For Quick Alerts
ALLOW NOTIFICATIONS  
For Daily Alerts

  ಕೂದಲ ಬೆಳವಣಿಗೆ ಹೆಚ್ಚಿಸುವ ಪವರ್ ಫುಲ್ ಮನೆ ಔಷಧಿಗಳು

  By Manu
  |

  ಬೊಕ್ಕ ತಲೆಯ ಸಮಸ್ಯೆ ಇಂದು ಹೆಚ್ಚಿನವರನ್ನು ಕಾಡುತ್ತಾ ಇರುವುದು. ಪುರುಷರು ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆಯು ಕಾಣಸಿಗುತ್ತಿದೆ. ಕಲುಷಿತ ವಾತಾವರಣ ಹಾಗೂ ಆಧುನಿಕ ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ತಿನ್ನುವ ಆಹಾರ ಮತ್ತು ಬಳಸುವ ನೀರಿನಿಂದಲೂ ಕೂದಲು ಉದುರಿ ಬೊಕ್ಕ ತಲೆ ಸಮಸ್ಯೆ ಕಾಣಿಸುವುದು.

  ಕೂದಲು ಕಪ್ಪಗಿದ್ದರೆ ಸಾಲದು!, ಆರೈಕೆಯೂ ಹಾಗೆಯೇ ಇರಬೇಕು...

  ಬೊಕ್ಕ ತಲೆಗೆ ಇಂದು ಕೂದಲಿನ ಕಸಿ ಹಾಗೂ ಇನ್ನಿತರ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಇದು ತುಂಬಾ ದುಬಾರಿಯಾಗಿರುವ ಕಾರಣದಿಂದ ಮಧ್ಯಮ ಹಾಗೂ ಕೆಳವರ್ಗದವರಿಗೆ ಈ ಚಿಕಿತ್ಸೆ ಮಾಡಿಸಿಕೊಳ್ಳುವುದು ತುಂಬಾ ಕಠಿಣ. ಇಂತಹ ಚಿಕಿತ್ಸೆ ಮಾಡಿಸಿಕೊಳ್ಳುವ ಬದಲು ಕೆಲವೊಂದು ಮನೆಮದ್ದನ್ನು ಬಳಸಿಕೊಂಡರೆ ಕೂದಲಿನ ಬೆಳವಣಿಗೆಯಾಗಿ ಬೊಕ್ಕ ತಲೆಯ ಸಮಸ್ಯೆಯು ನಿವಾರಣೆಯಾಗುವುದು. 

  ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

  ಈ ಮನೆಮದ್ದನ್ನು ಬಳಸಿಕೊಳ್ಳಲು ತುಂಬಾ ತಾಳ್ಮೆಯ ಅವಶ್ಯಕತೆಯಿದೆ. ಯಾಕೆಂದರೆ ಇಂತಹ ಮನೆಮದ್ದುಗಳು ಕೇವಲ ಒಂದು ರಾತ್ರಿಯಲ್ಲಿ ಫಲಿತಾಂಶ ನೀಡುವುದಿಲ್ಲ. ಇದಕ್ಕಾಗಿ ಸಾಕಷ್ಟು ಸಮಯ ಬೇಕಾಗಬಹುದು. ಈ ಮನೆಮದ್ದನ್ನು ಬಳಸಿಕೊಂಡು ಬೊಕ್ಕ ತಲೆ ಸಮಸ್ಯೆ ನಿವಾರಣೆ ಮಾಡುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

  ಬೆಳ್ಳುಳ್ಳಿ ಮತ್ತು ಈರುಳ್ಳಿ

  ಬೆಳ್ಳುಳ್ಳಿ ಮತ್ತು ಈರುಳ್ಳಿ

  ಸುಮಾರು 4-5 ಬೆಳ್ಳುಳ್ಳಿಗಳನ್ನು ಜಜ್ಜಿಕೊಂಡು ತೆಂಗಿನ ಎಣ್ಣೆಯ ಜೊತೆ ಬೆರೆಸಿಕೊಳ್ಳಿ. ಇದನ್ನು ಕುದಿಯುವವರೆಗೆ ಚೆನ್ನಾಗಿ ಕಾಯಿಸಿ, ನಂತರ 2-3 ನಿಮಿಷಗಳ ಕಾಲ ಕಾಯಿರಿ. ಆಮೇಲೆ, ಇದು ಆರುವವರೆಗೆ ಕಾಯಿರಿ. ಇದು ಆರಿದ ಮೇಲೆ, ಇದನ್ನು ನಿಮ್ಮ ಕೂದಲ ಮೇಲೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಅತ್ಯುತ್ತಮ ಫಲಿತಾಂಶಗಳಿಗಾಗಿ ಇದನ್ನು ವಾರಕ್ಕೆ 2-3 ಬಾರಿ ಮಾಡಿ. ಈರುಳ್ಳಿಯನ್ನು ಕತ್ತರಿಸಿ, ರಸ ಪಡೆಯುವ ಮೂಲಕ ಇದರ ಸದುಪಯೋಗವನ್ನು ನೀವು ಪಡೆಯಬಹುದು. ಈರುಳ್ಳಿಯ ರಸವನ್ನು ನಿಮ್ಮ ಕೂದಲಿಗೆ ಲೇಪಿಸಿ 15 ನಿಮಿಷ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.

  ದಾಸವಾಳ ಹೂವು

  ದಾಸವಾಳ ಹೂವು

  ದಾಸವಾಳ ದಾಸವಳವು ಕೂದಲಿನ ಆರೈಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುತ್ತದೆ. ಇದರಲ್ಲಿ ಅಂಶಗಳು ಕೂದಲನ್ನು ಆರೋಗ್ಯಕರ ಮಾಡುತ್ತದೆ. ಇದು ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ ಮತ್ತು ತಲೆ ಹೊಟ್ಟಿನಿಂದ ಕಾಪಾಡುತ್ತದೆ. ದಾಸವಾಳವನ್ನು ನಿರಂತರವಾಗಿ ಬಳಸುವ ಮೂಲಕ ನೀವು ನಿಮ್ಮ ತಲೆಯನ್ನು ಬೊಕ್ಕತಲೆ ಆಗುವುದರಿಂದ ಕಾಪಾಡಬಹುದು. ಕೇರಳದಲ್ಲಿರುವವರು ದಾಸವಾಳಕ್ಕೆ ತೆಂಗಿನ ಎಣ್ಣೆಯನ್ನು ಬಳಸಿ, ಕೂದಲಿಗೆ ಹಚ್ಚಿಕೊಳ್ಳುತ್ತಾರೆ. ನಿಮ್ಮದೇ ಆದ ದಾಸವಾಳ ಪೇಸ್ಟನ್ನು ಮನೆಯಲ್ಲಿ ತಯಾರಿಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಎರಡು ದಾಸವಾಳ ಹೂವುಗಳನ್ನು ತೆಗೆದುಕೊಳ್ಳಿ. ಅದನ್ನು ಬ್ಲೆಂಡರ್‌ನಲ್ಲಿ ಹಾಕಿ, ಜೀರಿಗೆ ಅಥವಾ ತೆಂಗಿನ ಎಣ್ಣೆಯನ್ನು ಬೆರೆಸಿಕೊಂಡು ಇದನ್ನು ರುಬ್ಬಿಕೊಳ್ಳಿ. 2-3 ಗಂಟೆ ಬಿಟ್ಟು ಸ್ನಾನ ಮಾಡಿ.

  ಮೆಂತೆ+ಮೊಸರು

  ಮೆಂತೆ+ಮೊಸರು

  ಮೆಂತೆಯನ್ನು ರಾತ್ರಿ ನೀರು ಅಥವಾ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ರುಬ್ಬಿ ತಲೆಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

  ಅಲೋವೆರಾ

  ಅಲೋವೆರಾ

  ಅಲೋವೆರಾ ಲೋಳೆಯೊಂದಿಗೆ ಗೋಧಿ ಮೊಳಕೆಯ ತೈಲ ಮತ್ತು ತೆಂಗಿನ ಕಾಯಿ ಹಾಲನ್ನು ಸೇರಿಸಿಕೊಳ್ಳಬೇಕು. ಇದರಿಂದ ಮುಚ್ಚಿಕೊಂಡಿರುವ ಕೂದಲಿನ ಗ್ರಂಥಿಗಳು ತೆಗೆದುಕೊಳ್ಳುವುದು ಮತ್ತು ತಲೆಹೊಟ್ಟು ನಿವಾರಣೆಯಾಗುವುದು. ಇದರಿಂದ ಕೂದಲು ಬೆಳವಣಿಗೆಯಾಗಿ ತಲೆಬುರುಡೆಗೆ ಶಮನ ನೀಡುವುದು.ಒಂದು ಕಪ್ ನೀರಿನಲ್ಲಿ ಸಾಸಿವೆ, ಮೆಂತೆ ಮತ್ತು ಬೇವನ್ನು ಕುದಿಸಬೇಕು. ತಲೆ ತೊಳೆದುಕೊಂಡ ಬಳಿಕ ಈ ನೀರಿನಿಂದ ಕೂದಲು ತೊಳೆಯಿರಿ. ಗಿಡಮೂಲಿಕೆಯು ರಂಧ್ರಗಳನ್ನು ತೆರೆಯುವುದು, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುವುದು.

  ನೆಲ್ಲಿಕಾಯಿ, ನಿಂಬೆರಸ ಮತ್ತು ಕೊತ್ತಂಬರಿಯ ಪೇಸ್ಟ್

  ನೆಲ್ಲಿಕಾಯಿ, ನಿಂಬೆರಸ ಮತ್ತು ಕೊತ್ತಂಬರಿಯ ಪೇಸ್ಟ್

  ನೆಲ್ಲಿಕಾಯಿ, ನಿಂಬೆರಸ ಮತ್ತು ಕೊತ್ತಂಬರಿಯ ಪೇಸ್ಟ್ ಮಾಡಿಕೊಂಡು ಅದನ್ನು ಸರಳ ಮನೆಮದ್ದಾಗಿ ಬಳಸಿಕೊಳ್ಳಬಹುದು. ಲಘು ಶಾಂಪೂವನ್ನು ಬಳಸಿಕೊಳ್ಳಿ. ಇದರಿಂದ ಕೂದಲು ತೊಳೆಯುವ ವೇಳೆ ಕೂದಲು ತುಂಡಾಗುವುದನ್ನು ತಡೆಯಬಹುದು.

  ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯ

  ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯ

  ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯ ರಸವು ಸೊಂಕು ನಿವಾರಣೆ ಮಾಡಿ ತುರಿಕೆ ಮಾಡುವುದಲ್ಲದೆ ಕೂದಲಿನ ಬೆಳವಣಿಗೆಗೆ ನೆರವಾಗುವುದು. ಉಗುರು ಬೆಚ್ಚಗಿನ ನೀರಿನಲ್ಲಿ ಶಾಂಪೂ ಹಾಕಿಕೊಂಡು ಕೂದಲು ತೊಳೆದರೆ ಅದರಿಂದ ತಲೆಬುರುಡೆ ಒಣಗುವುದು ಮತ್ತು ಕೂದಲು ದುರ್ಬಲವಾಗುವುದನ್ನು ತಡೆಯಬಹುದು. ಇದನ್ನು ಹೊರತುಪಡಿಸಿ ಪ್ರೋಟೀನ್ ಹೆಚ್ಚಿರುವ ಆಹಾರಗಳಾದ ಮೊಟ್ಟೆ, ಸೋಯಾ ಮತ್ತು ಹಾಲು ಸೇವಿಸಬೇಕು. ಇದು ಕೂದಲಿಗೆ ಒಳಗಿನಿಂದಲೇ ಪೋಷಣೆ ನೀಡಿ ಬೊಕ್ಕ ತಲೆ ಸಮಸ್ಯೆ ನಿವಾರಿಸುವುದು.

  ಆ್ಯಪಲ್ ಸೀಡರ್ ವಿನೇಗರ್, ತಾಳೆಮರದ ಎಣ್ಣೆ

  ಆ್ಯಪಲ್ ಸೀಡರ್ ವಿನೇಗರ್, ತಾಳೆಮರದ ಎಣ್ಣೆ

  ಆ್ಯಪಲ್ ಸೀಡರ್ ವಿನೇಗರ್, ತಾಳೆಮರದ ಎಣ್ಣೆಯು ಕೂದಲು ಉದುರುವ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. ಎಣ್ಣೆಯನ್ನು ಬಿಸಿ ಮಾಡಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡು ಅದನ್ನು ಕೂದಲು ಸರಿಯಾಗಿ ಹೀರಿಕೊಳ್ಳಲು ಬಿಡಬೇಕು. ಶಿಖಾಕಾಯಿ ಶಾಂಪೂವನ್ನು ಬಳಸಿದರೆ ಇದಕ್ಕೆ ಗಿಡಮೂಲಿಕೆಯ ಪರಿಹಾರ ಸಿಗುವುದು. ಒಂದು ವಾರ ಕಾಲ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ ಮತ್ತು ಪ್ರತೀ ದಿನ ಬೆಳಿಗ್ಗೆ ಕೂದಲು ತೊಳೆಯಿರಿ. ಇದು ಮೇದೋಗ್ರಂಥಿಗಳ ಸ್ರಾವ ಶೇಖರಣೆ ವಿಘಟಿಸಿ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು.

     

  English summary

  Homemade Remedies For Hair Regrowth

  Baldness in men and women has been increasing year by year. Stress, unhealthy eating and bad hair care may contribute to the problem but treatment isn't easy. Although the doctors suggest expensive hair loss treatments, some homemade remedies are equally effective. Take a look for hair regrowth and get your confidence back in days.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more