For Quick Alerts
ALLOW NOTIFICATIONS  
For Daily Alerts

ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ ಎಳ್ಳೆಣ್ಣೆ ತಲೆಗೆ ಹಚ್ಚಿಕೊಳ್ಳಿ!

By Deepu
|

ಕಪ್ಪು, ದಪ್ಪ ಹಾಗೂ ಉದ್ದಗಿನ ಕೂದಲು ಮಹಿಳೆಯರ ಕನಸಾಗಿರುವುದು. ಇದನ್ನು ಪಡೆಯಲೆಂದು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಶಾಂಪೂಗಳನ್ನು ಬಳಕೆ ಮಾಡುವರು. ಆದರೆ ಇದು ರಾಸಾಯನಿಕಯುಕ್ತವಾಗಿರುವ ಕಾರಣ ಕೂದಲಿಗೆ ಹಾನಿಯುಂಟು ಮಾಡುವುದು. ಮಹಿಳೆಯರಿಗೆ ಕೂದಲು ತೆಳುವಾಗಿದ್ದರೆ ಅದೇನೋ ಒಂದು ರೀತಿಯ ಸಂಕಟ. ಅದರಲ್ಲೂ ತಲೆಹೊಟ್ಟು ಇದ್ದರೆ ಹೇಳುವುದೇ ಬೇಡ. ಇಂತಹ ಸಮಸ್ಯೆಗಳಿಗೆ ನಮ್ಮ ಅಡುಗೆ ಮನೆಯಲ್ಲೇ ಕೆಲವೊಂದು ಪರಿಹಾರಗಳು ಇವೆ.

ಎಳ್ಳೆಣ್ಣೆಯಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು. ಎಳ್ಳೆಣ್ಣೆಯು ರಕ್ತಪರಿಚಲನೆಯನ್ನು ಹೆಚ್ಚಿಸಿ, ವಿಷಕಾರಿ ಅಂಶ ಹೊರಹಾಕಿ, ಕೂದಲಿನ ಕೋಶಗಳು ವೇಗವಾಗಿ ಬೆಳೆಯಲು ನೆರವಾಗುವುದು. ನಂಜುನಿರೋಧಕ, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಎಳ್ಳೆಣ್ಣೆಯು ಕೂದಲು ತುಂಬಾ ಆರೋಗ್ಯ ಹಾಗೂ ಶುದ್ಧವಾಗಿರುವಂತೆ ಮಾಡುವುದು.

ಎಳ್ಳೆಣ್ಣೆಯು ಕೂದಲನ್ನು ಬಲಗೊಳಿಸಿ, ತುಂಡಾಗುವುದನ್ನು ತಪ್ಪಿಸುವುದು. ತಲೆಹೊಟ್ಟು ನಿವಾರಣೆ ಮಾಡುವುದು. ತಲೆಹೊಟ್ಟು ಮತ್ತು ಹೇನು ನಿವಾರಣೆಗೆ ಇದು ತುಂಬಾ ಪರಿಣಾಮಕಾರಿಯಾಗಿದೆ. ತುರಿಕೆ, ತಲೆಹೊಟ್ಟು ಮತ್ತು ಒಣಗಿದ ತಲೆಬುರುಡೆ ನಿವಾರಣೆ ಮಾಡಲು ಎಳ್ಳೆಣ್ಣೆ ಉತ್ತಮ. ಇದು ಒಣ ಹಾಗೂ ಜಿಡ್ಡಿನ ತಲೆಬುರುಡೆಯನ್ನು ನಿವಾರಿಸಿ ತಲೆಬುರುಡೆಯ ಪಿಎಚ್ ಮಟ್ಟ ಮರುಸ್ಥಾಪಿಸುವುದು. ಕೂದಲಿನ ಬೆಳವಣಿಗೆ ದ್ವಿಗುಣಗೊಳಿಸುವ ಮತ್ತು ತಲೆಹೊಟ್ಟು ನಿವಾರಣೆಗೆ ಸಹಕರಿಸುವ ಕೆಲವು ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಯುವ.

Dandruff

ತಲೆಹೊಟ್ಟು ನಿವಾರಣೆಗೆ
ತಲೆಬುರುಡೆ ಒಣಗಿಸಿ, ತಲೆಹೊಟ್ಟು ನಿರ್ಮಾಣ ಮಾಡುವಂತಹ ಯಾವುದೇ ರೀತಿಯ ಅಂಶವನ್ನು ಎಳ್ಳೆಣ್ಣೆಯು ತೆಗೆದುಹಾಕುವುದು. ತಲೆಹೊಟ್ಟಿನಿಂದ ಉಂಟಾಗುವ ತುರಿಕೆಯನ್ನು ಇದು ನಿವಾರಿಸುವುದು. ಇದನ್ನು ತಲೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಸುಮಾರು ಐದು ಹನಿಯಷ್ಟು ಎಳ್ಳೆಣ್ಣೆಯನ್ನು ಶಾಂಪೂಗೆ ಹಾಕಿಕೊಳ್ಳಿ. ನಿಮಗೆ ಬೇಕಾದಷ್ಟು ಶಾಂಪೂಗೆ ಎಳ್ಳೆಣ್ಣೆ ಹಾಕಿ. ಇದನ್ನು ತಲೆಗೆ ಹಚ್ಚಿಕೊಂಡು ಸುಮಾರು 5-7 ನಿಮಿಷ ಕಾಲ ಹಾಗೆ ಬಿಡಿ. ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ. ಎಳ್ಳೆಣ್ಣೆಯಿಂದ ಕೂದಲಿಗೆ ಆಗುವ ಇತರ ಕೆಲವು ಲಾಭಗಳ ಬಗ್ಗೆ ತಿಳಿಯಿರಿ....

ಹೇನು ನಿವಾರಣೆ
ತಲೆಬುರುಡೆಯ ಕೆಟ್ಟ ಆರೋಗ್ಯದಿಂದಾಗಿ ಹೇನುಗಳು ಉಂಟಾಗುವುದು. ಎಳ್ಳೆಣ್ಣೆಯು ಕೀಟಾಣು ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಹೇನುಗಳನ್ನು ಕೊಲ್ಲುವುದು. ಐದರಿಂದ 7 ಹನಿ ತನಕ ಎಳ್ಳೆಣ್ಣೆ ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ತರಕಾರಿ ಎಣ್ಣೆ ಹಾಕಿ. ಇದನ್ನು ಮಿಶ್ರಣ ಮಾಡಿ ತಲೆಬುರುಡೆಗೆ ಹಚ್ಚಿ. ಒಣಗಿರುವ ಶಾವರ್ ಕ್ಯಾಪ್ ಬಳಸಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಗಿಡಮೂಲಿಕೆಯ ಶಾಂಪೂ ಬಳಸಿಕೊಂಡು ಬೆಳಗ್ಗೆ ಕೂದಲು ತೊಳೆಯಿರಿ.

ಕೂದಲು ದಪ್ಪಗಾಗಲು
ಎಳ್ಳೆಣ್ಣೆ ನಿಮ್ಮ ಕೂದಲು ಉದ್ದ, ದಪ್ಪ ಹಾಗೂ ಕಾಂತಿಯುತವಾಗಲು ನೆರವಾಗುವುದು. ಕೂದಲಿಗೆ ಆಳವಾದ ಚಿಕಿತ್ಸೆ ಮಾಡಿ. ಬಿಸಿ ಮಾಡಿರುವ ವಾಹಕ ತೈಲವನ್ನು ತಲೆಗೆ ಹಾಕಿ ಮಸಾಜ್ ಮಾಡಿ. ಇದರ ಬಳಿಕ ಕೂದಲಿಗೆ ಒಣ ಟವೆಲ್ ಸುತ್ತಿಕೊಳ್ಳಿ ಮತ್ತು 30 ನಿಮಿಷ ಕಾಲ ಹೀಗೆ ಬಿಡಿ. ವಾರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸಲ ಬಳಸಿದರೆ ವೇಗ ಹಾಗೂ ಉತ್ತಮ ಫಲಿತಾಂಶ ಪಡೆಯಬಹುದು.

ಕೂದಲು ಉದುರುವಿಕೆ ತಡೆಯಲು
ಪ್ರತಿಯೊಬ್ಬರು ಸಾಮಾನ್ಯವಾಗಿ ಎದುರಿಸುವಂತಹ ಸಮಸ್ಯೆಯೆಂದರೆ ಕೂದಲು ಉದುರುವಿಕೆ. ಕೂದಲು ಉದುರುವಿಕೆ ತಡೆಯಲು ಎಳ್ಳೆಣ್ಣೆ ಮತ್ತು ಮೊಟ್ಟೆಯ ಬಿಳಿ ಲೋಳೆ ಬಳಸಬಹುದು. ಒಂದು ಅಥವಾ ಎರಡು ಮೊಟ್ಟೆಯ ಬಿಳಿ ಲೋಳೆ ತೆಗೆಯಿರಿ. ಈ ಬಿಳಿ ಲೋಳೆಯನ್ನು ಐದು ಚಮಚ ಎಳ್ಳೆಣ್ಣೆ ಜತೆಗೆ ಸೇರಿಸಿಕೊಳ್ಳಿ. ಇದನ್ನು ಕೂದಲಿಗೆ 5ರಿಂದ 10 ನಿಮಿಷ ಕಾಲ ಮಸಾಜ್ ಮಾಡಿಕೊಂಡು 30-40 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಗಿಡಮೂಲಿಕೆ ಶಾಂಪೂವಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಬಿಸಿ ಎಣ್ಣೆಯ ಚಿಕಿತ್ಸೆ
ಇದಕ್ಕಾಗಿ ನೀವು ವಾಹಕ ಎಣ್ಣೆಗಳಾದ ಆಲಿವ್, ಜೊಜೊಬಾ, ಹರಳೆಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಅರ್ಧ ಕಪ್ ವಾಹಕ ಎಣ್ಣೆಗೆ ಒಂದು ಅಥವಾ ಎರಡು ಹನಿಯಷ್ಟು ಎಳ್ಳೆಣ್ಣೆ ಹಾಕಿ. ಈ ಮಿಶ್ರಣವನ್ನು ಬಿಸಿ ಮಾಡಲು, ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಮಿಶ್ರಣದೊಂದಿಗೆ ಬಿಸಿ ಮಾಡಿ. ನೀರು ಕುದಿಯಲು ಆರಂಭಿಸಿದಾಗ ಪಾತ್ರೆಯನ್ನು ಗ್ಯಾಸ್ ನಿಂದ ತೆಗೆಯಿರಿ. ಎಣ್ಣೆಯನ್ನು ಒಂದು ಬ್ರಶ್ ಅಥವಾ ಬೇರೆ ಯಾವುದೇ ಸಾಧನ ಬಳಸಿ ಹಚ್ಚಿಕೊಳ್ಳಿ. ಕೈಯಿಂದಲೂ ಹಚ್ಚಿ ಮಸಾಜ್ ಮಾಡಿ. ಪ್ಲಾಸ್ಟಿಕ್ ಶಾವರ್ ಕ್ಯಾಪ್ ಹಾಕಿಕೊಳ್ಳಿ ಮತ್ತು 30 ನಿಮಿಷ ಕಾಲ ಕೂದಲು ಒಣಗಲು ಬಿಡಿ. ಇದರ ಬಳಿಕ ಶಾಂಪೂ ಹಾಕಿ ಕೂದಲನ್ನು ಕಂಡೀಷನ್ ಮಾಡಿ.

ಕೂದಲಿನ ಬೆಳವಣಿಗೆಗೆ ಎಳ್ಳೆಣ್ಣೆ ಮತ್ತು ಆಲಿವ್ ಎಣ್ಣೆ
ಹಗುರ ಮತ್ತು ತೇವಾಂಶದ ಗುಣವನ್ನು ಹೊಂದಿರುವಂತಹ ಆಲಿವ್ ತೈಲವನ್ನು ಪ್ರತಿಯೊಬ್ಬರು ಬಳಸಬಹುದು. ಇದರಿಂದ ಕೂದಲು ತುಂಬಾ ನಯ ಮತ್ತು ರೇಷ್ಮೆಯಂತೆ ಆಗುವುದರ ಜತೆಗೆ ಮೊಶ್ಚಿರೈಸ್ ಮಾಡುವುದು. ಸಮ ಪ್ರಮಾಣದಲ್ಲಿ ಎಳ್ಳೆಣ್ಣೆ ಮತ್ತು ಆಲಿವ್ ತೈಲ ಮಿಶ್ರಣ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ಹಗುರ ಶಾಂಪೂ ಹಾಕಿ ತೊಳೆಯಿರಿ.

ಎಳ್ಳೆಣ್ಣೆ ಮತ್ತು ತೆಂಗಿನೆಣ್ಣೆ
ತೆಂಗಿನೆಣ್ಣೆಯು ಕೂದಲು ಪ್ರೋಟೀನ್ ಕಳಕೊಳ್ಳುವುದನ್ನು ತಡೆಯುವುದು ಮತ್ತು ಕೂದಲನ್ನು ಆರೋಗ್ಯಕರ ಹಾಗೂ ಬಲವಾಗಿಡುವುದು. ಎಳ್ಳೆಣ್ಣೆ ಜತೆಗೆ ಇದನ್ನು ಬಳಸಿದಾಗ ಕೂದಲಿಗೆ ಇದು ಪೋಷಣೆ ನೀಡಿ ತಲೆಬುರುಡೆಯ ಆರೋಗ್ಯ ಸುಧಾರಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ಉತ್ತೇಜಿಸುವುದು. ತೆಂಗಿನೆಣ್ಣೆ ಸರಿಯಾಗಿ ತೊಳೆಯದೆ ಇದ್ದರೆ ಅದು ಕೂದಲಿಗೆ ಭಾರವಾಗುವುದು. ಇದರಿಂದ ಜಿಡ್ಡಿನ ಕೂದಲು ಇರುವವರು ಇದನ್ನು ಬಳಸಬೇಡಿ. ಸಾಮಾನ್ಯದಿಂದ ಒಣ ಕೂದಲಿನವರು ಇದನ್ನು ಬಳಸಬಹುದು.

ಎಳ್ಳೆಣ್ಣೆ ಮತ್ತು ಅಲೋವೆರಾ
ಎಲ್ಲಾ ರೀತಿಯ ಕೂದಲಿಗೆ ಈ ಹೇರ್ ಮಾಸ್ಕ್ ತುಂಬಾ ಒಳ್ಳೆಯದು. ಇದು ಕೂದಲನ್ನು ಸ್ವಚ್ಛಗೊಳಿಸಿ, ಮೊಶ್ಚಿರೈಸ್ ಮಾಡುವುದು. ಈ ಮಾಸ್ಕ್ ತಯಾರಿಸಲು 4-5 ಹನಿ ಎಳ್ಳೆಣ್ಣೆ, ½ ಕಪ್ ಅಲೋವೆರಾ ಜೆಲ್ ಬೇಕು. ಇದೆರಡನ್ನು ಒಂದು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ ಮತ್ತು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ ಮತ್ತು 30-45 ನಿಮಿಷ ಕಾಲ ಹಾಗೆ ಬಿಡಿ. ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ.

ಎಣ್ಣೆಗಳ ರಾಣಿ 'ಎಳ್ಳೆಣ್ಣೆ'ಯ ಆರೋಗ್ಯಕರ ಪ್ರಯೋಜನಗಳು

English summary

Does Sesame Oil Help In Treating Dandruff?

Sesame oil strengthens your hair and prevents damage from frizz, dandruff, loose ends and split ends. It is an effective cure for dandruff and lice. Sesame oil makes dealing with itchiness, dandruff and dry scalp easy. It treats dry and oily scalps and restores the pH level of your scalp. Let's see some of the home remedies using sesame oil that can help stimulate hair re-growth and boost the rate at which dandruff is removed for good.
X
Desktop Bottom Promotion