For Quick Alerts
ALLOW NOTIFICATIONS  
For Daily Alerts

ಕೂದಲು ವೇಗವಾಗಿ ಬೆಳೆಯಲು ಪ್ರಯತ್ನಿಸಿ- ಅಲೋವೆರಾ- ಜೇನಿನ ಹೇರ್ ಮಾಸ್ಕ್

By Deepu
|

ತಲೆಗೂದಲು ಎಂಬುದು ಪುರುಷ ಸ್ತ್ರೀಯರಿಗೆ ಸೌಂದರ್ಯ ಕಲಶವಿದ್ದಂತೆ. ಹದಿಹರೆಯದಲ್ಲಿಯೇ ಅಥವಾ ನಡುವಯಸ್ಸಿನಲ್ಲಿ ಕೂದಲಿನ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಪರಿಸರ ಮಾಲಿನ್ಯ, ಕಲುಷಿತ ನೀರು, ಒತ್ತಡ, ಕೂದಲಿನ ಕಾಳಜಿಯನ್ನು ಮಾಡದೇ ಇರುವುದು, ಪೋಷಕಾಂಶಗಳ ಕೊರತೆ ಹೀಗೆ ಹೆಚ್ಚಿನ ಸಮಸ್ಯೆಗಳಿಂದ ಇಂದು ತಲೆಗೂದಲುದುರುವಿಕೆ ಪುರುಷರನ್ನು ಸ್ತ್ರೀಯರನ್ನು ಕಾಡುತ್ತಿದೆ. ಮಾರುಕಟ್ಟೆಯಲ್ಲಿ ಬರುವ ಕೂದಲಿನ ಪೋಷಣೆಯ ಎಷ್ಟೋ ವಸ್ತುಗಳನ್ನು ಬಳಸಿ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತಿಲ್ಲ ಎಂದಾದಲ್ಲಿ ಇವುಗಳು ನಿಮ್ಮ ಕೂದಲಿಗೆ ಸರಿಹೊಂದುತ್ತಿಲ್ಲ ಎಂದಾಗಿದೆ. ಕೂಡಲೇ ಈ ವಸ್ತುಗಳನ್ನು ಕೂದಲಿಗೆ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ ಪ್ರಾಕೃತಿಕ ವಸ್ತುಗಳ ಬಳಕೆಯನ್ನು ಮಾಡಿ.

ಹೆಚ್ಚಿನ ರಾಸಾಯನಿಕ ಅಂಶಗಳಿಂದ ಕೂಡಿರುವ ಈ ಉತ್ಪನ್ನಗಳು ನಿಮ್ಮ ಕೂದಲನ್ನು ಇನ್ನಷ್ಟು ಹಾನಿಗೆ ಒಳಪಡುವಂತೆ ಮಾಡುತ್ತದೆ. ಜಾಹೀರಾತಿಗೆ ಮರುಳಾಗಿ ಈ ಉತ್ಪನ್ನಗಳ ಖರೀದಿಯನ್ನು ನೀವು ಮಾಡಿದಲ್ಲಿ ಹಾನಿಯನ್ನು ನೀವು ಅನುಭವಿಸಬೇಕಾಗುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಪೋಷಕಾಂಶಗಳ ಸೇವನೆಯನ್ನು ಮಾಡಿ, ಕೃತಕ ವಸ್ತುಗಳಿಂದ ನೈಸರ್ಗಿಕ ವಸ್ತುಗಳನ್ನು ಬಳಸಿ. ಇದಕ್ಕಾಗಿ ನೀವು ಎಲ್ಲೆಲ್ಲಿ ಅಲೆಯಬೇಕಾಗಿಲ್ಲ. ನಿಮ್ಮ ಪರಿಸರದಲ್ಲಿಯೇ ಈ ವಸ್ತುಗಳು ದೊರೆಯುತ್ತಿದ್ದು ಅವುಗಳ ಬಳಕೆಯನ್ನು ಮಾಡಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Aloe Vera

ವಾರಕ್ಕೊಮ್ಮೆಯಾದರೂ ಸ್ವಲ್ಪ ಸಮಯವನ್ನು ನೀವು ವ್ಯಯಿಸಿ ಈ ಪರಿಸರ ಉತ್ಪನ್ನಗಳ ಬಳಕೆಯನ್ನು ಮಾಡಿದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ. ತಲೆಗೂದಲು ಉದುರುವುದನ್ನು ನಿಲ್ಲಿಸಿ ಕೂದಲು ಸೊಂಪಾಗಿ ಬೆಳೆಯುವುದಕ್ಕಾಗಿ ನಾವು ಇಂದಿಲ್ಲಿ ಅಲೊವೇರಾ ಮತ್ತು ಜೇನಿನ ಹೇರ್ ಮಾಸ್ಕ್ ಮಾಹಿತಿಯನ್ನು ನೀಡುತ್ತಿದ್ದು ಇದು ಕೂದಲುದುರುವಿಕೆಯನ್ನು ನಿಲ್ಲಿಸಿ ಕೂದಲಿನ ಪೋಷಣೆಯನ್ನು ಮಾಡಲಿದೆ. ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳೇನು ಎಂಬುದನ್ನು ನೋಡೋಣ.

*1/2 ಕಪ್ ಅಲೊವೇರಾ ಜೆಲ್

*2 ಚಮಚ ಜೇನು

*1 ಚಮಚ ತೆಂಗಿನೆಣ್ಣೆ

*ಕೆಲವು ಹನಿಗಳಷ್ಟು ಲ್ಯಾವೆಂಡರ್ ಎಣ್ಣೆ

ಸಿದ್ಧಪಡಿಸುವುದು ಹೇಗೆ?

*ಮೊದಲಿಗೆ ಅಲೊವೇರಾವನ್ನು ಬಿಡಿಸಿ ಲೋಳೆಯನ್ನು ಸಿದ್ಧಪಿಡಿಸಿ

*ಒಂದು ಸ್ವಚ್ಛ ಪಾತ್ರೆಯಲ್ಲಿ ಅಲೊವೇರಾ ಜೆಲ್, ತೆಂಗಿನೆಣ್ಣೆ ಮತ್ತು ಜೇನನ್ನು ಮಿಶ್ರ ಮಾಡಿ.

*ಚೆನ್ನಾಗಿ ಈ ವಸ್ತುಗಳನ್ನು ಮಿಶ್ರ ಮಾಡಿ

*ಇದಕ್ಕೆ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ ಪುನಃ ಮಿಶ್ರ ಮಾಡಿ

*ಈ ಎಣ್ಣೆಯನ್ನು ಪರಿಮಳಕ್ಕಾಗಿ ಬಳಸಲಾಗುತ್ತದೆ

*ಈ ಮಿಶ್ರಣವನ್ನು ನೀವು ನಂತರ ಬಳಸುವುದಕ್ಕಾಗಿ ಕೂಡ ಸಂಗ್ರಹಿಸಿಟ್ಟುಕೊಳ್ಳಬಹುದು.

ಹಚ್ಚಿಕೊಳ್ಳುವುದು ಹೇಗೆ?

* ಮೊದಲಿಗೆ ನಿಮ್ಮ ಕೂದಲನ್ನು ಸಲ್ಪೇಟ್ ರಹಿತ ಶ್ಯಾಂಪೂ ಬಳಸಿ ತೊಳೆದುಕೊಳ್ಳಿ

* ಅಲೊವೇರಾ ಮಾಸ್ಕ್ ಅನ್ನು ತೆಗೆದುಕೊಂಡು ಸಂಪೂರ್ಣ ಕೂದಲಿಗೆ ಹಚ್ಚಿ. ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಲು ಮರೆಯದಿರಿ.

* ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿ ನಂತರ ಮಾಸ್ಕ್ ಹಚ್ಚಿ

* ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ ಶವರ್ ಕ್ಯಾಪ್ ಹಾಕಿ ಗಂಟೆಯ ಕಾಲ ಕಾಯಿರಿ

* ನಂತರ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ

* ಸಲ್ಪೇಟ್ ರಹಿತ ಶ್ಯಾಂಪೂ ಬಳಸಿ ಇದರಿಂದ ಕೂದಲುದುರುವುದು ನಿಲ್ಲುತ್ತದೆ

ಯಾವಾಗ ಬಳಸಬೇಕು?

ವಾರದಲ್ಲಿ 2-3 ಬಾರಿ ಈ ಮಾಸ್ಕ್ ಅನ್ನು ನಿಮ್ಮ ಕೂದಲಿಗೆ ಬಳಸಬಹುದು. ಈ ಮಾಸ್ಕ್‌ನೊಂದಿಗೆ ಸಲ್ಫೇಟ್ ರಹಿತ ಶ್ಯಾಂಪೂ ಬಳಸಿ.

ಅಲೊವೇರಾದ ಪ್ರಯೋಜನಗಳು

ಅಲೊವೇರಾ ಅಥವಾ ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ. ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ.

ಹೆಚ್ಚಿನ ಸೌಂದರ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಅನಾದಿ ಕಾಲದಿಂದಲೂ ಅಲೊವೇರಾವನ್ನು ಬಳಸುತ್ತಿದ್ದಾರೆ. ತ್ವಚೆಗೆ ಇದು ಹೇಗೆ ಪ್ರಯೋಜಕಾರಿಯೋ ಅಂತೆಯೇ ಕೇಶ ಕಾಳಜಿಯನ್ನು ಮಾಡಲಿದೆ. ಕೂದಲಿಗೆ ಪೋಷಣೆಯ ನೀಡುವ ಅಂಶಗಳನ್ನು ಅಲೊವೇರಾ ಹೊಂದಿದ್ದು ಕೂದಲನ್ನು ಕ್ಷಿಪ್ರವಾಗಿ ಬೆಳೆಯಿಸುತ್ತದೆ. ಇದರಲ್ಲಿ ಅಮಿನೊ ಆ್ಯಸಿಡ್, ವಿಟಮಿನ್ ಎ, ಸಿ ಮತ್ತು ಇ ಅನ್ನು ಒಳಗೊಂಡಿದೆ. ಕೂದಲಿನ ಸರ್ವ ಸಮಸ್ಯೆಗಳನ್ನು ಅಲೊವೇರಾ ನಿವಾರಿಸುತ್ತದೆ.

ಜೇನಿನ ಪ್ರಯೋಜನಗಳು

ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಜೇನನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಪುರಾಣಗಳಲ್ಲಿ ಜೇನಿನ ಆರೋಗ್ಯಕರ ಗುಣಗಳ ಬಗ್ಗೆ ಉಲ್ಲೇಖವಿದೆ. ವಿಶ್ವದಾದ್ಯಂತ ಜೇನನ್ನು ಕೃಷಿ ಮಾಡಲಾಗುತ್ತದೆ. ಜೇನುಸಾಕಣೆಯ ಇತಿಹಾಸ ಸುಮಾರು ಕ್ರಿಸ್ತಪೂರ್ವ ಏಳುನೂರಕ್ಕೂ ಹಿಂದಿನದು ಎಂದು ತಿಳಿದುಬರುತ್ತದೆ. ಜೇನು ಸವಿಯುವುದು ಜೇನುಹುಳಗಳ ಆಹಾರವನ್ನು ಕದ್ದಂತೆ ಎಂಬ ಅಪವಾದವೂ ಇದೆ. ವೈಜ್ಞಾನಿಕವಾಗಿ ಜೇನು ಮಾನವನ ದೇಹಕ್ಕೆ ಉತ್ತಮವಾದ ಆಹಾರದ ಜೊತೆ ಉತ್ತಮವಾದ ಔಷಧಿಯೂ ಆಗಿದೆ... ಜೇನು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಕೂದಲಿನ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ. ಜೇನು ಕೂದಲಿಗೆ ಪೋಷಕಾಂಶಗಳನ್ನು ಒದಗಿಸಿ ಬೇರುಗಳನ್ನು ಗಟ್ಟಿಗೊಳಿಸುತ್ತದೆ. ಕೂದಲಿನ ಬೇರನ್ನು ಪೋಷಣೆ ಮಾಡುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎಂಜೀಮ್‌ಗಳು, ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಇದು ಹೊಂದಿದೆ.

ತೆಂಗಿನೆಣ್ಣೆಯ ಪ್ರಯೋಜನಗಳು

ನಮಗೆಲ್ಲರಿಗೂ ಗೊತ್ತಿರುವ ಹಾಗೆ ತಲತಲಾಂತರದಿಂದ ನಮ್ಮ ದೇಶದ ಹೆಂಗಸರು ತೆಂಗಿನೆಣ್ಣೆ ಮೇಲೆ ವಿಶ್ವಾಸವಿಟ್ಟು ಸೌಂದರ್ಯ ಸಾಧನವಾಗಿ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶದವರೂ ಕೂಡ ಇದರ ಬಳಕೆಯನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಹುಟ್ಟಿದಾಗಿನಿಂದ ಇದರ ಬಳಕೆಯನ್ನು ಕಾಣುತ್ತಾ ಬಂದಿದ್ದೇವೆ. ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಒಂದು ಜಾರಿನಲ್ಲಿ ಕೊಬ್ಬರಿ ಎಣ್ಣೆಯು ಅವಶ್ಯವಾಗಿ ಕಂಡು ಬರುತ್ತದೆ. ಅದರಲ್ಲಿಯೂ ಹೆಚ್ಚಿನ ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ತೆಂಗಿನೆಣ್ಣೆ ಉಪಯೋಗಕಾರಿ. ಫ್ಯಾಟಿ ಆ್ಯಸಿಡ್ ಅನ್ನು ಈ ಎಣ್ಣೆಯು ಹೊಂದಿದ್ದು ತಲೆಬುಡದಲ್ಲಿ ಸಂಗ್ರಹವಾಗಿರುವ ಕೊಳಕನ್ನು ಹೋಗಲಾಡಿಸಿ ಕೂದಲನ್ನು ಪೋಷಿಸುತ್ತದೆ. ತಲೆಹೊಟ್ಟು ನಿವಾರಣೆ ಮಾಡುತ್ತದೆ. ಹಾಗಿದ್ದರೆ ಈ ಮಾಸ್ಕ್ ಅನ್ನು ಇಂದೇ ಬಳಸಿ ನೋಡಿ ಮತ್ತು ನಿಮ್ಮ ಪ್ರತ್ರಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

English summary

Aloe Vera And Honey Mask For Hair Growth

We all look for shortcuts to make our hair grow longer. For this we all know that nothing can beat natural homemade remedies. There are some common reasons for increased hair fall like lack of protein, over exposure to the sun, environmental pollution, our lifestyle and also some hormonal issues. Whatever be the reason, severe hairfall is no less than a nightmare. So how do we stop this? Here is a simple homemade aloe vera and honey mask that helps in reducing hair fall and boosts hair growth.
Story first published: Tuesday, July 24, 2018, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more