ಬ್ಯೂಟಿ ಟಿಪ್ಸ್: ಕೂದಲಿನ ಅಂದ ಚೆಂದ ಹೆಚ್ಚಿಸುವ ರೆಡ್ ವೈನ್

Posted By: Divya pandit Pandit
Subscribe to Boldsky

ವೈನ್ ಎಂದಾಗ ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವುದು ಒಂದು ಬಗೆಯ ಪಾನೀಯ. ಅದನ್ನು ಕುಡಿಯುವುದು ಎಂದರೆ ಸ್ವಲ್ಪ ನಿಷೇಧ ಎನ್ನುವ ವಿಚಾರ ಅನೇಕರ ಮನಸ್ಸಿನಲ್ಲಿದೆ ಎನ್ನಬಹುದು. ಇನ್ನು ಇದರ ಬಳಕೆಯಿಂದ ಆರೋಗ್ಯದ ಆರೈಕೆ ಎಂದರೆ ಅನೇಕರು ತಮ್ಮ ಹುಬ್ಬನ್ನು ಏರಿಸುವ ಸಾಧ್ಯತೆಗಳಿವೆ. ಹೌದು, ಇದು ನಿಮಗೆ ಆಶ್ಚರ್ಯ ಎನಿಸಬಹುದು. ಆದರೆ ಇದು ನಿಜ.

ಸಾಮಾನ್ಯವಾಗಿ ಕೂದಲನ್ನು ಶ್ಯಾಂಪೂ, ಕ್ರೀಮ್, ವಿವಿಧ ಔಷಧಗಳ ಬಳಕೆಯ ಮೂಲಕ ಆರೈಕೆ ಮಾಡುತ್ತೇವೆ. ಇವುಗಳಲ್ಲಿ ಅಡಗಿರುವ ರಾಸಾಯನಿಕ ಪದಾರ್ಥಗಳು ಕೂದಲ ಸಂರಕ್ಷಣೆಯಲ್ಲಿ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಅತಿಯಾದ ಕೂದಲುದುರುವಿಕೆ, ಬಣ್ಣ ಕಳೆದುಕೊಳ್ಳುವುದು, ಒರಟಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ತಲೆದೂರುವವು.

ಆದರೆ ಕೆಂಪು ವೈನ್ ಬಳಕೆಯನ್ನು ಮಾಡಿದರೆ ಕೇಶರಾಶಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂರಕ್ಷಿಸಬಹುದು ಎಂದು ಹೇಳಲಾಗುತ್ತದೆ. ಕೂದಲು ಒಡೆಯುವುದು, ಬಣ್ಣ ಕಳೆದುಕೊಳ್ಳುವುದು, ಮಂಕಾಗುವುದು ಮತ್ತು ಒರಟಾಗುವುದು ಸೇರಿದಂತೆ ಅನೇಕ ಸಮಸ್ಯೆಗಳಿಂದ ರಕ್ಷಣೆ ಪಡೆಯಬಹುದು. ನೀವು ಈ ರೀತಿಯದ್ದೇ ಒಂದು ವಿಶೇಷವಾದ ಆರೈಕೆ ವಿಧಾನವನ್ನು ಹುಡುಕುತ್ತಿದ್ದೀರಿ ಎಂದಾದರೆ ಈ ಮುಂದೆ ಇರುವ ಮಾಹಿತಿಗಳು ನಿಮಗೆ ಹೆಚ್ಚು ಉಪಯುಕ್ತವಾಗುವುದು.

Red Wine

ಕೆಂಪು ವೈನ್ ಮತ್ತು ಮೊಟ್ಟೆ:

ಸಾಮಾಗ್ರಿಗಳು:

- ಅರ್ಧ ಕಪ್ ಕೆಂಪು ವೈನ್.

- 1 ಮೊಟ್ಟೆ.

- 1 ಟೀ ಚಮಚ ಆವಕಾಡೊ ಎಣ್ಣೆ

ವಿಧಾನ:

- ಒಂದು ಬೌಲ್ ಅಲ್ಲಿ ಕೆಂಪು ವೈನ್, ಮೊಟ್ಟೆ, ಆವಕಾಡೊ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ

- ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡಕ್ಕೆ ಅನ್ವಯಿಸಿ, ಮಸಾಜ್ ಮಾಡಿ

- ಬಳಿಕ ಶವರ್ ಕ್ಯಾಪ್ ಧರಿಸಿ, 30 ನಿಮಿಷಗಳ ಕಾಲ ಹೀರಲು ಬಿಡಿ

- ಮೃದುವಾದ ಶ್ಯಾಂಪೂ ಬಳಸಿ ಸ್ವಚ್ಛಗೊಳಿಸಿ

- ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

ಕೆಂಪು ವೈನ್ ಮತ್ತು ಜೇನುತುಪ್ಪ

ಸಾಮಾಗ್ರಿಗಳು:

- ಅರ್ಧ ಕಪ್ ಕೆಂಪು ವೈನ್

- 1 ಟೀ ಚಮಚ ಜೇನುತುಪ್ಪ

- 1 ಮೊಟ್ಟೆಯ ಹಳದಿ ಭಾಗ

- 1 ಬಾಳೆಹಣ್ಣು.

ವಿಧಾನ:

- ಈ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಿಗೆ ರುಬ್ಬಿ, ನಯವಾದ ಪೇಸ್ಟ್ ತಯಾರಿಸಿಕೊಳ್ಳಿ.

- ಕೇಶರಾಶಿಯನ್ನು ಎರಡು ಭಾಗ ಮಾಡಿ, ನಂತರ ಮಿಶ್ರಣವನ್ನು ಕೂದಲ ಬುಡಕ್ಕೆ ಅನ್ವಯಿಸಿ.

- ಶವರ್ ಕ್ಯಾಪ್ ಧರಿಸಿ, 1-2 ಗಂಟೆ ಹೀರಿಕೊಳ್ಳಲು ಬಿಡಿ.

- ಮೃದುವಾದ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಸ್ವಚ್ಛಗೊಳಿಸಿ.

- ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

ಕೆಂಪು ವೈನ್ ಮತ್ತು ಆಪಲ್ ಸೈಡರ್ ವಿನೆಗರ್:

ಸಾಮಾಗ್ರಿಗಳು:

- 1 ಕಪ್ ಕೆಂಪು ವೈನ್

- 1/4 ಕಪ್ ಆಪಲ್ ಸೈಡರ್ ವಿನೆಗರ್

ವಿಧಾನ:

- ಕೆಂಪು ವೈನ್ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.

- ಒಂದು ರಾತ್ರಿ ಅಥವಾ ಕೆಲವು ಗಂಟೆಗಳ ನೆನೆಯಲು ಬಿಡಿ.

- ಮಿಶ್ರಣವನ್ನು ಕೇಶರಾಶಿಗೆ ಅನ್ವಯಿಸಿ, 15 ನಿಮಿಷಗಳ ಕಾಲ ಬಿಡಿ.

- ಮೃದುವಾದ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಸ್ವಚ್ಛಗೊಳಿಸಿ.

- ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

Red Wine

 ಕೆಂಪು ವೈನ್ ಮತ್ತು ಶಾಂಪೂ

ಸಾಮಾಗ್ರಿಗಳು:

- 1, 1/2 ಕಪ್ ಕೆಂಪು ವೈನ್

- 1 ಕಪ್ ಶಾಂಪೂ

ವಿಧಾನ:

- ಕೆಂಪು ವೈನ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ, 15 ನಿಮಿಷ ಕುದಿಸಿ.

- ತಣ್ಣಗಾದ ಬಳಿಕ 1 ಕಪ್ ಶ್ಯಾಂಪೂ ಬೆರೆಸಿ.

- ಮಿಶ್ರಣವನ್ನು ಕೇಶರಾಶಿಗೆ ಅನ್ವಯಿಸಿ, ಸ್ವಲ್ಪ ಸಮಯ ಬಿಡಿ.

- ಮೃದುವಾದ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಸ್ವಚ್ಛಗೊಳಿಸಿ.

5. ಕೆಂಪು ವೈನ್ ಮತ್ತು ಸ್ಟ್ರಾಬೆರ್ರಿ:

ಸಾಮಾಗ್ರಿಗಳು:

- 1 ಕಪ್ ಕೆಂಪು ವೈನ್

- 3-4 ಹಣ್ಣಾದ ಸ್ಟ್ರಾಬೆರ್ರಿ ಹಣ್ಣು

ವಿಧಾನ:

- ಕಿವುಚಿದ ಸ್ಟ್ರಾಬೆರ್ರಿ ಹಣ್ಣು ಮತ್ತು 1 ಕಪ್ ಕೆಂಪು ವೈನ್ ಸೇರಿಸಿ, ಪೇಸ್ಟ್ ನಂತೆ ಮಾಡಿ.

- ಮಿಶ್ರಣವನ್ನು ಕೇಶರಾಶಿಗೆ ಅನ್ವಯಿಸಿ, ಮೃದುವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ.

- 20 ನಿಮಿಷಗಳ ಬಳಿಕ ಮೃದುವಾದ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಸ್ವಚ್ಛಗೊಳಿಸಿ.

- ವಾರದಲ್ಲಿ ಒಮ್ಮೆ ಈ ಕ್ರಮವನ್ನು ಅನ್ವಯಿಸುವುದರಿಂದ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

ಯುವಿ ಕಿರಣದಿಂದ ರಕ್ಷಿಸಿ: 

ಈ ಮೇಲೆ ಹೇಳಲಾದ ಎಲ್ಲಾ ವಿಧಾನಗಳನ್ನು ನೀವು ಅನ್ವಯಿಸಿರುವಾಗ ಸೂರ್ಯನ ಕಿರಣಗಳಿಗೆ ಅಥವಾ ಯುವಿ ಕಿರಣಕ್ಕೆ ಹೋಗದಿರಿ. ಸೂರ್ಯನ ಕಿರಣಕ್ಕೆ ಹೋಗದೆ ಇದ್ದರೆ ಕೂದಲು ಹೊಳಪು ಹಾಗೂ ಆರೋಗ್ಯಕರವಾಗಿರುತ್ತದೆ.

English summary

Hair Care Benefits Of Red Wine

Drinking about a half a glass of red wine a day can help with the circulation of your blood, making sure your scalp gets proper circulation. This makes sure that your head is healthy and designed to offer the best growth to your hair. So, let's see how you can use red wine for your hair with some homemade remedies.