For Quick Alerts
ALLOW NOTIFICATIONS  
For Daily Alerts

ನೆಲ್ಲಿಕಾಯಿ: ಕೂದಲಿನ ಸೌಂದರ್ಯಕ್ಕೆ ಇದರ ಪ್ರಯೋಜನಗಳು ಹಾಗೂ ಬಳಸುವ ವಿಧಾನ

|

ನೆಲ್ಲಿಕಾಯಿಯು ಅದ್ಭುತ ಆಹಾರವಾಗಿದ್ದು, ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ಇದು ನೀಡುವುದು. ಇದು ಕೇವಲ ಆರೋಗ್ಯ ಮಾತ್ರವಲ್ಲದೆ, ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಿಕೊಳ್ಳಬಹುದು. ಇದರಿಂದ ಕೂದಲಿನ ಹಲವಾರು ಸಮಸ್ಯೆಗಳು, ತಲೆಹೊಟ್ಟು, ಕೂದಲು ಉದುರುವಿಕೆ ಇತ್ಯಾದಿಗಳನ್ನು ತಡೆಯಬಹುದಾಗಿದೆ.

ಆಯುರ್ವೇದದಲ್ಲಿ ಕೂದಲಿನ ಬೆಳವಣಿಗೆಗೆ ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ಕೂದಲಿನ ಸ್ವಚ್ಛತೆಯು ಹೆಚ್ಚಾಗುವುದು. ನೆಲ್ಲಿಕಾಯಿಯು ಕೂದಲಿನ ಟಾನಿಕ್ ನಂತೆ ಕೆಲಸ ಮಾಡುವ ಪರಿಣಾಮವಾಗಿ ಇದು ಕೂದಲನ್ನು ಬಲಪಡಿಸುವುದು ಮತ್ತು ಕೂದಲಿನ ವರ್ಣದ್ರವ್ಯವನ್ನು ಪುನರ್ಶ್ಚೇತನಗೊಳಿಸಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ತಡೆಯುವುದು. ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ತಲೆಬುರುಡೆಗೆ ಪೋಷಣೆ ನೀಡುವುದು ಮತ್ತು ಕೂದಲಿಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈ ಎಲ್ಲಾ ಲಾಭಗಳು ನೆಲ್ಲಿಕಾಯಿಯಲ್ಲಿ ಇರುವ ಕಾರಣದಿಂದಾಗಿ ಕೂದಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಲು ಇದನ್ನು ಬಳಸುವುದು ಹೇಗೆ ಎಂದು ತಿಳಿಯುವ. ಇದಕ್ಕೆ ಮೊದಲು ನೆಲ್ಲಿಕಾಯಿಯಲ್ಲಿರುವ ಲಾಭಗಳ ಬಗ್ಗೆ ತಿಳಿಯಿರಿ.

Amla

ಕೂದಲಿಗೆ ನೆಲ್ಲಿಕಾಯಿಯಿಂದ ಸಿಗುವ ಲಾಭಗಳು

•ಕೂದಲು ಉದುರುವಿಕೆ ತಡೆಯುವುದು.
•ಕೂದಲಿನ ಬೆಳವಣಿಗೆಗೆ ನೆರವಾಗುವುದು.
•ಕೂದಲನ್ನು ತುಂಬಾ ಬಲ ಹಾಗೂ ಆರೋಗ್ಯಯುತವಾಗಿಸುವುದು.
•ತಲೆಹೊಟ್ಟು ನಿವಾರಿಸುವುದು.
•ಕೂದಲಿಗೆ ಕಂಡೀಷನ್ ಮಾಡುವುದು.
•ಕೂದಲಿಗೆ ಕಾಂತಿ ನೀಡುವುದು.
•ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದು.
•ಕೂದಲಿಗೆ ಆಗುವ ಹಾನಿ ತಡೆಯುವುದು.

ಕೂದಲಿಗೆ ನೆಲ್ಲಿಕಾಯಿ ಬಳಸುವುದು ಹೇಗೆ?

*ಕೂದಲು ಉದುರುವಿಕೆ ತಡೆಯಲು

ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ ಮತ್ತು ಇದು ತಲೆಬುರುಡೆಯಲ್ಲಿ ಇರುವಂತಹ ಧೂಳು, ಕಲ್ಮಷವನ್ನು ತೆಗೆಯುವುದು ಮತ್ತು ಕೂದಲಿನ ಕಿರುಚೀಲಗಳನ್ನು ತೆರೆದು ತಲೆಬುರುಡೆಗೆ ಪೋಷಣೆ ನೀಡುವುದು ಮತ್ತು ಕೂದಲು ಉದುರುವಿಕೆ ತಡೆಯುವುದು. ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ತಲೆಬುರುಡೆಯ ಆರೋಗ್ಯವನ್ನು ಸುಧಾರಿಸುವುದು ಮತ್ತು ಕೂದಲು ಉದುರುವಿಕೆಯನ್ನು ಇದು ಕಡಿಮೆ ಮಾಡುವುದು ಎಂದು ಸಾಬೀತಾಗಿದೆ.

ಬೇಕಾಗುವ ಸಾಮಗ್ರಿಗಳು

•2 ಚಮಚ ನೆಲ್ಲಿಕಾಯಿ ಹುಡಿ
•2 ಚಮಚ ಮೊಸರು
•1 ಚಮಚ ಜೇನುತುಪ್ಪ
•ಬಿಸಿ ನೀರು(ಅಗತ್ಯಕ್ಕೆ ತಕ್ಕಷ್ಟು)

ಬಳಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ನೆಲ್ಲಿಕಾಯಿ ಹುಡಿ ತೆಗೆದುಕೊಳ್ಳಿ.
•ಇದಕ್ಕೆ ಬಿಸಿ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ.
•ಇದಕ್ಕೆ ಜೇನುತುಪ್ಪ ಮತ್ತು ಮೊಸರು ಹಾಕಿಕೊಳ್ಳಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.
•ಅರ್ಧ ಗಂಟೆ ಕಾಲ ಹಾಗೆ ಇದನ್ನು ಬಿಡಿ.
•ಇದರ ಬಳಿಕ ಉಗುರುಬೆಚ್ಚಗಿನ ನೀರನ್ನು ಬಳಸಿಕೊಂಡು ಕೂದಲು ತೊಳೆಯಿರಿ.

Most Read: ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ಕೂದಲಿನ ಬೆಳವಣಿಗೆಗೆ ನೆರವಾಗುವುದು

ಪ್ರೋಟೀನ್ ಮತ್ತು ಪ್ರಮುಖ ಖನಿಜಾಂಶಗಳು ಸಮೃದ್ಧವಾಗಿರುವಂತಹ ಮೊಟ್ಟೆಯು ಕೂದಲಿನ ಕಿರುಚೀಲಗಳಿಗೆ ಪೋಷಣೆ ನೀಡುವುದು ಮತ್ತು ಕೂದಲಿನ ಬೆಳವಣಿಗೆಗೆ ಕಾರಣವಾಗುವುದು..

ಬೇಕಾಗುವ ಸಾಮಗ್ರಿಗಳು

•½ ಕಪ್ ನೆಲ್ಲಿಕಾಯಿ ಹುಡಿ
•ಎರಡು ಮೊಟ್ಟೆ

ವಿಧಾನ

•ಮೊಟ್ಟೆಯನ್ನು ಒಡೆದು ಪಿಂಗಾಣಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ನೊರೆ ಬರುವಂತೆ ಮಾಡಿ.
•ಇದಕ್ಕೆ ನೆಲ್ಲಿಕಾಯಿ ಹುಡಿ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.
•ಇದರ ಬಳಿಕ ತಣ್ಣೀರು ಬಳಸಿಕೊಂಡು ಕೂದಲು ತೊಳೆಯಿರಿ.

ತಲೆಹೊಟ್ಟು ನಿವಾರಣೆಗೆ

ತೆಂಗಿನ ಎಣ್ಣೆಯು ಆಳವಾಗಿ ಕೂದಲಿನ ಕಿರುಚೀಲಗಳ ಒಳಗೆ ಹೋಗುವುದು ಮತ್ತು ಕೂದಲಿಗೆ ಆಗುವ ಹಾನಿಯನ್ನು ತಡೆಯುವುದು ಮತ್ತು ತಲೆಹೊಟ್ಟಿನ ಸಮಸ್ಯೆ ಕೂಡ ನಿವಾರಣೆ ಮಾಡುವುದು.

ಬೆಕಾಗುವ ಸಾಮಗ್ರಿಗಳು

•1 ಚಮಚ ನೆಲ್ಲಿಕಾಯಿ ರಸ
•2 ಚಮಚ ತೆಂಗಿನ ಎಣ್ಣೆ

ವಿಧಾನ

•ಪಿಂಗಾಣಿಯಲ್ಲಿ ನೆಲ್ಲಿಕಾಯಿ ರಸ ಹಾಕಿ.
•ಇದಕ್ಕೆ ತೆಂಗಿನ ಎಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ,
•ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷಗಳ ಹಾಗೆ ಇದನ್ನು ಮಸಾಜ್ ಮಾಡಿಕೊಳ್ಳಿ.
•ಗಂಟೆಗಳ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ ಮತ್ತು ಸಾಮಾನ್ಯದಂತೆ ಶಾಂಪೂ ಹಾಕಿಕೊಳ್ಳಿ.

ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು

•ಎರಡು ಚಮಚ ನೆಲ್ಲಿಕಾಯಿ ಹುಡಿ
•3 ಚಮಚ ತೆಂಗಿನ ಎಣ್ಣೆ
•1 ಚಮಚ ಮೆಂತ್ಯೆ ಕಾಳಿನ ಹುಡಿ

ವಿಧಾನ

•ಪಿಂಗಾಣಿಗೆ ನೆಲ್ಲಿಕಾಯಿ ಹುಡಿ ಹಾಕಿ.
•ಇದಕ್ಕೆ ತೆಂಗಿನ ಎಣ್ಣೆ ಹಾಕಿ ಮತ್ತು ಮೆಂತ್ಯೆ ಕಾಳಿನ ಹುಡಿ ಹಾಕಿಕೊಳ್ಳಿ ಮತ್ತು ಕಡಿಮೆ ಬೆಂಕಿಯಲ್ಲಿ ಬಿಸಿ ಮಾಡಿ.
•ಇದರ ಮೇಲ್ಭಾಗದಲ್ಲಿ ಕಂದು ಬಣ್ಣವು ಜಮೆ ಆಗುವ ತನಕ ಬಿಸಿಯಾಗಲಿದೆ.
•ಈಗ ಬೆಂಕಿಯಿಂದ ತೆಗೆಯಿರಿ ಮತ್ತು ಇದನ್ನು ಕೋಣೆಯ ತಾಪಮಾನದಲ್ಲಿ ತಣ್ಣಗಾಗಲು ಬಿಡಿ.
•ಇದನ್ನು ಸೋಸಿಕೊಂಡು ಬೇರೆ ಪಾತ್ರೆಗೆ ಹಾಕಿ.
•ಈ ಮಿಶ್ರಣವನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.
•ರಾತ್ರಿಯಿಡಿ ಹಾಗೆ ಬಿಡಿ.
•ಲಘು ಶಾಂಪೂ ಬಳಸಿಕೊಂಡು ಬೆಳಗ್ಗೆ ಕೂದಲು ತೊಳೆಯಿರಿ. ಇದರ ಬಳಿಕ ಕೂದಲನ್ನು ಸರಿಯಾಗಿ ಒಣಗಿಸಿ.

ತುರಿಕೆಯ ತಲೆಬುರುಡೆಗೆ

ನೆಲ್ಲಿಕಾಯಿಯ ಎಣ್ಣೆಯಲ್ಲಿ ಇರುವಂತಹ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ತಲೆಬುರುಡೆಗೆ ಶಮನ ನೀಡುವುದು ಮತ್ತು ತಲೆಬುರುಡೆಗೆ ಪೋಷಣೆ ನೀಡುವುದು.

ಬೇಕಾಗುವ ಸಾಮಗ್ರಿಗಳು

•ನೆಲ್ಲಿಕಾಯಿ ಎಣ್ಣೆ

ವಿಧಾನ

•ಕೆಲವು ಹನಿ ನೆಲ್ಲಿಕಾಯಿ ಎಣ್ಣೆಯನ್ನು ಅಂಗೈಗೆ ಹಾಕಿಕೊಳ್ಳಿ.
•ಇದನ್ನು ತಲೆಬುರುಡೆಗೆ ನಿಧಾನವಾಗಿ ಕೆಲವು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
•25-30 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ ಮತ್ತು ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ.

Most Read: ಬಿಳಿ ಕೂದಲಿನ ಸಮಸ್ಯೆಗೆ-ಸ್ಟೆಪ್ ಬೈ ಸ್ಟೆಪ್ ನೆಲ್ಲಿಕಾಯಿಯ ಚಿಕಿತ್ಸೆ!

ಎಣ್ಣೆಯುಕ್ತ ಕೂದಲಿಗೆ

ಲಿಂಬೆಯಲ್ಲಿ ಸಂಕೋಚನ ಗುಣವಿದೆ ಮತ್ತು ಇದು ತಲೆಬುರುಡೆಯಲ್ಲಿ ಮೇಧೋಗ್ರಂಥಿ ಸ್ರಾವವನ್ನು ನಿಯಂತ್ರಿಸುವುದು ಮತ್ತು ಎಣ್ಣೆಯುಕ್ತ ಕೂದಲನ್ನು ಇದು ತಡೆಯುತ್ತದೆ.

ಬೇಕಾಗುವ ಸಾಮಗ್ರಿಗಳು

•2 ಚಮಚ ನೆಲ್ಲಿಕಾಯಿ ಹುಡಿ.
•1 ಚಮಚ ಲಿಂಬೆರಸ
•ನೀರು(ಅಗತ್ಯವಿದ್ದಷ್ಟು)

ವಿಧಾನ

•ಪಿಂಗಾಣಿಗೆ ನೆಲ್ಲಿಕಾಯಿ ಹುಡಿ ಹಾಕಿ.
•ಇದಕ್ಕೆ ಲಿಂಬೆರಸ ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳಿ.
•ಇದಕ್ಕೆ ನೀರು ಹಾಕಿ ಮೆತ್ತಗಿನ ಪೇಸ್ಟ್ ಮಾಡಿ.
•ಈ ಪೇಸ್ಟ್ ನ್ನು ತಲೆಬುರುಡೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದನ್ನು ರಾತ್ರಿ ಮಲಗುವ ಮೊದಲು ಮಾಡಿ.
•ರಾತ್ರಿಯಿಡಿ ಹಾಗೆ ಬಿಡಿ.
•ಇದರ ಬಳಿಕ ಬೆಳಗ್ಗೆ ಲಘು ಶಾಂಪೂ ಹಾಕಿ ತೊಳೆಯಿರಿ.

ಕೂದಲಿಗೆ ಕಂಡೀಷನ್ ಮಾಡಲು

ಬಾದಾಮಿ ಎಣ್ಣೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಇ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು, ತಲೆಬುರುಡೆಗೆ ಪೋಷಣೆ ನೀಡುವುದು. ಇದು ತಲೆಬುರುಡೆಯಲ್ಲಿ ಮೊಶ್ಚಿರೈಸ್ ನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಕೂದಲನ್ನು ಕಂಡೀಷನ್ ಮಾಡುವುದು.

ಬೇಕಾಗುವ ಸಾಮಗ್ರಿಗಳು

•2 ಚಮಚ ನೆಲ್ಲಿಕಾಯಿ ಹುಡಿ.
•1 ಚಮಚ ಬಾದಾಮಿ ಎಣ್ಣೆ

ವಿಧಾನ

•ಪಿಂಗಾಣಿಗೆ ನೆಲ್ಲಿಕಾಯಿ ರಸ ಹಾಕಿ.
•ಇದಕ್ಕೆ ಬಾದಾಮಿ ಎಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
•ಮಲಗುವ ಮೊದಲು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಕೂದಲಿನ ತುದಿ ತನಕ ಸರಿಯಾಗಿ ಹಚ್ಚಿಕೊಂಡು ಬಳಿಕ ನಿದ್ರೆಗೆ ಜಾರಿ.
•ರಾತ್ರಿಯಿಡಿ ಹಾಗೆ ಬಿಡಿ.
•ಲಘು ಶಾಂಪೂ ಬಳಸಿಕೊಂಡು ಬೆಳಗ್ಗೆ ಇದನ್ನು ತೊಳೆಯಿರಿ.

English summary

Amla: Benefits For Hair & How To Use

Amla, also known as Indian gooseberry, is a superfood that has a lot of benefits to offer. Extensively used to promote hair growth, this ayurvedic herb has antioxidant and anti-inflammatory properties that help to improve hair hygiene. This amazing fruit can be used with ingredients like honey, lemon, eggs etc. to combat various hair issues. Here is how!
X
Desktop Bottom Promotion