For Quick Alerts
ALLOW NOTIFICATIONS  
For Daily Alerts

ದಪ್ಪ ಹಾಗೂ ದಟ್ಟ ಕೂದಲಿಗೆ ನೈಸರ್ಗಿಕ ಮನೆಮದ್ದುಗಳು

By Deepu
|

ಪ್ರತಿಯೊಬ್ಬ ಮಹಿಳೆಯ ಕನಸೆಂದರೆ ತಾನು ನಾಲ್ಕು ಜನರ ಮುಂದೆ ಸುಂದರವಾಗಿ ಕಾಣಬೇಕು. ಎಲ್ಲರೂ ನನ್ನ ಸೌಂದರ್ಯವನ್ನೇ ಹೊಗಳುತ್ತಿರಬೇಕು ಎನ್ನುವ ಆಸೆಯು ಪ್ರತಿಯೊಬ್ಬರಲ್ಲೂ ಇರುವುದು. ಸೌಂದರ್ಯ ಪಡೆಯಲು ಪ್ರಮುಖವಾಗಿ ಮುಖ, ದೇಹ ಹಾಗೂ ಕೂದಲು ತುಂಬಾ ಪ್ರಮುಖ ಪಾತ್ರ ವಹಿಸುವುದು. ಅದರಲ್ಲೂ ದಪ್ಪ ಹಾಗೂ ದಟ್ಟ ಕೂದಲು ಪ್ರತಿಯೊಬ್ಬ ಮಹಿಳೆಗೂ ತುಂಬಾ ಇಷ್ಟವಾಗುವುದು.

ಇಂತಹ ಕೂದಲು ಇರುವಂತಹ ಮಹಿಳೆಯರು ನಾಲ್ಕು ಜನರ ಮಧ್ಯೆ ನಿಂತಿದ್ದರೂ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಡುವಂತಹ ಸಮಸ್ಯೆಯೆಂದರೆ ಕೂದಲು ತೆಳುವಾಗುವುದು. ಈ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಪ್ರತಿಯೊಬ್ಬ ಮಹಿಳೆಗೂ ಇದು ತುಂಬಾ ಚಿಂತೆಯ ವಿಷಯವಾಗಿರುತ್ತದೆ.

ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಇದರಿಂದ ನಿಮಗೆ ಎಲ್ಲಿಗೂ ಹೋಗಲು ಕೂಡ ಮನಸ್ಸಾಗುವುದಿಲ್ಲ. ನೀವು ಕೂಡ ಕೂದಲು ತೆಳ್ಳಗಾಗುವಂತಹ ಸಮಸ್ಯೆ ಎದುರಿಸುತ್ತಾ ಇದ್ದರೆ ಈ ಲೇಖನ ಓದಿದ ಬಳಿಕ ನಿಮ್ಮ ಸಮಸ್ಯೆ ದೂರವಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ದಪ್ಪ ಹಾಗೂ ದಟ್ಟ ಕೂದಲನ್ನು ನೈಸರ್ಗಿಕ ವಿಧಾನದಿಂದ ಹೇಗೆ ಪಡೆದುಕೊಳ್ಳುವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದುತ್ತಾ ಸಾಗಿ...

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯಲ್ಲಿರುವಂತಹ ಪೋಷಕಾಂಶಗಳು ಕೂದಲಿನ ಎಳೆಗಳನ್ನು ಬಲಗೊಳಿಸುವುದು ಮತ್ತು ಅವುಗಳನ್ನು ಬುಡದಿಂದಲೇ ಬಲಗೊಳಿಸುವುದು. ಇದರಿಂದ ಕೂದಲು ತುಂಡಾಗುವುದು ತಪ್ಪುವುದು.

ಬಳಸುವುದು ಹೇಗೆ

ವಾರದಲ್ಲಿ ಒಂದು ಸಲ ಹರಳೆಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡು ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಇದನ್ನು ಮಾಡಿದ ಬಳಿಕ ಕೂದಲನ್ನು ಹದ ಬೆಚ್ಚಗಿನ ನೀರು ಮತ್ತು ಶಾಂಪೂ ಹಾಕಿ ತೊಳೆಯಿರಿ.

ಮೆಂತೆಯ ಕಾಳುಗಳು

ಮೆಂತೆಯ ಕಾಳುಗಳು

ಕೂದಲಿನ ಬುಡವನ್ನು ದುರ್ಬಲಗೊಳಿಸಿ ಕೂದಲಿನ ಎಳೆಗಳನ್ನು ತುಂಬಾ ತೆಳು ಹಾಗೂ ನಿಸ್ತೇಜ ಮಾಡುವಂತಹ ಕಲ್ಮಶಗಳನ್ನು ಮೆಂತ್ಯೆ ಕಾಳುಗಳು ತೆಗೆದು ಹಾಕುವುದು.

ಬಳಸುವ ವಿಧಾನ

ಒಂದು ಹಿಡಿ ಮೆಂತೆ ಕಾಳುಗಳನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಲಿಂಬೆ ರಸ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ

ಹಚ್ಚಿಕೊಂಡು ಒಂದು ಗಂಟೆ ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿ ರಸದಲ್ಲಿ ಕೂದಲಿಗೆ ನೆರವಾಗುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ಕೂದಲಿನ ವಿನ್ಯಾಸ ಬದಲಿಸಿ ಕೂದಲು ದಪ್ಪ ಹಾಗೂ ದಟ್ಟವಾಗುವಂತೆ ಮಾಡುವುದು.

ಬಳಕೆ ಹೇಗೆ

3-4 ಚಮಚ ಈರುಳ್ಳಿ ರಸವನ್ನು ಒಂದು ನೀರಿನೊಂದಿಗೆ ಬೆರೆಸಿಕೊಳ್ಳಿ ಮತ್ತು ಇದರಿಂದ ಕೂದಲು ತೊಳೆಯಿರಿ. ಸುಮಾರು 10-15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

ಬಳಿಕ ಹದ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ವಾರದಲ್ಲಿ ಒಂದು ಸಲ ಈ ಮನೆಮದ್ದನ್ನು ಬಳಸಿ.

ಸಂಪಿಗೆ ಎಲೆಗಳು

ಸಂಪಿಗೆ ಎಲೆಗಳು

ಹಿಂದಿನ ಕಾಲದಿಂದಲೂ ಕೂದಲಿನ ಆರೈಕೆಗಾಗಿ ಸಂಪಿಗೆ ಎಲೆಗಳನ್ನು ಬಳಸುತ್ತಾ ಇದ್ದರು. ಇದರಲ್ಲಿ ಇರುವಂತಹ ಖನಿಜಾಂಶ ಮತ್ತು ಪೋಷಕಾಂಶಗಳು ಕೂದಲು ವೇಗವಾಗಿ ದಪ್ಪಗಾಗಲು ನೆರವಾಗುವುದು.

ಬಳಸುವುದು ಹೇಗೆ?

ಎಲೆಗಳನ್ನು ರುಬ್ಬಿಕೊಂಡು ಅದರ ಹುಡಿಯನ್ನು ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಳ್ಳಿ. ತಯಾರಿಸಿದ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ ಮತ್ತು 15 ನಿಮಿಷ ಕಾಲ ಇದು ಹಾಗೆ ಇರಲಿ. ಹದ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿದರೆ ದಪ್ಪ ಹಾಗೂ ದಟ್ಟ ಕೂದಲು ನಿಮ್ಮದಾಗುವುದು.

ನೆಲ್ಲಿಕಾಯಿ ಎಣ್ಣೆ

ನೆಲ್ಲಿಕಾಯಿ ಎಣ್ಣೆ

ನೆಲ್ಲಿಕಾಯಿ ಎಣ್ಣೆಯನ್ನು ಬಳಸುವುದರಿಂದ ಕೂದಲು ಒಳ್ಳೆಯ ರೀತಿ ಬೆಳವಣಿಗೆಯಾಗುವುದು ಮತ್ತು ಇದು ಕೂದಲಿನ ಸಂಪೂರ್ಣ ವಿನ್ಯಾಸ ಬದಲಾಯಿಸಿ ದಪ್ಪ ಹಾಗೂ ದಟ್ಟ ಕೂದಲು ನಿಮಗೆ ನೀಡುವುದು.

ಬಳಸುವ ವಿಧಾನ

ನೆಲ್ಲಿಕಾಯಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ತಣ್ಣೀರು ಮತ್ತು ಶಾಂಪೂ ಬಳಸಿ ಕೂದಲು ತೊಳೆಯಿರಿ. ವಾರದಲ್ಲಿ

2-3 ಸಲ ಇದನ್ನು ಬಳಸಿದರೆ ವೇಗವಾಗಿ ಫಲಿತಾಂಶ ಪಡೆಯಬಹುದು.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಪ್ರೋಟೀನ್ ನಿಂದ ಸಮೃದ್ಧವಾಗಿರುವ ಮೊಟ್ಟೆಯ ಲೋಳೆಯು ಕೂದಲು ತೆಳ್ಳಗಾಗುವುದಕ್ಕೆ ಒಳ್ಳೆಯ ಪರಿಹಾರ. ಇದು ಕೂದಲು ತೆಳ್ಳಗಾಗುವುದನ್ನು ತಡೆದು ದಪ್ಪ ಹಾಗೂ ದಟ್ಟ ಕೂದಲು ನೀಡುವುದು.

ಬಳಸುವ ವಿಧಾನ

ಒಂದು ಸಣ್ಣ ಪಿಂಗಾಣಿಯಲ್ಲಿ ಒಂದು ಮೊಟ್ಟೆಯ ಲೋಳೆ ಹಾಕಿ. ಇದಕ್ಕೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆ ಹಾಕಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಲು ಕಲಸಿಕೊಳ್ಳಿ. 30 ನಿಮಿಷ ಬಳಿಕ ಹರ್ಬಲ್ ಶಾಂಪೂ ಬಳಸಿ ಕೂದಲು ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿ.

ಆಲಿವ್ ತೈಲ

ಆಲಿವ್ ತೈಲ

ವಿಟಮಿನ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಲಿವ್ ತೈಲವು ಕೂದಲನ್ನು ಬಲಗೊಳಿಸಿ ವಿನ್ಯಾಸವನ್ನು ಸುಧಾರಿಸುವುದು.

ಬಳಸುವ ವಿಧಾನ

ಆಲಿವ್ ತೈಲದಿಂದ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡ ಬಳಿಕ 3-4 ಗಂಟೆಗಳ ಕಾಲ ಹಾಗೆ ಬಿಡಿ. ಇದರ ಬಳಿಕ ಲಘು ಶಾಂಪೂ ಮತ್ತು ತಣ್ಣೀರಿನಿಂದ

ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿದರೆ ನಿಮಗೆ ಶ್ರೇಷ್ಠ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ.

English summary

Super-effective Natural Ingredients For Thicker And Denser Hair

If you too are someone who is experiencing thinning of hair, then we've got you covered. As today at Boldsky, we've brought together a list of inexpensive and easily available natural ingredients that can help you attain thicker and denser hair.Use any of the following age-old remedies to treat thinning of hair. Here, we've listed the ingredients and the most effective way to use them.
X
Desktop Bottom Promotion