For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಯೇ? ಹಾಗಾದರೆ ಸರಿಯಾಗಿ ಹರಳೆಣ್ಣೆ ಹಚ್ಚಿ...

|

ಹರಳೆಣ್ಣೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ವಿವಿಧ ರೂಪದಲ್ಲಿ ಬಳಕೆಯಲ್ಲಿದೆ. Ricinus communis ಎಂಬ ವೈಜ್ಞಾನಿಕ ಹೆಸರಿನ ಸಸ್ಯದ ಬೀಜಗಳನ್ನು ಒಣಗಿಸಿ ಹಿಂಡಿ ತೆಗೆಯಲಾದ ಈ ಎಣ್ಣೆ ಅತಿ ಸ್ನಿಗ್ಧವಾಗಿದ್ದು ಕೀಲೆಣ್ಣೆ, ದೀಪ, ಆರೋಗ್ಯವರ್ಧಕ ಹಾಗೂ ಸೌಂದರ್ಯವರ್ಧಕ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಸೌಂದರ್ಯವರ್ಧಕವಾಗಿ ಮೊಡವೆಗಳನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು, ಚರ್ಮದ ಉರಿಯನ್ನು ತಗ್ಗಿಸಲು ಮೊದಲಾದವುಗಳಿಗೆ ಬಳಸಲಾಗುತ್ತದೆ.

ಹರಳೆಣ್ಣೆಯಲ್ಲಿಲ್ ವಿಟಮಿನ್ ಇ, ವಿವಿಧ ಖನಿಜಗಳು, ಒಮೆಗಾ 6 ಮತ್ತು 9 ಕೊಬ್ಬಿನ ಎಣ್ಣೆಗಳು, ಪ್ರೋಟೀನುಗಳು ಮೊದಲಾದವುಗಳು ಕೂದಲ ಬೆಳವಣಿಗೆಗೆ ನೆರವಾಗುತ್ತವೆ. ಅಷ್ಟೇ ಅಲ್ಲ, ನೆತ್ತಿಯಲ್ಲಿ ಎದುರಾಗುವ ಕೂದಲ ಹೊಟ್ಟನ್ನು ನಿವಾರಿಸಲು, ತಲೆಯ ಚರ್ಮದಲ್ಲಿ ಎದುರಾಗಿದ್ದ ಸೋಂಕು ನಿವಾರಿಸಲು ಹಾಗೂ ತ್ವಚೆಯಲ್ಲಿ ನೈಸರ್ಗಿಕ ತೈಲಗಳನ್ನು ಹೆಚ್ಚಿಸಲು ಹಾಗೂ ಇದಕ್ಕೂ ಮುನ್ನ ಉಪಯೋಗಿಸಿದ್ದ ಹಾನಿಕಾರಕ ರಾಸಾಯನಿಕಗಳಿಂದ ಘಾಸಿಗೊಂಡಿದ್ದ ಕೂದಲಿಗೆ ಮರುಚೈತನ್ಯ ನೀಡಲೂ ನೆರವಾಗುತ್ತದೆ.

ಕೂದಲ ಉದ್ದವನ್ನು ಹೆಚ್ಚಿಸುತ್ತವೆ ಎಂದು ಭರ್ಜರಿ ಪ್ರಚಾರ ಮಾಡುವ ಹಲವು ಉತ್ಪನ್ನಗಳನ್ನು ದುಬಾರಿ ಬೆಲೆ ಕೊಟ್ಟು ಉಪಯೋಗಿಸಿದಾಗ ಯಾವುದೋ ಪ್ರಚೋದನೆಯಿಂದ ಬಲವಂತವಾಗಿ ಕೂದಲು ಉದ್ದವಾದರೂ, ಇದರ ರಾಸಾಯನಿಕಗಳು ಕೂದಲು ಉದುರುವುದನ್ನು ತಡೆಯಲಾರವು.

ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಆದರೆ ತಣ್ಣನೆಯ ವಿಧಾನದಿಂದ ಹಿಂಡಲಾಗಿರುವ ಹರಳೆಣ್ಣೆಯ ಬಳಕೆಯಿಂದ ಇದರಲ್ಲಿರುವ ಗರಿಷ್ಟ ಪ್ರಮಾಣದ ಪೋಷಕಾಂಶಗಳು ಕೂದಲಿಗೆ ಲಭಿಸುತ್ತವೆ ಹಾಗೂ ಈ ಮೂಲಕ ನೈಸರ್ಗಿಕ ಪೋಷಣೆ ಪಡೆದು ಕೂದಲು ನೀಳವಾಗುತ್ತದೆ ಹಾಗೂ ಕೂದಲ ಬುಡ ದೃಢಗೊಳ್ಳುವ ಮೂಲಕ ಕೂದಲು ಉದುರುವುದನ್ನೂ ತಡೆಯುತ್ತದೆ. ಬನ್ನಿ, ಹರಳೆಣ್ಣೆಯ ಬಳಕೆಯಿಂದ ಪಡೆಯಬಹುದಾದ ಐದು ವಿಧಾನಗಳು ಹಾಗೂ ಇವುಗಳ ಅತ್ಯುತ್ತಮ ಪ್ರಯೋಜನಗಳ ಬಗ್ಗೆ ಅರಿಯೋಣ...

ಸಾದಾ ಹರಳೆಣ್ಣೆ

ಸಾದಾ ಹರಳೆಣ್ಣೆ

ಕೂದಲ ಉದ್ದ ಹೆಚ್ಚಿಸಲು ಇದೊಂದು ಸುಲಭ ಭಾಗೂ ಉತ್ತಮ ಪರಿಣಾಮ ಬೀರಬಲ್ಲ ವಿಧಾನವಾಗಿದೆ. ಹರಳೆಣ್ಣೆಯನ್ನು ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು. ಬೆರಳ ತುದಿಗಳಿಂದ ಮಸಾಜ್ ಮಾಡುವ ಮೂಲಕ ತಲೆಯ ಚರ್ಮದಲ್ಲಿ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಕೂದಲ ರಚನೆಯೂ ಉತ್ತಮಗೊಳ್ಳುತ್ತದೆ. ಹರಳೆಣ್ಣೆ ಕೂದಲಿನಲ್ಲಿ ಹೀರಲ್ಪಡುತ್ತದೆ ಹಾಗೂ ಕೂದಲ ಬುಡಕ್ಕೆ ತಲುಪಿ ಕೂದಲ ಬೆಳವಣಿಗೆಯನ್ನು ಶೀಘ್ರವಾಗಿಸುತ್ತದೆ ಹಾಗೂ ಕೂದಲು ಉದುರುವುದರಿಂದ ರಕ್ಷಿಸುತ್ತದೆ. ಆದರೆ ಈ ಎಣ್ಣೆಯ ದೊಡ್ಡ ತೊಂದರೆ ಎಂದರೆ ಈ ಎಣ್ಣೆ ಅತಿ ಹೆಚ್ಚು ಸ್ನಿಗ್ದವಾಗಿದ್ದು ಕೂದಲಿಗೆ ಅಂಟಿಕೊಂಡಿರುವುದನ್ನು ನಿವಾರಿಸಲು ಕಷ್ಟವಾಗಿರುವುದು. ಹಾಗಾಗಿ ಕೂದಲಿನಿಂದ ಎಣ್ಣೆಪಸೆಯನ್ನು ನಿವಾರಿಸಲು ಹಲವಾರು ಬಾರಿ ಸ್ನಾನ ಮಾಡಬೇಕಾಗಿ ಬರಬಹುದು.

ವಿಧಾನ:

* ಕೊಂಚ ಹರಳೆಣ್ಣೆಯನ್ನು ಕೈಗಳಿಗೆ ಹೆಚ್ಚಿಕೊಂಡು ತಲೆಯ ಕೂದಲಿಗೆ ಹಚ್ಚಿಕೊಳ್ಳಿ.

* ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿಕೊಳ್ಳಿ

* ಈ ಎಣ್ಣೆಯನ್ನು ಸುಮಾರು ನಾಲ್ಕರಿಂದ ಆರು ಘಂಟೆಗಳ ಕಾಲ ಹಾಗೇ ಬಿಡಿ. ಅಥವಾ ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ.

* ಬಳಿಕ ನಿಮ್ಮ ನೆಚ್ಚಿನ ಸೌಮ್ಯ ಶಾಂಪೂ ಬಳಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

* ಉತ್ತಮ ಬೆಳವಣಿಗೆಗಾಗಿ ವಾರಕ್ಕೆರಡು ಬಾರಿ ಅನುಸರಿಸಿ.

ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ

ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ

ಹರಳೆಣ್ಣೆಯ ಸ್ನಿಗ್ಧತೆಯನ್ನು ತೆಳುವಾಗಿಸಲು ಇತರ ಎಣ್ಣೆಗಳನ್ನು ಬಳಸಬಹುದು ಹಾಗೂ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿಸಬಹುದು. ಅಲ್ಲದೇ ಹರಳೆಣ್ಣೆಯ ಕಮಟು ಪರಿಮಳವನ್ನು ಕೊಬ್ಬರಿ ಎಣ್ಣೆ ಮಸುಕಾಗಿಸಿ ಎರಡು ಎಣ್ಣೆಗಳ ಗುಣಗಳನ್ನು ಪಡೆಯಲು ನೆರವಾಗುತ್ತದೆ. ಕೂದಲ ಉದುರುವಿಕೆಯನ್ನು ತಡೆಯಲು ಇವೆರಡೂ ಎಣ್ಣೆಗಳ ಮಿಶ್ರಣ ಉತ್ತಮ ಆಯಾಕೆಯಾಗಿದೆ. ಈ ಮಿಶ್ರಣದಲ್ಲಿರುವ ಸೂಕ್ಷ್ಮಜೀವಿ ನಿವಾರಕ ಗುಣ ತಲೆಯ ಚರ್ಮದ ಸೋಂಕನ್ನು ಗುಣಪಡಿಸಲು ನೆರವಾಗುತ್ತದೆ ಹಾಗೂ ಕೂದಲು ಉದುರುವುದರಿಂದ ರಕ್ಷಣೆ ಒದಗಿಸುತ್ತದೆ.

ವಿಧಾನ:

* ಒಂದು ಬೋಗುಣಿಯಲ್ಲಿ ತಲಾ ಒಂದು ದೊಡ್ಡಚಮಚ ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಗಳನ್ನು ಬೆರೆಸಿ.

* ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ.

* ಮುಂದಿನ ಎರಡರಿಂದ ಮೂರು ಘಂಟೆಗಳ ಕಾಲ ತಲೆಗೊಂದು ಶವರ್ ಕ್ಯಾಪ್ ಧರಿಸಿರಿ.

* ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

* ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಹರಳೆಣ್ಣೆ ಮತ್ತು ಆಲಿವ್ ಎಣ್ಣೆ

ಹರಳೆಣ್ಣೆ ಮತ್ತು ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ಘಾಸಿಗೊಂಡ ಕೂದಲನ್ನು ಸರಿಪಡಿಸಿ ಕೂದಲಿಗೆ ಕಾಂತಿ ನೀಡುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ. ಈ ಎರಡೂ ಎಣ್ಣೆಗಳಲ್ಲಿರುವ ಕೊಬ್ಬಿನ ಆಮ್ಲಗಳು ಕೂದಲ ಬುಡಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತವೆ ಹಾಗೂ ಕೂದಲ ಬೆಳವಣಿಗೆಯನ್ನು ಹೆಚ್ಚಿಸಿ ಆರೋಗ್ಯಕರವಾದ ಕೂದಲು ಬೆಳೆಯಲು ನೆರವಾಗುತ್ತದೆ.

ವಿಧಾನ:

* ಒಂದು ಬೋಗುಣಿಯಲ್ಲಿ ತಲಾ ಒಂದು ದೊಡ್ಡಚಮಚ ಆಲಿವ್ ಮತ್ತು ಹರಳೆಣ್ಣೆಯನ್ನು ಬೆರೆಸಿ. ಒಂದು ವೇಳೆ ನಿಮ್ಮ ಕೂದಲು ನೀಳವಾಗಿದ್ದರೆ ಅದಕ್ಕೆ ತಕ್ಕಂತೆ ಎಣ್ಣೆಗಳ ಪ್ರಮಾಣವನ್ನೂ ಹೆಚ್ಚಿಸಿ.

* ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮೈಕ್ರೋವೇವ್ ನಲ್ಲಿ ಹತ್ತು ಸೆಕೆಂಡುಗಳ ಕಾಲ ಬಿಸಿಮಾಡಿ.

* ಈ ಬೆಚ್ಚನೆಯ ಎಣ್ಣೆಯ ಮಿಶ್ರಣದಿಂದ ತಲೆಗೂದಲನ್ನು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ.

* ಮುಂದಿನ ಒಂದು ಘಂಟೆ ಕಾಲ ಕೂದಲನ್ನು ಹಾಗೇ ಬಿಡಿ.

* ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

* ಉತ್ತಮ ಬೆಳವಣಿಗೆಗಾಗಿ ವಾರಕ್ಕೆರಡು ಬಾರಿ ಉಪಯೋಗಿಸಿ.

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ

ಎಣ್ಣೆಯಲ್ಲಿ ಪ್ರೋಟೀನ್ ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಗಳು ಸಮೃದ್ದವಾಗಿದ್ದು ಕೂದಲ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಇದರ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರನಿವಾರಕ ಗುಣಗಳು ಕೂದಲು ಉದುರುವುದನ್ನು ತಡೆಯುತ್ತದೆ ಹಾಗೂ ಕೂದಲ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರೊಂದಿಗೆ ಹರಳೆಣ್ಣೆಯನ್ನು ಮಿಶ್ರಣ ಮಾಡಿದಾಗ ಇವೆರಡೂ ಎಣ್ಣೆಗಳ ಗುಣಗಳು ಮೇಳೈಸಿ ಕೂದಲಿಗೆ ಅತ್ಯುತ್ತಮ ಪೋಷಣೆ ದೊರಕುತ್ತದೆ ಹಾಗೂ ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ವಿಧಾನ:

* ಎರಡೂ ಎಣ್ಣೆಗಳನ್ನು ಸಮಪ್ರಮಾಣದಲ್ಲಿ ಒಂದು ಚಿಕ್ಕ ಬೋಗುಣಿಯಲ್ಲಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ.

* ಈಗ ಬೆಚ್ಚನೆಯ ದಪ್ಪ ಟವೆಲ್ಲೊಂದನ್ನು ತಲೆಗೂದಲು ಆವರಿಸುವಂತೆ ಮುಚ್ಚಿಕೊಂಡು ಸುಮಾರು ಒಂದು ಘಂಟೆ ಹಾಗೇ ಬಿಡಿ.

* ಬಳಿಕ ಸೌಮ್ಯ ಶಾಂಪೂ ಬಳಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಉಪಯೋಗಿಸಿ.

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆ

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಸತು ಕೂದಲ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾಗಿವೆ. ಇದರೊಂದಿಗೆ ಹರಳೆಣ್ಣೆಯನ್ನು ಬೆರೆಸಿದಾಗ ಇದೊಂದು ಅದ್ಭುತ ಮಿಶ್ರಣವಾಗುತ್ತದೆ ಹಾಗೂ ಕೂದಲ ಬೆಳವಣಿಗೆಗೆ ಹೆಚ್ಚಿನ ನೆರವು ಒದಗಿಸುತ್ತದೆ.

ವಿಧಾನ:

* ಒಂದು ಚಿಕ್ಕ ಬೋಗುಣಿಯಲ್ಲಿ ಎರಡೂ ಎಣ್ಣೆಗಳನ್ನು ತಲಾ ಒಂದು ದೊಡ್ಡಚಮಚ ಬೆರೆಸಿ

* ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡಿ.

* ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡ ಬಳಿಕ ಒಂದು ಘಂಟೆ ಕಾಲ ಹಾಗೇ ಬಿಡಿ.

* ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ.

* ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ.

English summary

Prevent Hair Loss With The Amazing Use Of Castor Oil

There are many products in the market that promise you to have a great hair, but the harmful chemicals present in them lead to hair fall. So, if you buy castor oil, make sure you opt for cold-pressed hexan-free castor oil. This is because it contains the maximum amount of nutrients, which in turn, accelerates hair growth and prevents hair fall. So, today, we have 7 castor oil-based remedies that not only help to accelerate hair growth but also treat scalp problems. Let's take a look now.
X
Desktop Bottom Promotion