ಬ್ಯೂಟಿ ಟಿಪ್ಸ್: ಕೂದಲಿನ ಆರೈಕೆಗೆ ಕ್ಯಾರೆಟ್ ಮಾಸ್ಕ್

Posted By: Hemanth
Subscribe to Boldsky

ಕ್ಯಾರೆಟ್ ತಿಂದರೆ ಅದರಲ್ಲಿ ಇರುವ ಅಂಶಗಳು ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ಎನ್ನುವುದು ತಿಳಿದಿದೆ. ಕ್ಯಾರೆಟ್ ನಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು ಆರೋಗ್ಯಕ್ಕೂ ಒಳ್ಳೆಯದು. ಆದರೆ ಕ್ಯಾರೆಟ್ ನಿಂದ ಕೂದಲಿನ ಆರೈಕೆ ಮಾಡಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ಕ್ಯಾರೆಟ್ ನಿಂದ ಕೂದಲು ಬೆಳೆಸಬಹುದು. ಕ್ಯಾರೆಟ್ ನಲ್ಲಿರುವ ಅಂಶಗಳು ಯಾವುದು ಮತ್ತು ಅದು ಕೂದಲಿನ ಬೆಳವಣಿಗೆಯಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಈ ಲೇಖನ ಮೂಲಕ ತಿಳಿದುಕೊಳ್ಳುವ.

haircare

ಕ್ಯಾರೆಟ್ ನಲ್ಲಿ ವಿಟಮಿನ್ ಎ, ಕೆ ಮತ್ತು ಸಿ ಪ್ರಬಲವಾಗಿದೆ. ಇವುಗಳು ಜತೆಯಾಗಿ ಆ್ಯಂಟಿಆಕ್ಸಿಡೆಂಟ್ ಗಳಂತೆ ಕೆಲಸ ಮಾಡಿ ಹಾನಿಗೀಡಾಗಿರುವ ಕೂದಲಿನ ಕೋಶಗಳನ್ನು ಸರಿಪಡಿಸುವುದು ಮತ್ತು ಕೂದಲಿನ ಹೊಸ ಕೋಶಗಳು ಬೆಳೆಯಲು ನೆರವಾಗುವುದು. ಇದರಲ್ಲಿ ವಿಟಮಿನ್ ಬಿ, ಬಿ1, ಬಿ2, ಬಿ3 ಮತ್ತು ಬಿ6 ಇದೆ. ಇವೆಲ್ಲವೂ ಕೂದಲಿನಲ್ಲಿ ಮಾಯಿಶ್ಚರೈಸರ್ ಅನ್ನು ಕಾಪಾಡುತ್ತದೆ ಮತ್ತು ಕೂದಲಿಗೆ ಕಾಂತಿ ನೀಡುವುದು. ಕ್ಯಾರೆಟ್‌ನಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ರಕ್ತಸಂಚಾರವನ್ನು ಉತ್ತೇಜಿಸಿ ಕೂದಲಿನ ಬುಡವನ್ನು ಬಲಪಡಿಸುವುದು. ಇದರಿಂದ ಕೂದಲು ತುಂಡಾಗುವುದು ನಿಲ್ಲುವುದು.

ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಕ್ಯಾರೆಟ್‌ನಲ್ಲಿ ಇರುವ ವಿಟಮಿನ್ ಇ, ಪೊಟಾಶಿಯಂ ಮತ್ತು ಪೋಸ್ಪರಸ್ ಕೂದಲಿಗೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ರಕ್ಷಣಾತ್ಮಕ ಪದರ ನಿರ್ಮಾಣ ಮಾಡುವುದು ಮಾತ್ರವಲ್ಲದೆ ಆಮ್ಲಜನಕ ಸರಿಯಾಗಿ ಪೂರೈಕೆಯಾಗುವಂತೆ ಮಾಡಿ ಕೂದಲು ಸರಿಯಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಕ್ಯಾರೆಟ್ ನಲ್ಲಿ ಇರುವಂತಹ ಅಂಶಗಳು ನಿಮಗೆ ತಿಳಿದಿದೆ. ಇನ್ನು ಕ್ಯಾರೆಟ್ ಮಾಸ್ಕ್ ತಯಾರಿಸುವುದು ಹೇಗೆ ಎಂದು ತಿಳಿಯುವ.

ಮೊದಲು ಒಂದು ಬೆಣ್ಣೆಹಣ್ಣಿನ (ಆವಕಾಡೊ) ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಬೆಣ್ಣೆಹಣ್ಣು ಒಂದು ಆರೋಗ್ಯಕರ ಫಲವಾಗಿದ್ದು ಇದರ ಎಣ್ಣೆಯೂ ಉತ್ತಮ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ವಿಟಮಿನ್ A, B1, B2 ಮತ್ತು D, ಲಿಸೈಥಿನ್, ಪೊಟ್ಯಾಶಿಯಂ ಮತ್ತು ವಿಟಮಿನ್ ಇ ಚರ್ಮಕ್ಕೆ ಹಾಗೂ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತವೆ.

Avacado

*ಒಂದು ಕ್ಯಾರೆಟ್ ನ ಸಿಪ್ಪೆ ತೆಗೆದು ಅದರ ಜ್ಯೂಸ್ ತೆಗೆಯಿರಿ. ನಿಮ್ಮ ಕೂದಲಿನ ಉದ್ದ ಮತ್ತು ದಪ್ಪಕ್ಕೆ ಅನುಗುಣವಾಗಿ ಇದನ್ನು ಹಚ್ಚಿಕೊಳ್ಳಿ.

*ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು, ಕ್ಯಾರೆಟ್ ರಸ, ಅವಕಾಡೊ ಪೇಸ್ಟ್ ಅನ್ನು ಸೇರಿಸಿ ಇದಕ್ಕೆ 1 ಚಮಚ ಆಲೀವ್ ಎಣ್ಣೆಯನ್ನು ಸೇರಿಸಿ. ಮೊಸರನ್ನು ಬಳಸಿಕೊಂಡು, ಮೃದುವಾದ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಹೆಚ್ಚು ದಪ್ಪ ಅಂತೆಯೇ ತೆಳು ಕೂಡ ಆಗಿರಬಾರದು. ಮಧ್ಯಮ ಗತಿಯಲ್ಲಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ ಇದರಿಂದ ತೊಳೆಯಲೂ ಅನುಕೂಲಕರವಾಗಿರುತ್ತದೆ.

carrot

*ಕ್ಯಾರೆಟ್‌ನ ಹೇರ್ ಮಾಸ್ಕ್‌ಗೆ ರೋಸ್ಮರಿ ತೈಲದ ಕೆಲವು ಹನಿ ಸೇರಿಸಿಕೊಂಡರೆ ಪೋಷಕಾಂಶಗಳು ಹೆಚ್ಚಾಗುವುದು. ರೋಸ್ಮರಿಯಲ್ಲಿ ಇರುವ ಅಂಶಗಳು ಆರೋಗ್ಯಕರ ತಲೆಬರುಡೆ ಕಾಯ್ದುಕೊಳ್ಳಲು ಮತ್ತು ಕೂದಲು ಬೆಳವಣಿಗೆಗೆ ನೆರವಾಗುವುದು.

*ದೊಡ್ಡ ಹಲ್ಲುಗಳಿರುವ ಬಾಚಣಿಗೆ ಬಳಸಿಕೊಂಡು ಕೂದಲನ್ನು ಸರಿಯಾಗಿ ಬಾಚಿಕೊಳ್ಳಿ. ಕೂದಲನ್ನು ಎರಡು ಭಾಗವನ್ನಾಗಿ ಮಾಡಿ. ಮಧ್ಯಮ ಗಾತ್ರದಲ್ಲಿ ಬಾಚಣಿಗೆ ಹಿಡಿದುಕೊಂಡು ಕೆಲಸ ಮಾಡಿದರೆ ಹಾನಿ ಕಡಿಮೆಯಾಗುವುದು.

curd

*ಬ್ರಷ್ ತೆಗೆದುಕೊಂಡು ಮಾಸ್ಕ್ ಅನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.

*ಮಾಸ್ಕ್ ಕೂದಲಿನಲ್ಲಿ ಒಂದು ಗಂಟೆ ಕಾಲ ಹಾಗೆ ಇರಲಿ. ಬಳಿಕ ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ಇದರ ಬಳಿಕ ಕಂಡೀಷನರ್ ಬಳಸಿ. ನೀವೇ ತಯಾರಿಸಿಕೊಂಡು ಬಳಸಬಹುದಾದ ಕ್ಯಾರೆಟ್ ಮಾಸ್ಕ್ ನಿಂದ ಕೂದಲು ಬೆಳೆಯುವುದು ಹೇಗೆ ಎಂದು ಪ್ರಯತ್ನಿಸಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್‌ಗೆ ಹಾಕಿಬಿಡಿ.

English summary

Step by step Ways To Use Carrots To Promote Hair Growth!

Carrot does not just improve your eyesight, but also your hair growth. We don't say it, experts do. Before you rush to the kitchen concocting your own carrot hair mask, let us take some time and first understand the properties of carrot and how it works on our hair.