For Quick Alerts
ALLOW NOTIFICATIONS  
For Daily Alerts

ತಲೆ ಸ್ನಾನ ಮಾಡುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ

By Sushma Charhra
|

ಕೂದಲು ತೊಳೆಯುವುದು ನಾವೆಲ್ಲರೂ ತಿಳಿದಿರುವ ಒಂದು ಸಾಮಾನ್ಯ ದಿನಚರಿ. ಉತ್ತಮ ರೀತಿಯಲ್ಲಿ ತಲೆ ಸ್ನಾನ ಮಾಡುವುದು ಕೇವಲ ದೈಹಿಕವಾಗಿ ನಿಮ್ಮನ್ನು ತಾಜಾವಾಗಿ ಇಡುವುದು ಮಾತ್ರವಲ್ಲ ಬದಲಾಗಿ ಮಾನಸಿಕವಾಗಿಯೂ ನೀವು ಉಲ್ಲಸಿತರಾಗಿ ಇರಲು ಕಾರಣವಾಗುತ್ತದೆ. ಆದರೆ ನಿಮಗೆ ಗೊತ್ತಾ, ನಾವು ತಲೆ ಸ್ನಾನ ಮಾಡುವಾಗ ಅಭ್ಯಾಸ ಮಾಡಿಕೊಂಡಿರುವ ಕೆಲವು ಕ್ರಮಗಳು ನಮ್ಮ ಕೂದಲಿಗೆ ಹೆಚ್ಚಿನ ಹಾನಿಯನ್ನು ಮಾಡಬಲ್ಲವು ಎಂಬ ಬಗ್ಗೆ ನಿಮಗೆ ತಿಳಿದಿದೆಯಾ?

ಹಾಗಾಗಿ, ಕೆಲವು ಸಲಹೆಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಸೂಕ್ತ ಮತ್ತು ಮುಂದಿನ ಬಾರಿ ನೀವು ತಲೆ ಸ್ನಾನ ಮಾಡುವಾಗ ನಿಮ್ಮ ತಲೆ ಕೂದಲು ಹಾಳಾಗದಂತೆ ಆರೋಗ್ಯಕರವಾಗಿ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.

hair careless in kannada

ಕಂಡೀಷನರ್ ಅಪ್ಲೈ ಮಾಡಿಕೊಳ್ಳುವುದು ಹೇಗೆ? ಎಷ್ಟು ದಿನಗಳಿಗೊಮ್ಮೆ ನಿಮ್ಮ ಕೂದಲನ್ನು ತೊಳೆಯುವುದು ಸೂಕ್ತ? ಇವೆಲ್ಲವೂ ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುವ ಸಾಮಾನ್ಯ ಪ್ರಶ್ನೆಗಳಾಗಿವೆ. ಹಾಗಾದ್ರೆ ನಿಜಕ್ಕೂ ನಿಮ್ಮ ತಲೆ ಸ್ನಾನ ಮಾಡುವುದಕ್ಕೆ ಕೆಲವು ಸಲಹೆಗಳು ಇರುತ್ತವೆಯಾ? ಹಾಗಿದ್ದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಖಂಡಿತವಾಗಿಯೂ ಹೌದು. ಒಂದು ವೇಳೆ, ಈ ಸಮಯದ ವರೆಗೂ ನೀವು ಅದನ್ನು ತಿಳಿದುಕೊಂಡಿಲ್ಲವಾದರೆ, ಚಿಂತಿಸಬೇಡಿ.. ಈ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಮತ್ತು ಕೆಲವು ಸಲಹೆಗಳನ್ನೂ ನೀಡಲಿದ್ದೇವೆ. ಆ ಮೂಲಕ ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಿಕೊಳ್ಳಲು ನೆರವು ನೀಡಲಿದ್ದೇವೆ.

ಹಾಗಾದರೆ, ನೀವು ಮುಂದಿನ ಬಾರಿ ಸ್ನಾನ ಮಾಡುವಾಗ ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಿ ಮತ್ತು ಯಾವುದೇ ಕಾರಣಕ್ಕೂ ನೀವು ಎಲ್ಲಿಯೂ ತಪ್ಪೆಸಗಲು ಸಾಧ್ಯವಾಗುವುದಿಲ್ಲ. ಇಲ್ಲಿದೆ ನೋಡಿ ಸ್ನಾನ ಮಾಡಲು ನೀವು ಪಾಲಿಸಬೇಕಾದ ಕೆಲವು ಸಲಹೆಗಳು.. ಹಾಗಾಗಿ ನೀವು ಮುಂದಿನ ಬಾರಿ ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಬೇಡಿ.. ಮುಂದೆ ಓದಿ..

ಬಿಸಿಯಾದ ನೀರನ್ನು ಬಳಸಬೇಡಿ

ಬಿಸಿಯಾದ ನೀರಿನಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳುವುದು ಅಷ್ಟು ಸೂಕ್ತವಲ್ಲ, ಅದರಲ್ಲೂ ಪ್ರಮುಖವಾಗಿ ನಿಮ್ಮ ಸ್ನಾನದ ಕೊನೆಯ ಹಂತದಲ್ಲಿ ಹೀಗೆ ಮಾಡುವುದು ಬಹಳ ಅಹಿತವಾದದ್ದು. ಯಾಕೆಂದರೆ ನೈಸರ್ಗಿಕವಾಗಿರುವ ಎಣ್ಣೆಯ ಅಂಶವನ್ನು ನಿಮ್ಮ ಸ್ಕಾಲ್ಪ್ ನಿಂದ ತೆಗೆದುಹಾಕುವ ಸಾಧ್ಯತೆಗಳು ಹೆಚ್ಚಿರುತ್ತದೆ.ಇದು ನಿಮ್ಮ ಕೂದಲನ್ನು ಹೆಚ್ಚು ಕಳಾಹೀನ ಮತ್ತು ಒರಟಾಗುವಂತೆ ಮಾಡುತ್ತದೆ. ಶಾಂಪೂ ಮತ್ತು ಕಂಡೀಷನಿಂಗ್ ಮಾಡಿದ ಕೂಡಲೇ ನೀವು ಯಾವಾಗಲೂ ಈ ವಿಚಾರವನ್ನು ಆದಷ್ಟು ನೆನಪಿನಲ್ಲಿಡುವುದು ಒಳಿತು . ತಣ್ಣನೆಯ ನೀರು ನಿಮ್ಮ ಸ್ಕಾಲ್ಪ್ ನಲ್ಲಿ ಮಾಯ್ಚರ್ ಉಳಿಯುವಂತೆ ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಟೆಕ್ಚರ್ ಕಾಪಾಡಲು ಇದು ಸಹಾಯಕವಾಗಿರುತ್ತದೆ.

ಕೂದಲನ್ನು ಒಮ್ಮೆ ತೊಳೆಯಿರಿ

ನಿಮ್ಮ ಕೂದಲಿಗೆ ಶಾಂಪೂ ಮಾಡುವ ಮೊದಲು ಒಮ್ಮೆ ಕೂದಲನ್ನು ನೀರಿನಿಂದ ತೊಳೆದುಕೊಳ್ಳುವುದು ಬಹಳ ಒಳ್ಳೆಯದು. ಒದ್ದೆ ಕೂದಲಿಗೆ ಶಾಂಪೂ ಹಚ್ಚುವುದು ಹಿತವಾದದ್ದಾಗಿದೆ. ಈ ಹಂತಕ್ಕಾಗಿ ನೀವು ಹದವಾಗಿ ಬೆಚ್ಚಗಿರುವ ನೀರನ್ನು ಆಯ್ಕೆ ಮಾಡಬಹುದು. ಇದರಿಂದಾಗಿ ನಿಮ್ಮ ಕೂದಲಿನ ಸ್ಕಾಲ್ಪ್ ನ ಮಾಯ್ಚರ್ ಕಾಪಾಡಿಕೊಳ್ಳುತ್ತೆ ಮತ್ತು ಹೈಡ್ರೇಟ್ ಆಗಿರಲು ನೆರವಾಗುತ್ತದೆ ಅಷ್ಟೇ ಅಲ್ಲ, ಕೂದಲು ತುಂಡಾಗುವಿಕೆಯೂ ಕಡಿಮೆಯಾಗುತ್ತದೆ.

ಪ್ರತಿ ದಿನ ನಿಮ್ಮ ಕೂದಲನ್ನು ತೊಳೆಯಬೇಡಿ

ಎಸ್, ಪ್ರತಿ ದಿನ ಕೂದಲು ತೊಳೆಯುವುದರಿಂದಾಗಿ ಕೂದಲು ಸ್ವಚ್ಛವಾಗಿರುತ್ತದೆ ಮತ್ತು ಆರೋಗ್ಯವಾಗಿರುತ್ತದೆ ಎಂಬುದೊಂದು ಸುಳ್ಳು ನಂಬಿಕೆಯಾಗಿದೆ. ಇದೊಂದು ಸತ್ಯಕ್ಕೆ ದೂರವಾದ ವಿಚಾರ. ಕೂದಲನ್ನು ತೊಳೆಯುವುದರಿಂದಾಗಿ ನಿಮ್ಮ ಕೂದಲು ಸ್ವಚ್ಛವಾಗುತ್ತದೆ ಎಂಬುದು ಸತ್ಯವೇ ಆದರೆ ಅದು ಪ್ರತಿದಿನ ಅಲ್ಲ ಎಂಬುದು ಚೆನ್ನಾಗಿ ನೆನಪಿರಲಿ.ನಿಜ ಹೇಳಬೇಕೆಂದರೆ, ಪ್ರತಿ ದಿನ ಕೂದಲನ್ನು ತೊಳೆಯುವುದರಿಂದಾಗಿ ನಿಮ್ಮ ಸ್ಕಾಲ್ಪ್ ನ ಎಣ್ಣೆಯ ಅಂಶ ಹೊರಟು ಹೋಗುತ್ತದೆ ಮತ್ತು ವಾರಕ್ಕೆ ಮೂರು ಬಾರಿ ನೀವು ಕೂದಲನ್ನು ತೊಳೆಯುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯ ಕ್ರಮವಾಗಿದೆ.

ಹುರುಪಿನಿಂದ ಕೂದಲನ್ನು ಒಣಗಿಸಲು ಪ್ರಯತ್ನಿಸಬೇಡಿ

ಕೂದಲನ್ನು ಸ್ನಾ ಆದ ಕೂಡಲೇ ಹುರುಪಿನಿಂದ, ಟವೆಲ್ ಬಳಸಿ ಒಣಗಿಸಲು ಪ್ರಯತ್ನಿಸುವುದರಿಂದಾಗಿ ನಿಮ್ಮ ಕೂದಲು ಹಾಳಾಗುವ ಸಾಧ್ಯತೆಗಳಿರುತ್ತದೆ. ಇದು ನಿಮ್ಮ ಕೂದಲು ಹೆಚ್ಚು ಡ್ರೈ ಆಗುವಂತೆ ಮಾಡುತ್ತದೆ ಯಾಕೆಂದರೆ ಕೂದಲು ಒಣಗಿಸಲು ಬಳಸುವ ಟವೆಲ್ ಕೂಡ ಡ್ರೈ ಆಗಿಯೇ ಇರುತ್ತದೆ. ಹಾಗಾಗಿ ಕೂದಲಿನಲ್ಲಿರುವ ಹೆಚ್ಚಿನ ನೀರಿನಂಶವನ್ನು ನಿಧಾನವಾಗಿ ಒಣಗಿಸಿ, ಮೃದುವಾಗಿರುವ ಟವೆಲ್ ಬಳಕೆ ಮಾಡಿ, ಆ ಮೂಲಕ ನಿಮ್ಮ ಸ್ಕಾಲ್ಪ್ ಮತ್ತು ಕೂದಲಿಗೆ ನೀವು ಕಠಿಣವಾಗಬೇಡಿ.

ಹೆಚ್ಚು ಸಮಯ ಶವರ್ ಗೆ ಕೆಳಗೆ ನಿಂತಿರುವುದು

ಹೆಚ್ಚು ಸಮಯ ಶವರ್ ಕೆಳಗೆ ನಿಂತಿರುವುದು ಹೆಚ್ಚಿನವರಿಗೆ ಇಷ್ಟವಾಗುವ ಕೆಲಸವೇ. ದೀರ್ಘವಾದ ಪ್ರಯಾಸದ ದಿನವನ್ನು ಕಳೆದ ನಂತರ, ಈ ರೀತಿ ಮಾಡುವುದು ದೇಹಕ್ಕೆ ಮತ್ತು ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತದೆ.ಆದರೆ ಕೆಲವು ತಜ್ಞರು ತಿಳಿಸಿರುವಂತೆ, 10 ನಿಮಿಷಕ್ಕೂ ಅಧಿಕ ಕಾಲ ಶವರ್ ನ ಕೆಳಗೆ ನಿಂತರೆ ಕೂದಲು ಹಾಳಾಗುವ ಸಾಧ್ಯತೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಶವರ್ ನ ಕೆಳಗೆ ಇನ್ನಷ್ಟು ಸಮಯ ನಿಂತಿರಬೇಕು ಎಂದು ನಿಮಗೆ ಆಸೆಯಾದರೂ ಕೂಡ ಅದನ್ನು ಇನ್ನು ಮುಂದೆ ಸ್ವಲ್ಪ ತಡೆಹಿಡಿಯಲು ಪ್ರಯತ್ನಿಸಿ.

ಸ್ಕಾಲ್ಪ್ ಗೆ ಕಂಡೀಷನರ್ ಬಳಸಬೇಡಿ

ಬಹುಶ್ಯ ಇದನ್ನು ಹೆಚ್ಚಿನವರು ಹೇಳಿರುವುದನ್ನು ಕೇಳಿರಬಹುದು.ಎಸ್, ಅದು ನಿಜಕ್ಕೂ ಸರಿಯಾದ ಸಲಹೆಯೇ ಆಗಿದೆ. ಕಂಡಿಷನರ್ ಬಳಕೆ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮ ಸ್ಕಾಲ್ಪ್ ಭಾಗಕ್ಕೆ ಅದನ್ನು ಹಚ್ಚಿಕೊಳ್ಳಬೇಡಿ. ಒಂದು ವೇಳೆ ಹಾಗೆ ಮಾಡಿದರೆ, ಸ್ಕಾಲ್ಪ್ ನ ರಂಧ್ರಗಳನ್ನು ಈ ಕಂಡೀಷನರ್ ಗಳು ಮುಚ್ಚಿ ಬಿಡುವ ಸಾಧ್ಯತೆಗಳಿರುತ್ತದೆ ಮತ್ತು ಇದು ಕೂದಲಿನ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ.ಅಷ್ಟೇ ಅಲ್ಲ, ಇದು ಅತಿಯಾಗಿ ಕೂದಲು ಉದುರುವಿಕೆ ಸಮಸ್ಯೆಯನ್ನೂ ಉಂಟು ಮಾಡಿ ಬಿಡುತ್ತದೆ. ಹಾಗಾಗಿ ಮುಂದಿನ ಬಾರಿ ಕಂಡೀಷನರ್ ಹಚ್ಚಿಕೊಳ್ಳುವಾಗ, ಸರಿಯಾದ ಕ್ರಮದಲ್ಲಿ ಹಚ್ಚಿಕೊಂಡಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ

ಡಿಟ್ಯಾಂಗಲಿಂಗ್

ನಿಮ್ಮ ಕೂದಲು ತೊಳೆದಂತೆಯೇ ಡಿಟ್ಯಾಂಗಲಿಂಗ್ ಕೂಡ ಬಹಳ ಮುಖ್ಯವಾದದ್ದು. ಸ್ನಾನ ಮಾಡಿದ ಕೂಡಲೇ ಕೂದಲು ಬಾಚಿಕೊಳ್ಳುವುದರಿಂದಾಗಿ ನಿಮಗೆ ಅತಿಯಾಗಿ ಕೂದಲುದುರಿದಂತೆ ಭಾಸವಾಗಬಹುದು.ಯಾಕೆಂದರೆ ಆರ್ದ್ರ ಕೂದಲು ಬೇಗನೆ ಮುರಿದುಹೋಗುವ ಸಾಧ್ಯತೆಗಳಿರುತ್ತದೆ. ತಲೆ ಸ್ನಾನವಾದ ಕೂಡಲೇ ತಲೆ ಬಾಚುವುದರಿಂದಾಗಿ ಅತಿಯಾಗಿ ಕೂದಲು ಕಳೆದುಕೊಳ್ಳಬೇಕಾಗಬಹುದು. ನಿಮ್ಮ ಕೂದಲನ್ನು ಬಾಚಿಕೊಳ್ಳುವ ಮುನ್ನ ಅರ್ಧವಾದರೂ ಕೂದಲು ಒಣಗಿರುವುದು ಒಳ್ಳೆಯದು. ಅಗಲ ಹಲ್ಲಿನ ಬಾಚಣಿಗೆಯಲ್ಲಿ ಕೂದಲು ಬಾಚುವುದನ್ನು ಮರೆಯಬೇಡಿ. ಒಂದು ವೇಳೆ ನೀವು ರೋಲರ್ ರೀತಿಯ ಬಾಚಣಿಗೆಯನ್ನು ಬಳಸುತ್ತೀರಾದರೆ, ಅತೀ ಹೆಚ್ಚು ಕೂದಲು ಉದುರುತ್ತದೆ ನೆನಪಿರಲಿ.

ಬ್ಲೋ ಡ್ರೈಯರ್ ಬಳಸುವುದು ಆದಷ್ಟು ತಪ್ಪಿಸಿ

ನಾವು ಯಾವಾಗಲೂ ಗಡಿಬಿಡಿಯಲ್ಲೇ ಇರುತ್ತದೆ. ಕಾಲೇಜಿಗೋ ಅಥವಾ ಆಫೀಸಿಗೋ ನಮ್ಮದು ವೇಗದ ಜೀವನ. ಅದರ ಫಲಿತಾಂಶ, ನಮ್ಮ ಕೂದಲನ್ನು ಒಣಗಿಸಲು ನಾವು ಬ್ಲೋ ಡ್ರೈಯರ್ ನ್ನು ಬಳಸುತ್ತೇವೆ. ಆದರೆ ನಿಮಗೆ ಗೊತ್ತಾ ಇದೆಷ್ಟು ಕೆಟ್ಟ ಪರಿಣಾಮವನ್ನುಂಟು ಮಾಡಬಲ್ಲದು ಎಂಬ ಬಗ್ಗೆ? ಹೀಗೆ ಮಾಡುವುದರಿಂದಾಗಿ ಕೂದಲು ಮತ್ತಷ್ಟು ಶುಷ್ಕವಾಗುತ್ತದೆ ಮತ್ತು ಹಾಳಾಗುತ್ತದೆ. ಆದಷ್ಟು ಬ್ಲೋ ಡ್ರೈಯರ್ ಬಳಸುವುದನ್ನು ತಪ್ಪಿಸಿ.ಒಂದು ವೇಳೆ ಇದು ಅಗತ್ಯವೇ ಆಗಿದ್ದಲ್ಲಿ, ನೀವು ಅದನ್ನು ತಣ್ಣನೆಯ ಮೋಡ್ ನಲ್ಲಿಯೇ ಬಳಕೆ ಮಾಡಿ..

English summary

Follow These Showering Tips For Healthy Hair

Showering is one of the important daily routine that we all practice. A good shower not only helps in remaining fresh physically but also plays an important role in relaxing our minds. But have you ever thought that some practices that we follow while washing our hair can damage it even more? So, it is better to keep some points or tips in mind, the next time you wash your hair in order to have a damage-free healthy hair.
Story first published: Friday, June 15, 2018, 13:05 [IST]
X
Desktop Bottom Promotion