For Quick Alerts
ALLOW NOTIFICATIONS  
For Daily Alerts

ಕೂದಲು ಉದುರುತ್ತಿದೆಯೇ? ಹಾಗಾದರೆ ಆಲೀವ್ ಎಣ್ಣೆಯ ಚಿಕಿತ್ಸೆ ಪ್ರಯತ್ನಿಸಿ

By Hemanth
|

ಸೌಂದರ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಕೂದಲು. ಒಬ್ಬ ಮಹಿಳೆ ಅಥವಾ ಪುರುಷನಿಗೆ ಕೂದಲು ಇಲ್ಲವೆಂದಾದರೆ ಆಗ ಅದನ್ನು ಊಹಿಸುವುದು ಕಷ್ಟವಾಗುವುದು. ಆದರೆ ಪ್ರತಿಯೊಬ್ಬರಿಗೂ ಜೀವನದ ಒಂದು ಹಂತದಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಕಾಡುವುದು. ಇದು ಮಹಿಳೆಯರು ಆಗಿರಲಿ ಅಥವಾ ಪುರುಷರೇ ಆಗಿರಲಿ.

The Benefits of Olive Oil For Hair Regrowth

ಸಮಸ್ಯೆ ಮಾತ್ರ ಸಾಮಾನ್ಯವಾಗಿರುವುದು. ಕೂದಲು ಉದುರುವಿಕೆ ನಿವಾರಣೆ ಮಾಡಲು ಹಲವಾರು ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ತಂದು ಪರೀಕ್ಷೆ ಮಾಡಿರಬಹುದು. ಆದರೆ ಈ ಉತ್ಪನ್ನಗಳು ನಿಮಗೆ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದೇ ಮಾಡುವುದು. ಇದರಿಂದ ಈ ಲೇಖನದಲ್ಲಿ ನೈಸರ್ಗಿಕವಾಗಿ ಕೂದಲು ಉದುರುವಿಕೆ ತಡೆಯುವುದು ಹೇಗೆ ಎಂದು ತಿಳಿಯುವ.

ಆಲಿವ್ ತೈಲ ಯಾಕೆ?

ಆಲಿವ್ ತೈಲ ಯಾಕೆ?

ಆಲಿವ್ ತೈಲದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಕೂದಲಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು ಮತ್ತು ಇದರಿಂದ ಕೂದಲು ಹಾಗೂ ತಲೆಬುರುಡೆಯು ಆರೋಗ್ಯವಾಗಿರುವುದು. ಇದರಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಮತ್ತು ಕೊಬ್ಬು ಇದೆ. ಇದು ಕೂದಲಿಗೆ ಪೋಷಣೆ ಮತ್ತು ಆಳವಾಗಿ ಕಂಡೀಷನಿಂಗ್ ಮಾಡುವುದು. ಆಲಿವ್ ತೈಲದಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕೂದಲು ತುಂಡಾಗುವುದನ್ನು ತಡೆಯುತ್ತದೆ.

ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯಲು ಆಲಿವ್ ತೈಲ ಬಳಸಿಕೊಂಡು ಮಾಡಬಹುದಾದ ಕೆಲವು ಮನೆಮದ್ದುಗಳು.

ಆಲಿವ್ ತೈಲ ಮತ್ತು ಶುಂಠಿ

ಆಲಿವ್ ತೈಲ ಮತ್ತು ಶುಂಠಿ

ಶುಂಠಿಯಲ್ಲಿ ಇರುವಂತಹ ಬಿಸಿಕಾರಕ ಗುಣವು ತಲೆಬುರುಡೆಯಲ್ಲಿ ಉತ್ತೇಜನ ಮಾಡುವುದು ಮತ್ತು ಆಲಿವ್ ತೈಲದ ಜತೆಗೆ ಬಳಸಿಕೊಂಡಾಗ ಇದು ತಲೆಬುರುಡೆಯಲ್ಲಿ ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ಆಲಿವ್ ತೈಲ
  • 1 ಚಮಚ ಶುಂಠಿ ಪೇಸ್ಟ್
  • ತಯಾರಿಸುವುದು ಹೇಗೆ

    ತಾಜಾ ಶುಂಠಿ ತುಂಡನ್ನು ತೆಗೆದುಕೊಂಡು ಪೇಸ್ಟ್ ಮಾಡಿ. ಇದಕ್ಕೆ ಆಲಿವ್ ತೈಲ ಹಾಕಿಕೊಂಡು ಸರಿಯಾಗಿ ಎರಡನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಸಂಪೂರ್ಣ ತಲೆಬುರುಡೆಗೆ ಹಚ್ಚಿಕೊಂಡ ಬಳಿಕ ಐದು ನಿಮಿಷ ಕಾಲ ಮಸಾಜ್ ಮಾಡಿ. 30 ನಿಮಿಷ ಹಾಗೆ ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ಸಲ್ಫೇಟ್ ರಹಿತವಾಗಿರುವ ಶಾಂಪೂ ಬಳಸಿಕೊಳ್ಳಿ. ಇದನ್ನು ವಾರದಲ್ಲಿ 2-3 ಸಲ ಬಳಸಿಕೊಳ್ಳಿ.

    ಆಲಿವ್ ತೈಲ ಮತ್ತು ಬೆಳ್ಳುಳ್ಳಿ

    ಆಲಿವ್ ತೈಲ ಮತ್ತು ಬೆಳ್ಳುಳ್ಳಿ

    ಬೆಳ್ಳುಳ್ಳಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಬುರುಡೆಯ ಯಾವುದೇ ರೀತಿಯ ಸೋಂಕು ನಿವಾರಣೆಗೆ ನೆರವಾಗುವುದು. ಇದರಿಂದ ತಲೆಬರುಡೆಯು ಆರೋಗ್ಯಕರವಾಗಿರುವುದು.

    ಬೇಕಾಗುವ ಸಾಮಗ್ರಿಗಳು

    • ¼ ಕಪ್ ಆಲಿವ್ ತೈಲ
    • ಕೆಲವು ಎಸಲು ಬೆಳ್ಳುಳ್ಳಿ
    • ಮಾಡುವ ವಿಧಾನ

      ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದನ್ನು ಆಲಿವ್ ತೈಲದ ಜತೆಗೆ ರುಬ್ಬಿಕೊಳ್ಳಿ. ಇದರಿಂದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ತಲೆಬುರುಡೆಗೆ ನಿಧಾನವಾಗಿ ಹಚ್ಚಿಕೊಳ್ಳಿ. ಸಂಪೂರ್ಣ ತಲೆಬುರುಡೆಗೆ ಈ ಪೇಸ್ಟ್ ನ್ನು ಹಚ್ಚಿಕೊಂಡ ಬಳಿಕ ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸಲ್ಫೇಟ್ ರಹಿತವಾಗಿರುವ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ವಾರದಲ್ಲಿ 2-3 ದಿನ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

      ಆಲಿವ್ ತೈಲ ಮತ್ತು ದಾಲ್ಚಿನಿ

      ಆಲಿವ್ ತೈಲ ಮತ್ತು ದಾಲ್ಚಿನಿ

      ದಾಲ್ಚಿನಿಯಲ್ಲಿ ಶಿಲೀಂಧ್ರ ವಿರೋಧಿ, ವೈರಲ್ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಈ ಅಂಶಗಳು ರಕ್ತಸಂಚಾರ ಉತ್ತಮಪಡಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

      ಬೇಕಾಗುವ ಸಾಮ್ರಗ್ರಿಗಳು

      • 1 ಚಮಚ ಆಲಿವ್ ತೈಲ
      • 1 ಚಮಚ ದಾಲ್ಚಿನಿ
      • 1 ಚಮಚ ಜೇನುತುಪ್ಪ
      • ತಯಾರಿಸುವ ವಿಧಾನ

        ಒಂದು ಸ್ವಚ್ಛವಾಗಿರುವ ಸಣ್ಣ ಪಿಂಗಾಣಿಯಲ್ಲಿ ಆಲಿವ್ ತೈಲ, ದಾಲ್ಚಿನಿ ಹುಡಿ ಮತ್ತು ಜೇನುತುಪ್ಪ ಹಾಕಿಕೊಂಡು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ಇದು 15 ನಿಮಿಷ ಕಾಲ ಹಾಗೆ ಇರಲಿ. ನೀವು ಶಾವರ್ ಕ್ಯಾಪ್ ಧರಿಸಿ ಇದನ್ನು ಮುಚ್ಚಿಕೊಳ್ಳಬಹುದು. 15 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರು ಅಥವಾ ಸಲ್ಫೇಟ್ ರಹಿತ ಶಾಂಪೂ ಬಳಸಿ ಇದನ್ನು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 1-2 ಸಲ ಇದನ್ನು ಬಳಸಿ.

        ಆಲಿವ್ ತೈಲ ಮತ್ತು ಮೊಟ್ಟೆ

        ಆಲಿವ್ ತೈಲ ಮತ್ತು ಮೊಟ್ಟೆ

        ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಮತ್ತು ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಆಲಿವ್ ತೈಲ ಮತ್ತು ಮೊಟ್ಟೆಯನ್ನು ಬಳಸಿಕೊಂಡರೆ ತಲೆಬುರುಡೆಯಲ್ಲಿ ಇದು ಎಣ್ಣೆಯಂಶದ ಉತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಕೂದಲು ಉದುರುವಿಕೆ ತಡೆಯುವುದು.

        ಬೇಕಾಗುವ ಸಾಮಗ್ರಿಗಳು

        • 2 ಚಮಚ ಆಲಿವ್ ತೈಲ
        • 2 ಮೊಟ್ಟೆಯ ಬಿಳಿ ಲೋಳೆ
        • ತಯಾರಿಸುವ ವಿಧಾನ

          ಸ್ವಚ್ಛವಾಗಿರುವ ಸಣ್ಣ ಪಾತ್ರೆಯಲ್ಲಿ ಮೊಟ್ಟೆಯ ಬಿಳಿ ಲೋಳೆ ಮತ್ತು ಆಲಿವ್ ತೈಲ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ತಲೆಬುರುಡೆ ಹಾಗೂ ಕೂದಲಿಗೆ ಹಚ್ಚಿಕೊಳ್ಳಿ. ಶಾವರ್ ಕ್ಯಾಪ್ ಧರಿಸಿಕೊಂಡು ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ತಣ್ಣೀರು ಮತ್ತು ಸಲ್ಫೇಟ್ ಮುಕ್ತ ಶಾಂಪೂ ಬಳಸಿಕೊಂಡು ಇದನ್ನು ತೊಳೆಯಿರಿ. ವಾರದಲ್ಲಿ 1-2 ಸಲ ಬಳಸಿದರೆ ಫಲಿತಾಂಶ ಖಚಿ.

          ಆಲಿವ್ ತೈಲ ಮತ್ತು ರೋಸ್ಮೆರಿ ತೈಲ

          ಆಲಿವ್ ತೈಲ ಮತ್ತು ರೋಸ್ಮೆರಿ ತೈಲ

          ಹಾರ್ಮೋನು ಅಸಮತೋಲನದಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯನ್ನು ರೋಸ್ಮೆರಿ ತೈಲವು ನಿಯಂತ್ರಿಸುವುದು. ಇದು ತಲೆಯ ಕೆರೆತ ತಡೆಯುವುದು. ಆಲಿವ್ ತೈಲದೊಂದಿಗೆ ಇದನ್ನು ಬೆರೆಸಿಕೊಂಡಾಗ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿ ಕೂದಲು ಉದುರುವಿಕೆ ತಡೆಯುವುದು.

          ಬೇಕಾಗುವ ಸಾಮಗ್ರಿಗಳು

          • 2-3 ಚಮಚ ಆಲಿವ್ ತೈಲ
          • ಕೆಲವು ಹನಿ ರೋಸ್ಮೆರಿ ತೈಲ
          • ತಯಾರಿಸುವ ವಿಧಾನ

            ಆಲಿವ್ ತೈಲ ಮತ್ತು ರೋಸ್ಮೆರಿ ತೈಲವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಸ್ವಲ್ಪ ಬಿಸಿ ಮಾಡಿಕೊಂಡು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಇದರ ಬಳಿಕ 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ಅಥವಾ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. 2-3 ಸಲ ಬಳಸಿದರೆ ಅದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.

English summary

The Benefits of Olive Oil For Hair Regrowth

Hair loss is something that we all face at least at some point in our life. It may be due to the change in the water we use to shower, dandruff, etc. Rich in antioxidants olive oil helps in preventing any kind of damage to the hair thus keeping your hair and scalp healthy enough. You can use olive oil with ingredients like garlic, honey, etc..to treat hair loss.
X
Desktop Bottom Promotion