For Quick Alerts
ALLOW NOTIFICATIONS  
For Daily Alerts

ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

By Hemanth
|

ಮಹಿಳೆಯರ ಸೌಂದರ್ಯದಲ್ಲಿ ಕಪ್ಪು ಹಾಗೂ ಕಾಂತಿಯುತವಾಗಿರುವ ಕೂದಲು ಕೂದಲಿನ ಪಾಲು ಇದೆ. ಆದರೆ ಕೆಲವು ಮಹಿಳೆಯರಲ್ಲಿ ಸಾಮಾನ್ಯವಾಗಿ ಕೂದಲು ಬೇಗನೆ ಬಿಳಿಯಾಗುವುದು. ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆಯು ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು ಮೆಡಿಕಲ್ ಗೆ ಹೋಗಿ ಪರಿಹಾರ ಕಂಡುಕೊಳ್ಳುವ ಬದಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಸೂಕ್ತ ಹಾಗೂ ಯಾವುದೇ ಅಡ್ಡಪರಿಣಾವು ಆಗದು.

ನೀವು ಪ್ರತಿನಿತ್ಯ ದೇವರಿಗೆ ಆರತಿ ಬೆಳಗಲು ಬಳಸುವಂತಹ ಕರ್ಪೂರದಿಂದ ಅಕಾಲಿಕವಾಗಿ ಬಿಳಿಯಾಗಿರುವಂತಹ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂದು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದಕ್ಕೂ ಮೊದಲು ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಹೇಗೆ ಎಂದು ತಿಳಿಯುವ. ಸಾಮಾನ್ಯವಾಗಿ ಕೂದಲು ಬಿಳಿಯಾಗಲು ಹಲವಾರು ರೀತಿಯ ಕಾರಣಗಳು ಇವೆ. ಇದರಲ್ಲಿ ಪ್ರಮುಖವಾಗಿ ಅನುವಂಶೀಯತೆ. ಇತರ ಕೆಲವೊಂದು ಕಾರಣಗಳು ಕೂದಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಕೂದಲು ಬಿಳಿಯಾಗಲು ಪ್ರಮುಖ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ರಾಸಾಯನಿಕಗಳು

ರಾಸಾಯನಿಕಗಳು

ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಹೋಗುವಾಗ ನೀವು ಈ ವಿಚಾರವನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಕೂದಲು ಬಿಳಿಯಾಗಲು ಪ್ರಮುಖ ಕಾರಣ ರಾಸಾಯನಿಕಗಳು. ನೀವು ಎಂದಿಗೂ ಕೂದಲಿಗೆ ಬಣ್ಣ ಹಾಕದೇ ಇದ್ದರೆ ಅಥವಾ ಕೂದಲಿಗೆ ಚಿಕಿತ್ಸೆ ಮಾಡದೆ ಇದ್ದರೆ ರಾಸಾಯನಿಕವು ನಿಮ್ಮ ಕೂದಲಿಗೆ ಹೇಗೆ ಹಾನಿ ಉಂಟು ಮಾಡುವುದು? ಬಳಸುವಂತಹ ಕೆಲವು ಶಾಂಪೂಗಳಲ್ಲಿ ಅಧಿಕಮಟ್ಟದ ಹಾನಿಕಾರಕ ರಾಸಾಯನಿಕಗಳು ಇರುವುದು. ಇದನ್ನು ಗಮನಿಸಬೇಕು. ಶಾಂಪೂ ಹೊರತುಪಡಿಸಿ, ಹೇರ್ ಡೈ ಅಥವಾ ಹೇರ ಕಂಡೀಷನರ್ ಕೂಡ ಕೂದಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಿ, ಕೂದಲು ಅಕಾಲಿಕವಾಗಿ ಬಿಳಿಯಾಗುವಂತೆ ಮಾಡುವುದು.

ತಿನ್ನುವ ಅಭ್ಯಾಸ

ತಿನ್ನುವ ಅಭ್ಯಾಸ

ಅಕಾಲಿಕವಾಗಿ ಕೂದಲು ಬಿಳಿಯಾಗಲು ಇದು ಮತ್ತೊಂದು ಕಾರಣವಾಗಿದೆ. ನೀವು ಏನು ತಿನ್ನುತ್ತೀರಿ ಎನ್ನುವುದು ಹೊರಗಿನಿಂದ ಪ್ರತಿಫಲಿಸುತ್ತದೆ. ಇದರ ತೀವ್ರ ಪರಿಣಾಮವೆಂದರೆ ಕೂದಲು ಬಿಳಿಯಾಗುವುದು. ಕೂದಲಿನ ಗುಣಮಟ್ಟವು ದೇಹದ ಒಳಗಿನ ಭಾಗಕ್ಕೂ ಸಂಬಂಧಿಸಿದೆ. ಒಳಗಿನಿಂದ ಆರೋಗ್ಯವಾಗಿದ್ದರೆ, ಹೊರಗಿನಿಂದಲೂ ಇದು ಕಾಣುವುದು.

Most Read:ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

ಒತ್ತಡ

ಒತ್ತಡ

ಅಕಾಲಿಕವಾಗಿ ಕೂದಲು ಬಿಳಿಯಾಗಲು ಮತ್ತೊಂದು ಕಾರಣವೇ ಒತ್ತಡ. ವ್ಯಸ್ತ ಉದ್ಯೋಗ ಅಥವಾ ವ್ಯಸ್ತ ಜೀವನಶೈಲಿ ಕೂದಲು ಬಿಳಿಯಾಗಲು ಪ್ರಮುಖ ಕಾರಣ. ಕೂದಲು ಬಿಳಿಯಾಗಲು ಜಂಕ್ ಫುಡ್ ಮತ್ತು ಆಲ್ಕೋಹಾಲ್ ಕೂಡ ಕಾರಣವಾಗಿದೆ.

ಮೆಲನಿನ್ ಕೊರತೆ

ಮೆಲನಿನ್ ಕೊರತೆ

ಮೆಲನಿನ್ ಕೊರತೆಯಿಂದಾಗಿ ಕೂದಲು ಬೇಗನೆ ಬಿಳಿಯಾಗುವುದು. ದೇಹದಲ್ಲಿ ಮೆಲನಿನ್ ಉತ್ಪತ್ತಿ ಮೇಲೆ ಪರಿಣಾಮ ಬೀರಿದಾಗ ಹೀಗೆ ಆಗುವುದು. ಪೋಷಕಾಂಶಗಳ ಕೊರತೆಯಿಂದಾಗಿ ಹೀಗೆ ಆಗುವುದು.

Most Read:ಬರೀ ಒಂದೇ ದಿನದಲ್ಲಿ ಶೀತ-ಕೆಮ್ಮು ನಿವಾರಿಸುವ ಸರಳ ಆಯುರ್ವೇದ ಮನೆಮದ್ದುಗಳು
ಕೂದಲು ಬಿಳಿಯಾಗುವುದನ್ನು ತಡೆಯಲು ಸಾಧ್ಯವೇ?

ಕೂದಲು ಬಿಳಿಯಾಗುವುದನ್ನು ತಡೆಯಲು ಸಾಧ್ಯವೇ?

ಹೌದು, ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯಲು ಸಾಧ್ಯವಿದೆ. ಆದರೆ ನಮ್ಮ ಜೀವನಶೈಲಿ ಹೇಗಿದೆ ಮತ್ತು ನಾವು ಕೂದಲಿಗೆ ಯಾವ ಶಾಂಪೂ ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯವಾಗಿರುವುದು. ರಾಸಾಯನಿಕ ಕಡಿಮೆ ಅಥವಾ ಇಲ್ಲದಿರುವಂತಹ ಶಾಂಪೂ ಬಳಕೆ ಮಾಡಬೇಕು.

ಕೆಲವೊಂದು ವೈದ್ಯಕೀಯ ವಿಧಾನಗಳಾಗಿರುವ ವರ್ಣದ್ರವ್ಯ ಮರಳಿ ಪಡೆಯುವ ಚಿಕಿತ್ಸೆ ಅಥವಾ ಹಾರ್ಮೋನು ಥೆರಪಿಯಿಂದ ಕೂದಲನ್ನು ಮತ್ತೆ ಕಪ್ಪಗಾಗಿಸಬಹುದು. ಆದರೆ ನೈಸರ್ಗಿಕ ವಿಧಾನ ಆಯ್ಕೆ ಮಾಡಿದರೆ ಒಳ್ಳೆಯದು.

ಅಕಾಲಿಕವಾಗಿ ಬಿಳಿಯಾಗಿರುವ ಕೂದಲು ಕಪ್ಪಾಗಿಸಲು ಕರ್ಪೂರ ತುಂಬಾ ಒಳ್ಳೆಯದು. ಇದು ಹೇಗೆ ಎಂದು ನೀವು ಕೇಳಬಹುದು? ಆದರೆ ನಾವು ಕೆಲವು ಸರಳ ವಿಧಾನಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

ಬಿಳಿ ಕೂದಲಿಗೆ ಕರ್ಪೂರ ಬಳಕೆ ಹೇಗೆ?

ಬಿಳಿ ಕೂದಲಿಗೆ ಕರ್ಪೂರ ಬಳಕೆ ಹೇಗೆ?

ಬೇಕಾಗುವ ಸಾಮಗ್ರಿಗಳು

  • 2 ಚಮಚ ತೆಂಗಿನೆಣ್ಣೆ
  • 4 ತಾಜಾ ದಾಸವಾಳದ ಎಲೆಗಳು
  • 2 ತುಂಡು ಕರ್ಪೂರ
  • ತಯಾರಿಸುವ ವಿಧಾನ

    * ಸಣ್ಣ ತವಾ ತೆಗೆದುಕೊಳ್ಳಿ. ಅದಕ್ಕೆ ತೆಂಗಿನೆಣ್ಣೆ ಹಾಕಿ, ಕುದಿಸಿ.

    * ತೆಂಗಿನೆಣ್ಣೆಯು ಬಿಸಿಯಾದ ಬಳಿಕ ಇದಕ್ಕೆ ದಾಸವಾಳದ ಹೂಗಳನ್ನು ಹಾಕಿ. ಸ್ವಲ್ಪ ಸಮಯ ಕಲಸಿಕೊಳ್ಳಿ ಮತ್ತು ಬಳಿಕ ಗ್ಯಾಸ್ ಆಫ್ ಮಾಡಿ.

    * ಇದಕ್ಕೆ ಕರ್ಪೂರ ಹಾಕಿ.

    * ಈ ಮಿಶ್ರಣವು ಕೆಲವು ನಿಮಿಷ ಕಾಲ ಹಾಗೆ ಇರಲಿ. ತಲೆಬುರುಡೆಗೆ ಮಸಾಜ್ ಮಾಡುವಷ್ಟು ಇದು ತಣ್ಣಗಾಗಿರಲಿ.

    * ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ.

    * ಪ್ರತಿನಿತ್ಯ ನೀವು ಇದನ್ನು ತಲೆಬುರುಡೆಗೆ ಹಚ್ಚಿಕೊಂಡರೆ ಆಗ ಉತ್ತಮ ಫಲಿತಾಂಶ ಪಡೆಯಬಹುದು.

    ಇದು ಹೇಗೆ ಕೆಲಸ ಮಾಡುವುದು?

    ಕರ್ಪೂರದಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿವೆ. ಇದು ಹೇನನ್ನು ಕೊಲ್ಲುವುದು, ಕೂದಲು ಉದುರುವಿಕೆ ವಿರುದ್ಧ ಹೋರಾಡುವುದು, ಕೂದಲು ಬಿಳಿಯಾಗುವುದನ್ನು ತಡೆಯುವುದು ಮತ್ತು ಕೂದಲನ್ನು ಬಲಿಷ್ಠವಾಗಿಸುವುದು. ಕರ್ಪೂರವನ್ನು ಒಳಗೊಂಡಿರುವ ಕೂದಲಿನ ಎಣ್ಣೆಯು ಕೂದಲಿನ ಕೋಶಗಳನ್ನು ಬಲಿಷ್ಠಗೊಳಿಸುವುದು ಮತ್ತು ತಲೆಬುರುಡೆ ಆರೋಗ್ಯ ವೃದ್ಧಿಸುವುದು. ಕೂದಲಿಗೆ ಕಂಡೀಷನ್ ಮಾಡಲು ನೆರವಾಗುವುದು. ಇದರಿಂದ ಕೂದಲು ನಯ ಮತ್ತು ಆರೋಗ್ಯವಾಗಿರುವುದು. ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಪ್ಪಿಸಲು ನೀವು ಕರ್ಪೂರದ ಈ ಮನೆಮದ್ದನ್ನು ಬಳಸಿಕೊಳ್ಳಿ ಮತ್ತು ಶಾಶ್ವತವಾಗಿ ಕೂದಲು ಬಿಳಿಯಾಗುವುದಕ್ಕೆ ವಿದಾಯ ಹೇಳಿ.

English summary

Dealing With Grey Hair? Here's How Camphor Can Help!

If there is one thing that women fear the most when it comes to hair, it is definitely premature greying of hair. Next comes hair fall and dandruff - but then these are not big problems as grey hair as they can easily be treated. But what about grey hair? There is one thing that can help you to get rid of grey hair easily - home remedies. There are a number of home remedies that help us get rid of several hair and skin problems and that too without any side effects.
X
Desktop Bottom Promotion