ಹೇರ್‌ಲೈನ್‌ ಸಾಧನೆ: ದೇಶದಲ್ಲೇ ಮೊದಲ ಟೆಲಿ-ಡರ್ಮಟೋಲಾಜಿ ಆರಂಭ...

Posted By: Hairline International Hair and Skin Clinic
Subscribe to Boldsky

ದೇಶದಲ್ಲೇ ಇದೇ ಮೊದಲ ಬಾರಿಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಹೇರ್ ಅಂಡ್ ಸ್ಕಿನ್ ಕಾಸ್ಮೆಟಾಲಜಿ ಮತ್ತು ಟ್ರಿಕೊಲಾಜಿ ಸೇರಿದಂತೆ ಟೆಲಿ- ಡರ್ಮಟಾಲಜಿಯನ್ನು ಪರಿಚಯಿಸಿದೆ. ಈ ಟೆಲಿ-ಡರ್ಮಿಟಾಲಜಿ ಆರಂಭದಿಂದ ರೋಗಿ ಮತ್ತು ವೈದ್ಯರು ಆನ್‍ಲೈನ್‍ನಲ್ಲಿ ನೇರ ಸಂಪರ್ಕ ಸಾಧಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಸಲಹೆ ನೀಡಬಹುದು ಮತ್ತು ರೋಗಿಯು ವೈದ್ಯರೊಂದಿಗೆ ನೇರ ಮಾತುಕತೆ ನಡೆಸುವ ಮೂಲಕ ತನಗಿರುವ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಇಂತಹ ವಿನೂತನ ಸೇವೆ ದೇಶದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು, ಈ ಸೇವೆಯು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ರಹಿತವಾದ ತಪಾಸಣೆಯ ಸಮಯವನ್ನು ಉಳಿಸುತ್ತದೆ. 

ಕಾಸ್ಮೆಟೊಲಾಜಿಯಲ್ಲಿ ಟೆಲಿ-ಡರ್ಮಟಾಲಜಿ ಅನುಕೂಲಗಳ ಬಗ್ಗೆ ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‍ನ ಡರ್ಮಟಾಲಾಜಿಸ್ಟ್ ಮತ್ತು ಕಾಸ್ಮೆಟಾಲಾಜಿಸ್ಟ್ ಡಾ.ಕಲಾ ವಿಮಲ್ ಅವರು, ಈ ತಂತ್ರಜ್ಞಾನದ ಮೊದಲ ಮತ್ತು ಪ್ರಮುಖ ಲಾಭವೆಂದರೆ ಡರ್ಮಟಾಲಾಜಿಸ್ಟ್ ಮತ್ತು ಕಾಸ್ಮೆಟಾಲಾಜಿಸ್ಟ್‍ಗಳನ್ನು ರೋಗಿಗಳು ನೇರವಾಗಿ ಮತ್ತು ಸುಲಭವಾಗಿ ಸಂಪರ್ಕ ಸಾಧಿಸಬಹುದು.  

Hairline launches Tele-Dermatology for the First Time in India
 

ಈ ಮೂಲಕ ಚರ್ಮದ ಪರಿಸ್ಥಿತಿಗಳನ್ನು ವಿವರಿಸಬಹುದು. ಅಲ್ಲದೇ, ರೋಗಗಳ ಬಗ್ಗೆ ತನಿಖೆ ಮತ್ತು ತಪಾಸಣೆಗೆ ಪೂರಕವಾದ ನಿರ್ಧಾರಗಳನ್ನು ಕಯಗೊಳ್ಳಬಹುದಾಗಿದೆ. ದುರ್ಗಮ ಪ್ರದೇಶಗಳು ಅಂದರೆ, ಗ್ರಾಮಾಂತರ ಪ್ರದೇಶಗಳಲ್ಲಿರುವ ರೋಗಿಗಳೂ ಸಹ ಈ ತಂತ್ರಜ್ಞಾನದ ಮೂಲಕ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆಗೆ ಬರಲು ಸಾಧ್ಯವಾಗದಂತಹ ರೋಗಿಗಳಿಗೆ ಚಿಕಿತ್ಸೆಗಳ ಸಲಹೆ ನೀಡಲು ಈ ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಲಿದೆ. ಮೊಡವೆಗಳಿಗೆ, ಪಿಗ್ಮೆಂಟರಿ ಪರಿಸ್ಥಿತಿಗಳು, ಸುಕ್ಕುಗಟ್ಟಿದ ಚರ್ಮ, ಫೋಟೋ-ಏಜಿಂಗ್, ಸ್ಯಾಗಿಂಗ್ ಸ್ಕಿನ್, ಹಿರ್‍ಸುಟಿಂ, ಕಲೆಗಳು ಸೇರಿದಂತೆ ಮತ್ತಿತರೆ ರೋಗಗಳಿಗೆ ಈ ತಂತ್ರಜ್ಞಾನದಿಂದಲೇ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಇದಲ್ಲದೇ, ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಸ್ಕಿನ್ ಡಿಎನ್‍ಎ ತಪಾಸಣೆ ಅವಕಾಶವನ್ನೂ ಇದರ ಮೂಲಕ ನೀಡಲಿದೆ.

ಅಂದರೆ, ಸ್ವಾಬ್‍ನ ಮಾದರಿಯನ್ನು ಡಿಎನ್‍ಎ ಪರೀಕ್ಷೆಗೆ ರೋಗಿಗಳು ವಿಡೀಯೋ ಕಳುಹಿಸಬಹುದಾಗಿದೆ. ಇದನ್ನು ಹೇರ್‌ಲೈನ್ ಇಂಟರ್‌ನ್ಯಾಷನಲ್‌ ತಜ್ಞರಿಗೆ ತಲುಪಿಸಿ ಅವರು ತಪಾಸಣೆ ನಡೆಸಿ, ಯಾವ ಚಿಕಿತ್ಸೆ ನೀಡಬೇಕೆಂಬುದರ ಬಗ್ಗೆ ಶಿಫಾರಸು ಮಾಡಲಿದ್ದಾರೆ'' ಎಂದು ತಿಳಿಸಿದರು.

ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‍ನ ಡರ್ಮಟೋಸರ್ಜನ್ ಡಾ.ದಿನೇಶ್‍ಗೌಡ ಅವರು ಮಾತನಾಡಿ, ವೈದ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಎಂಬುದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ವಿಶೇಷವಾಗಿ ಮಹಾನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಜನ್‍ಗಳು ಮತ್ತು ವೈದ್ಯರಿಗೆ ಇದು ಹೆಚ್ಚು ಅನುಕೂ ಮಾಡಿಕೊಡುತ್ತದೆ. ರೋಗಿಯ ತಲೆಗೂದಲು ಉದರಿರುವ ಪ್ರಮಾಣ ಮತ್ತು ಅದರ ಪರಿಸ್ಥಿತಿಯನ್ನು ಈ ತಂತ್ರಜ್ಞಾನದ ಮೂಲಕ ಅವಲೋಕಿಸಬಹುದಾಗಿದೆ.

ಇಲ್ಲಿ ಸರ್ಜಿಕಲ್ ಮತ್ತು ನಾನ್-ಸರ್ಜಿಕಲ್‍ಗೆ ಅವಕಾಶವಿರುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಚಿಕಿತ್ಸೆಗಳನ್ನು ಈ ತಂತ್ರಜ್ಞಾನದ ಮೂಲಕ ಆನ್‍ಲೈನ್‍ನಲ್ಲೇ ನೀಡಬಹುದು. ಇದಲ್ಲದೇ, ಶಸ್ತ್ರಚಿಕಿತ್ಸೆ ನಂತರವೂ ಆನ್‍ಲೈನ್‍ನಲ್ಲಿ ಹಲವು ಬಾರಿಯ ಭೇಟಿಯ ಮೂಲಕ ಚಿಕಿತ್ಸೆ ಮತ್ತು ಔಷಧಿಯನ್ನು ನೀಡಬಹುದಾಗಿದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ ರೋಗಿಯ ಪ್ರಯಾಣ, ವಸತಿ, ಶಸ್ತ್ರಚಿಕಿತ್ಸೆ, ಔಷಧ ಮತ್ತು ಶಸ್ತ್ರಚಿಕಿತ್ಸೆ ನಂತರ ಸಲಹೆಗಳನ್ನು ನೀಡುವ ಪ್ಯಾಕೇಜ್ ಅನ್ನು ಒದಗಿಸಲಿದೆ'' ಎಂದು ತಿಳಿಸಿದರು.

ಈ ಟೆಲಿ-ಡರ್ಮಟೋಲಜಿಯನ್ನು ಉದ್ಘಾಟನೆ ನಂತರ ಮಾತನಾಡಿದ ಹೇರ್‍ಲೈನ್ ಇಂಟರ್‍ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್‍ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಬನಿ ಆನಂದ್ ಅವರು, ನಾವು ನಮ್ಮ ಗ್ರಾಹಕರಿಗೆ ನೀಡುವ ತಪಾಸಣೆ ಮತ್ತು ಚಿಕಿತ್ಸೆ

ಪದ್ಧತಿಗಳಲ್ಲಿ ಹೊಸ ಹೊಸ ಮತ್ತು ಅತ್ಯಾಧುನಿಕವಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಸದಾ ಬದ್ಧರಾಗಿದ್ದೇವೆ. ಈ ಟೆಲಿ-ಡರ್ಮಟೋಲಜಿ ಮೂಲಕ ಯಾರು ಎಲ್ಲಿಂದ ಬೇಕಾದರೂ ನಮ್ಮ ವೈದ್ಯರನ್ನು ಆನ್‍ಲೈನ್‍ನಲ್ಲಿ ಸಂಪರ್ಕಿಸಿ ಸಲಹೆಗಳನ್ನು ಪಡೆಯಬಹುದಾಗಿದೆ. ಈ ಸೌಲಭ್ಯ ಕೇವಲ ಕರ್ನಾಟಕದ ರೋಗಿಗಳಿಗೆ ಸೀಮಿತವಾಗಿರುವುದಿಲ್ಲ. ದೇಶ, ವಿದೇಶಗಳ ರೋಗಿಗಳೂ ಸಹ ಈ ಸೇವೆಯನ್ನು ಪಡೆಯಬಹುದಾಗಿದೆ. ದೇಶ-ವಿದೇಶಗಳಿಂದ ಬರುವ ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ ಉಪಕರಣಗಳಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ'' ಎಂದು ತಿಳಿಸಿದರು.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ತಂತ್ರಜ್ಞಾನ ಸೇವೆಗಳ ಪೂರೈಕೆದಾರ ಸಂಸ್ಥೆಯಾಗಿರುವ ಡಾಕ್‍ಪ್ಲಸ್ ಜತೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಸಹಯೋಗ ಹೊಂದಿದ್ದು, ಸುಧಾರಿತ ಸಾಫ್ಟ್‍ವೇರ್ ಅನ್ನು ಅಳವಡಿಸಿಕೊಂಡಿದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್‌ ಪೋರ್ಟಲ್‍ನಲ್ಲಿ ಈ ಸಾಫ್ಟ್‍ವೇರ್ ಅಡಕವಾಗಿರುತ್ತದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್‌‌ನಲ್ಲಿ ಅಪಾಯಿಂಟ್‍ಮೆಂಟ್ ಪಡೆಯುವ ರೋಗಿಗಳಿಗೆ ವಿಡೀಯೋ ಕಾನ್‍ಫರೆನ್ಸ್ ನಿಗದಿ ಮಾಡಲಾಗುತ್ತದೆ.

ಇದರ ಮೂಲಕ ತಜ್ಞ ವೈದ್ಯರು ರೋಗಿಯ ಚರ್ಮದ ಮತ್ತು ಕೂದಲಿನ ಸಮಸ್ಯೆಗಳ ಲಕ್ಷಣಗಳನ್ನು ಗಮನಿಸುತ್ತಾರೆ. ಸಮಸ್ಯೆ ಇರುವ ಜಾಗದ ಫೋಟೋಗಳನ್ನು ತೆಗೆದು ರೋಗಿಯು ಅಪ್‍ಲೋಡ್ ಮಾಡಬಹುದಾಗಿದೆ. ನಂತರ ಆ ರೋಗಿಗೆ ಯಾವ ರೀತಿಯ ಚಿಕಿತ್ಸೆ ಅಗತ್ಯ ಇದೆ ಎಂಬುದನ್ನು ವೈದ್ಯರು ಸಲಹೆ ನೀಡಲಿದ್ದಾರೆ ಅಥವಾ ಔಷಧದ ಮೂಲಕ ಗುಣಮುಖವಾಗುವಂತಿದ್ದರೆ ಔಷಧದ ಸಲಹೆಯನ್ನೂ ನೀಡಲಿದ್ದಾರೆ.

ಡಾಕ್‍ಪ್ಲಸ್ ಟೆಕ್ನಾಲಜೀಸ್‍ನ ಸಹ-ಸಂಸ್ಥಾಪಕರಾದ ಪ್ರಶಾಂತ್ ಹೆಗ್ಡೆ ಅವರು ಮಾತನಾಡಿ, "ಎಲ್ಲಾ ರೋಗಿಗಳು ಹೇರ್‍ಲೈನ್ ಇಂಟರ್‍ನ್ಯಾಷನಲ್ ಪೋರ್ಟಲ್‍ಗೆ ಭೇಟಿ ನೀಡಿದಾಗ ಕಾಣಿಸುವ ಅರ್ಜಿಯನ್ನು ಭರ್ತಿ ಮಾಡಬೇಕು. ನಂತರ ಶುಲ್ಕ ಪಾವತಿಯ ಆಪ್ಶನ್ ಬರಲಿದೆ. ಶುಲ್ಕ ಪಾವತಿ ಮಾಡಿದ ನಂತರ ತಜ್ಞ ವೈದ್ಯರ ಸಮಯ ನಿಗದಿ ಬರಲಿದ್ದು, ವೈದ್ಯರು ವಿಡೀಯೋ ಕಾನ್‍ಫರೆನ್ಸ್ ಮೂಲಕ ರೋಗಿಯೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ಅವಕಾಶವನ್ನು ಕಲ್ಪಿಸುವ ಈ ಸಾಫ್ಟ್‍ವೇರ್ ಗ್ರಾಹಕ ಮತ್ತು ಬಳಕೆದಾರರ ಸ್ನೇಹಿ ಆಗಿದೆ'' ಎಂದು ಹೇಳಿದರು.

For Quick Alerts
ALLOW NOTIFICATIONS
For Daily Alerts

    English summary

    Hairline launches Tele-Dermatology for the First Time in India

    Hairline International Hair and Skin Clinic launches Tele-Dermatology which includes Cosmetology and Trichology for the first time in the country. The introduction of Tele-dermatology will now facilitate the practice of dermatology online with the help of a unique software that will connect both the patient and the doctor, irrespective of physical distances that separate them.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more