Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪುರುಷರ ಕೂದಲುದುರುವ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು
ಕೂದಲಿಗೆ ಕೈಯಾಡಿಸುತ್ತಾ ಅದನ್ನು ಸವರಿಕೊಳ್ಳುವುದು ಕೂದಲು ಎಷ್ಟು ಚೆನ್ನಾಗಿದೆ ಎಂದು ಹೇಳಿಕೊಳ್ಳುವ ಲಕ್ಷಣವಾಗಿದೆ. ಸುಂದರ ಕೂದಲು ಕೂಡ ಸೌಂದರ್ಯದ ಲಕ್ಷಣವಾಗಿದೆ. ಕೂದಲು ಇಲ್ಲದೆ ಇದ್ದರೆ ಅವರ ಸೌಂದರ್ಯವು ಕೆಡುವುದು. ದಪ್ಪ ಹಾಗು ಕಪ್ಪಗಿದ್ದ ಕೂದಲು 40 ದಾಟಿದ ಕೂಡಲೇ ಉದುರಿ ತೆಳುವಾಗಲು ಆರಂಭವಾಗುವುದು. ಇದರಿಂದ ತಲೆಯಲ್ಲಿ ಕೂದಲು ಇಲ್ಲದೆ ಬೋಳು ತಲೆಯಾಗಬಹುದು. ವಯಸ್ಸಾಗುತ್ತಾ ಇರುವಂತೆ ಇದು ಸಾಮಾನ್ಯ.
ಪುರುಷರೇ, ಇದೇ ತಪ್ಪಿನಿಂದ ಕೂದಲು ಉದುರುತ್ತಿರುವುದು!
ಆದರೆ ಇಂದಿನ ದಿನಗಳಲ್ಲಿ ಹದಿಹರೆಯದಲ್ಲಿ ಬೊಕ್ಕ ತಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದು ಅಕಾಲಿಕ ಬೊಕ್ಕತಲೆ ಎನ್ನಬಹುದು. ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಹದಿಹರೆಯದಲ್ಲೇ ಕೂದಲು ಹೋಗಿ ಬೊಕ್ಕ ತಲೆ ಕಾಣಿಸಿಕೊಂಡರೆ ಮುಂದೆ ಅದು ಕೆಟ್ಟ ಪರಿಣಾಮ ಬೀರಬಹುದು.
ಕೂದಲಿನ ಆರೈಕೆಗೆ, ಮನೆಯಂಗಳದ 'ದಾಸವಾಳ ಹೂವು'!
ಯಾಕೆಂದರೆ ಇದರಿಂದ ಯಾವುದೇ ಹುಡುಗಿಗೆ ನೀವು ಇಷ್ಟವಾಗದೆ ಇರಬಹುದು. ಕೂದಲು ಉದುರುವ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಅಕಾಲಿಕವಾಗಿ ಬೊಕ್ಕ ತಲೆ ಉಂಟು ಮಾಡುವ ಸಮಸ್ಯೆಗೆ ಇರುವ ಕೆಲವೊಂದು ಮನೆಮದ್ದುಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಈ ಲೇಖನದ ಮೂಲಕ ಹೇಳಿಕೊಡಲಿದೆ....

ತೆಂಗಿನ ಹಾಲು
ತೆಂಗಿನ ಹಾಲಿನಲ್ಲಿ ವಿಟಮಿನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಗೆ ತುಂಬಾ ಪರಣಾಮಕಾರಿ. ಇದು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿಡುವುದು ಮತ್ತು ಕೂದಲು ಉದುರದಂತೆ ತಡೆಯುವುದು. ಕೂದಲು ಮತ್ತೆ ಬೆಳೆಯಲು ಇದು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
1 ಕಪ್ ತೆಂಗಿನ ಹಾಲುತೆಂಗಿನ ಎಣ್ಣೆ
ವಿಧಾನ
*ತೆಂಗಿನ ಹಾಲು ಅಥವಾ ತೆಂಗಿನೆಣ್ಣೆಯನ್ನು ನೇರವಾಗಿ ತಲೆಬುರುಡೆಗೆ ಹಾಕಿಕೊಂಡು ಅದನ್ನು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಡಿ.
*ಒಂದು ಗಂಟೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಬಳಸಿ.
*ತೆಂಗಿನ ಹಾಲು ಅಥವಾ ತೆಂಗಿನ ಎಣ್ಣೆಯನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಒಳ್ಳೆಯದು.

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವು ಅತ್ಯಧಿಕವಾಗಿದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು
ಒಂದು ಚಮಚ ನೆಲ್ಲಿಕಾಯಿ ತಿರುಳು
ಒಂದು ಚಮಚ ಲಿಂಬೆ ರಸ
ವಿಧಾನ
*ಎರಡನ್ನು ಒಂದು ಪಾತ್ರೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
*ಇದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ತಲೆಯನ್ನು ಶಾವರ್ ಕ್ಯಾಪ್ ನಿಂದ ಮುಚ್ಚಿಕೊಳ್ಳಿ.
*15 ನಿಮಿಷ ಬಿಟ್ಟು ತಲೆ ತೊಳೆದುಕೊಳ್ಳಿ. ವಾರದಲ್ಲಿ ಕೆಲವು ಸಲ ಇದನ್ನು ಪುನಾರವರ್ತಿಸಿ.

ಬೀಟ್ ರೂಟ್ ಜ್ಯೂಸ್
ರಕ್ತದಂತೆ ಕೆಂಪಾಗಿರುವ ಬೀಟ್ ರೂಟ್ ತುಂಬಾ ಆರೋಗ್ಯಕಾರಿ ತರಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ವಿಟಮಿನ್ ಬಿ ಮತ್ತು ಸಿ ಹಾಗೂ ಪ್ರೋಟೀನ್ ಇದೆ. ಕೂದಲು ಆರೋಗ್ಯಕರವಾಗಿ ಬೆಳೆಯಲು ಇದು ನೆರವಾಗುವುದು ಮತ್ತು ಬೊಕ್ಕ ತಲೆ ಸಮಸ್ಯೆ ನಿವಾರಣೆ ಮಾಡುವುದು.
ಒಂದು ತುರಿದಿರುವ ಬೀಟ್ ರೂಟ್
ಮೂರು ಚಮಚ ಗೋರಂಟಿ
ಅಗತ್ಯವಿರುವಷ್ಟು ನೀರು
ವಿಧಾನ
*ತುರಿದುಕೊಂಡಿರುವ ತಾಜಾ ಬೀಟ್ ರೂಟ್ ನಿಂದ ರಸ ತೆಗೆಯಿರಿ.
*ಇದಕ್ಕೆ ಗೋರಂಟಿ ಹಾಕಿಕೊಂಡು ಪೇಸ್ಟ್ ಮಾಡಿ. ಪೇಸ್ಟ್ ತುಂಬಾ ದಪ್ಪವಾಗಿದ್ದರೆ *ಸ್ವಲ್ಪ ನೀರು ಹಾಕಿ.
*ಕೂದಲಿಗೆ ಇದನ್ನು ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಎಷ್ಟು *ಸಲ ಸಾಧ್ಯವೋ ಅಷ್ಟು ಸಲ ಇದನ್ನು ಬಳಸಿಕೊಳ್ಳಿ.

ಬೆಳ್ಳುಳ್ಳಿ ರಸ, ಈರುಳ್ಳಿ ರಸ ಅಥವಾ ಶುಂಠಿ ರಸದ ಚಿಕಿತ್ಸೆ
ಈ ಮೇಲಿನ ಯಾವುದಾದರು ರಸವನ್ನು ನಿಮ್ಮ ಕೂದಲಿಗೆ ಹಚ್ಚಿ ರಾತ್ರಿಯಿಡೀ ಬಿಡಿ. ಹೀಗೆ ನಿಯಮಿತವಾಗಿ ಒಂದು ವಾರ ಮಾಡಿ. ನಂತರ ಅದರ ಫಲಿತಾಂಶವನ್ನು ನೀವೆ ನೋಡಿ.

ಗ್ರೀನ ಟೀ ಚಿಕಿತ್ಸೆ!
ಅಧ್ಯಯನಗಳ ಪ್ರಕಾರ ನಿಮ್ಮ ಕೂದಲಿಗೆ ಗ್ರೀನ ಟೀಯನ್ನು ಲೇಪಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಎರಡು ಟೀ ಬ್ಯಾಗ್‍ಗಳನ್ನು ತೆಗೆದುಕೊಂಡು, ಅದನ್ನು ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ತಣ್ಣಗಾದ ಬ್ಯಾಗ್‍ಗಳನ್ನು ಕೂದಲಿಗೆ ಲೇಪಿಸಿ. ಒಂದು ಗಂಟೆಯ ನಂತರ ಸ್ನಾನಮಾಡಿ. ಇದರ ಫಲಿತಾಂಶವನ್ನು ನೋಡಲು ಒಂದು ವಾರ ಹೀಗೆ ಮಾಡಿ. ಹತ್ತು ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುವಿರಿ.

ಎಳ್ಳೆಣ್ಣೆಯಿಂದ ಮಸಾಜ್ ಮಾಡಿ
ಅವಶ್ಯಕ ಎಣ್ಣೆಗಳಾದ (Essential oils) ಎಳ್ಳೆಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆ ಸರಿಸುಮಾರು ನೀರಿನಷ್ಟೇ ತೆಳ್ಳಗಿರುವುದರಿಂದ ತಲೆಗೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದು ಸುಲಭವೂ ಆರೋಗ್ಯಕರವೂ ಆಗಿದೆ. ಈ ಎಣ್ಣೆಯನ್ನು ತಲೆಯ ಚರ್ಮ ಸುಲಭವಾಗಿ ಹೀರಿಕೊಂಡು ಕೂದಲ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.