For Quick Alerts
ALLOW NOTIFICATIONS  
For Daily Alerts

ಕರಿಬೇವಿನ ಎಲೆಗಳಿಂದ ಚರ್ಮ, ಕೂದಲಿನ ಆರೈಕೆ

By Hemanth
|

ಭಾರತೀಯರು ಪ್ರತಿಯೊಂದು ಅಡುಗೆಗೂ ಹೆಚ್ಚಾಗಿ ಬಳಸುವಂತಹ ಕರಿಬೇವಿನ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ ಎಂದು ತಿಳಿದಿರುವ ವಿಚಾರ. ಇದು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು. ಇಂತಹ ಕರಿಬೇವನ್ನು ಹಲವಾರು ರೀತಿಯ ಸೌಂದರ್ಯವರ್ಧಕದಲ್ಲೂ ಬಳಸಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಕೂದಲು ಮತ್ತು ಚರ್ಮದ ಆರೈಕೆ ಮಾಡಲು ಕರಿಬೇವಿನ ಎಲೆಗಳನ್ನು ಬಳಸುವರು.

ಸುಂದರ ಹಾಗೂ ಕಾಂತಿಯು ಚರ್ಮ, ರೇಷ್ಮೆಯಂತೆ ಹೊಳೆಯುವ,ದಪ್ಪ ಹಾಗೂ ಕಪ್ಪಗಿನ ಕೂದಲಿಗೆ ಕರಿಬೇವಿನ ಎಲೆಗಳನ್ನು ಬಳಸಿದರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗುವುದು. ಕರಿಬೇವು ಕೂದಲಿನ ಬೆಳವಣಿಗೆ ಉತ್ತೇಜಿಸುವುದು ಮತ್ತು ಚರ್ಮವನ್ನು ಹಲವಾರು ರೀತಿಯ ಸಮಸ್ಯೆಯಿಂದ ಕಾಪಾಡುವುದು. ಕರಿಬೇವಿನ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಅಮಿನೋ ಆಮ್ಲವಿದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದು. ಸೌಂದರ್ಯವರ್ಧಿಸುವಲ್ಲಿ ಕರಿಬೇವಿನ ಎಲೆಗಳು ಎಷ್ಟು ಪರಿಣಾಮಕಾರಿಯಾಗಬಲ್ಲದು ಎಂದು ಈ ಲೇಖನದ ಮೂಲಕ ತಿಳಿಯುವ.....

ಚರ್ಮದ ಆರೈಕೆಗೆ

ಚರ್ಮದ ಆರೈಕೆಗೆ

ಕಾಂತಿಯುತ ಚರ್ಮಕ್ಕಾಗಿ

ಸ್ವಲ್ಪ ಕರಿಬೇವಿನ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಿಟಿಕೆ ಅರಶಿನ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮೊಡವೆಗಳು ಇರುವಂತಹ ಜಾಗ, ಮುಖಕ್ಕೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ಕಂಡುಬರುವುದು. ಸುಂದರ ಹಾಗೂ ಕಾಂತಿಯುತ ತ್ವಚೆ ನಿಮ್ಮದಾಗುವುದು.

ನೆರಿಗೆ ಮುಕ್ತ ಚರ್ಮ

ನೆರಿಗೆ ಮುಕ್ತ ಚರ್ಮ

ಸ್ವಲ್ಪ ಕರಿಬೇವಿನ ಎಲೆಯ ಹುಡಿ, ಮುಲ್ತಾನಿ ಮಿಟ್ಟಿ ಮತ್ತು ಇದಕ್ಕೆ ಸ್ವಲ್ಪ ರೋಸ್ ವಾಟರ್ ಹಾಖಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ಮುಖ ತೊಳೆಯಿರಿ. ಕರಿಬೇವಿನ ಎಲೆಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಇದರಿಂದ ಚರ್ಮವು ಸುಂದರ ಹಾಗೂ ಆರೋಗ್ಯವಾಗಿರುವುದು. ಮುಲ್ತಾನಿ ಮಿಟ್ಟಿ ಚರ್ಮದಲ್ಲಿ ಅತಿಯಾದ ಎಣ್ಣೆ ಹೀರಿಕೊಂಡು ಚರ್ಮಕ್ಕೆ ಶಮನ ನೀಡುವುದು.

ಮೊಡವೆಗಳ ಕಲೆ ತೆಗೆಯಲು

ಮೊಡವೆಗಳ ಕಲೆ ತೆಗೆಯಲು

ಮೊಡವೆ ಕಲೆಗಳು ಮುಖದ ಸೌಂದರ್ಯ ಕೆಡಿಸುವುದು ಮಾತ್ರವಲ್ಲದೆ ಇದನ್ನು ಅಷ್ಟು ಸುಲಭವದಲ್ಲಿ ತೆಗೆಯಲು ಸಾಧ್ಯವಾಗಲ್ಲ. ಆದರೆ ಕರಿಬೇವಿನ ಎಲೆಗಳಿಂದ ಇದನ್ನು ನಿವಾರಿಸಬಹುದು. ಕೆಲವು ಕರಿಬೇವಿನ ಎಲೆಗಳ ಪೇಸ್ಟ್ ಮಾಡಿಕೊಂಡು ಅದಕ್ಕೆ ಕೆಲವು ಹನಿ ಲಿಂಬೆರಸ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಭಾದಿತ ಜಾಗಕ್ಕೆ ಹಚ್ಚಿ ಮತ್ತು 10-12 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಲಿಂಬೆಯಲ್ಲಿ ನೈಸರ್ಗಿಕ ಸಂಕೋಚನ ಗುಣವಿದೆ. ಇದರಿಂದಾಗಿ ಕರಿಬೇವಿನ ಎಲೆ ಜತೆಗೆ ಬಳಸಿದಾಗ ಪರಿಣಾಮಕಾರಿ ಫಲಿತಾಂಶ ಸಿಗುವುದು.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಕೂದಲ ಬೆಳವಣಿಗೆ

ಕರಿಬೇವಿನ ಎಲೆಗಳಲ್ಲಿ ನೈಸರ್ಗಿಕ ಕೂದಲಿನ ಬೆಳವಣಿಗೆಯ ಪೋಷಕಾಂಶಗಳು ಇರುವ ಕಾರಣ ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.

ಸ್ವಲ್ಪ ಕರಿಬೇವು ಮತ್ತು ಮೊಸರನ್ನು ತೆಗೆದುಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಕೂದಲಿನ ಬುಡಕ್ಕೂ ಇದನ್ನು ಹಚ್ಚಿ. ವೇಗವಾಗಿ ಫಲಿತಾಂಶ ಬೇಕೆಂದರೆ ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಕೂದಲು ಉದುರುವಿಕೆ ಕಡಿಮೆ ಮಾಡುವುದು

ಕೂದಲು ಉದುರುವಿಕೆ ಕಡಿಮೆ ಮಾಡುವುದು

ಕೂದಲು ತೆಳುವಾಗುವುದನ್ನು ತಡೆಯುವ ಗುಣವಿರುವಂತಹ ಕರಿಬೇವಿನ ಎಲೆಗಳು ಕೂದಲು ಉದುರುವುದನ್ನು ತಡೆಯುವುದು. ಕರಿಬೇವಿನ ಎಲೆಗಳ ಪೇಸ್ಟ್ ಗೆ ಹಾಲು ಹಾಕಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಒಂದು ಅಥವಾ ಎರಡು ಗಂಟೆಗಳ ಕಾಲ ಹಾಗೆ ಬಿಡಿ. ಇದನ್ನು ಬಳಿಕ ತೊಳೆಯಿರಿ. ಕೂದಲು ಉದುರುವಿಕೆ ತಡೆಯಲು ಇದನ್ನು ನಿಯಮಿತವಾಗಿ ಬಳಸಿಕೊಳ್ಳಿ.

ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು

ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುವುದು

ಅಕಾಲಿಕವಾಗಿ ಕೂದಲು ಬಿಳಿಯಾಗಲು ಹಲವಾರು ಕಾರಣಗಳು ಇವೆ. ಕೂದಲಿಗೆ ಅತಿಯಾಗಿ ರಾಸಾಯನಿಕ ಬಳಕೆ, ಒತ್ತಡ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ಕರಿಬೇವಿನ ಎಲಗಳು ಹದಿಹರೆಯದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯುವುದು. ಸ್ವಲ್ಪ ವರ್ಜಿನ್ ಆಲಿವ್ ತೈಲವನ್ನು ಬಿಸಿ ಮಾಡಿ ಮತ್ತು ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ. ಎಣ್ಣೆಯು ನೀಲಿ ಬಣ್ಣಕ್ಕೆ ತಿರುಗಿದಾಗ ತೆಗೆಯಿರಿ. ಇದನ್ನು ಕೂದಲಿಗೆ ಹಚ್ಚಿಕೊಂಡು, 30 ನಿಮಿಷ ಬಿಟ್ಟು ತೊಳೆಯಿರಿ.

ರಾಸಾಯನಿಕ ಚಿಕಿತ್ಸೆ ಪಡೆದ ಕೂದಲಿಗೆ

ರಾಸಾಯನಿಕ ಚಿಕಿತ್ಸೆ ಪಡೆದ ಕೂದಲಿಗೆ

ರಾಸಾಯನಿಕವಾಗಿ ಕೂದಲಿಗೆ ಚಿಕಿತ್ಸೆ ನೀಡಿದರೆ ಅದು ತನ್ನ ಬಲ ಕಳೆದುಕೊಳ್ಳುವುದು. ರಾಸಾಯನಿಕವಾಗಿ ಕೂದಲಿಗೆ ಚಿಕಿತ್ಸೆ ಪಡೆದ ಬಳಿಕ ಅದರ ಸೂಕ್ತ ಆರೈಕೆ ಮಾಡಬೇಕೆಂದು ಕೂದಲಿನ ತಜ್ಞರು ಹೇಳುತ್ತಾರೆ. ಕರಿಬೇವಿನ ಎಲೆಗಳು ಕೂದಲಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಸ್ವಲ್ಪ ತೆಂಗಿನೆಣ್ಣೆ ಬಿಸಿ ಮಾಡಿ ಮತ್ತು ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ. ಎಣ್ಣೆಯಲ್ಲಿ ಕರಿಬೇವಿನ ಎಲೆಗಳು ಸಂಪೂರ್ಣವಾಗಿ ನೆನೆಯಲಿ. ಇದನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ. ಬಳಿಕ ಶಾಂಪೂ ಹಾಕಿ ತೊಳೆಯಿರಿ.

 ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಿ

ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಿ

ಆರೋಗ್ಯಕರ ಹಾಗೂ ಬಲಿಷ್ಠ ಕೂದಲು ಬೇಕೆಂದರೆ ಕೇವಲ ಹೊರಗಿನಿಂದ ಅದರ ಆರೈಕೆ ಮಾಡಿದರೆ ಸಾಲದು. ಹೊರಗಿನಿಂದ ದೇಹದ ಒಳಗೆ ಕೂಡ ಸರಿಯಾದ ಆರೈಕೆ ಬೇಕಾಗಿದೆ. ಕರಿಬೇವಿನ ಎಲೆಗಳ ಹುಡಿ ಅಥವಾ ಕರಿಬೇವಿನ ಎಲೆಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಅದರಿಂದ ಹೆಚ್ಚಿನ ಲಾಭವಿದೆ. ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ ಅದರಿಂದ ಕೂದಲಿಗೆ ಮಾತ್ರವಲ್ಲದೆ ಹಲವಾರು ಆರೋಗ್ಯ ಲಾಭಗಳು ಸಿಗುವುದು. ಪುದೀನಾ ಎಲೆಗಳ ಜತೆ ಬೆರೆಸಿಕೊಂಡು ಇದನ್ನು ಹಸಿಯಾಗಿಯೇ ತಿನ್ನಬಹುದು.

English summary

Home Remedies Using Curry Leaves For Skin And Hair Care

Curry leaves have the required nutrients and vitamins in order to stimulate hair growth and protect our skin and hair from beauty-related issues. Moreover, curry leaves contain antioxidants and amino acids that help reduce hair fall. It also helps reduce premature greying and protects the natural colour of the hair.
X
Desktop Bottom Promotion