ಪ್ರತಿನಿತ್ಯ ಕೂದಲು ಯಾಕೆ ತೊಳೆಯಬಾರದು?

Posted By: Hemanth
Subscribe to Boldsky

ಕೂದಲಿನ ಆರೈಕೆ ತುಂಬಾ ಕಠಿಣ ಕೆಲಸ. ಕೂದಲು ಆರೋಗ್ಯವಾಗಿರಬೇಕಾದರೆ ಅದರ ಆರೈಕೆಯು ಪ್ರಮುಖ ಪಾತ್ರ ವಹಿಸುವುದು. ಇಂತಹದರಲ್ಲಿ ಕೆಲವು ಮಹಿಳೆಯರು ದಿನನಿತ್ಯ ಕೂದಲಿಗೆ ಸ್ನಾನ ಮಾಡಿ ಕೂದಲು ತೊಳೆಯುತ್ತಾರೆ. ಆದರೆ ಪ್ರತಿನಿತ್ಯ ಕೂದಲು ತೊಳೆಯುವುದು ಸರಿಯಲ್ಲವೆನ್ನುವ ಮಾತಿದೆ. ಹೇರ್ ಸ್ಟೈಲಿಸ್ಟ್ ಗಳ ಪ್ರಕಾರ ಪ್ರತಿದಿನ ಕೂದಲು ತೊಳೆದರೆ ಅದರಿಂದ ಕೂದಲಿಗೆ ಹಾನಿಯಾಗುವುದು.

ಕೂದಲಿನ ದಪ್ಪ, ಕೂದಲಿನ ವಿನ್ಯಾಸ ಇತ್ಯಾದಿಗಳಿಗೆ ಅನುಗುಣವಾಗಿ ಕೂದಲು ತೊಳೆಯಲು ನಿಮಗೆ ಹೇರ್ ಸ್ಟೈಲಿಸ್ಟ್ ಗಳು ಸಲಹೆ ನಿಡಬಹುದು. ಕೂದಲು ವ್ಯಕ್ತಿಗೆ ಅನುಗುಣವಾಗಿ ಭಿನ್ನವಾಗಿರುವ ಕಾರಣದಿಂದ ಕೆಲವರಿಗೆ ಪ್ರತಿನಿತ್ಯ ಕೂದಲು ತೊಳೆದರೆ ಅದರಿಂದ ತುಂಬಾ ಲಾಭವಾಗಬಹುದು. ಆದರೆ ಬೇರೆಯವರಿಗೆ ಇದು ಅಡ್ಡಪರಿಣಾಮ ಬೀರಬಹುದು. ನಿಮಗೆ ಹೊಂದಿಕೊಳ್ಳುವ ಜತೆಗೆ ನೀವು ಪ್ರಯೋಗ ಮಾಡುತ್ತಲಿದ್ದರೆ ತುಂಬಾ ಒಳ್ಳೆಯದು. ಪ್ರತಿನಿತ್ಯ ಕೂದಲು ಯಾಕೆ ತೊಳೆಯಬಾರದು ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ತಿಳಿದುಕೊಂಡು ನೀವು ಕೂದಲಿನ ಆರೈಕೆ ಮಾಡಿಕೊಳ್ಳಬಹುದು...

ಕೂದಲು ಬಿಸಿಗೆ ಒಳಪಡುವುದು ಕಡಿಮೆಯಾಗುವುದು

ಕೂದಲು ಬಿಸಿಗೆ ಒಳಪಡುವುದು ಕಡಿಮೆಯಾಗುವುದು

ಪ್ರತಿನಿತ್ಯ ಕೂದಲಿಗೆ ಸ್ನಾನ ಮಾಡಿಕೊಂಡು ಸಮಯದ ಅಭಾವದಿಂದಾಗಿ ಕೂದಲಿಗೆ ಹೇರ್ ಡ್ರೈಯರ್ ಬಳಸುತ್ತೀರಿ. ಇದರಿಂದ ಕೂದಲು ಬೇಗನೆ ಒಣಗುವುದು. ಆದರೆ ಕೂದಲು ಇದರ ಬಿಸಿಯಿಂದಾಗಿ ಹಾನಿಗೊಳಗಾಗುವುದು. ಬಿಸಿಯಿಂದಾಗಿ ಕೂದಲು ತುಂಡಾಗುವುದು ಮತ್ತು ಕೂದಲು ನಿಸ್ತೇಜವಾಗಬಹುದು. ಪ್ರತಿನಿತ್ಯ ಸ್ನಾನ ಮಾಡದೆ ಇದ್ದರೆ ಆಗ ಹೇರ್ ಡ್ರೈರ್ ಬಳಸುವುದು ಕಡಿಮೆಯಾಗುವುದು. ಇದರಿಂದ ಕೂದಲಿಗೆ ಹೆಚ್ಚಿನ ಹಾನಿಯಾಗದು. ಕೂದಲಿಗೆ ಬಿಸಿಯ ಪ್ರಭಾವ ಕಡಿಮೆಯಾದರೆ ಕೂದಲಿನ ಬಾಳಿಕೆ ಹೆಚ್ಚಾಗುವುದು.

ಕೂದಲಿನ ಬಣ್ಣ ಉಳಿಸಿಕೊಳ್ಳಬೇಕು

ಕೂದಲಿನ ಬಣ್ಣ ಉಳಿಸಿಕೊಳ್ಳಬೇಕು

ಪ್ರತಿನಿತ್ಯ ಕೂದಲು ತೊಳೆಯಬಾರದೆನ್ನುವುದಕ್ಕೆ ಮತ್ತೊಂದು ಕಾರಣವೆಂದರೆ ನೀವು ಕೂದಲಿಗೆ ಬೇರೆ ರೀತಿಯ ಬಣ್ಣ ಹಾಕಿಕೊಂಡಿದ್ದರೆ ಆಗ ನೀವು ನಿತ್ಯ ಕೂದಲಿಗೆ ಸ್ನಾನ ಮಾಡಿಕೊಂಡರೆ ಬಣ್ಣ ಮಸುಕಾಗುವುದು. ಕೂದಲಿಗೆ ಬಣ್ಣ ಹಾಕಿಕೊಳ್ಳುವುದು ತುಂಬಾ ದುಬಾರಿಯಾಗಿರುವ ಕಾರಣದಿಂದ ದಿನನಿತ್ಯ ಕೂದಲು ತೊಳೆಯಬೇಡಿ. ಹೀಗೆ ಮಾಡಿದರೆ ಬಣ್ಣ ದೀರ್ಘ ಕಾಲ ತನಕ ಉಳಿಯುವುದು.

ಜಿಡ್ಡು ಬರುವುದನ್ನು ತಡೆಯಬಹುದು

ಜಿಡ್ಡು ಬರುವುದನ್ನು ತಡೆಯಬಹುದು

ಪ್ರತಿನಿತ್ಯ ಕೂದಲು ತೊಳೆಯದೆ ಇದ್ದರೆ ಆಗ ಎಣ್ಣೆಯು ಹೆಚ್ಚಾಗುವುದು ಎನ್ನುವ ನಂಬಿಕೆಯಿದೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು. ಕೆಲವೊಂದು ಸಲ ಕೂದಲಿನ ಕಾಣಿಸಿಕೊಳ್ಳುವ ಜಿಡ್ಡು ಕೂದಲಿನ ಕಲ್ಮಶ ಅಥವಾ ನೈಸರ್ಗಿಕ ಎಣ್ಣೆಯಿಂದ ಬರುವಂತಹದಲ್ಲ. ಕೂದಲು ವಿನ್ಯಾಸಗೊಳಿಸುವುದು ಮತ್ತು ತೊಳೆಯುವುದರಿಂದ ಜಿಡ್ಡು ಕೂದಲು ಉಂಟಾಗುವುದು. ಕೂದಲು ತೊಳೆಯುವ ಮಧ್ಯೆ ಕೆಲವು ದಿನಗಳ ಅಂತರವಿಟ್ಟುಕೊಳ್ಳಿ ಮತ್ತು ಹೀಗೆ ಮಾಡಿದರೆ ಜಿಡ್ಡುತನ ಕಡಿಮೆಯಾಗುವುದು.

ನೈಸರ್ಗಿಕ ಎಣ್ಣೆಯಂಶವು ಉಳಿಯುವುದು

ನೈಸರ್ಗಿಕ ಎಣ್ಣೆಯಂಶವು ಉಳಿಯುವುದು

ಕೂದಲು ಮತ್ತು ತಲೆಬುರುಡೆಯಲ್ಲಿ ನೈಸರ್ಗಿಕ ಎಣ್ಣೆ ಕಾಪಾಡಿಕೊಳ್ಳಲು ಪ್ರತಿನಿತ್ಯ ಕೂದಲು ತೊಳೆಯುವುದನ್ನು ನಿಲ್ಲಿಸಬೇಕು. ಕೂದಲಿನಲ್ಲಿ ನೈಸರ್ಗಿಕ ಎಣ್ಣೆಯಿದ್ದರೆ ಅದು ಬೇರೆ ಯಾವುದೇ ಉತ್ಪನ್ನಗಿಂತ ಒಳ್ಳೆಯ ಕಾಂತಿ ನೀಡುವುದು. ಇದರಿಂದ ದಿನನಿತ್ಯ ಸ್ನಾನ ಮಾಡಿ ನೈಸರ್ಗಿಕ ಎಣ್ಣೆ ದೂರ ಮಾಡಬೇಡಿ.

ಕೂದಲಿನ ವಿನ್ಯಾಸ ಸುಲಭವಾಗುವುದು

ಕೂದಲಿನ ವಿನ್ಯಾಸ ಸುಲಭವಾಗುವುದು

ಕೂದಲು ತೊಳೆಯದೆ ಇರುವ ದಿನಗಳಲ್ಲಿ ಕೂದಲಿನ ಸುರುಳಿಗಳು ಹಾಗೆ ಉಳಿದುಕೊಳ್ಳುವುದು. ಇದರಿಂದ ಕೂದಲು ವಿನ್ಯಾಸ ಮಾಡಲು ತುಂಬಾ ಸುಲಭವಾಗುವುದು ಮತ್ತು ಇದರಿಂದ ಕೂದಲನ್ನು ಬಾಚಿಕೊಂಡು ವಿವಿಧ ರೂಪ ನೀಡಬಹುದು. ಕೂದಲಿಗೆ ವಿನ್ಯಾಸ ಮಾಡಲು ಸಲೂನ್ ಗೆ ಹೋಗುವಾಗಲೂ ಶಾಂಪೂ ಹಾಕದೆ ಬರುವಂತೆ ಸೂಚಿಸುತ್ತಾರೆ.

ಕೂದಲು ಒಳ್ಳೆಯದಾಗಿ ಕಾಣುವುದು

ಕೂದಲು ಒಳ್ಳೆಯದಾಗಿ ಕಾಣುವುದು

ಒಂದು ದಿನ ಕೂದಲು ತೊಳೆಯದೆ ಇದ್ದರೆ ಮರುದಿನ ನಿಮ್ಮ ಕೂದಲು ಉತ್ತಮವಾಗಿ ಕಾಣುವುದು. ದಿನನಿತ್ಯ ಕೂದಲು ತೊಳೆಯದೆ ಇರಲು ಇದು ಕೂಡ ಒಂದು ಕಾರಣವಾಗಿದೆ. ಒಂದು ದಿನ ಕೂದಲು ತೊಳೆಯದೆ ಇದ್ದರೆ ಆಗ ಕೂದಲು ಒಣಗಿದೆಯಾ ಎನ್ನುವ ಬಗ್ಗೆ ಯೋಚಿಸಬೇಕಿಲ್ಲ. ಕೂದಲು ಸ್ವಲ್ಪ ಎಣ್ಣೆಯಂಶವಿದೆಯೆಂದು ಅನಿಸಿದರೆ ಆಗ ನೀವು ಮಕ್ಕಳ ಪೌಡರ್ ಹಾಕಿಕೊಳ್ಳಿ. ಫಲಿತಾಂಶ ಕಣ್ಣ ಮುಂದಿರುವುದು.

ಹಣ ಉಳಿಸಬಹುದು!

ಹಣ ಉಳಿಸಬಹುದು!

ಪ್ರತಿನಿತ್ಯ ಕೂದಲು ತೊಳೆಯುವಾಗ ಶಾಂಪೂ, ಕಂಡೀಷನರ್, ವಿನ್ಯಾಸದ ಸಾಮಗ್ರಿ ಇತ್ಯಾದಿಗಳ ಬಳಕೆಯಾಗುವುದು. ದಿನನಿತ್ಯ ಸ್ನಾನ ಮಾಡದೆ ಇರುವಾಗ ಇದನ್ನು ತಡೆದು, ಹಣ ಉಳಿತಾಯ ಮಾಡಬಹುದು. ಪ್ರತಿನಿತ್ಯ ಸ್ನಾನ ಮಾಡಬೇಡಿ ಎನ್ನುವುದಕ್ಕೆ ಇದು ಒಂದು ಕಾರಣವಾಗಿದೆ.

English summary

Why You Must Not Wash Your Hair Every Day

Since different people have different hair types, some people may benefit from washing hair every day, whereas others may not. So, the best you can do is to keep experimenting with whatever suits you the best. However, this article emphasises on why you can't wash your hair every day; and in this regard, below are the top 7 reasons why you should not wash your hair every day: