For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಅಂದದ ಕೂದಲಿಗಾಗಿ ಮೆಹೆಂದಿ ಹೇರ್ ಪ್ಯಾಕ್

By Deepu
|

ಭಾರತದಲ್ಲಿ ಬಹಳ ಹಿಂದಿನ ಕಾಲದಿಂದ ಮೆಹೆಂದಿ ಅಥವಾ ಮದರಂಗಿಯನ್ನು ಕೂದಲ ಆರೈಕೆಗಾಗಿ ಬಳಸಲ್ಪಡುತ್ತಾ ಬಂದಿದೆ. ಹೆಚ್ಚಿನವರು ಮದರಂಗಿಯನ್ನು ಕೂದಲಿಗೆ ಹಚ್ಚಿಕೊಳ್ಳುವುದು ಅವರ ನೆರೆತ ಕೂದಲನ್ನು ಮರೆಮಾಚುವುದಕ್ಕಾಗಿ ಮಾತ್ರ ಎಂದು ತಿಳಿದಿದ್ದಾರೆ. ಆದರೆ ಸತ್ಯಾಂಶವೇನೆಂದರೆ, ಕೇವಲ ಬಿಳಿಕೂದಲಿನ ಆರೈಕೆಗೆ ಮಾತ್ರವಲ್ಲದೆ, ನಮ್ಮ ಕೂದಲಿಗೆ ಕಾಡುವ ಇತರ ಸಮಸ್ಯೆಯ ಆರೈಕೆಗೂ ಸಹ ನೆರವಾಗುತ್ತದೆ. ಹೌದು, ಕೂದಲಿನ ಸಮಸ್ಯೆಗಳನ್ನು ನಿವಾರಿಸುವ ವಿಧಾನಗಳಲ್ಲಿ ಮೆಹಂದಿ ವಿಧಾನವೂ ಸಹ ಮುಖ್ಯವಾದದ್ದು. ಕೇಶದ ಆರೈಕೆಯಲ್ಲಿ ಮೆಹೆಂದಿಯಿಂದ ಉಪಯುಕ್ತವಾಗುವ ಕೆಲವು ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ...

ಕೂದಲಿನ ಆರೈಕೆಗೆ ಮದರಂಗಿ ಬಳಸುವ ಲಾಭಗಳು
ಕೂದಲು ಉದುರುವುದನ್ನು ತಡೆದು, ಕೂದಲಿನ ಬೆಳವಣಿಗೆಗೆ ನೆರವಾಗುವುದು
ಮದರಂಗಿಯ ನೈಸರ್ಗಿಕ ಗುಣವೆಂದರೆ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಇದರ ಹುಡಿಯನ್ನು ನೀವು ನಿಯಮಿತವಾಗಿ ಬಳಸುವ ಎಣ್ಣೆಗೆ ಹಾಕಿಕೊಂಡು 5-6 ನಿಮಿಷ ಕಾಲ ಬಿಸಿ ಮಾಡಬೇಕು. ಉಗುರು ಬೆಚ್ಚಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ವಾರದಲ್ಲಿ ಎರಡು ಅಥವಾ ಮೂರು ದಿನ ಇದನ್ನು ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ, ಕೂದಲಿನ ಬೆಳವಣಿಗೆಯಾಗುವುದು.

henna hair pack

ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡುವುದು
ನೀವು ಬೇರೆ ಯಾವುದೇ ರೀತಿಯ ಕೂದಲಿನ ಕಂಡೀಷನರ್ ಬದಲು ಮದರಂಗಿ ಬಳಸಬಹುದು. ಇದು ಕೂದಲಿನ ಕೋಶಗಳಿಗೆ ಪೋಷಣೆ ನೀಡಿ, ಅದನ್ನು ಸುಂದರಗೊಳಿಸಿ ಅದು ಮಾದಕವಾಗಿ ಕಾಣುವಂತೆ ಮಾಡುವುದು. 1/4 ಕಪ್ ನಷ್ಟು ಮದರಂಗಿ ಹುಡಿಯನ್ನು ಅರ್ಧ ಕಪ್ ನಷ್ಟು ಮೊಸರಿನ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಶಾಂಪೂ ಹಾಕಿಕೊಂಡ ಬಳಿಕ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ತಲೆಯಲ್ಲಿ ಹೊಟ್ಟು ವಿಪರೀತವಾಗಿದ್ದರೆ
ಕೊಂಚ ಮೆಂತೆ ಕಾಳುಗಳನ್ನು (ಒಂದು ಚಿಕ್ಕಚಮಚ) ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕೊಂಚ ದೊರಗಾಗಿ ಇರುವಂತೆ ಅರೆಯಿರಿ. ಬಳಿಕ ಬಾಣಲೆಯಲ್ಲಿ ಕೊಂಚ ಸಾಸಿವೆ ಎಣ್ಣೆ ಬಿಸಿಮಾಡಿ ಇದರಲ್ಲಿ ಕೆಲವು ಮದರಂಗಿ ಎಲೆಗಳನ್ನು ಹಾಕಿ ಹುರಿಯಿರಿ. ತಕ್ಷಣವೇ ಉರಿ ಆರಿಸಿ ತಣಿಯಲು ಬಿಡಿ. ಈ ಎಲೆಗಳನ್ನು ಎಣ್ಣೆಯಿಂದ ನಿವಾರಿಸಿ. ಈ ಎಲೆಗಳನ್ನು ಮೊದಲು ದೊರಗಾಗಿ ಅರೆದಿದ್ದ ಮೆಂತೆಯಲ್ಲಿ ಸೇರಿಸಿ ನುಣ್ಣಗಾಗುವಂತೆ ಮತ್ತೊಮ್ಮೆ ಅರೆಯಿರಿ. ಈ ಲೇಪನವನ್ನು ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಹೊಟ್ಟಿರುವ ಕಡೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಅರ್ಧಗಂಟೆಯ ಕಾಲ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಒಂದು ಬಾರಿ ಉಪಯೋಗಿಸಿದರೆ ಸಾಕು. ಈ ಕ್ರಮದಿಂದ ಕೆಲವೇ ದಿನಗಳಲ್ಲಿ ತಲೆಹೊಟ್ಟು ಇಲ್ಲವಾಗುತ್ತದೆ.

ತುರಿಕೆ ನಿಯಂತ್ರಿಸುವುದು
ಮದರಂಗಿಯಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ತಲೆಬುರುಡೆಗೆ ತಂಪು ಹಾಗೂ ಶಮನ ನೀಡುವುದು. ಇದರಿಂದ ತುರಿಕೆ ಕಡಿಮೆಯಾಗುವುದು. ಒಂದು ಕಪ್ ಮದರಂಗಿ ಎಲೆಗಳು, ಅರ್ಧ ಕಪ್ ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳನ್ನು ರುಬ್ಬಿಕೊಳ್ಳಿ. ಇದರ ಪೇಸ್ಟ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಕೂದಲು ತೊಳೆಯಿರಿ. ಬೇವಿನ ಎಲೆ ಮತ್ತು ತುಳಸಿಯಲ್ಲಿ ಮದರಂಗಿಯಂತೆ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ.

ಕೂದಲಿಗೆ ಕಾಂತಿ ಮತ್ತು ನೈಸರ್ಗಿಕ ಬಣ್ಣ ನೀಡುವುದು
ಹೇರ್ ಡೈಯಿಂದಾಗಿ ನಿಮಗೆ ಅಲರ್ಜಿಯಾಗುತ್ತಲಿದ್ದರೆ ಆಗ ನೀವು ಮದರಂಗಿ ಬಳಸಿಕೊಂಡು ಬಿಳಿ ಕೂದಲು ನಿವಾರಣೆ ಮಾಡಬಹುದು ಮತ್ತು ಕೂದಲಿಗೆ ಕಾಂತಿ ನೀಡಬಹುದು. ಕೂದಲಿಗೆ ಬಣ್ಣ ನೀಡಲು ಮದರಂಗಿಯನ್ನು ಹಲವಾರು ವಿಧಾನಗಳಿಂದ ಬಳಸಬಹುದು. ಇದರಲ್ಲಿ ಒಂದು ಸರಳ ವಿಧಾನವೆಂದರೆ ನೆಲ್ಲಿಕಾಯಿ ಹುಡಿ ಮತ್ತು ಮದರಂಗಿ ಹುಡಿ ಮಿಶ್ರಣ. ಮೂರು ಚಮಚ ನೆಲ್ಲಿಕಾಯಿ ಹುಡಿಗೆ ಒಂದು ಕಪ್ ತಾಜಾ ಮದರಂಗಿ ಪೇಸ್ಟ್ ಗೆ ಹಾಕಿ. ಈ ಮಿಶ್ರಣಕ್ಕೆ ಒಂದು ಚಮಚ ಕಾಫಿ ಹುಡಿ ಹಾಕಿ ಮತ್ತು ಇದನ್ನು ಒಂದು ಬ್ರಶ್ ಬಳಸಿಕೊಂಡು ಕೂದಲಿಗೆ ಹಚ್ಚಿ. ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ಬಳಿಕ ಹಗುರ ಶಾಂಪೂ ಬಳಸಿ ತೊಳೆಯಿರಿ.

ಕೂದಲು ಉದುರುವ ಸಮಸ್ಯೆ ಇದ್ದರೆ
ಕೊಂಚ ಸಾಸಿವೆ ಎಣ್ಣೆ ಮತ್ತು ಮದರಂಗಿ ಎಲೆಗಳನ್ನು ಒಂದು ಚಿಕ್ಕ ಚಮಚ ಲಿಂಬೆರಸ ಅಥವಾ ಒಂದು ದೊಡ್ಡ ಚಮಚ ಮೊಸರಿನೊಂದಿಗೆ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಕೂದಲ ಬುಡಕ್ಕೆ ನಯವಾಗಿ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಅರ್ಧಘಂಟೆಯ ಕಾಲ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕೂದಲಿಗೆ ಕಂಡೀಶನಿಂಗ್ ಮಾಡಲು
ಒಂದು ಕಪ್ ಹಸಿರು ಅಥವಾ ಕಪ್ಪು ಟೀ ಕುದಿಸಿ ಟೀ ಪುಡಿ ಸೋಸಿ. ಈ ನೀರಿಗೆ ಕೊಂಚ ಮದರಂಗಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ. ಕೆಲವು ಹನಿ ನಿಮ್ಮ ಆಯ್ಕೆಯ ಅವಶ್ಯಕ ತೈಲ ಸೇರಿಸಿ. ಅವಶ್ಯಕ ತೈಲ ಇಲ್ಲದಿದ್ದಲ್ಲಿ ಕೂದಲಿಗೆ ಹಚ್ಚಿಕೊಳ್ಳುವ ಮುನ್ನ ಒಂದು ಮೊಟ್ಟೆಯನ್ನು ಮಿಶ್ರಣ ಮಾಡಬಹುದು. ಈ ಲೇಪನದಿಂದ ನಿಮ್ಮ ಕೂದಲನ್ನು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಮಾಡಿ. ಒಂದು ಘಂಟೆ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲಿಗೆ ಉತ್ತಮ ಹೊಳಪು, ದೃಢತೆ ಮತ್ತು ನೇರವೂ ಆಗುತ್ತದೆ. ವಾರಕ್ಕೊಮ್ಮೆ ಅನುಸರಿಸುವ ಮೂಲಕ ಕೂದಲ ಬೆಳವಣಿಗೆ ಹೆಚ್ಚಿ ನಿಮ್ಮ ಸೌಂದರ್ಯವೂ, ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ.

ತುರಿಕೆ ನಿಯಂತ್ರಿಸುವುದು
ಮದರಂಗಿಯಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ತಲೆಬುರುಡೆಗೆ ತಂಪು ಹಾಗೂ ಶಮನ ನೀಡುವುದು. ಇದರಿಂದ ತುರಿಕೆ ಕಡಿಮೆಯಾಗುವುದು. ಒಂದು ಕಪ್ ಮದರಂಗಿ ಎಲೆಗಳು, ಅರ್ಧ ಕಪ್ ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳನ್ನು ರುಬ್ಬಿಕೊಳ್ಳಿ. ಇದರ ಪೇಸ್ಟ್ ನ್ನು ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಕೂದಲು ತೊಳೆಯಿರಿ. ಬೇವಿನ ಎಲೆ ಮತ್ತು ತುಳಸಿಯಲ್ಲಿ ಮದರಂಗಿಯಂತೆ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ.

ಕೂದಲು ಉದುರುವುದನ್ನು ತಡೆದು, ಕೂದಲಿನ ಬೆಳವಣಿಗೆಗೆ ನೆರವಾಗುವುದು
ಮದರಂಗಿಯ ನೈಸರ್ಗಿಕ ಗುಣವೆಂದರೆ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಇದರ ಹುಡಿಯನ್ನು ನೀವು ನಿಯಮಿತವಾಗಿ ಬಳಸುವ ಎಣ್ಣೆಗೆ ಹಾಕಿಕೊಂಡು 5-6 ನಿಮಿಷ ಕಾಲ ಬಿಸಿ ಮಾಡಬೇಕು. ಉಗುರು ಬೆಚ್ಚಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ವಾರದಲ್ಲಿ ಎರಡು ಅಥವಾ ಮೂರು ದಿನ ಇದನ್ನು ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ, ಕೂದಲಿನ ಬೆಳವಣಿಗೆಯಾಗುವುದು.

ತಲೆಬುರುಡೆಯು ಜಿಡ್ಡಿನಿಂದ ಕೂಡಿದ್ದರೆ
ಅದನ್ನು ಮದರಂಗಿಯು ನಿವಾರಣೆ ಮಾಡಿ, ಕೂದಲು ಉದುರುವುದನ್ನು ತಡೆಯುವುದು. ಮುಲ್ತಾನಿ ಮಿಟ್ಟಿ ಮತ್ತು ಮದರಂಗಿ ಹುಡಿಯನ್ನು ನೀರು ಹಾಕಿ ಬೆರೆಸಿಕೊಳ್ಳಿ. ಇದರ ಪೇಸ್ಟ್ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಎರಡು ಗಂಟೆ ಕಾಲ ಹಾಗೆ ಬಿಡಿ. ಹಗುರ ಶಾಂಪೂ ಹಾಕಿಕೊಂಡು ಇದನ್ನು ತೊಳೆಯಿರಿ. ಮದರಂಗಿಯಿಂದ ಕೂದಲಿಗೆ ಸಿಗುವ ಲಾಭಗಳ ಬಗ್ಗೆ ನೀವು ತಿಳಿದುಕೊಂಡಿದ್ದೀರಿ. ಇನ್ನೂ ನಿಮಗೆ ಚಿಂತೆಯಿದೆಯಾ? ಹೌದು, ನೀವು ಮಾರುಕಟ್ಟೆಯಿಂದ ಮದರಂಗಿ ಹುಡಿ ಖರೀಸುತ್ತಿದ್ದರೆ ಆಗ ನೀವು ಸಾವಯವ, ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಮದರಂಗಿ ಹುಡಿ ಖರೀದಿಸಿ. ಯಾಕೆಂದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನೈಸರ್ಗಿಕವೆಂದು ಹೇಳುವಂತಹ ಹಲವಾರು ರೀತಿಯ ಉತ್ಪನ್ನಗಳಿವೆ. ಆದರೆ ಇದರಲ್ಲಿ ರಾಸಾಯನಿಕ ಇದ್ದೇ ಇರುತ್ತದೆ. ತಾಜಾ ಮದರಂಗಿ ಎಲೆಗಳಿಂದ ಮಾಡಿದ ಪೇಸ್ಟ್ ಬಳಸಿದರೆ ಅತ್ಯುತ್ತಮ.

English summary

Impressive Benefits of Henna for Hair

Popularly known as mehendi, henna is a natural herbal powder, which is not just used for colouring hair, but is used as a part of general hair care due to its ability to prevent other hair-related problems such as dandruff and scalp itching. Henna is also used as a hair conditioner. But, is henna really great for your hair? Read on to find out if you have any concerns. Henna has been used as a beauty ingredient for hair care since ages in India. In ancient days, women used the leaves of this plant for hair treatment by grinding them to a paste.
X
Desktop Bottom Promotion