Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದಪ್ಪನೆಯ ಮತ್ತು ಹೊಳೆಯುವ ಕೂದಲಿಗೆ ಕ್ಯಾರೆಟ್ ಹೇರ್ ಪ್ಯಾಕ್
ಎಲ್ಲರೂ ತಿಳಿದಿರುವ ಸಾಮಾನ್ಯ ತರಕಾರಿ ಎಂದು ಭಾವಿಸುತ್ತಾರೆ. ಅದನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವುದೇ. ಆದರೆ ಕ್ಯಾರೆಟ್ ನಿಂದ ಕೂದಲಿನ ಆರೋಗ್ಯಕ್ಕೂ ಬಹಳ ಪ್ರಯೋಜನಗಳು ಸಿಗುತ್ತೆ ಎಂಬುದು ಎಷ್ಟು ಜನರಿಗೆ ತಿಳಿದಿದೆ ಹೇಳಿ? ಹೌದು ಕ್ಯಾರೆಟ್ ಅನ್ನು ಬೇರೆಬೇರೆ ವಿಧದಲ್ಲಿ ಬಳಕೆ ಮಾಡುವುದರಿಂದಾಗಿ ದಪ್ಪನೆಯ ಮತ್ತು ಹೊಳೆಯುವ ಕೂದಲನ್ನು ಪಡೆಯಬಹುದು.
ಕಣ್ಣುಗಳಿಗೆ ಮತ್ತು ಕೂದಲಿಗೆ ಹೇಗೆ ಕ್ಯಾರೆಟ್ ಬಹಳ ಪ್ರಯೋಜನಕಾರಿಯೋ ಹಾಗೆ ಕೂದಲಿಗೂ ಕೂಡ ಬಹಳ ಉಪಕಾರಿಯಾಗಿರುತ್ತೆ. ಹಾಗಾದ್ರೆ ಕೂದಲಿನ ಆರೋಗ್ಯದ ದೃಷ್ಟಿಯಿಂದ ಕ್ಯಾರೆಟ್ ಅನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನಾವಿಲ್ಲಿ ನೀಡುತ್ತಿದ್ದೇವೆ.. ಮುಂದೆ ಓದಿ..
ಕೂದಲಿಗೆ ಕ್ಯಾರೆಟ್ ಹೇಗೆ ಪ್ರಯೋಜನಕಾರಿಯಾಗಿದೆ?
. ವಿಟಮಿನ್ ಎ ಅಂಶದಿಂದ ಕೂಡಿರುವ ಕ್ಯಾರೆಟ್, ಸೀಬಮ್ ಪ್ರೊಡಕ್ಷನ್ ನ್ನು ಸ್ಟಿಮುಲೇಟ್ ಮಾಡಲು ನೆರವಾಗುತ್ತೆ. ಇದು ನಿಮ್ಮ ಸ್ಕ್ಯಾಲ್ಪ್ ನ ಪರಿಸ್ಥಿತಿಯನ್ನು ತಿಳಿಗೊಳಿಸಿ, ನಿಮ್ಮ ಕೂದಲುದುರುವಿಕೆಯನ್ನು ಕಡಿಮೆ ಮಾಡುತ್ತೆ.
. ಕ್ಯಾರೆಟ್ ಗಳು ನಿಮ್ಮ ಕೂದಲಿನ ಒಟ್ಟು ಗಟ್ಟಿತನವನ್ನು ಹೆಚ್ಚಿಸುತ್ತೆ. ಹಾಗಾಗಿ ನಿಮ್ಮ ಕೂದಲು ದಪ್ಪವಾಗಿ ಮತ್ತು ಹೊಳೆಯುವಂತಾಗಿ ಬೆಳೆಯುತ್ತೆ. ಕ್ಯಾರೆಟ್ ನಲ್ಲಿರುವ ವಿಟಮಿನ್ ಎ ಮತ್ತು ಇ ಅಂಶವು ಇದಕ್ಕೆ ಕಾರಣವಾಗುತ್ತೆ. ಹಾಗಾಗಿ ಕ್ಯಾರೆಟ್ ಜ್ಯೂಸ್ ನ್ನು ಯಾವಾಗಲೂ ಸೇವಿಸುತ್ತಾ ಇರುವುದರಿಂದಾಗಿ ನೀವು ಖಂಡಿತವಾಗಿಯೂ ಆರೋಗ್ಯಕರವಾದ ಕೂದಲನ್ನು ಪಡೆಯಲು ಸಾಧ್ಯವಿದೆ.
. ಕ್ಯಾರೆಟ್ ನಲ್ಲಿ ಅತ್ಯಧಿಕವಾಗಿರುವ ವಿಟಮಿನ್ ಬಿ, ಸಿ, ಇ, ಮೆಗ್ನೀಷಿಯಂ ಮತ್ತು ಫಾಸ್ಪರಸ್ ಅಂಶವು ಸ್ಕಾಲ್ಪ್ ನಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತೆ.ಆ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತೆ.
. ಯಾವಾಗಲೂ ಕ್ಯಾರೇಟ್ ಸೇವಿಸುತ್ತಲೇ ಇರುವುದರ ಪರಿಣಾಮದಿಂದಾಗಿ ವಯಸ್ಸಾಗುವುದಕ್ಕಿಂತ ಮುಂಚೆಯೇ ಕೂದಲು ಬಿಳಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.
.ಕೂದಲ ಬೆಳವಣಿಗೆಗೆ ಕ್ಯಾರೆಟ್ ನ್ನು ಬಳಸುವ ವಿಧಾನಗಳು ಕ್ಯಾರೆಟ್ ಜ್ಯೂಸ್ ಸೇವಿಸುವುದು ಮತ್ತು ಹಸಿ ಕ್ಯಾರೆಟ್ ಹಾಗೆಯೇ ಸೇವಿಸುವುದನ್ನು ಹೊರತು ಪಡಿಸಿ, ಇನ್ನು ಹಲವು ವಿಧದಲ್ಲಿ ಕೂದಲ ಬೆಳವಣಿಗೆಗೆ ಕ್ಯಾರೆಟ್ ಅನ್ನು ಬಳಸಬಹುದು.
.ಕ್ಯಾರೆಟ್ ಆಯಿಲ್...
ಕ್ಯಾರೆಟ್ ಆಯಿಲ್ ಅಥವಾ ಕ್ಯಾರೇಟ್ ಬೀಜದ ಎಣ್ಣೆ ಎಂದು ಕರೆಯಲ್ಪಡುವು ಇದು ಬಹಳ ಪರಿಣಾಮಕಾರಿಯಾದ ಮತ್ತು ಪ್ರಯೋಜನಕಾರಿಯಾದ ಎಣ್ಣೆಗಳಲ್ಲಿ ಒಂದೆನಿಸಿದೆ. ಇದೊಂದು ರೀತಿಯ ದಪ್ಪನೆಯ ಪೇಸ್ಟ್ ಇದ್ದಂತೆ, ಕ್ಯಾರೆಟ್ ನ ಒಣಗಿಸಿದ ಬೀಜಗಳನ್ನು ಕುದಿಸಿ,ಸಾರಸತ್ವವನ್ನು ಶುದ್ಧೀಕರಿಸಿ ಪಡೆಯುವ ಎಣ್ಣೆ ಇದು. ಇದರಲ್ಲಿ ವಿಟಮಿನ್ ಎ ಮತ್ತು ಇ ಇದ್ದು, ಕೂದಲುದುರುವಿಕೆಯನ್ನು ನಿಯಂತ್ರಿಸಿ ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುತ್ತೆ.ಕ್ಯಾರೆಟ್ ಎಣ್ಣೆಯನ್ನು ಪದೇ ಪದೇ ಬಳಸುತ್ತಲೇ ಇರುವುದರಿಂದಾಗಿ ಗಟ್ಟಿಯಾಗಿರುವ ಕೂದಲು, ಹೊಳೆಯುವ ಮತ್ತು ಮಾಯ್ಚರೈಸ್ ಆಗಿರುವ ಕೂದಲನ್ನು ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲ, ಕೂದಲ ಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬೇರುಗಳು ಗಟ್ಟಿಯಾಗುಂತೆ ಮಾಡಿ , ಪರಿಸರ ಮಾಲಿನ್ಯದಿಂದಾಗುವ ಕೂದಲಿನ ಸಮಸ್ಯೆಗಳನ್ನು ನಿವಾರಿಸುವ ತಾಕತ್ತನ್ನು ಇದು ಹೊಂದಿದೆ.
. ಬಳಸುವ ವಿಧಾನ ಹೇಗೆ ?
ಕ್ಯಾರೆಟ್ ಆಯಿಲ್ ಎಲ್ಲಾ ಮಾರ್ಕೆಟ್ ಗಳಲ್ಲೂ ಲಭ್ಯವಿರುತ್ತೆ.ಈ ಎಣ್ಣೆಯನ್ನು ಯಾವುದೇ ಇತರೆ ಎಣ್ಣೆಯೊಂದಿಗೆ ಉದಾಹರಣೆಗೆ ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ಯಾವುದಾದರೂ ಸರಿ, ಅದರ ಜೊತೆ ಬೆರೆಸಿ ಕೂದಲಿನ ಸ್ಕಾಲ್ಪ್ ಭಾಗಕ್ಕೆ ಮಸಾಜ್ ಮಾಡಿಕೊಳ್ಳಿ.ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದರೆ ವಾರಕ್ಕೊಮ್ಮೆಯಾದರೂ ಇದನ್ನು ಬಳಸಿ.ಇದರ ಬದಲಿಗೆ ಕ್ಯಾರೆಟ್ ನ್ನು ಒಂದು ಗಾಳಿ ಇರದ ಗಾಜಿನ ಜಾರ್ ನಲ್ಲಿ ಹಾಕಿಟ್ಟು , ಆ ಜಾರನ್ನು ಆಲಿವ್ ಅಥವಾ ಕೊಬ್ಬರಿ ಎಣ್ಣೆಯಿಂದ ತುಂಬಿಸಿ. ಇದನ್ನು ಒಂದು ವಾರಗಳ ಕಾಲ ಕತ್ತಲೆ ಪ್ರದೇಶದಲ್ಲಿ ಇಟ್ಟಿರಿ. ಎಣ್ಣೆಯು ಕೇಸರಿ ಬಣ್ಣಕ್ಕೆ ತಿರುಗುವ ವರೆಗೆ ಕಾಯಿರಿ. ನಂತರ ಕ್ಯಾರೆಟ್ ನ್ನು ಆ ಎಣ್ಣೆಯಿಂದ ಬೇರ್ಪಡಿಸಿ ನಿಮ್ಮ ಮಸಾಜ್ ಗೆ ಆ ಎಣ್ಣೆಯನ್ನು ಬಳಸಿ.ನಂತರ ಮೈಲ್ಡ್ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ.
. ಕ್ಯಾರೆಟ್ + ಬಾಳೆಹಣ್ಣು + ಮೊಸರಿನ ಹೇರ್ ಮಾಸ್ಕ್
. ಬೇಕಾಗುವ ಸಾಮಗ್ರಿಗಳು
• 1 ಕ್ಯಾರೆಟ್
• 1 ಬಾಳೆಹಣ್ಣು
• 2 ಟೇಬಲ್ ಸ್ಪೂನ್ ಮೊಸರು
. ಮಾಡುವ ವಿಧಾನ ಹೇಗೆ?
1. ಕ್ಯಾರೆಟ್ ನ್ನು ಕತ್ತರಿಸಿ ಮತ್ತು ಅದಕ್ಕೆ ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ
2. ಎರಡನ್ನು ಚೆನ್ನಾಗಿ ಬ್ಲೆಂಡ್ ಮಾಡಿ ಅದಕ್ಕೆ ಮೊಸರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
. ಬಳಸುವ ವಿಧಾನ ಹೇಗೆ ?
• ಈ ಮಾಸ್ಕ್ ನ್ನು ನಿಮ್ಮ ಕೂದಲಿನ ಎಲ್ಲಾ ಭಾಗಕ್ಕೂ ಹಚ್ಚಿ, ಶವರ್ ಕ್ಯಾಪ್ ಧರಿಸಿ.
• 30 ನಿಮಿಷ ಕಾಯಿರಿ ಮತ್ತು ನಂತರ ಮೃದುವಾಗಿರುವ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
• ವಾರಕ್ಕೆ ಒಂದು ದಿನವಾದ್ರೂ ಇದನ್ನು ಮಾಡಿ.
. ಈ ಮಾಸ್ಕ್ ನಿಮಗೆ ಹೇಗೆ ಸಹಕಾರಿ ?
ಜೇನುತುಪ್ಪವು ನಿಮ್ಮ ಕೂದಲನ್ನು ಮಾಯ್ಚರೈಸ್ ಮಾಡುತ್ತೆ ಮತ್ತು ಕೂದಲಿನಲ್ಲಿರುವ ಫಾಲಿಕಲ್ಸ್ ಗಳನ್ನು ಗಟ್ಟಿಗೊಳಿಸುತ್ತೆ, ಕ್ಯಾರೆಟ್ ಮತ್ತು ಅವಕಾಡೋ ಎರಡೂ ಒಟ್ಟಿಗೆ ಸೇರಿ ನಿಮ್ಮ ಸ್ಕಾಲ್ಪ್ ನ್ನು ಪೋಷಿಸುತ್ತೆ ಮತ್ತು ಉತ್ತಮ ರೀತಿಯಲ್ಲಿ ಕೂದಲು ಬೆಳವಣಿಗೆ ಕೊಂದಲು ನೆರವಾಗುತ್ತೆ. ಯಾಕೆಂದರೆ ಇದರಲ್ಲಿ ವಿಟಮಿನ್ಸ್, ಪ್ರೋಟೀನ್ಸ್, ಮತ್ತು ಅಮೈನೋ ಆಸಿಡ್ ಅಂಶಗಳಿರುತ್ತೆ. ಅವಕಾಡೋ ಒಂದು ಉತ್ತಮ ಹೇರ್ ಕಂಡೀಷನರ್ ಕೂಡ ಹೌದು.
. ಬೇಕಾಗುವ ಸಾಮಗ್ರಿಗಳು
• 1 ಅಥವಾ 2 ಕ್ಯಾರೆಟ್
• ಆಲಿವ್ ಆಯಿಲ್ ಮತ್ತು ಇತರೆ ಎಸೆನ್ಶಿಯಲ್ ಆಯಿಲ್
. ಬಳಸುವ ವಿಧಾನ ಹೇಗೆ ?
1. ಜಸ್ಟ್ ಒಂದು ಕ್ಯಾರೆಟ್ ನ ಪೇಸ್ಟ್ ತಯಾರಿಸಿಕೊಳ್ಳಿ.
2. ಆಲಿವ್ ಆಯಿಲ್ ಮತ್ತು ಎಸೆನ್ಶಿಯಲ್ ಆಯಿಲ್ ಜೊತೆಗೆ ಈ ಪೇಸ್ಟನ್ನು ಮಿಕ್ಸ್ ಮಾಡಿ
3. ಇದನ್ನು 5 ನಿಮಿಷ ಕುದಿಸಿ
4. ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
5. ಇದು ಒಂದು ಸ್ಮೂದಿಯಂತೆ ಕಾಣುತ್ತೆ.
6. ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆ ಹಾಗೆಯೇ ಬಿಡಿ
7. ನಂತರ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ
ಶಾಂಪೂ ಮಾಡುವ ಮುನ್ನ ಮಾಡುವ ಈ ಚಿಕಿತ್ಸೆ ಕೂದಲಿನ ಬೆಳವಣಿಗೆಗೆ ಮತ್ತು ನಿಮ್ಮ ಕೂದಲನ್ನು ಆರೋಗ್ಯವಾಗಿ ಮತ್ತು ಮೃದುವಾಗಿ ಮಾಡಲು ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತೆ ನಿಮ್ಮ ಕೂದಲಿನ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಿಂಪಲ್ ಕ್ಯಾರೆಟ್ ರೆಸಿಪಿಗಳನ್ನು ಟ್ರೈ ಮಾಡಿ ನೋಡಿ.ಅಷ್ಟೇ ಅಲ್ಲ ನಿಮ್ಮ ಡಯಟ್ ನಲ್ಲಿ ಯಾವಾಗಲೂ ಕ್ಯಾರೆಟ್ ಬಳಕೆ ಇರಲಿ. ಮತ್ತು ನಿಮ್ಮಲ್ಲಿ ಅದರಿಂದಾಗುವ ಬದಲಾವಣೆಯನ್ನು ಖಂಡಿತ ನೀವು ಗಮನಿಸಿಕೊಳ್ಳಬಹುದಾಗಿದೆ.