For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೂದಲಿನ ಆರೈಕೆಗಾಗಿ ಒಂದಿಷ್ಟು ಸರಳ ಟಿಪ್ಸ್

|

ಚಳಿಗಾಲವೆಂದರೆ ಆ ಸಮಯ ಹೆಪ್ಪುಗಟ್ಟುವ ಸಮಯವಾಗಿರುತ್ತದೆ. ಕೆಲವೊಂದು ಕಡೆ ಮಂಜಿನ ಮಳೆಯಾಗುತ್ತದೆ. ಆದರೆ ಕೆಲವೊಂದು ಕಡೆ ಮಂಜಿನ ಮಳೆಯಾಗದಿದ್ದರೂ ಚಳಿ ಮಾತ್ರ ಅಧಿಕವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ದೇಹವನ್ನು ಆರೈಕೆ ಮಾಡುವುದು ಕಷ್ಟದ ಕೆಲಸ. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆ ತುಂಬಾ ಕಷ್ಟ. ಚರ್ಮ ಹಾಗೂ ಕೂದಲು ಚಳಿಗಾಲದಲ್ಲಿ ಒಣಗಿದಂತಾಗುತ್ತದೆ. ಈ ಸಮಯದಲ್ಲಿ ಹೇರ್ ಡ್ರೈಯರ್ ಅಥವಾ ಬೇರೆ ಯಾವುದೇ ಕೂದಲಿನ ಉಪಕರಣಗಳನ್ನು ಬಳಸಬೇಡಿ. ಒಂದು ವೇಳೆ ಬಳಸಿದರೂ ಮೊದಲು ಕಂಡೀಷನರ್ ಹಾಕಿಕೊಳ್ಳಿ.

ಚಳಿಗಾಲದಲ್ಲಿ ತಲೆಬುರುಡೆ ಕೂಡ ಒಣಗಿ ಹೋಗುವ ಕಾರಣದಿಂದ ತಲೆಹೊಟ್ಟಿನ ಸಮಸ್ಯೆ, ಕಿಣ್ವಗಳಿಂದ ತಲೆಕೂದಲು ಉದುರಬಹುದು. ತಲೆಬುರುಡೆಯನ್ನು ಸ್ವಚ್ಛವಾಗಿಡಲು ತಲೆಬುರುಡೆಗೆ ಕೆಲವು ಹನಿ ತೆಂಗಿನೆಣ್ಣೆ, ಆಲೀವ್ ಅಥವಾ ಜೊಜೊಬಾ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದು. ತಲೆಹೊಟ್ಟು ನಿವಾರಣೆ ಮಾಡುವಂತಹ ಶಾಂಪೂ ಹಾಕಿಕೊಂಡು ವಾರದಲ್ಲಿ ಒಂದು ಸಲ ಕೂದಲು ತೊಳೆದುಕೊಂಡರೆ ತುಂಬಾ ಒಳ್ಳೆಯದು.

hair during winter

ಬಾಳೆಹಣ್ಣು ಹಾಗೂ ಜೇನುತುಪ್ಪ

ಬಾಳೆಹಣ್ಣು, ಎರಡು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ಆರ್ಗಾನ್ ಎಣ್ಣೆಯನ್ನು ಹಾಕಿಕೊಂಡು ದಪ್ಪ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡು 30-40 ನಿಮಿಷ ಕಾಲ ಬಿಟ್ಟು ಕೂದಲನ್ನು ತೊಳೆದರೆ ಆಗ ಕೂದಲಿಗೆ ಒಳ್ಳೆಯ ಕಾಂತಿ ಬರುವುದು. ಇದು ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಮಾಡಬಹುದಾದ ಮನೆಮದ್ದಾಗಿದೆ.

Most Read: ಕೂದಲಿಗೆ ಬಳಸುವ ಹೇರ್‌ಜೆಲ್‌‌ನ ಅಡ್ಡಪರಿಣಾಮಗಳು

ಕೂದಲಿಗೆ ಆಳವಾಗಿ ಕಂಡೀಷನ್ ಮಾಡುವುದು. ಕೂದಲಿಗೆ ಸ್ಪಾ ಚಿಕಿತ್ಸೆ, ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳುವುದು ಮತ್ತು ಶಾಂಪೂ ಹಾಕಿಕೊಳ್ಳುವ ಮೊದಲು ಸ್ಟೀಮ್ ಮಾಡಿಸಿಕೊಳ್ಳುವುದು ಚಳಿಗಾಲದಲ್ಲಿ ಮಾಡಬಹುದಾದ ಸಾಮಾನ್ಯ ಕೂದಲಿನ ಆರೈಕೆಯ ಕ್ರಮಗಳು.

ಬಿಸಿ ಎಣ್ಣೆಯ ಮಸಾಜ್

ಚಳಿಗಾಲದಲ್ಲಿ ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು - ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಲಿಗಾಲದಲ್ಲಿ ಇದನ್ನು ನಿರಂತರವಾಗಿ ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ.

Most Read: ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ, ಸೀಗೆಕಾಯಿ ಹೇರ್ ಮಾಸ್ಕ್ ಬಳಸಿ

ಕಂಡೀಷನರ್‌ಗಳು

ಚಳಿಗಾಲಕ್ಕೆ ಕಂಡೀಷನರ್‌ಗಳು ತುಂಬಾ ಉತ್ತಮವಾದುದು. ಉತ್ತಮ ಗುಣಮಟ್ಟದ ಕಂಡೀಷನರ್‌ಗಳಿಂದ ಕೂದಲಿನ ತುದಿ ಸೀಳಾಗುವಿಕೆ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಕಂಡೀಷನ್‌ನ ಬಳಕೆ ಅತ್ಯವಶ್ಯಕವಾದುದು.ನೀವು ಶ್ಯಾಂಪು ಬಳಸುವುದಕ್ಕಿಂತ ಮುನ್ನ ಕಂಡೀಷನರ್ ಅನ್ನು ಬಳಸಬಹುದು. ಕಂಡೀಷನರ್ ಅನ್ನು ಹಚ್ಚಿ 5 ನಿಮಿಷಗಳ ಕಾಲ ಹಾಗೆ ಬಿಡಿ. ಕೂದಲಿನ ತುದಿಗೆ ಹಚ್ಚುವುದು ಉತ್ತಮ ಬುಡಕ್ಕೆ ಕಂಡೀಷನರ್ ಅಗತ್ಯವಿಲ್ಲ. ನಂತರ ತಣ್ಣೀರಿನಲ್ಲಿ ಕೂದಲು ತೊಳೆಯಿರಿ. ಶ್ಯಾಂಪೂ ಬಳಸಿದ ನಂತರ ಕೂಡ ಈ ವಿಧಾನವನ್ನು ಮಾಡಿ.

ಹೇರ್ ಪ್ಯಾಕ್‌ಗಳು

ಹೇರ್ ಪ್ಯಾಕ್‌ಗಳನ್ನು ನೈಸರ್ಗಿಕ ಸಾಮಾಗ್ರಿಗಳಿಂದ ಮಾಡಿಕೊಳ್ಳುವುದು ತುಂಬಾ ಉತ್ತಮವಾದುದು. ಈ ಹೇರ್ ಪ್ಯಾಕ್‌ಗಳು ಕೂದಲಿಗೆ ತೇವಾಂಶವನ್ನು ಒದಗಿಸುವುದರೊಂದಿಗೆ, ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಮನೆಯಲ್ಲೇ ಮಾಡಿಕೊಳ್ಳ ಬಹುದಾದ ಹೇರ್ ಪ್ಯಾಕ್‌ಗಳು ಸಾಕಷ್ಟಿವೆ, ಆದರೆ ಅವುಗಳ ಉಪಯೋಗವನ್ನು ನಾವು ಯೋಗ್ಯ ರೀತಿಯಲ್ಲಿ ಮಾಡಿಕೊಳ್ಳಬೇಕು. ಅಂದರೆ ಮೊಸರು, ಹೆನ್ನಾ (ಮದರಂಗಿ), ಹಾಲು, ಬೇವು ಹಾಗೂ ಲಿಂಬೆ ಹಣ್ಣು. ಈ ಸಾಮಾಗ್ರಿಗಳಿಂದ ಮಾಡಿದ ಹೇರ್ ಪ್ಯಾಕ್‌ಗಳು ಉತ್ತಮ ಫಲಿತಾಂಶವನ್ನು ನೀಡುವುದರಲ್ಲಿ ಸಂಶಯವಿಲ್ಲ.

ಶ್ಯಾಂಪು ಮತ್ತು ಕಂಡೀಷನರ್‌ಗಳು

ಪ್ರತಿ ಋತುವಿಗೆ ಅನುಗುಣವಾಗಿ ನಿಮ್ಮ ಶ್ಯಾಂಪು ಮತ್ತು ಕಂಡೀಷನರ್‌ಗಳನ್ನು ಬದಲಾಯಿಸಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಶ್ಯಾಂಪುವನ್ನು ಚಳಿಗಾಲದಲ್ಲಿ ಬಳಸಿ. ಕೂದಲು ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಶ್ಯಾಂಪು ಮತ್ತು ಕಂಡೀಷನರ್ ಬಳಸಿ.

Most Read: ಪವರ್‌ಫುಲ್ ಎಣ್ಣೆಗಳು: ಕೂದಲು ಉದುರುವಿಕೆ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ

ಒದ್ದೆಗೂದಲನ್ನು ಕಟ್ಟುವುದನ್ನು ನಿಲ್ಲಿಸಿ

ಚಳಿಗಾಲದ ತಂಪು ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಚ್ಚಿನ ಮಹಿಳೆಯರು ತಮ್ಮ ನೀಳಕೂದಲನ್ನು ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಬುಡ ತೆಳ್ಳಗಾಗ ತೊಡಗುತ್ತದೆ. ಇದು ಬಕ್ಕತಲೆಯನ್ನುಂಟು ಮಾಡಬಹುದು, ಅಲ್ಲದೆ ತಲೆಹೊಟ್ಟನ್ನು ಉಂಟು ಮಾಡಿ ಕೂದಲಿಗೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಒದ್ದೆಕೂದಲನ್ನು ಎಂದಿಗೂ ಕಟ್ಟಬೇಡಿ. ಈ ರೀತಿಯ ತಪ್ಪುಗಳನ್ನು ಜನರು ಚಳಿಗಾಲದಲ್ಲಿ ಮಾಡುತ್ತಾರೆ. ಚಳಿಗಾಲದಲ್ಲಿ ಕೇಶ ರಕ್ಷಣೆ ಅತೀ ಅವಶ್ಯಕ ಮತ್ತು ಇದಕ್ಕೆ ಬೇಕಾದ ಆರೈಕೆಯನ್ನು ಮಾಡಲು ಮರೆಯದಿರಿ.

English summary

Winter Hair Care Tips for Healthy Hair

In winters scalp causes a lot of dandruff, eczema or psoriasis which also results in hair fall. So to keep the scalp clean you can rub a few drops of shea, coconut, olive or jojoba oil onto your palms and massage your scalp. This will prevent the dandruff. Also you can rinse your hair once a week with an anti-dandruff shampoo like dandrid to make sure your scalp remains clean. Home-made remedies such as mixing a banana with two tbsp of honey and few drops of argon oil and making a paste out of it and leaving it on your hair as a mask for 30 to 40 minutes before rinsing the hair will really help bring the shine and luster back into the hair.
Story first published: Friday, November 16, 2018, 12:42 [IST]
X
Desktop Bottom Promotion