For Quick Alerts
ALLOW NOTIFICATIONS  
For Daily Alerts

ಕಡಲೆಹಿಟ್ಟಿನ ಹೇರ್ ಮಾಸ್ಕ್! ಇದು ಕೂದಲನ್ನು ಬಲಿಷ್ಠ ಹಾಗೂ ಆರೋಗ್ಯವಾಗಿಡುವುದು!

|

ರೇಷ್ಮೆಯಂತೆ ಹೊಳೆಯುವ, ಉದ್ದಗಿನ ಹಾಗೂ ಕಡುಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗಿರುವುದು. ಇಂತಹ ಕೂದಲು ಸೌಂದರ್ಯ ಮತ್ತಷ್ಟು ಎದ್ದು ಕಾಣುವಂತೆ ಮಾಡುವುದು. ಕೂದಲು ಆರೋಗ್ಯ ಹಾಗೂ ಸುಂದರವಾಗಿದ್ದರೆ ಆಗ ನೋಡುಗರಿಗೂ ಅದು ಚಂದ. ಇಂತಹ ಕೂದಲು ಪಡೆಯಲು ಹೆಚ್ಚಿನವರು ತುಂಬಾ ಕಷ್ಟಪಡುವರು. ಯಾಕೆಂದರೆ ಸುಂದರ ಕೂದಲು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಶ್ರಮ ಅಗತ್ಯ. ಶ್ರಮವಿದ್ದಲ್ಲಿ ಕೂದಲು ಸುಂದರವಾಗಿರುವುದು.

ಆರೋಗ್ಯಕರ ಕೂದಲನ್ನು ಪಡೆಯಲು ಅದಕ್ಕೆ ಪ್ರತಿನಿತ್ಯದ ಆರೈಕೆ ಕೂಡ ಬೇಕಾಗಿರುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಶಾಂಪೂ ಹಾಗೂ ಕಂಡೀಷನರ್ ಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡುವವರು ಇದ್ದಾರೆ. ಇಂತಹ ಉತ್ಪನ್ನಗಳು ತಕ್ಷಣಕ್ಕೆ ಕೂದಲಿಗೆ ಕಾಂತಿ ನೀಡಿದರೂ ಮುಂದೆ ಇದು ಅಡ್ಡ ಪರಿಣಾಮ ತೋರಿಸಲು ಆರಂಭವಾಗುವುದು. ಇದರಿಂದ ಕೂದಲು ನಿಸ್ತೇಜವಾಗಿ, ತನ್ನ ನೈಸರ್ಗಿಕ ಕಾಂತಿ ಕಳೆದುಕೊಳ್ಳುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು ಈ ಲೇಖನ. ನಿಮಗೆಲ್ಲರಿಗೂ ಅಡುಗೆ ಮನೆಯಲ್ಲಿ ಸಿಗುವಂತಹ ಕಡಲೆಹಿಟ್ಟಿನ ಬಗ್ಗೆ ಖಂಡಿತವಾಗಿಯೂ ತಿಳಿದಿರಬಹುದು.

ಕಡಲೆಹಿಟ್ಟನ್ನು ನಾವು ಏನಾದರೂ ತಿಂಡಿ ಕರಿಯಲು ಬಳಸುವ ಜತೆಗೆ ಇತರ ಕೆಲವೊಂದು ಉಪಯೋಗಗಳು ಇದರಲ್ಲಿವೆ. ಆದರೆ ಇದನ್ನು ಕೂಡಲಿಗೆ ಹೇಗೆ ಬಳಸಿಕೊಳ್ಳುವುದು. ತ್ವಚೆಯ ಆರೈಕೆಯಲ್ಲಿ ಇದು ಮುಖ್ಯ ಸ್ಥಾನ ಪಡೆದಿದೆ. ಆದರೆ ಕೂದಲಿಗೆ ಇದನ್ನು ಬಳಸಬಹುದು ಎಂದು ನೀವು ಇದುವರೆಗೆ ಕೇಳಿರಲಿಕ್ಕಿಲ್ಲ. ಆದರೆ ಹಿಂದಿನಿಂದಲೂ ಕಡಲೆಹಿಟ್ಟನ್ನು ಕೂದಲಿನ ಆರೈಕೆಗೆ ಬಳಸಿಕೊಂಡು ಬರಲಾಗುತ್ತಾ ಇದೆ. ಕಡಲೆಹಿಟ್ಟಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದು ಕೂದಲಿಗೆ ತುಂಬಾ ಲಾಭಕಾರಿಯಾಗಿದೆ. ಇದು ಕೂದಲನ್ನು ತುಂಬಾ ಬಲಿಷ್ಠ ಹಾಗೂ ಆರೋಗ್ಯವಾಗಿಡುವುದು. ಇದರಿಂದ ಕೂದಲು ರೇಷ್ಮೆಯಂತೆ ಹೊಳೆಯುವುದು. ಕಡಲೆಹಿಟ್ಟಿನಿಂದ ಕೂದಲಿಗೆ ಆಗುವ ಲಾಭಗಳೆಂದರೆ...

ಕೂದಲಿನ ಬೆಳವಣಿಗೆ

ಕೂದಲಿನ ಬೆಳವಣಿಗೆ

*ಕೂದಲು ಉದುರುವಿಕೆ ತಡೆಯುವುದು

*ಕೂದಲನ್ನು ಶುಚಿಗೊಳಿಸಲು ನೆರವಾಗುವುದು

*ಕೂದಲು ಗಂಟು ಕಟ್ಟುವುದನ್ನು ತಡೆಯುವುದು.

*ಕೂದಲು ಒಣಗುವುದನ್ನು ತಡೆಯುವುದು.

*ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು.

*ತಲೆಹೊಟ್ಟು ನಿವಾರಣೆ ಮಾಡುವುದು.

*ಕಾಂತಿಯುತ ಮತ್ತು ಉದ್ದಗಿನ ಕೂದಲು ನೀಡುವುದು.

*ಕೂದಲಿನ ತುದಿ ಒಡೆಯುವುದನ್ನು ತಡೆಯುವುದು.

*ಕಡಲೆಹಿಟ್ಟಿನಲ್ಲಿ ಇರುವಂತಹ ಈ ಎಲ್ಲಾ ಗುಣಗಳು ಕೂದಲನ್ನು ಉದ್ದ ಹಾಗೂ ಕಾಂತಿಯುತವಾಗಿಸುವುದು. ಇದಕ್ಕಾಗಿ ನೀವು ಮಾಡಬೇಕಾದ ಕೆಲಸವೆಂದರೆ ನೀವು ಕಡಲೆಹಿಟ್ಟಿನ ಮಾಸ್ಕ್ ನ್ನು ಪ್ರತಿನಿತ್ಯ ಬಳಸಿಕೊಳ್ಳಬೇಕು. ವಿವಿಧ ರೀತಿಯ ಕಡಲೆಹಿಟ್ಟಿನ ಮಾಸ್ಕ್ ಕೂದಲಿನ ಹಲವಾರು ರೀತಿಯ ಸಮಸ್ಯೆಯನ್ನು ನಿವಾರಣೆ ಮಾಡುವುದು. ಇದು ವಿವಿಧ ರೀತಿಯ ಕೂದಲಿಗೂ ನೆರವಾಗುವುದು. ಕೂದಲಿನ ಆರೈಕೆಗೆ ಬಳಸಿಕೊಳ್ಳಬಹುದಾದ ಕಡಲೆಹಿಟ್ಟಿನ ಮಾಸ್ಕ್ ಬಗ್ಗೆ ನೀವು ತಿಳಿಯಿರಿ.

Most Read:ಕಡಲೆಹಿಟ್ಟಿನ ಫೇಸ್ ಪ್ಯಾಕ್‌ ಬಳಸಿ-ಸೌಂದರ್ಯ ಹೆಚ್ಚಿಸಿಕೊಳ್ಳಿ

ಕಡಲೆಹಿಟ್ಟು ಮತ್ತು ಮೊಸರಿನ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಮೊಸರಿನ ಹೇರ್ ಮಾಸ್ಕ್

ಕಡಲೆಹಿಟ್ಟಿಗೆ ಮೊಸರನ್ನು ಮಿಶ್ರಣ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಂಡರೆ ಇದು ತಲೆಬುರುಡೆಯನ್ನು ಪುನರ್ ಶ್ಚೇತನಗೊಳಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಮೊಸರಿನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಮತ್ತು ಲಾಭಕಾರಿ ಬ್ಯಾಕ್ಟೀರಿಯಾಗಳು ತಲೆಬುರುಡೆಯಲ್ಲಿ ಇರುವಂತಹ ಕಲ್ಮಷ ಹಾಗೂ ಕೊಳೆಯನ್ನು ಹೋಗಲಾಡಿಸುವುದು. ನಿಮಗೆ ತಲೆಬುರುಡೆಯಲ್ಲಿ ಯಾವಾಗಲೂ ಕಿರಿಕಿರಿ ಮತ್ತು ತುರಿಕೆ ಕಾಣಿಸಿಕೊಳ್ಳುತ್ತಲಿದ್ದರೆ ಆಗ ನೀವು ಈ ಮಿಶ್ರಣಕ್ಕೆ ಸ್ವಲ್ಪ ಅರಶಿನ ಹುಡಿ ಹಾಕಿಕೊಳ್ಳಿ. ಕಡಲೆಹಿಟ್ಟು ಮತ್ತು ಮೊಸರು ಅದ್ಭುತವಾಗಿ ಕೆಲಸ ಮಾಡುವುದು. ಇದು ಶಾಂಪೂ ಮತ್ತು ಕಂಡೀಷನರ್ ಗೆ ಒಳ್ಳೆಯ ಪರ್ಯಾಯವೆಂದು ಹೇಳಬಹುದು.

ಬಳಸಿಕೊಳ್ಳುವುದು ಹೇಗೆ?

*ಸ್ವಲ್ಪ ಕಡಲೆಹಿಟ್ಟು ತೆಗೆದುಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮೊಸರು ಹಾಕಿ.

*ಇದಕ್ಕೆ ಈಗ ನೀವು ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಕೂದಲಿಗೆ ಈ ಮಿಶ್ರಣವನ್ನು ನೀವು ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ.

*30 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕಡಲೆಹಿಟ್ಟು ಮತ್ತು ಆಲಿವ್ ತೈಲದ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಆಲಿವ್ ತೈಲದ ಹೇರ್ ಮಾಸ್ಕ್

ಆಲಿವ್ ತೈಲವು ಕೂದಲಿಗೆ ತುಂಬಾ ಆರೋಗ್ಯಕಾರಿ ಮತ್ತು ಇದನ್ನು ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡಿದಾಗ ಮತ್ತಷ್ಟು ಪರಿಣಾಮಕಾರಿಯಾಗಿ ಇರುವುದು. ಕಡಲೆಹಿಟ್ಟು ಮತ್ತು ಆಲಿವ್ ತೈಲದ ಮಿಶ್ರಣವು ಕೂದಲನ್ನು ತುಂಬಾ ಉದ್ದ ಮತ್ತು ಬಲವಾಗಿಸುವುದು.

ಬಳಸಿಕೊಳ್ಳುವುದು ಹೇಗೆ?

*ಸ್ವಲ್ಪ ಕಡಲೆಹಿಟ್ಟು ತೆಗೆದುಕೊಳ್ಳಿ ಮತ್ತು ಇದಕ್ಕೆ ಸ್ವಲ್ಪ ಆಲಿವ್ ತೈಲ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ದಪ್ಪಗಿನ ಮಿಶ್ರಣ ಮಾಡಿ.

*ಕೂದಲಿನ ಬುಡಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯ ಹಾಗೆ ಬಿಡಿ.

*ಕೂದಲು ಸಂಪೂರ್ಣವಾಗಿ ಒಣಗುವ ಮೊದಲು ಇದನ್ನು ಉಗುರುಬೆಚ್ಚಗಿನ ನೀಡಿನಿಂದ ತೊಳೆಯಿರಿ.

ಕಡಲೆಹಿಟ್ಟು ಮತ್ತು ಬಾದಾಮಿ ಹುಡಿಯ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಬಾದಾಮಿ ಹುಡಿಯ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಬಾದಾಮಿ ಹುಡಿಯನ್ನು ಮಿಶ್ರಣ ಮಾಡಿಕೊಂಡರೆ ಇದರು ತುಂಬಾ ಆರೋಗ್ಯಕಾರಿ, ಕಪ್ಪಗಿನ ಮತ್ತು ಕಾಂತಿಯುತ ಕೂದಲನ್ನು ನೀಡುವುದು. ಇದು ಕೂದಲಿನ ವಿನ್ಯಾಸ ಸುಧಾರಣೆ ಮಾಡುವುದು ಮತ್ತು ನೈಸರ್ಗಿಕ ಬಣ್ಣ ಮತ್ತು ಕೂದಲು ನೀಡುವುದು. ಇದಕ್ಕೆ ನೀವು ವಿಟಮಿನ್ ಇ ಕ್ಯಾಪ್ಸೂಲ್ ನ ಮಿಶ್ರಣವನ್ನು ಹಾಕಿಕೊಳ್ಳಿ. ಇದರಿಂದ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ಬಳಸುವುದು ಹೇಗೆ?

*ಸ್ವಲ್ಪ ಕಡಲೆಹಿಟ್ಟು ಮತ್ತು ಬಾದಾಮಿ ಹುಡಿ ತೆಗೆದುಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ.

*ಇದಕ್ಕೆ ಸ್ವಲ್ಪ ಲಿಂಬೆರಸ ಮತ್ತು ಜೇನುತುಪ್ಪ ಬೆರೆಸಿಕೊಂಡು ಮಿಶ್ರಣ ಮಾಡಿ ಮತ್ತು ಅದರ ಪೇಸ್ಟ್ ಮಾಡಿಕೊಳ್ಳಿ.

*ಈ ಮಾಸ್ಕ್ ನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯ ಕಾಲ ಹಾಗೆ ಬಿಡಿ.

*ಬಳಿಕ ನೀವು ಸಾಮಾನ್ಯ ನೀರಿನಿಂದ ಕೂದಲು ತೊಳೆಯಿರಿ.

*ವಾರದಲ್ಲಿ ಎರಡು ಸಲ ಇದನ್ನು ನೀವು ಬಳಸಿಕೊಂಡರೆ ಆಗ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು.

Most Read:ಕೂದಲು ದಪ್ಪವಾಗಿ ಬೆಳೆಯಲು 'ಕರ್ಪೂರದ ಎಣ್ಣೆ' ಯ ಚಿಕಿತ್ಸೆ

ಕಡಲೆಹಿಟ್ಟು ಮತ್ತು ಮೊಟ್ಟೆಯ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಮೊಟ್ಟೆಯ ಹೇರ್ ಮಾಸ್ಕ್

ಕೂದಲು ತುಂಬಾ ನಿಸ್ತೇಜ ಹಾಗೂ ಒಣಗಿದ್ದರೆ ಆಗ ನೀವು ಈ ಹೇರ್ ಮಾಸ್ಕ್ ನ್ನು ಬಳಸಿಕೊಳ್ಳಬೇಕು. ಕಡಲೆಹಿಟ್ಟು ಮತ್ತು ಮೊಟ್ಟೆಯು ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡುವುದು. ಇದು ಕೂದಲನ್ನು ನಯ ಹಾಗೂ ರೇಷ್ಮಯಂತೆ ಮಾಡುವುದು. ಕೂದಲಿನ ಒಣತ್ವ ನಿವಾರಣೆ ಮಾಡುವುದು ಮತ್ತು ಕೂದಲು ತುಂಬಾ ನಯ ಹಾಗೂ ಕಾಂತಿಯುತವಾಗುವಂತೆ ಮಾಡುವುದು.

ತಯಾರಿಸಿಕೊಳ್ಳುವ ವಿಧಾನ

*ಸ್ವಲ್ಪ ಕಡಲೆಹಿಟ್ಟು ಮತ್ತು ಮೊಟ್ಟೆಯ ಲೋಳೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

*ಇದಕ್ಕೆ ಲಿಂಬೆ ಮತ್ತು ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.

*ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯ ಕಾಲ ಹಾಗೆ ಬಿಡಿ.

*ಇದರ ಬಳಿಕ ನೀವು ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ಸರಿಯಾಗಿ ತೊಳೆಯಿರಿ.

Most Read:ಕೂದಲಿನ ಸೌಂದರ್ಯ ಹೆಚ್ಚಿಸಲು ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್ ಬಳಸಿ

ಕಡಲೆಹಿಟ್ಟು ಮತ್ತು ಮಯೋನಿಸ್ ಹೇರ್ ಮಾಸ್ಕ್

ಕಡಲೆಹಿಟ್ಟು ಮತ್ತು ಮಯೋನಿಸ್ ಹೇರ್ ಮಾಸ್ಕ್

ಕಡಲೆಹಿಟ್ಟಿನೊಂದಿಗೆ ಮಯೋನಿಸ್ ನ್ನು ಬೆರೆಸಿಕೊಂಡಾಗ ಇದು ಕೂದಲಿಗೆ ಅದ್ಭುತವಾಗಿ ಕೆಲಸ ಮಾಡುವುದು. ಇದು ಕೂದಲಿಗೆ ನೀವು ಬಯಸಿದ ರೀತಿಯಲ್ಲಿ ಚಿಕಿತ್ಸೆ ನೀಡುವುದು. ಈ ಹೇರ್ ಮಾಸ್ಕ್ ಕೂದಲಿಗೆ ಮೊಶ್ಚಿರೈಸರ್ ನೀಡುವುದು ಮತ್ತು ಕೂದಲು ಗಂಟು ಕಟ್ಟುವುದನ್ನು ತಡೆಯುವುದು. ಇಷ್ಟು ಮಾತ್ರವಲ್ಲದೆ ಕೂದಲಿಗೆ ಆಳವಾಗಿ ಕಂಡೀಷನ್ ಮಾಡುವುದು. ಕೂದಲಿನ ಈ ಹೇರ್ ಮಾಸ್ಕ್ ಕೂದಲಿನ ಬೆಳವಣಿಗೆಗೆ ಕೂಡ ನೆರವಾಗುವುದು.

ಬಳಸಿಕೊಳ್ಳುವುದು ಹೇಗೆ?

*ಸ್ವಲ್ಪ ಕಡಲೆಹಿಟ್ಟು ತೆಗೆದುಕೊಂಡು ಅದನ್ನು ಮಯೋನಿಸ್ ಜತೆಗೆ ಮಿಶ್ರಣ ಮಾಡಿಕೊಳ್ಳಿ.

*ಈಗ ಇದಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

*ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಡಿ.

*ಸ್ವಲ್ಪ ಸಮಯ ಬಿಟ್ಟ ಬಳಿಕ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ಎಲ್ಲಾರೀತಿಯ ಕೂದಲಿನ ಸಮಸ್ಯೆಗೆ ಸರಿಯಾದ ಪರಿಹಾರ

ಎಲ್ಲಾರೀತಿಯ ಕೂದಲಿನ ಸಮಸ್ಯೆಗೆ ಸರಿಯಾದ ಪರಿಹಾರ

ಕಡಲೆಹಿಟ್ಟಿನ ಈ ಹೇರ್ ಮಾಸ್ಕ್ ಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗೆ ಸರಿಯಾದ ಪರಿಹಾರ ಒದಗಿಸುವುದು. ಇದರಿಂದಾಗಿ ನೀವು ಕೂದಲಿಗೆ ಈ ಹೇರ್ ಮಾಸ್ಕ್ ಗಳನ್ನು ಬಳಸಿಕೊಂಡು ಕೂದಲಿನ ಸಮಸ್ಯೆ ನಿವಾರಣೆ ಮಾಡಿ, ಸುಂದರ, ಕಾಂತಿಯುತ, ದಪ್ಪ ಹಾಗೂ ಕಪ್ಪಗಿನ ಕೂದಲನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಯಾವುದೇ ಅನಿಸಿಕೆಗಳು ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯದಿರಿ.

English summary

Besan Hair Masks For Healthy Hair

We all know besan, also known as gram flour, is good for our skin. But, do you know besan can do wonders to your hair too? Yeah, you heard it right. From the ancient times besan is being used to treat various skin problems and hair issues. Besan has too many healthy nutrients in it, which is proved to be beneficial for your hair. It makes your hair strong and healthy, and give your tresses a flawless look
X
Desktop Bottom Promotion