For Quick Alerts
ALLOW NOTIFICATIONS  
For Daily Alerts

  ಬರೀ ಒಂದೇ ವಾರದಲ್ಲಿ ಕೂದಲುದುರುವ ಸಮಸ್ಯೆ ನಿಯಂತ್ರಣಕ್ಕೆ!

  By Deepu
  |

  ಇಂದಿನ ದಿನಗಳಲ್ಲಿ ವಯಸ್ಸು ಇಪ್ಪತ್ತೈದು ಎಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತ್ತದೆ! ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರಲು ಆರಂಭವಾಗಿದ್ದು, ಇದು ದಿನೇ ದಿನೇ ಹೆಚ್ಚುತ್ತಿದೆ.

  ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ದೂಷಿಸಬಹುದು. ಈ ಕಾರಣಗಳು ಮಾತ್ರವಲ್ಲದೆ ಕ್ರಮಬದ್ಧವಲ್ಲದ ಆಹಾರಕ್ರಮ, ಕಲವು ಔಷಧಿಗಳ ಅಡ್ಡ ಪರಿಣಾಮ, ವಿಟಮಿನ್ ಮತ್ತು ಖನಿಜಾಂಶ ಕೊರತೆಯಿಂದ ಕೂಡ ಕೂದಲು ಉದುರುತ್ತದೆ. ಹಾಗಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರಗಳಿಲ್ಲವೇ...?

  ಖಂಡಿತವಾಗಿಯೂ ಇದೆ, ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ಸರಳವಾದ ನೈಸರ್ಗಿಕ ಮನೆಮದ್ದನ್ನು ಸೂಚಿಸಿದ್ದು, ಇದು ಯಾವುದೇ ಅಡ್ಡಪರಿಣಾಮಗಳು ಬೀರದೇ ಅತ್ಯ೦ತ ತ್ವರಿತಗತಿಯಲ್ಲಿ ಕೂದಲು ಉದುರುವುದನ್ನು ಪರಿಹರಿಸಬಲ್ಲ ಶಕ್ತಿ ತನ್ನಲ್ಲಿ ಅಡಗಿಸಿಕೊಂಡಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ.....

  ಮೆಂತೆ

  ಮೆಂತೆ

  ಹೌದು, ಅಡುಗೆಮನೆಯಲ್ಲಿರುವ ಮೆ೦ತೆಕಾಳು ಕೂಡ ಕೂದಲಿನ ಸಮಸ್ಯೆಗೆ ಉಪಯುಕ್ತ ಮನೆಮದ್ದಾಗಿದೆ, ನೀವು ಮಾಡಬೇಕಾದದು ಇಷ್ಟೇ, ಮೆ೦ತೆಕಾಳುಗಳನ್ನು ಏಳೆ೦ಟು ಗಂಟೆಗಳ ನೆನೆಸಿಡಿರಿ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶಾಂಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

  ಇನ್ನೊಂದು ವಿಧಾನ

  ಇನ್ನೊಂದು ವಿಧಾನ

  *ಒಂದು ಲೋಟ ಮೆಂತೆ ಬೀಜಕ್ಕೆ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ನಂತೆಮಾಡಿಕೊಳ್ಳಿ

  *ನಂತರ ಅದನ್ನು ತಲೆಗೆ ಹಚ್ಚಿ 40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿ.

  *ಹೀಗೆ ಒಂದು ತಿಂಗಳ ಕಾಲ ನಿರಂತರವಾಗಿ ಮಾಡಿದರೆ ಕೂದಲುದುರುವಿಕೆ ಕಡಿಮೆಯಾಗುತ್ತದೆ.

  ಬೆಳ್ಳುಳ್ಳಿ ಮತ್ತು ಈರುಳ್ಳಿ

  ಬೆಳ್ಳುಳ್ಳಿ ಮತ್ತು ಈರುಳ್ಳಿ

  ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಗಂಧಕ ಸಮೃದ್ಧ ಆಗರಗಳಾಗಿವೆ. ಆದ್ದರಿಂದ ಇದನ್ನು ಸಾಂಪ್ರದಾಯಿಕ ಔಷಧಗಳನ್ನು ತಯಾರಿಸುವಾಗ ಬಳಸುತ್ತಾರೆ. ಇವು ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ. ಬೆಳ್ಳುಳ್ಳಿಯನ್ನು ಕೂದಲ ಬೆಳವಣಿಗೆಗೆ ಹೀಗೆ ಬಳಸಲಾಗುತ್ತದೆ: 4-5 ಬೆಳ್ಳುಳ್ಳಿಗಳನ್ನು ಜಜ್ಜಿಕೊಂಡು ತೆಂಗಿನ ಎಣ್ಣೆಯ ಜೊತೆ ಬೆರೆಸಿಕೊಳ್ಳಿ. ಇದನ್ನು ಕುದಿಯುವವರೆಗೆ ಚೆನ್ನಾಗಿ ಕಾಯಿಸಿ, ನಂತರ 2-3 ನಿಮಿಷಗಳ ಕಾಲ ಕಾಯಿರಿ. ಆಮೇಲೆ, ಇದು ಆರುವವರೆಗೆ ಕಾಯಿರಿ. ಇದು ಆರಿದ ಮೇಲೆ, ಇದನ್ನು ನಿಮ್ಮ ಕೂದಲ ಮೇಲೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಅತ್ಯುತ್ತಮ ಫಲಿತಾಂಶಗಳಿಗಾಗಿ ಇದನ್ನು ವಾರಕ್ಕೆ 2-3 ಬಾರಿ ಮಾಡಿ. ಈರುಳ್ಳಿಯನ್ನು ಕತ್ತರಿಸಿ, ರಸ ಪಡೆಯುವ ಮೂಲಕ ಇದರ ಸದುಪಯೋಗವನ್ನು ನೀವು ಪಡೆಯಬಹುದು. ಈರುಳ್ಳಿಯ ರಸವನ್ನು ನಿಮ್ಮ ಕೂದಲಿಗೆ ಲೇಪಿಸಿ 15 ನಿಮಿಷ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.

  ಸಾಸಿವೆ ಎಣ್ಣೆ ಮತ್ತು ಮದರಂಗಿ ಎಲೆಗಳು

  ಸಾಸಿವೆ ಎಣ್ಣೆ ಮತ್ತು ಮದರಂಗಿ ಎಲೆಗಳು

  ಸ್ವಲ್ಪ ಸಾಸಿವೆ ಎಣ್ಣೆಯನ್ನು ತಳ ಆಳವಿರುವ ಪಾತ್ರೆಯಲ್ಲಿ ಕುದಿಸಿರಿ ಹಾಗೂ ಒಂದು ಚಿಟಿಕೆಯಷ್ಟು ಮದರಂಗಿ ಎಲೆಗಳನ್ನು ಕ್ರಮಕ್ರಮವಾಗಿ ಎಲ್ಲಾ ಎಲೆಗಳೂ ಸಹ ಈ ಎಣ್ಣೆಯಲ್ಲಿ ಸುಟ್ಟು ಹೋಗುವವರೆಗೆ ಸೇರಿಸಿರಿ. ನಂತರ ಒಂದು ಸ್ವಚ್ಛವಾದ ಬಟ್ಟೆಯನ್ನುಪಯೋಗಿಸಿ ಈ ಎಣ್ಣೆಯನ್ನು ಸೋಸಿರಿ. ನಿಯಮಿತವಾಗಿ ಈ ಎಣ್ಣೆಯನ್ನು ನಿಮ್ಮ ಕೇಶರಾಶಿಗೆ ಮಸಾಜ್ ಮಾಡಿರಿ ಹಾಗೂ ತನ್ಮೂಲಕ ಕೂದಲ ಬೆಳವಣಿಗೆಯನ್ನು ವೃದ್ಧಿಗೊಳಿಸಿರಿ.

  ಕಡಲೆ ಹಿಟ್ಟು ಮತ್ತು ಮೊಸರು

  ಕಡಲೆ ಹಿಟ್ಟು ಮತ್ತು ಮೊಸರು

  1. ಸ್ವಲ್ಪ ಅರಿಶಿನ, ಕಡಲೆಹಿಟ್ಟು, ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿರಿ

  2. ಈ ಪೇಸ್ಟ್ ಅನ್ನು ಭಾದಿತ ಭಾಗಕ್ಕೆ ಲೇಪಿಸಿರಿ ಹಾಗೂ ಅದನ್ನು ಒಣಗಲು ಬಿಡಿರಿ

  3. ಒಣಗಿದ ಪೇಸ್ಟ್ ಅನ್ನು ಹಾಗೆಯೇ ಸ್ವಲ್ಪ ಕಾಲ ಉಜ್ಜಿರಿ ನಂತರ ಅದನ್ನು ನಯವಾಗಿ ತೊಳೆಯಿರಿ

  4. ತದನಂತರ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಈ ಜಾಗಕ್ಕೆ ಲೇಪಿಸಿರಿ

  ತೆಂಗಿನೆಣ್ಣೆ-ಆಲೀವ್ ಆಯಿಲ್

  ತೆಂಗಿನೆಣ್ಣೆ-ಆಲೀವ್ ಆಯಿಲ್

  *1/2 ಕಪ್‎ನಷ್ಟು ತೆಂಗಿನೆಣ್ಣೆಗೆ ಒಂದು ಚಮಚದಷ್ಟು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ

  *5 ನಿಮಿಷಗಳ ಕಾಲ ಹಾಗೆಯೇ ಬಿಡಿ

  *ಕೊಠಡಿಯ ತಾಪಮಾನಕ್ಕೆ ಈ ಮಿಶ್ರಣವನ್ನು ಹಾಗೆಯೇ ಬಿಡಿ

  *ತಣ್ಣಗಾದ ನಂತರ, ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿ

  *ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ನಂತರ ಶಾಂಪೂ ಮಾಡಿ ಮತ್ತು ಕಂಡೀಷನ್ ಹಚ್ಚಿರಿ.

  ದಾಸವಾಳದ ಎಣ್ಣೆ

  ದಾಸವಾಳದ ಎಣ್ಣೆ

  *ದಾಸವಾಳದ ಹೂವಿನ ಕೆಲವು ದಳಗಳನ್ನು ಚೆನ್ನಾಗಿ ಜಜ್ಜಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನುಣ್ಣಗೆ ಕಡೆಯಿರಿ.

  *ಈ ಲೇಪನವನ್ನು ತಲೆಗೂದಲಿಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಇರಿಸಿ.

  ಬಳಿಕ ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

  ಸೀಗೆಕಾಯಿಯ ಕೋಡು

  ಸೀಗೆಕಾಯಿಯ ಕೋಡು

  ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಟ್ಟಿಕೊಳ್ಳಿ. ತದನಂತರ ಪ್ರತಿದಿನ ತಲೆ ಕೂದಲಿಗೆ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಿಕೊಳ್ಳಿ. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

  ಬೇವಿನ ಎಣ್ಣೆ

  ಬೇವಿನ ಎಣ್ಣೆ

  ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು ಕೂದಲಿನ ಸಮೃದ್ಧ ಪೋಷಣೆಗೆ ನೆರವಾಗುವುದರ ಜೊತೆಗೆ ಸೀರು ಮೊದಲಾದ ಇತರ ತೊಂದರೆಗಳಿಂದಲೂ ಮುಕ್ತಿ ದೊರಕುತ್ತದೆ. ನೀವು ಮಾಡಬೇಕಾದದು ಇಷ್ಟೇ

  *ಮೊದಲು ಬೇವಿನ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ

  * ಈ ಎಣ್ಣೆಯಿಂದ ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ

  * ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ

  *ನಂತರ ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ

  * ಇದನ್ನು ವಾರಕ್ಕೊಮ್ಮೆ ಮಾಡಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ

  English summary

  Simple Ways to Stop Hair Loss Naturally with in week

  Some of the most common causes for hair fall are stress, a poor diet, lack of a proper hair care routine, side effects of certain medication, being affected by certain ailments, heredity, etc. Many people have claimed that natural and home-based remedies for hair fall work best, since these remedies are chemical free! Learn below how to make an exceptional natural hair pack to reduce hair fall!
  Story first published: Tuesday, April 3, 2018, 11:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more