For Quick Alerts
ALLOW NOTIFICATIONS  
For Daily Alerts

ಕೂದಲು ಹಾಗೂ ಚರ್ಮದ ಆರೈಕೆಗೆ ಕ್ಯಾಸ್ಕಾರಾ ಸಗ್ರಾಡಾ

|

ಭಾರತೀಯರು ಅತೀ ಹೆಚ್ಚಾಗಿ ಬಳಕೆ ಮಾಡುವುದು ಗಿಡಮೂಲಿಕೆಗಳು ಹಾಗೂ ನೈಸರ್ಗಿಕದತ್ತವಾಗಿ ಸಿಗುವಂತಹ ಸಾಂಬಾರ ಪದಾರ್ಥಗಳನ್ನು. ಹಿಂದಿನಿಂದಲೂ ನಮ್ಮ ಆಹಾರ, ತ್ವಚೆ ಹಾಗೂ ತಲೆಯ ಆರೈಕೆ ಇತ್ಯಾದಿಗಳಿಗೆ ಗಿಡಮೂಲಿಕೆಗಳನ್ನು ಬಳಸಿಕೊಂಡು ಬರುತ್ತಾ ಇದ್ದೇವೆ. ಆಯುರ್ವೇದದಲ್ಲೂ ಹಲವಾರು ರೀತಿಯ ಗಿಡಮೂಲಿಕೆಗಳ ಬಗ್ಗೆ ಹೇಳಲಾಗಿದೆ. ಔಷಧೀಯ ಗುಣವುಳ್ಳ ಗಿಡಮೂಲಿಕೆಗಳು ನಮ್ಮ ಸಂಪೂರ್ಣ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದಾಗಿ ನಮ್ಮ ಹಿರಿಯರು ಇಂದು ಕೂಡ ತುಂಬಾ ಆರೋಗ್ಯವಂತ ಜೀವನ ಸಾಗಿಸುತ್ತಿರುವರು. ಆದರೆ ನೀವು ಕ್ಯಾಸ್ಕಾರಾ ಸಗ್ರಾಡಾ ಎನ್ನುವ ಬಗ್ಗೆ ಕೇಳಿದ್ದೀರಾ? ಇದೇನು ಎನ್ನುವ ಪ್ರಶ್ನೆಯು ನಿಮ್ಮಲ್ಲಿ ಬರಬಹುದು. ಇದು ಕೂಡ ಒಂದು ರೀತಿಯ ಗಿಡಮೂಲಿಕೆ. ಇದರ ಬಗ್ಗೆ ತಿಳಿಯುತ್ತಾ ಸಾಗುವ...

Cascara Sagrada For Skin & Hair

ಕ್ಯಾಸ್ಕಾರಾ ಸಗ್ರಾಡಾ ಎಂದರೇನು?

ಅಮೆರಿಕಾವು ಈ ಗಿಡಮೂಲಿಕೆಗೆ ತವರಾಗಿದ್ದು, ಹಲವಾರು ಔಷಧೀಯ ಗುಣವನ್ನು ಹೊಂದಿರುವಂತಹ ಸಸ್ಯ ಮತ್ತು ಇದನ್ನು ಪವಿತ್ರ ತೊಗಟೆ' ಎಂದು ಕರೆಯುವರು. ಇದು ಸುಮಾರು 20 ಅಡಿ ಎತ್ತರಕ್ಕೆ ಬೆಳೆಯುವುದು ಮತ್ತು ತೆಳುವಾದ ಎಲೆಗಳು ಈ ಸಸ್ಯದಲ್ಲಿವೆ. ಕೆಂಪು ಕಂದು ಬಣ್ಣದ ತೊಗಟೆಯು ಇದರಲ್ಲಿರುವುದು ಮತ್ತು ಇದು ಸಾಮಾನ್ಯವಾಗಿ ವಸಂತ ಕಾಲದಲ್ಲಿ ಹೂ ಬಿಡುವುದು. ಇದರಿಂದ ಹಲವಾರು ಲಾಭಗಳು ಸಿಗುವುದು ಮತ್ತು ಇದನ್ನು ಹೆಚ್ಚಾಗಿ ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಚರ್ಮ ಹಾಗೂ ಕೂದಲಿಗೆ ಕ್ಯಾಸ್ಕಾರಾ ಸಗ್ರಾಡಾ ನಿಂದ ಸಿಗುವ ಲಾಭಗಳ ಬಗ್ಗೆ ನಾವು ಇಲ್ಲಿ ತಿಳಿಯುವ. ಕ್ಯಾಸ್ಕಾರಾ ಸಗ್ರಾಡಾನಿಂದ ಚರ್ಮಕ್ಕೆ ಲಾಭಗಳು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಕ್ಯಾಸ್ಕಾರಾ ಸಗ್ರಾಡಾ ಸಸ್ಯದಲ್ಲಿ ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ಚರ್ಮದಲ್ಲಿನ ಲಕ್ಷಣಗಳನ್ನು ತಡೆಯಲು ನೆರವಾಗುವುದು. ಇದು ನೆರಿಗೆ ಮತ್ತು ಗೆರೆಗಳನ್ನು ನಿವಾರಣೆ ಮಾಡುವುದು. ಯಾವುದೇ ರೀತಿಯ ಬೊಕ್ಕೆ, ಕಪ್ಪು ಕಲೆ ಅಥವಾ ಕಪ್ಪು ಗುರುತನ್ನು ಚರ್ಮದಿಂದ ತೆಗೆದು ಹಾಕುವುದು ಮತ್ತು ಚರ್ಮವು ಯೌವನಯುತವಾಗಿ ಕಾಣುವಂತೆ ಮಾಡುವುದು. ಚರ್ಮದಲ್ಲಿ ಇದು ಯೌವನವನ್ನು ಕಾಪಾಡುವುದು.

ಮೊಡವೆ ಹಾಗೂ ಎದ್ದುಬರುವ ಚರ್ಮ ಶಮನ

ಕಾಂತಿಯು ಚರ್ಮವನ್ನು ನೀಡುವಂತಹ ಕ್ಯಾಸ್ಕಾರಾ ಸಗ್ರಾಡಾವು ಪ್ರೌಢವಾಸ್ಥೆ ತಲುಪುವಂತಹ ಹೆಣ್ಣು ಮಕ್ಕಳಿಗೆ ತುಂಬಾ ನೆರವಿಗೆ ಬರುವುದು. ಯಾಕೆಂದರೆ ಈ ಸಸ್ಯವು ಮೊಡವೆ ಹಾಗು ಬೊಕ್ಕೆಗಳನ್ನು ನಿವಾರಣೆ ಮಾಡುವುದು. ಪ್ರೌಢಾವಸ್ಥೆ ವೇಳೆ ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಕ್ಯಾಸ್ಕಾರಾ ಸಗ್ರಾಡಾವನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಅದರಿಂದ ಮೊಡವೆ ಹಾಗೂ ಬೊಕ್ಕೆಗಳು ನಿವಾರಣೆ ಆಗುವುದು. ಇದರಿಂದ ಸುಂದರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು. ನಿಯಮಿತ ಹಾಗೂ ದೀರ್ಘಕಾಲದ ತನಕ ಇದನ್ನು ಚರ್ಮಕ್ಕೆ ಹಚ್ಚಿಕೊಂಡರೆ ಆಗ ತೇಪೆ ಹಾಕಿದಂತಿರುವ ಚರ್ಮದ ಸಮಸ್ಯೆ ನಿವಾರಣೆ ಮಾಡಬಹುದು. ಕ್ಯಾಸ್ಕಾರಾ ಸಗ್ರಾಡಾದ ಸಾರದಿಂದ ಕೋಲ್ಡ್ ಟೀ ಮಾಡಿಕೊಂಡು ಕುಡಿಯಬಹುದು.

Most Read: ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಸರಳ ಟಿಪ್ಸ್

ತೇವಾಂಶ ನೀಡುವ ಗುಣಗಳಿವೆ

ಕ್ಯಾಸ್ಕಾರಾ ಸಗ್ರಾಡಾದಲ್ಲಿ ದೇಹಕ್ಕೆ ತೇವಾಂಶ ನೀಡುವಂತಹ ಗುಣಗಳು ಇವೆ. ಇದರಿಂದ ಇದನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಚರ್ಮವು ತೇವಾಂಶದಿಂದ ಕೂಡಿರುವುದು ಮತ್ತು ನೀವು ಸುಂದರವಾಗಿ ಕಾಣುವಂತೆ ಮಾಡುವುದು.

ಕ್ಯಾಸ್ಕಾರಾ ಸಗ್ರಾಡಾದಿಂದ ಕೂದಲಿಗೆ ಆಗುವ ಲಾಭಗಳು

ಆರೋಗ್ಯಕಾರಿ ಕೂದಲಿಗೆ ಸಹಕಾರಿ

ಕೂದಲಿನ ವಿಚಾರಕ್ಕೆ ಬಂದರೆ ನಾವು ತುಂಬಾ ಎಚ್ಚರಿಕೆಯಿಂದ ಇರುತ್ತೇವೆ. ಈ ವೇಳೆ ನಾವು ರಾಸಾಯನಿಕಮುಕ್ತವಾಗಿರುವ ಮತ್ತು ಸ್ವಲ್ಪ ಅಗ್ಗವಾಗಿರುವ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಕೆಲವು ಜನರಿಗೆ ಕೂದಲು ಉದುರುವ ಸಮಸ್ಯೆಯಿರಬಹುದು ಮತ್ತು ಇನ್ನು ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ. ಇದರಿಂದ ನಾವು ಶಾಂಪೂ, ಕಂಡೀಷನರ್, ಹೇರ್ ಸಿರಮ್ ಮತ್ತು ಕೂದಲಿನ ಎಣ್ಣೆಯನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಕ್ಯಾಸ್ಕಾರಾ ಸಗ್ರಾಡಾವನ್ನು ಕೂದಲಿಗೆ ಹಚ್ಚಿಕೊಂಡಾಗ ಅದರಿಂದ ಆರೋಗ್ಯವಂತ ಕೂದಲನ್ನು ಪಡೆಯಬಹುದು. ಇದು ತಲೆಬುರುಡೆಯನ್ನು ಸ್ವಚ್ಛಗೊಳಿಸುವುದು ಮತ್ತು ಕೂದಲಿನ ಬುಡವನ್ನು ಬಲಪಡಿಸುವುದು. ಇದರಿಂದ ಕೂದಲಿನ ಸಮಸ್ಯೆಯಾಗಿರುವಂತಹ ಚರ್ಮ ಎದ್ದು ಬರುವ ತಲೆಬುರುಡೆ, ಹೇನು ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದು.

Most Read: ಬರೀ 15 ದಿನಗಳಲ್ಲಿಯೇ ಬಿಳಿಕೂದಲನ್ನು ಕಪ್ಪಾಗಿಸುವ ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಎಣ್ಣೆಗಳು

ಕೂದಲು ಉದುರುವುದನ್ನು ತಡೆಯುವುದು

ಕೂದಲು ಉದುರುವಿಕೆ ಸಮಸ್ಯೆಯಿದ್ದರೆ ಆಗ ನಿಮಗೆ ಕ್ಯಾಸ್ಕಾರಾ ಸಗ್ರಾಡಾದಿಂದ ಸರಿಯಾದ ಆಯ್ಕೆಯಾಗಿರುವುದು. ಇದನ್ನು ನೀವು ತಲೆಬುರುಡೆಗೆ ಹಾಗೆ ಹಚ್ಚಿಕೊಳ್ಳಬೇಕು ಮತ್ತು ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದು ಕಾಂತಿಯುತ, ನಯ ಮತ್ತು ಹೊಳೆಯುವ ಕೂದಲನ್ನು ನೀಡುವುದು. ಕೂದಲಿನ ಕಿರುಚೀಲಗಳನ್ನು ಬಲಪಡಿಸುವಲ್ಲಿ ಇದು ನೆರವಾಗುವುದು. ಇದರಿಂದ ಕೂದಲಿನ ಬೆಳವಣಿಗೆಯು ಆರೋಗ್ಯಕಾರಿಯಾಗಿ ಆಗುವುದು.

ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಕ್ಯಾಸ್ಕಾರಾ ಸಗ್ರಾಡಾ ಸ್ಥಾನ ಪಡೆಯಬೇಕಲ್ಲವೇ? ಈ ಗಿಡಮೂಲಿಕೆಯನ್ನು ನೀವು ಇದುವರೆಗೆ ಬಳಕೆ ಮಾಡಿದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿಕೊಡಿ. ಕೂದಲು ಮತ್ತು ಚರ್ಮದ ಇನ್ನು ಹೆಚ್ಚಿನ ಆರೈಕೆ ಬಗ್ಗೆ ತಿಳಿಯಲು ಬೋಲ್ಡ್ ಸ್ಕೈ ಓದುತ್ತಲಿರಿ.

English summary

Benefits Of Cascara Sagrada For Skin & Hair

Native to America, cascara sagrada is a medicinal plant and is popularly known as 'sacred bark. It grows about 20 feet in length and has thin leaves. It also has a reddish brown coloured bark and flowers typically in the spring season. It has a number of benefits attached to it and is used extensively in skin care and hair care.
Story first published: Wednesday, February 20, 2019, 15:58 [IST]
X
Desktop Bottom Promotion