಗಳನ್ನು ಚಿಕ್ಕ ಬೋಗುಣಿಯಲ್ಲಿ ಮಿಶ್ರಣ ಮಾಡಿ
*ಈ ಬೋಗುಣಿಯನ್ನು ಚಿಕ್ಕ ಉರಿಯಲ್ಲಿ ಬಿಸಿಮಾಡಿ ಉಗುರುಬೆಚ್ಚಗಾಗಿಸಿ
*ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ವೃತ್ತಾಕಾರದಲ್ಲಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ.
*ಸುಮಾರು ಅರ್ಧ ಘಂಟೆ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ

English summary

Bhringraj Oil: Benefits For Hair & How To Use

A good hair oil massage nourishes our hair like no other. Widely known as the 'King of Herbs',Bhringraj is an ayurvedic herb that is especially useful for its hair growth-promoting effect. It imparts strength to the hair and replenishes your hair to tackle hair damage. It can be used with ingredients like coconut oil, amla, shikakai etc. to nourish your hair.
X
Desktop Bottom Promotion