ಬಿಳಿ ಕೂದಲಿನ ಸಮಸ್ಯೆಗೆ ಸರಳ ಹಳ್ಳಿ ಮದ್ದುಗಳು-ತ್ವರಿತ ಪರಿಹಾರ

By: manu
Subscribe to Boldsky

ವಯಸ್ಸಾದವರನ್ನು ನೋಡುವ ದೃಷ್ಟಿಯೇ ಬೇರೆ ಇರುವ ಕಾರಣ ವಯಸ್ಸಾಗುವುದು ಯಾರಿಗೂ ಇಷ್ಟವಿಲ್ಲ. ವಯಸ್ಸಾಗುವುದನ್ನು ತಡೆಯಲು ಇಂದಿನ ದಿನಗಳಲ್ಲಿ ಹಲವಾರು ಪ್ರಯತ್ನ ಮಾಡುತ್ತಾರೆ. ಅದರಲ್ಲೂ ವಯಸ್ಸಾಗಿರುವುದರ ಲಕ್ಷಣವಾಗಿರುವ ಬಿಳಿ ಕೂದಲು ನಿವಾರಣೆ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಾ ಇರುತ್ತದೆ. ಕೂದಲು ಬಿಳಿಯಾಗುತ್ತಿದೆ ಎಂದರೆ ಆತನಿಗೆ ವಯಸ್ಸಾಗುತ್ತದೆ ಎನ್ನಬಹುದು.

ಆದರೆ ಇಂದಿನ ದಿನಗಳಲ್ಲಿ ಸಣ್ಣಪ್ರಾಯದವರಲ್ಲೂ ಬಿಳಿ ಕೂದಲು ಕಾಣಿಸಿಕೊಳ್ಳುವುದು. ವಯಸ್ಸಾಗುತ್ತಾ ಇರುವವರು ಕೂದಲಿಗೆ ಬಣ್ಣ ಬಳಿದುಕೊಳ್ಳಬಹುದು. ಆದರೆ ಹದಿಹರೆಯದಲ್ಲೇ ಕೂದಲು ಬಿಳಿಯಾದರೆ ಆ ಸಂಕಷ್ಟ ಯಾರಿಗೂ ಬೇಡ. ಯಾಕೆಂದರೆ ಸಾಮಾಜಿಕವಾಗಿ ಬೆರೆಯಲು ಇದು ಅಡ್ಡಿಯುಂಟು ಮಾಡುವುದು. ಹದಿಹರೆಯದಲ್ಲಿ ಕೂದಲು ಬಿಳಿಯಾಗಲು ಒತ್ತಡ, ಕಲುಷಿತ ವಾತಾವರಣ, ಅನಾರೋಗ್ಯಕರ ಆಹಾರ ಮತ್ತು ಅನಾರೋಗ್ಯಕರ ಜೀವನಶೈಲಿ ಕಾರಣವಾಗಿದೆ. 

ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದು

ಕೂದಲು ಬಿಳಿಯಾಗಿದೆ ಎಂದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಇದಕ್ಕೆ ಹಲವಾರು ರೀತಿಯ ಮನೆಮದ್ದಗಳನ್ನು ತಯಾರಿಸಿಕೊಳ್ಳಬಹುದು. ಈ ನೈಸರ್ಗಿಕ ಮನೆಮದ್ದುಗಳು ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕೂದಲು ಅಕಾಲಿಕವಾಗಿ ಬಿಳಿಯಾಗದಂತೆ ತಡೆಯಲು ನೀವೇ ಮನೆಯಲ್ಲಿ ತಯಾರಿಸಬಹುದಾದ ದಿವ್ಯೌಷಧಿ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ...

ಈರುಳ್ಳಿ ಮತ್ತು ನಿಂಬೆರಸ

ಈರುಳ್ಳಿ ಮತ್ತು ನಿಂಬೆರಸ

ಅಕಾಲಿಕವಾಗಿ ಬರುವಂತಹ ಬಿಳಿ ಕೂದಲು ನಿವಾರಣೆ ಮಾಡಲು ಈರುಳ್ಳಿ ಮತ್ತು ಲಿಂಬೆರಸವು ತುಂಬಾ ಒಳ್ಳೆಯ ಔಷಧಿ. ಈರುಳ್ಳಿ ರಸದಲ್ಲಿ ಕ್ಯಾಟಲಸೆ ಎನ್ನುವ ಕಿಣ್ವವು ಸಮೃದ್ಧವಾಗಿದ್ದು, ಇದು ಹೈಡ್ರೋಜನ್ ಪೆರಾಕ್ಸೈಡ್ ನ್ನು ತಟಸ್ಥಗೊಳಿಸಿ ಬಿಳಿ ಕೂದಲು ಬರದಂತೆ ತಡೆಯುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಒಂದು ಮಧ್ಯಮ ಗಾತ್ರದ ಈರುಳ್ಳಿ

*ಒಂದು ಲಿಂಬೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1. ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಘನೀಕರಿಸಿ ಮತ್ತು ಮಿಕ್ಸಿಗೆ ಹಾಕಿಕೊಂಡು ಪೇಸ್ಟ್ ಮಾಡಿ.

2. ಈ ಪೇಸ್ಟ್ ನಿಂದ ಜ್ಯೂಸ್ ತೆಗೆದು ಒಂದು ಲಿಂಬೆಯ ರಸ ಅದಕ್ಕೆ ಹಾಕಿಕೊಳ್ಳಿ.

3. ಪ್ರತೀ ರಾತ್ರಿ ಈ ಮಿಶ್ರಣವನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ. ಇದರ ಫಲಿತಾಂಶ ಬೇಗನೆ ಕಂಡುಬರುವುದು.

ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'

ನೆಲ್ಲಿಕಾಯಿ, ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ

ನೆಲ್ಲಿಕಾಯಿ, ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ

ಬಿಳಿ ಕೂದಲು ಬರುವುದನ್ನು ತಡೆಯಲು ಇದು ತುಂಬಾ ಪರಿಣಾಮಕಾರಿ ಔಷಧಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*4-5 ಒಣಗಿಸಿದ ನೆಲ್ಲಿಕಾಯಿ

*2 ಚಮಚ ಬಾದಾಮಿ ಎಣ್ಣೆ

*2 ಚಮಚ ತೆಂಗಿನೆಣ್ಣೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಣಗಿದ ನೆಲ್ಲಿಕಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿಕೊಳ್ಳಿ.

*ಪ್ರತೀ ರಾತ್ರಿ ಇದನ್ನು ತಲೆಗೆ ಮಸಾಜ್ ಮಾಡಿಕೊಳ್ಳಿ.

*ಬೆಳಿಗ್ಗೆ ಎದ್ದು ನೀರಿನಿಂದ ತೊಳೆಯಿರಿ.

ಕರಿಬೇವಿನ ಮಿಶ್ರಣ

ಕರಿಬೇವಿನ ಮಿಶ್ರಣ

ಬೇಕಾಗುವ ಸಾಮಗ್ರಿಗಳು

*ಒಂದು ಹಿಡಿ ಕರಿಬೇವಿನ ಎಲೆಗಳು

*ಒಂದು ಚಮಚ ತೆಂಗಿನೆಣ್ಣೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಕುದಿಯುತ್ತಿರುವ ಸಣ್ಣ ಪಾತ್ರೆಯಲ್ಲಿ ನೀರಿಟ್ಟು ಅದಕ್ಕೆ ಕರಿಬೇವು ಹಾಕಿಕೊಳ್ಳಿ.

ಇದಕ್ಕೆ ತೆಂಗಿನ ಎಣ್ಣೆ ಮಿಶ್ರಣ ಮಾಡಿಕೊಂಡು 8-10 ನಿಮಿಷ ಕಾಲ ಇದನ್ನು ಬೇಯಿಸಿ. ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಲಿ.

*ತದನಂತರ ಇದನ್ನು ತೆಗೆದು ತಣ್ಣಗಾಗಲು ಬಿಡಿ.

* ಇನ್ನು ಒಂದು ಪಾತ್ರೆಗೆ ಈ ಎಣ್ಣೆಯನ್ನು ಸೋಸಿಕೊಳ್ಳಿ. ತಲೆಬುರುಡೆಗೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ.

*ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರದಲ್ಲಿ 4-5 ಸಲ ಇದನ್ನು ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಬಿಳಿ ಕೂದಲನ್ನು ನಿವಾರಿಸಲು 2-3 ಚಮಚ ತೆಂಗಿನ ಎಣ್ಣೆ ಸಾಕು!

ಸೀಗೆಕಾಯಿ (Acacia concinna)

ಸೀಗೆಕಾಯಿ (Acacia concinna)

ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು. ಇದು ಪ್ರತಿದಿನ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಬೇಕು. ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ಕಾಳುಮೆಣಸು-ಮೊಸರು

ಕಾಳುಮೆಣಸು-ಮೊಸರು

ಅರ್ಧ ಕಪ್ ಮೊಸರಿಗೆ ಒಂದು ಗ್ರಾಂ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕೂದಲಿಗೆ ಪ್ರತಿದಿನ ಹಚ್ಚುವ ಮೂಲಕ ಬಿಳಿ ಕೂದಲನ್ನು ತಡೆಯಬಹುದು. ಈ ಮಿಶ್ರಣಕ್ಕೆ ಲಿಂಬೆಹಣ್ಣಿನ ರಸವನ್ನು ಸೇರಿಸಿದರೆ (ಪ್ರತಿದಿನ ಹೊಸದಾಗಿ ಸೇರಿಸಬೇಕು) ಇನ್ನೂ ಉತ್ತಮ ಪರಿಣಾಮ ಪಡೆಯಬಹುದು.

 

English summary

Remedies To Get Rid Of Premature Grey Hair

Greying of hair is probably the first sign of ageing, which is quite noticeable. There are many ways to hide these, like dyeing your hair, colouring or henna application. But what if people in their 20's or 30's are witnessing grey hair? These are then not considered the signs of ageing, but of stress, pollution, wrong diet and unhealthy lifestyle. Here are a few DIY methods to hide premature grey hair and reduce its appearance.
Subscribe Newsletter