ಮನೆಯಲ್ಲೇ ತಯಾರಿಸಬಹುದಾದ ಕೂದಲಿನ ಕಂಡೀಷನರ್‌ಗಳು

Posted By: Lekhaka
Subscribe to Boldsky

ಒಣ ಹಾಗೂ ತೆಳುವಾಗುವಂತಹ ಕೂದಲಿಗೆ ಕಾರಣ ಏನು ಎಂದು ನಿಮಗೆ ಹಲವಾರು ಬಾರಿ ಅನಿಸಿರಬಹುದು. ಆದರೆ ಇದಕ್ಕೆ ನೀವು ಬಳಸುವಂತಹ ಶಾಂಪೂ ಹಾಗೂ ಕಂಡೀಷನರ್ ಕೂಡ ಕಾರಣವೆನ್ನಬಹುದು. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ರಾಸಾಯನಿಕಗಳು ಅಡಗಿವೆ. ಇದನ್ನು ದಿನನಿತ್ಯ ಬಳಸುವ ಕಾರಣದಿಂದ ಕೂದಲು ಕೂಡ ತನ್ನ ನೈಸರ್ಗಿಕ ಸತ್ವ ಕಳಕೊಳ್ಳುವುದು. ಕೂದಲು ತುಂಡಾಗದಂತೆ ಮತ್ತು ಅವುಗಳ ಬುಡಗಳು ಬಲಿಷ್ಠವಾಗುವಂತೆ ಮಾಡಲು ಹಲವಾರು ರೀತಿಯ ನೈಸರ್ಗಿಕ ಕೂದಲಿನ ಕಂಡೀಷನರ್‌ಗಳು ಇವೆ.

ಇವುಗಳನ್ನು ಬಳಸಿಕೊಂಡರೆ ಕೂದಲು ಕಾಂತಿ ಪಡೆಯುವುದು ಮಾತ್ರವಲ್ಲದೆ ಆರೋಗ್ಯಕರ ಹಾಗೂ ನಯವಾಗುವುದು. ಇದು ಕೂದಲು ಉದುರುವುದನ್ನು ತಡೆಯುವುದು. ಇಂದಿನ ತುಂಬಾ ವೇಗದ ಜೀವನದಲ್ಲಿ 30ರ ಹರೆಯದಲ್ಲೇ ಕೂದಲು ಉದುರಲು ಆರಂಭವಾಗುವುದು. ಇದಕ್ಕೆ ಪ್ರಮುಖ ಕಾರಣ ಹಾರ್ಮೋನುಗಳಲ್ಲಿ ಬದಲಾವಣೆ, ಅನಾರೋಗ್ಯಕರ ಆಹಾರ ಮತ್ತು ಒತ್ತಡ. ಇದೆಲ್ಲವನ್ನು ಸರಿಪಡಿಸಲು ಕೆಲವೊಂದು ನೈಸರ್ಗಿಕ ಕೂದಲಿನ ಕಂಡೀಷನರ್‍‌ಗಳನ್ನು ಬಳಸಿಕೊಳ್ಳಬೇಕು. ಮನೆಯಲ್ಲೇ ನೀವು ಕೆಲವು ಕಂಡೀಷನರ್ ತಯಾರಿಸಿಕೊಂಡು ಬಳಸಬಹುದು. ಕಂಡೀಷನರ್‌ಗಳ ತಯಾರಿ ಮತ್ತು ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.... 

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಸಲ್ಫರ್ ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ಕೂದಲಿನ ಬೆಳವಣಿಗೆ ಯಾಗುವುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಸಲ್ಫರ್ ಯಥೇಚ್ಛವಾಗಿದೆ. ಇದರಿಂದಾಗಿ ಇವುಗಳನ್ನು ಹಿಂದಿನಿಂದಲೂ ಕೂದಲಿಗೆ ಕಂಡೀಷನರ್ ಆಗಿ ಬಳಸಿ ಕೊಳ್ಳಲಾಗುತ್ತಿದೆ. ಈರುಳ್ಳಿ ರಸ ತೆಗೆದು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಳ ಹಾಗೆ ಬಿಡಿ. ಬಳಿಕ ಶಾಂಪೂವಿನಿಂದ ಕೂದಲು ತೊಳೆಯಿರಿ. ಸಣ್ಣಗೆ ಹಚ್ಚಿಕೊಂಡಿರುವ ಬೆಳ್ಳುಳ್ಳಿಯನ್ನು ತೆಂಗಿನೆಣ್ಣೆಗೆ ಹಾಕಿ ಮತ್ತು ಕೆಲವು ನಿಮಿಷ ಬಿಸಿ ಮಾಡಿ. ತಣ್ಣಗಾದ ಬಳಿಕ ತಲೆಬುರುಡೆಗೆ ಹಚ್ಚಿರಿ.

ತೆಂಗಿನಕಾಯಿ ಹಾಲು

ತೆಂಗಿನಕಾಯಿ ಹಾಲು

ಒಣ ಕೂದಲಿಗೆ ಇದು ಅತ್ಯುತ್ತಮವಾದ ನೈಸರ್ಗಿಕ ಮನೆಮದ್ದು. ತೆಂಗಿನಕಾಯಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡಿ ಕೂದಲಿನ ಬೆಳವಣಿಗೆಗೆ ನೆರವಾಗುವುದು. ತೆಂಗಿನಕಾಯಿಯಲ್ಲಿರುವ ಪ್ರೋಟೀನ್, ಖನಿಜಾಂಶ ಮತ್ತು ಇತರ ಸಾರಭೂತ ಕೊಬ್ಬು ಕೂದಲು ತುಂಡಾಗದಂತೆ ತಡೆಯುವುದು. ಕೂದಲಿನ ಕೋಶ ಹಾಗೂ ಬುಡ ಬಲಪಡಿಸುವಂತಹ ಅಂಶಗಳು ಕೂಡ ತೆಂಗಿನಕಾಯಿಯಲ್ಲಿದೆ. ನಿಯಮಿತವಾಗಿ ಇದರ ಬಳಕೆ ಮಾಡುವುದರಿಂದ ಕೂದಲು ಬಲಗೊಳ್ಳುವುದು ಮತ್ತು ಕೂದಲು ಉದುರುವುದು ತಪ್ಪುವುದು. ತೆಂಗಿನಕಾಯಿ ಹಾಲು ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ. ಇದನ್ನು ಕೂದಲಿಗೆ ಹಚ್ಚಿ. ಬಳಿಕ ನೀರಿನಿಂದ ತೊಳೆಯಿರಿ.

ಮದರಂಗಿ ಮತ್ತು ಸಾಸಿವೆ ಎಣ್ಣೆ

ಮದರಂಗಿ ಮತ್ತು ಸಾಸಿವೆ ಎಣ್ಣೆ

ಒಣ ಕೂದಲಿಗೆ ಇದು ತುಂಬಾ ಒಳ್ಳೆಯ ಹಾಗೂ ನೈಸರ್ಗಿಕ ಕಂಡೀಷನರ್. ಆದರೆ ನೀವು ಶುದ್ಧ ಮದರಂಗಿ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಮದರಂಗಿಯಲ್ಲಿ ರಾಸಾಯನಿಕದ ಮಿಶ್ರಣವಿರುವುದು. ಇದರಿಂದ ಕೂದಲಿಗೆ ಹಾನಿಯಾಗಬಹುದು. ಮದರಂಗಿಯು ನೈಸರ್ಗಿಕ ಕೂದಲಿನ ಕಂಡೀಷನರ್. ಕೂದಲಿಗೆ ಕಂಡೀಷನ್ ನೀಡಲು ಎರಡು ಗಂಟೆ ಕಾಲ ಇದನ್ನು ಹಚ್ಚಿಕೊಳ್ಳಿ. ಇದು ನೈಸರ್ಗಿಕವಾಗಿ ಕೂದಲಿಗೆ ಬಲ ನೀಡುವುದು ಮಾತ್ರವಲ್ಲದೆ ಕೂದಲಿನ ಬಣ್ಣ ಕಾಪಾಡುವುದು. ಇದನ್ನು ಸಾಸಿವೆ ಎಣ್ಣೆ ಅಥವಾ ಆಲಿವ್ ತೈಲದೊಂದಿಗೆ ಸೇರಿಸಿ ಹಚ್ಚಿಕೊಂಡಾಗ ಹೆಚ್ಚಿನ ಲಾಭ ಸಿಗುವುದು.

ದಾಸವಾಳ

ದಾಸವಾಳ

ಕೆಲವು ದಾಸವಾಳದ ಹೂಗಳನ್ನು ತೆಗೆದುಕೊಂಡು ಜಜ್ಜಿಕೊಳ್ಳಿ ಮತ್ತು ಇದಕ್ಕೆ ತೆಂಗಿನೆಣ್ಣೆ ಹಾಕಿ ಪೇಸ್ಟ್ ಮಾಡಿ. ಕೂದಲಿಗೆ ಇದನ್ನು ಹಚ್ಚಿಕೊಂಡು ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಬಳಸಿ ತೊಳೆಯಿರಿ. ದಾಸವಾಳ ಮತ್ತು ತೆಂಗಿನೆಣ್ಣೆಯು ಕೂದಲಿಗೆ ಬಲ ನೀಡಿ ಕಂಡೀಷನ್ ಮಾಡುವುದು. ದಾಸವಾಳದಲ್ಲಿ ಇರುವಂತಹ ಹಲವಾರು ಪುನರುಜ್ಜೀವನಗೊಳಿಸುವ ಗುಣಗಳು ಕೂದಲಿಗೆ ಪೋಷಣೆ ನೀಡುವುದು. ಇದು ತಲೆಹೊಟ್ಟು ನಿವಾರಣೆ ಮಾಡಿ ಕೂದಲು ಬಿಳಿಯಾಗದಂತೆ ತಡೆಯುವುದು. ನಿಯಮಿತವಾಗಿ ಬಳಸಿದರೆ ಕೂದಲು ಉದುರುವುದನ್ನು ತಡೆಯಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಕೂದಲು ಉದುರುವ ಸಮಸ್ಯೆಗೆ ತುಂಬಾ ಪರಿಣಾಮಕಾರಿ. ಇದು ಕೂದಲಿಗೆ ಕಾಂತಿ ನೀಡಿ ಕಂಡೀಷನ್ ಮಾಡುವುದು. ನೆಲ್ಲಿಕಾಯಿ ತಿರುಳನ್ನು ಜಜ್ಜಿಕೊಂಡು ಅದನ್ನು ಲಿಂಬೆ ಜತೆ ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಒಣಗಳು ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಒಣ ಕೂದಲಿಗೆ ನೆಲ್ಲಿಕಾಯಿಯು ತುಂಬಾ ಪರಿಣಾಮಕಾರಿ ಕಂಡೀಷನರ್.

ಮೊಟ್ಟೆ

ಮೊಟ್ಟೆ

ಮೊಟ್ಟೆಯ ಬಿಳಿ ಭಾಗವನ್ನು ಆಲಿವ್ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ ಬಳಿಕ ತಣ್ಣೀರಿನಿಂದ ಕೂದಲು ತೊಳೆಯಿರಿ. ಮೊಟ್ಟೆ ಅತ್ಯುತ್ತಮ ಕಂಡೀಷನರ್ ಆಗಿದೆ. ಇದರಿಂದ ಕೂದಲು ತುಂಬಾ ನಯ ಹಾಗೂ ಆರೋಗ್ಯವಾಗಿರುವುದು. ಮೊಟ್ಟೆಯಲ್ಲಿ ಅಗಾಧ ಪ್ರಮಾಣದ ಸಲ್ಫರ್ ಮತ್ತು ಇತರ ಖನಿಜಾಂಶಗಳಾದ ಕಬ್ಬಿಣ,ಪೋಸ್ಪರಸ್, ಸತು, ಸೆಲೆನಿಯಂ ಮತ್ತು ಐಯೋಡಿನ್ ಇದೆ. ಈ ಖನಿಜಾಂಶಗಳನ್ನು ಆಲಿವ್ ತೈಲದೊಂದಿಗೆ ಬೆರೆಸಿದಾಗ ಕೂದಲಿನ ಬೆಳವಣಿಗೆಗೆ ಸಹಕಾರಿ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಒಂದು ಅದ್ಭುತವಾದ ಹೇರ್ ಕಂಡೀಷನರ್, ಈ ಹಣ್ಣು ನಿಮ್ಮ ಕೂದಲನ್ನು ಮತ್ತಷ್ಟು ಮೃದುಗೊಳಿಸಿ, ಗಟ್ಟಿಮುಟ್ಟುಗೊಳಿಸುತ್ತದೆ. ಬಾಳೆ ಹಣ್ಣಿಗೆ ಸ್ವಲ್ಪ ಜೇನು ತುಪ್ಪ, ಗ್ಲಿಸರಿನ್ ಮತ್ತು ಆಲೀವ್ ಎಣ್ಣೆಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲಿಗೆ ಮೊಯಿಶ್ಚರೈಸರಿನಂತೆ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನ ಮಾಸ್ಕ್ ನಿಮ್ಮ ಕೂದಲನ್ನು ಮತ್ತಷ್ಟು ಮೃದುಗೊಳಿಸುತ್ತದೆ. ಇದಕ್ಕಾಗಿ ಬಾಳೆಹಣ್ಣನ್ನು ಚೆನ್ನಾಗಿ ಜಜ್ಜಿ ಲೇಹ್ಯದ ರೀತಿ ತಯಾರು ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, 30-45 ನಿಮಿಷ ಬಿಡಿ, ನಂತರ ಇದನ್ನು ತೆಳುವಾದ ಶಾಂಪೂನಿಂದ ಸ್ವಚ್ಛಗೊಳಿಸಿ. ನಿಮ್ಮ ಕೂದಲು ಕಂಡೀಷನ್ ಆಗಿದೆ ಎಂದು ಅನಿಸಿದಾಗ ತೊಳೆಯುವುದನ್ನು ನಿಲ್ಲಿಸಿ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ನಮ್ಮ ಕೂದಲಿಗೆ ತೆಂಗಿನಕಾಯಿ ಎಣ್ಣೆಯ ನಂತರ ಹೆಚ್ಚು ಹೊಂದಿಕೊಳ್ಳುವುದು ಬೆಣ್ಣೆಹಣ್ಣು. ಒಂದು ಬೆಣ್ಣೆಹಣ್ಣುವನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ, ಅದನ್ನು ತೆಂಗಿನ ಕಾಯಿ ಎಣ್ಣೆ ಮತ್ತು ಆಲಿವ್ ಎಣ್ಣೆಯ ಜೊತೆಗೆ ಬೆರೆಸಿ ನಿಮ್ಮ ಕೂದಲ ಆರೋಗ್ಯ ಹೆಚ್ಚಿಸುವ ಕಂಡೀಷನರ್ ಸಿದ್ಧವಾಗುತ್ತದೆ. ಇದು ಸ್ವಲ್ಪ ದಪ್ಪಗಿನ ಫೇಸ್ಟ್ ರೀತಿ ಇರುತ್ತದೆ. ಆದರೂ ಇದನ್ನು ಕೂದಲಿಗೆ ಹಚ್ಚಿ, ಒಳ್ಳೆ ಕಂಡೀಷನಿಂಗ್ ಸಿಗುತ್ತದೆ. ಈ ಮಿಶ್ರಣವನ್ನು ನೀವು ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಕೊಂಡು ಫ್ರಿಡ್ಜಿನಲ್ಲಿಟ್ಟು, ಬೇಕೆನಿಸಿದಾಗ ಬಳಸಬಹುದು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಈ ಎಣ್ಣೆಯು ಅತ್ಯಂತ ಜನ ಮೆಚ್ಚುಗೆ ಪಡೆದ ಕಂಡೀಷನರ್ ಆಗಿದೆ. ಇದು ಕೂದಲನ್ನು ಗಟ್ಟಿ ಮತ್ತು ಆರೋಗ್ಯವಂತ ಗೊಳಿಸುತ್ತದೆ. ಈ ಎಣ್ಣೆಯು ಕೂದಲಿಲ್ಲಿ ಕೆರಟಿನ್ ಕೊರತೆ ಬರದಂತೆ ಸಂರಕ್ಷಿಸುತ್ತದೆ. ಇದರ ಜೊತೆಗೆ ಜೇನು ತುಪ್ಪ ಬೆರೆಸಿದರೆ ಕೂದಲಿಗೆ ಮಾಯಿಶ್ಚರೈಸ್‍ನಂತೆ ಸಹಕರಿಸುತ್ತದೆ. ಇದಕ್ಕಾಗಿ ಒಂದು ಬಟ್ಟಲು ಬಿಸಿನೀರನ್ನು ತೆಗೆದುಕೊಳ್ಳಿ. ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಜೇನು ತುಪ್ಪ ಸೇರಿಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, 20 ನಿಮಿಷ ಬಿಡಿ. ನಂತರ ಇದನ್ನು ಚೆನ್ನಾಗಿ ತೊಳೆಯಿರಿ. ನಂತರ ನೀರು ಉಳಿಯದಂತೆ ಚೆನ್ನಾಗಿ ಟವೆಲಿನಿಂದ ಒರೆಸಿ.

English summary

Effective Home Made Natural Hair Conditioners

Most people normally experience hair loss in their 30s due to hormonal changes, unhealthy diet and stress. In trying to correct these factors, adopting natural herbal remedies is very helpful in facilitating hair growth. So you must make homemade natural hair conditioner for dry hair. How to make hair conditioner at home? Today, boldsky will share with you some amazing home made conditioners.
Subscribe Newsletter