For Quick Alerts
ALLOW NOTIFICATIONS  
For Daily Alerts

ಎಲ್ಲಾ ಬಗೆಯ ಕೇಶರಾಶಿಗಳಿಗೂ ಆರೈಕೆ ಮಾಡುವ ಅತ್ಯದ್ಭುತ ಎಣ್ಣೆ

By Divya
|

ಅಲೋವೆರಾ ಎನ್ನುವುದು ಅತ್ಯುತ್ತಮ ಔಷಧೀಯ ಗಿಡಮೂಲಿಕೆಯಲ್ಲಿ ಒಂದು. ಇದಕ್ಕೆ ಆಯುರ್ವೇದದಲ್ಲಿ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಅಲೋವೆರಾ ಬಳಕೆಯಿಂದ ವಿವಿಧ ಬಗೆಯ ಔಷಧಿಗಳ ತಯಾರಿಕೆ ಹಾಗೂ ಕ್ರೀಮ್‍ಗಳ ತಯಾರಿಕೆಯನ್ನು ಮಾಡಲಾಗುವುದು. ಸೌಂದರ್ಯ ವರ್ಧಕ ಉತ್ಪನ್ನಗಳಿಗೆ ಅತ್ಯುತ್ತಮ ಸಹಕಾರ ನೀಡುವುದು ಅಲೋವೆರಾ. ಇದು ಕೇವಲ ತ್ವಚೆ ಹಾಗೂ ಇನ್ನಿತರ ಆರೈಕೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಬಳಕೆಯಿಂದ ಕೂದಲುದುರುವುದು ಹಾಗೂ ವಿವಿಧ ಬಗೆಯ ಕೇಶ ಆರೈಕೆಯ ವಿಧಾನದಲ್ಲೂ ಬಳಸಲಾಗುವುದು.

haircare tips in kannada

ಅಲೋವೆರಾದಲ್ಲಿರುವ ಪ್ರೋಟಿಯೋಲೈಟಿಕ್ ಕಿಣ್ವಗಳು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳಿಗೆ ಜೀವ ತುಂಬುತ್ತದೆ. ಜೊತೆಗೆ ಕೂದಲು ಉದುರುವುದು, ಒರಟಾಗುವುದು, ಬಣ್ಣ ಕಳೆದುಕೊಳ್ಳುವುದು, ಟಿಸಿಲೊಡೆಯುವುದು ಸೇರಿದಂತೆ ಇನ್ನಿತರ ಕೇಶ ಸಂಬಂಧಿ ಸಮಸ್ಯೆಗಳನ್ನು ಬಹಳ ಸುಲಭವಾಗಿ ನಿವಾರಿಸುವುದು. ಅಲೋವೆರಾದಲ್ಲಿ ಶೇ.96ರಷ್ಟು ನೀರಿನಂಶ ಇರುವುದರಿಂದ ಕೂದಲಿಗೆ ನೈಸರ್ಗಿಕ ಆರೈಕೆಯನ್ನು ನೀಡಿ, ತೇವಾಂಶದಿಂದ ಕೂಡಿರುವಂತೆ ಮಾಡುವುದು.

ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಅಲೋವೆರಾವನ್ನು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆಯೊಂದಿಗೆ ಬೆರೆಸಿದಾಗ ಅದರ ಶಕ್ತಿಯು ದ್ವಿಗುಣವಾಗುತ್ತದೆ. ಅಲೋವೆರಾ ಮತ್ತು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆ ಮಿಶ್ರಿತ ಎಣ್ಣೆಯನ್ನು ಕೇಶರಾಶಿಗೆ ಅನ್ವಯಿಸುವುದರಿಂದ ಪ್ರತಿಯೊಂದು ಕೂದಲೆಳೆಯು ಬಲಪಡುತ್ತದೆ. ಜೊತೆಗೆ ಅಕಾಲಿಕ ಬೂದು ಬಣ್ಣಕ್ಕೆ ತಿರುಗುವುದು, ಬೋಳಾಗುವುದು ಹಾಗೂ ಇನ್ನಿತರ ಸಮಸ್ಯೆಯನ್ನು ನಿವಾರಿಸುತ್ತದೆ. ಅಲೋವೆರಾ ನೈಸರ್ಗಿಕ ಕ್ಲೆನ್ಸರ್ ಮತ್ತು ಹೀಲರ್ ಆಗಿ ಹಾಗೂ ತೆಂಗಿನ ಎಣ್ಣೆಯು ಹೈಡ್ರೇಟ್ ರೀತಿಯಲ್ಲಿ ಆರೈಕೆ ಮಾಡುತ್ತವೆ.

ಈ ಹಿನ್ನೆಲೆಯಲ್ಲಿ ಇದೀಗ ಪ್ಯಾರಾಚುಟ್ "ಅಡ್ವಾನ್ಸಡ್ ಅಲೋವೆರಾ ಎನ್ರಿಕೆಟ್ ಕೊಕೊನಟ್ ಹೇರ್ ಆಯಿಲ್" ಎನ್ನುವ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಎಣ್ಣೆಯು ನೈಸರ್ಗಿಕವಾದ ಎರಡು ಅದ್ಭುತ ಔಷಧೀಯ ಪದಾರ್ಥಗಳಿಂದ ಒಳಗೊಂಡಿದೆ. ಅಲೋವೆರಾ ಮತ್ತು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆಯ ಸಂಯೋಜನೆಯಲ್ಲಿ ತಯಾರಾದ ಈ ಎಣ್ಣೆಯನ್ನು ಎಲ್ಲಾ ಬಗೆಯ ಕೇಶ ರಾಶಿಯವರು ಸಹ ದೈನಂದಿನ ಕೂದಲ ಆರೈಕೆಗೆ ಬಳಸಬಹುದಾಗಿದೆ.

ರಾಸಾಯನಿಕ ಪದಾರ್ಥಗಳಿಂದ ಮುಕ್ತವಾಗಿರುವ ಈ ಉತ್ಪನ್ನದ ಬಳಕೆಯಿಂದ ಕೂದಲು ಮೃದುವಾಗಿ ಅತ್ಯುತ್ತಮ ಹೊಳಪನ್ನು ಪಡೆದು ಕೊಳ್ಳುವುದು. ಕೂದಲು ಆರೈಕೆಯಲ್ಲಿ ಅತ್ಯುತ್ತಮ ಸಹಕಾರ ನೀಡುವ ಈ ಎಣ್ಣೆ ಮಾರುಕಟ್ಟೆಯಲ್ಲಿ ಎಲ್ಲರ ಕೈಗೂ ಎಟಕುವ ದರದಲ್ಲಿ ಲಭ್ಯವಿದೆ. ಜನರಿಗೆ ಬಹಳ ಇಷ್ಟವಾಗುವ ಉತ್ಪನ್ನಗಳಲ್ಲಿ ಒಂದಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇದರ ಆಕರ್ಷಕ ಗುಣವೆಂದರೆ... ಒಮ್ಮೆ ಈ ಎಣ್ಣೆಯನ್ನು ನೆತ್ತಿಯ ಭಾಗಕ್ಕೆ ಅನ್ವಯಿಸಿದರೆ ಸಾಕು. ಯಾವುದೇ ಜಿಗುಟು ಭಾವನೆಯನ್ನು ನೀಡದು. ಅನ್ವಯಿಸಿದ ತಕ್ಷಣ ಕೂದಲು ನೇರವಾಗುವುದು ಮತ್ತು ಮೃದುವಾಗುವುದು. ಸೌಮ್ಯವಾದ ಪರಿಮಳದೊಂದಿಗೆ ಹೆಚ್ಚಿನ ಖುಷಿಯನ್ನು ನೀಡುವುದು. ಉತ್ತಮ ಪರಿಮಳದಂತೆ ಕೂದಲು ಸಹ ರೇಷ್ಮೆ ಎಳೆಯಂತೆ ಹೊಳಪನ್ನು ಪಡೆದುಕೊಳ್ಳುವುದು. ರಾಸಾಯನಿಕ ಪದಾರ್ಥಗಳಿಂದ ಬಳಲಿದ್ದ ಕೇಶರಾಶಿಗಳು ಸಹ ನೈಸರ್ಗಿಕ ರೀತಿಯಲ್ಲಿ ಆರೈಕೆ ಪಡೆದುಕೊಳ್ಳುತ್ತವೆ. ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಲು ಬಯಸುವವರು ಸಹ ಈ ಎಣ್ಣೆಯನ್ನು ಅನ್ವಯಿಸಿಕೊಂಡು ಮೃದುವಾಗಿ ಮಸಾಜ್ ಮಾಡಬಹುದು. ಈ ಎಣ್ಣೆಯಿಂದ ಕೂದಲುಗಳ ಮಸಾಜ್ ಅಥವಾ ನಿತ್ಯದ ಕೂದಲ ಆರೈಕೆಯಲ್ಲಿ ಬಳಸುವುದರಿಂದ ಬಹುಬೇಗ ಕೂದಲು ಸಂಬಂಧಿ ಸಮಸ್ಯೆಗಳಿಂದ ದೂರವಾಗಬಹುದು. ಜೊತೆಗೆ ಕೂದಲು ನೈಸರ್ಗಿಕವಾಗಿ ಮೃದು ಹಾಗೂ ಕಾಂತಿಯಿಂದ ಕಂಗೊಳಿಸುವುದು.

ಭಾರತದಲ್ಲಿ ಇರುವ ಅನೇಕ ಕೇಶ ಆರೈಕೆಯ ಉತ್ಪನ್ನಗಳಲ್ಲಿ ಪ್ಯಾರಚುಟ್ ಸಂಸ್ಥೆ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಸ್ಥೆಯಿಂದ ತಯಾರಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಈ ಉತ್ಪನ್ನ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲೋವೆರಾ ಮತ್ತು ಅಡ್ವಾನ್ಸಡ್ ಪ್ಯಾರಚುಟ್ ಎಣ್ಣೆಯ ಮಿಶ್ರಣದಲ್ಲಿ ತಯಾರಾದ ಈ ಉತ್ಪನ್ನ ಕೇಶರಾಶಿಗಳನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ. ಈಗಾಗಲೇ ಈ ಸಂಸ್ಥೆಯ ಉತ್ಪನ್ನವು ಮಿಲಿಯನ್ ಜನರ ನಂಬಿಕೆಗೆ ಅರ್ಹವಾಗಿದೆ.

ಹಾಗಾದರೆ ಇನ್ನೇಕೆ ತಡ? ತೆಂಗಿನ ಎಣ್ಣೆ ಮತ್ತು ಅಲೋವೆರಾ ಮಿಶ್ರಣದಲ್ಲಿ ಇರುವ ಈ ಎಣ್ಣೆ ಬಳಸಿ ಕೂದಲನ್ನು ಆಕರ್ಷಕಗೊಳಿಸಿ... ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ...

English summary

Best Hair Oil For Different Hair Types

We all have probably heard about the myriad benefits that Aloe Vera gel brings to the table. These benefits are not only limited to skin disorders, but Aloe Vera is also capable of addressing a multitude of hair-related issues. Its proteolytic enzymes heal and repair the damaged cells on your scalp besides putting brake on hair fall, and thus naturally making way for thick and voluminous hair. Aloe Vera juice also contains around 96% water, and owing to this high moisture-content Aloe Vera well-conditions your hair, locking its natural nutrients and hydration.
X
Desktop Bottom Promotion