For Quick Alerts
ALLOW NOTIFICATIONS  
For Daily Alerts

ಹೇರ್ ಕೇರ್ ಟಿಪ್ಸ್: ಕೂದಲಿನ ಪ್ರತಿಯೊಂದು ಸಮಸ್ಯೆಗೆ ಶುಂಠಿ ಪರಿಹಾರ!

By Hemanth
|

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ತುಂಬಾ ತೀವ್ರವಾಗಿ ಕಾಡುವ ಸಮಸ್ಯೆಯೆಂದರೆ ಅದು ಕೂದಲಿನ ಸಮಸ್ಯೆ. ಕೂದಲು ಉದುರುವುದು, ತೆಳುವಾಗುವುದು ಮತ್ತು ತುಂಡಾಗುವುದು ಇದರಲ್ಲಿ ಪ್ರಮುಖ ಸಮಸ್ಯೆಗಳಾಗಿವೆ. ಕೂದಲಿನ ಸಮಸ್ಯೆಗಳಿಗೆ ನಮ್ಮ ಜೀವನಶೈಲಿ, ಕೂದಲಿಗೆ ಅತಿಯಾಗಿ ಬಿಸಿಮಾಡುವ ಯಂತ್ರಗಳ ಬಳಕೆ, ಯುವಿ ಕಿರಣಗಳಿಗೆ ಕೂದಲನ್ನು ಒಡ್ಡುವುದು, ಆಹಾರ ಪದ್ಧತಿ ಇತ್ಯಾದಿಗಳು ಪ್ರಮುಖ ಕಾರಣವಾಗಿದೆ. ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವಂತಹ ಕೂದಲನ್ನು ಆರೋಗ್ಯ ಹಾಗೂ ಸದೃಢವಾಗಿ ಇಡುವುದು ಅತೀ ಅಗತ್ಯವಾಗಿದೆ.

ಇದಕ್ಕಾಗಿ ಶಾಂಪೂಗಳು ಹಾಗೂ ಕಂಡೀಷನರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದು ಹೆಚ್ಚು ದಿನ ಪರಿಣಾಮ ಬೀರುವುದಿಲ್ಲ. ನೈಸರ್ಗಿಕವಾಗಿರುವ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ನಿಧಾನವಾಗಿ ಫಲಿತಾಂಶ ನೀಡಿದರೂ ದೀರ್ಘಕಾಲದ ತನಕ ಕೂದಲಿನ ಆರೋಗ್ಯ ಕಾಪಾಡುವುದು.

ಆದರೆ ಇಲ್ಲಿ ನಿಮಗೊಂದು ಶುಭಶುದ್ದಿಯಿದೆ. ಅದುವೇ ಅಡುಗೆ ಮನೆಯ ಶುಂಠಿ!

ಹೌದು! ಶುಂಠಿ ಎಂದಾಕ್ಷಣ ಅಡುಗೆಗೆ ಮಾತ್ರ ಸೀಮಿತವಾದ ಸಾಂಬಾರ ಪದಾರ್ಥವೆಂದು ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಏಕೆಂದರೆ ಶುಂಠಿ ಅಜೀರ್ಣ, ಶೀತ, ಕೆಮ್ಮು ಮೊದಲಾದ ತೊಂದರೆಗಳಿಗೆ ಹೇಗೆ ಉಪಯುಕ್ತವಾದ ಔಷಧಿಯೋ ಅಂತೆಯೇ ತ್ವಚೆಗೂ ಒಂದು ಉತ್ತಮವಾದ ಔಷಧಿಯಾಗಿದೆ.

ಅಷ್ಟೇ ಅಲ್ಲದೆ ದುಬಾರಿ ಪ್ರಸಾಧನಗಳು ನೀಡುವ ಪರಿಣಾಮಕ್ಕಿಂತಲೂ ಉತ್ತಮವಾದ ಪರಿಣಾಮವನ್ನು ಅಡುಗೆಮನೆಯಲ್ಲಿ ಸದಾ ಇರುವ ಈ ಪುಟ್ಟ ಶುಂಠಿಯಿಂದ ಪಡೆಯಬಹುದು. ಈಗ ನೀವು ಶುಂಠಿ ಬಳಸಿಕೊಂಡು ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಕೂದಲಿನ ಆರೈಕೆಗೆ ಶತಮಾನಗಳಿಂದಲೂ ಶುಂಠಿ ಬಳಕೆ ಮಾಡುತ್ತಲಿದ್ದಾರೆ. ನೈಸರ್ಗಿಕದತ್ತವಾದ ಗಿಡಮೂಲಿಕೆಯನ್ನು ಕೂದಲಿಗೆ ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ....

 ಕೂದಲಿಗೆ ಶುಂಠಿ ಬಳಕೆ ಹೇಗೆ?

ಕೂದಲಿಗೆ ಶುಂಠಿ ಬಳಕೆ ಹೇಗೆ?

ಶುಂಠಿಯು ತಲೆಬುರುಡೆಯಲ್ಲಿ ರಕ್ತಪರಿಚಲನೆ ಉತ್ತಮಪಡಿಸುವುದು. ಇದರಿಂದ ತಲೆಬುರುಡೆ ಆರೋಗ್ಯವಾಗಿರುವುದು ಮತ್ತು ಹೊಸ ಹಾಗೂ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುವುದು. ಶುಂಠಿಯಲ್ಲಿ ನಂಜುನಿರೋಧಕ ಗುಣಗಳು ಇದ್ದು, ಇದು ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡುವುದು. ಇದನ್ನು ಬಳಸುವುದರಿಂದ ತಲೆಹೊಟ್ಟು, ತುರಿಕೆ ಮತ್ತು ಚರ್ಮ ಕಿತ್ತು ಬರುವುದು ತಡೆಯಬಹುದು.

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಶುಂಠಿಯು ಹಾನಿಗೀಡಾಗಿರುವ, ಒಣ ಮತ್ತು ಕಾಂತಿ ಕಳೆದುಕೊಂಡ ಕೂದಲನ್ನು ಸರಿಪಡಿಸುವುದು. ಇದು ಕೂದಲಿನ ವಿನ್ಯಾಸವನ್ನು ಸುಧಾರಿಸುವುದು ಮತ್ತು ನೈಸರ್ಗಿಕ ಕಾಂತಿ ನೀಡುವುದು.

ಕೂದಲಿನ ಮರು ಬೆಳವಣಿಗೆಗೆ

ಕೂದಲಿನ ಮರು ಬೆಳವಣಿಗೆಗೆ

ಬೇಕಾಗುವ ಸಾಮಗ್ರಿಗಳು

2 ಚಮಚ ಶುಂಠಿ ಪೇಸ್ಟ್

1 ಚಮಚ ಆಲಿವ್ ತೈಲ

½ ಚಮಚ ಬಾದಾಮಿ ಎಣ್ಣೆ

1 ಚಮಚ ತೆಂಗಿನೆಣ್ಣೆ

ಬಳಸುವ ವಿಧಾನ

ಬಳಸುವ ವಿಧಾನ

*ಎಲ್ಲವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದನ್ನು ಮಿಶ್ರಣ ಮಾಡಿ ಕೂದಲಿನ ಮಾಸ್ಕ್ ತಯಾರಿಸಿಕೊಳ್ಳಿ.

*ಇದನ್ನು ತಲೆಗೆ ಹಚ್ಚಿಕೊಂಡು ಕೆಲವು ನಿಮಿಷ ಕಾಲ ಮಸಾಜ್ ಮಾಡಿ.

*20 ನಿಮಿಷ ಕಾಲ ಇದನ್ನು ತಲೆಯಲ್ಲಿ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿಕೊಂಡು ತೊಳೆಯಿರಿ.

ತಲೆಹೊಟ್ಟಿಗೆ

ತಲೆಹೊಟ್ಟಿಗೆ

ಶುಂಠಿಯು ಅಮಿನೊ ಆಸಿಡ್‌ ಅನ್ನು ಒಳಗೊಂಡಿದ್ದು, ಇದರಲ್ಲಿರುವ ಫ್ಯಾಟಿ ಆಸಿಡ್ ತಲೆಬುರುಡೆಯನ್ನು ಆರೋಗ್ಯವಾಗಿರಿಸಲಿದೆ. ತಲೆಹೊಟ್ಟಿನಿಂದ ಉಂಟಾಗುವ ತುರಿಕೆಯನ್ನು ನಿವಾರಣೆ ಮಾಡಲು ಶುಂಠಿಯು ಮೈಕ್ರೊಬೈಯಲ್ ಅಂಶವನ್ನು ಹೊಂದಿದ್ದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ನಾಶಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು

*2ಚಮಚ ಶುಂಠಿ ಪೇಸ್ಟ್

*4-5 ಹನಿ ಎಳ್ಳೆಣ್ಣೆ

*1 ಚಮಚ ಲಿಂಬೆರಸ

ಬಳಸುವ ವಿಧಾನ

ಬಳಸುವ ವಿಧಾನ

*ಒಂದು ಪಾತ್ರೆ ತೆಗೆದುಕೊಂಡು ಎಲ್ಲವನ್ನು ಅದಕ್ಕೆ ಹಾಕಿಕೊಂಡು ಸರಿಯಾಗಿ ಕಲಸಿ ಪೇಸ್ಟ್ ಮಾಡಿ.

* ಕೂದಲನ್ನು ವಿಭಾಗಿಸಿಕೊಂಡು ಇದನ್ನು ಸಂಪೂರ್ಣ ತಲೆಬುರುಡೆಗೆ ಹಚ್ಚಿಕೊಳ್ಳಿ.

*ಕೆಲವು ನಿಮಿಷ ಕಾಲ ಬೆರಳುಗಳಿಂದ ಮಸಾಜ್ ಮಾಡಿ.

* 15-20 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ.

* ಬಿಸಿ ನೀರು ಮತ್ತು ಶಾಂಪೂ ಹಾಕಿಕೊಂಡು ತೊಳೆಯಿರಿ.

 ಆರೋಗ್ಯಕರ ಕೂದಲಿಗೆ

ಆರೋಗ್ಯಕರ ಕೂದಲಿಗೆ

ಬೇಕಾಗುವ ಸಾಮಗ್ರಿಗಳು

1 ಚಮಚ ತುಂಡರಿಸಿಕೊಂಡು ಶುಂಠಿ

2 ಚಮಚ ನೀರು

ಬಳಸುವ ವಿಧಾನ

• ಪೇಸ್ಟ್ ಮಾಡಿಕೊಳ್ಳಲು ಎರಡು ಮಿಕ್ಸಿಗೆ ಹಾಕಿಕೊಳ್ಳಿ.

• ತಯಾರಿಸಿಕೊಂಡು ಪೇಸ್ಟ್ ನ್ನು ತಲೆಬುರುಡೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ

• ಉಳಿದಿರುವುದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ.

• 20-25 ನಿಮಿಷ ಕಾಲ ಹಾಗೆ ಬಿಡಿ.

• ಶಾಂಪೂ ಮತ್ತು ಉಗುರುಬೆಚ್ಚಗಿನ ನೀರು ಬಳಸಿ ತೊಳೆಯಿರಿ.

ಆರೋಗ್ಯಕರ ಕೂದಲಿಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಲಹೆಗಳು

ಆರೋಗ್ಯಕರ ಕೂದಲಿಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಲಹೆಗಳು

*ನಿಮ್ಮ ಕೂದಲಿಗೆ ಹೊಂದಿಕೊಳ್ಳುವಂತಹ ಶಾಂಪೂ, ಕಂಡೀಷನರ್, ಸೆರಮ್ ಇತ್ಯಾದಿಗಳನ್ನು ಬಳಸಿ.

*ಹಾನಿಕಾರಕವಾಗಿರುವ ಯುವಿ ಕಿರಣಗಳಿಂದ ಕೂದಲಿಗೆ ಹಾನಿಯಾಗದಂತೆ ನೀವು ರಕ್ಷಿಸಿಕೊಳ್ಳಿ. ಬಿಸಿಲಿಗೆ ಹೊರಗೆ ಹೋಗುವಾಗ ಕೂದಲನ್ನು ಮುಚ್ಚಿಕೊಳ್ಳಿ.

*ಕೂದಲಿನ ಆರೋಗ್ಯ ಕಾಪಾಡಲು ಆಳವಾದ ಕಂಡೀಷನಿಂಗ್ ಬೇಕು. ವಾರದಲ್ಲಿ ಒಂದು ಸಲ ಆಳವಾದ ಕಂಡೀಷನಿಂಗ್ ಮಾಡಿ ಮತ್ತು ಆರೋಗ್ಯಕರ ಹಾಗೂ ಸುಂದರ ಕೂದಲು ಕಾಪಾಡಿ.

*ಕೂದಲಿನ ಆರೋಗ್ಯ ಮತ್ತು ಪೋಷಣೆಗೆ ನೀವು ನೈಸರ್ಗಿಕದತ್ತವಾಗಿರುವ ತೈಲಗಳನ್ನು ಬಲಸಿಕೊಳ್ಳಿ.

*ಆರೋಗ್ಯಕರ ಮತ್ತು ನೈಸರ್ಗಿಕ ಕಾಂತಿ ಪಡೆಯಲು ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ನೀವು ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಬಳಸಿಕೊಳ್ಳಿ.

*ಕೂದಲನ್ನು ಬಿಸಿ ನೀರಿನಿಂದ ತೊಳೆಯಬೇಡಿ. ಇದರಿಂದ ಕೂದಲಿಗೆ ಹಾನಿಯಾಗುವುದು ಮತ್ತು ವಿವಿಧ ಸಮಸ್ಯೆಗಳು ಕಾಣಿಸಬಹುದು.

*ಶುಂಠಿಯ ರಸವನ್ನು ಆಲಿವ್ ತೈಲದೊಂದಿಗೆ ಸೇರಿಸಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ನಂತರ ಒಂದು ಗಂಟೆಗಳ ಕಾಲ ಅಥವಾ ಸಾಧ್ಯವಾದರೆ ರಾತ್ರಿಯಿಡಿ ಹಾಗೆ ಬಿಡಿ. ಇದು ನಿಮಗೆ ಕಾಂತಿಯುತ ಕೂದಲು ನೀಡುವುದು.

*ಅಗಲ ಹಲ್ಲಿನ ಬಾಚಣಿಗೆಯನ್ನು ಬಳಸಿಕೊಂಡು, ನಿಮ್ಮ ಕೂದಲಿನಿಂದ ಸಿಕ್ಕನ್ನು ಬಿಡಿಸಿಕೊಳ್ಳಿ. ನಿಮ್ಮ ಕೂದಲು ಹೆಚ್ಚು ಒಣಗಿದೆ ಎಂದಾದಲ್ಲಿ, ನಿಮಗಿಷ್ಟದ ಎಣ್ಣೆಯನ್ನು ತೆಗೆದುಕೊಂಡು ಕೂದಲಿಗೆ ಹಚ್ಚಿಕೊಳ್ಳಿ ನಂತರ ಬಾಚಣಿಗೆಯನ್ನು ಕೂದಲಿನಲ್ಲಿ ಓಡಾಡಿಸಿ. ಕೂದಲು ತುಂಡಾಗದೆಯೇ ಸಿಕ್ಕನ್ನು ಈ ರೀತಿಯಾಗಿ ಬಿಡಿಸಿಕೊಳ್ಳಬಹುದಾಗಿದೆ.

ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತೆಯನ್ನು ಹಾಕಿ ಕುದಿಸಿ. ನಂತರ ಸೋಸಿ ಒಂದು ಬಾಟಲಿನಲ್ಲಿ ಹಾಕಿಡಬೇಕು. ಈ ಎಣ್ಣೆಯಿಂದ ವಾರಕ್ಕೆ 3-4 ಬಾರಿಯಾದರೂ ಕೂದಲಿಗೆ ಮಸಾಜ್ ಮಾಡಿ

*ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಬೇಕು. ಅದರಲ್ಲೂ ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್, ನೀಲ ಭೃಂಗಾದಿ ತೈಲ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಬಹುದು.

English summary

Ways To Use Ginger For Common Hair Care Problems

Hair problems have become a major concern for most people these days. Be it hair loss, thinning or common problems like dandruff and split ends, if not treated in time can completely ruin the appearance of your precious locks. To prevent these problems from wreaking havoc on your tresses, it is imperative to keep them healthy and strong. Healthy hair is not just less prone to damage but can also enhance your natural beauty.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more