For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಿರಿಕಿರಿ ಕೊಡುವ ತಲೆಹೊಟ್ಟಿಗೆ ಸುಲಭವಾದ ಮನೆಮದ್ದುಗಳು

By Divya Pandith
|

ಕೆಲವು ಸೋಂಕುಗಳಿಂದ, ರಕ್ತದಲ್ಲಿ ನಂಜಿನಂಶ, ಸೂಕ್ತರೀತಿಯ ಆರೈಕೆ ಮಾಡದಿರುವುದು ಹಾಗೂ ಬೆವರಿನ ಕಾರಣಗಳಿಗೆ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತದೆ. ಅದೆಷ್ಟೇ ಬಗೆಯ ಔಷದೋಪಚಾರ ಮಾಡಿದರೂ ತಲೆ ಹೊಟ್ಟು ನಿವಾರಣೆ ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಸೋಂಕುಗಳಿಂದ ಅಥವಾ ರಕ್ತದಲ್ಲಿ ನಂಜಿನಂಶ ಕೂಡಿದ್ದರೆ ನಿವಾರಣೆ ಕಷ್ಟವಾಗುತ್ತದೆ. ಇನ್ನೂ ಕೆಲವೊಮ್ಮೆ ಚರ್ಮ ಸಂಬಂಧಿ ಕಾಯಿಲೆಗಳು ಬಂದಾಗ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುತ್ತವೆ.

ತಲೆಯನ್ನು ಬಾಚುವಾಗ ಕೇಶರಾಶಿಯ ಮೇಲ್ಭಾಗಕ್ಕೆ ಬಂದು ಕುಳಿತುಕೊಳ್ಳುವುದು, ಭುಜದ ಮೇಲೆ ಬೀಳುವುದು, ವಿಪರೀತವಾದ ತುರಿಕೆ, ಕೂದಲುದುರುವಿಕೆ, ತಲೆಯಲ್ಲಿ ಜಿಡ್ಡಿನಂಶ ಇರುವುದು ಹೀಗೆ ಅನೇಕ ಸಮಸ್ಯೆಗಳನ್ನು ಹೊಟ್ಟಿನಿಂದಾಗಿ ಅನುಭವಿಸಬೇಕಾಗುತ್ತದೆ. ಹೊಟ್ಟಿನ ನಿವಾರಣೆಗಾಗಿ ಮೊದಲು ಶಾಂಪೂವಿನ ಮೊರೆ ಹೋಗುವುದು ಸಹಜ.

ತಲೆಹೊಟ್ಟು ಹಾಗೂ ಒಣನೆತ್ತಿಯ ಸಮಸ್ಯೆಗೆ ಪವರ್‌ಫುಲ್ ಮನೆ ಮದ್ದುಗಳು

ತಲೆಹೊಟ್ಟು ಉತ್ಪತ್ತಿಯಾಗಲು ಕಾರಣಗಳು

ತಲೆಹೊಟ್ಟು ಉತ್ಪತ್ತಿಯಾಗಲು ಕಾರಣಗಳು

ಸೂಕ್ತ ರೀತಿಯ ಕೂದಲು ನೈರ್ಮಲ್ಯ ಕಾಪಾಡದೆ ಇರುವುದು.

ಶಿಲೀಂಧ್ರಗಳ ಸೋಂಕು.

ಸದಾ ಎಣ್ಣೆಯಿಂದ ಕೂಡಿರುವ ನೆತ್ತಿ

ಕಳಪೆ ಗುಣಮಟ್ಟದ ಕೇಶ ಆರೈಕೆಯ ಉತ್ಪನ್ನಗಳ ಬಳಕೆ.

ಅನುವಂಶಿಯತೆ

ಒತ್ತಡ

ಆರೈಕೆಯ ಪ್ರಯೋಜನಗಳು

ಆರೈಕೆಯ ಪ್ರಯೋಜನಗಳು

ಈ ಆರೈಕೆಯ ವಿಧಾನವು ಅತ್ಯುತ್ತಮ ಮನೆ ಮದ್ದಿನ ಆರೈಕೆಯಾಗಿದೆ. ಇದು ಬ್ಯಾಕ್ಟೀರಿಯಾ, ಉರಿಯೂತಗಳ ನಿವಾರಣೆಗೆ ಅತ್ಯುತ್ತಮವಾದ ಔಷಧವಾಗಿದೆ. ಈ ಉತ್ಪನ್ನದ ತಯಾರಿಕೆಗೆ ಬಳಸಲಾದ ಎಲ್ಲಾ ಸಾಮಾಗ್ರಿಗಳು ಕೇಶ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವಂತಹ ಉತ್ತಮ ಗುಣಗಳಿಂದ ಕೂಡಿವೆ. ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಮತ್ತು ನಿಯಂತ್ರಿಸುವ ಶಕ್ತಿಯನ್ನು ಈ ಮೂಲಿಕೆಗಳು ಪಡೆದುಕೊಂಡಿವೆ. ಮನೆಯಲ್ಲಿಯೇ ತಯಾರಿಸುವ ಈ ಔಷಧದಲ್ಲಿ ವಿವಿಧ ಬಗೆಯ ಬೇರುಗಳನ್ನು ಮತ್ತು ದ್ರಾವಣಗಳನ್ನು ಬಳಸುವುದರಿಂದ ನೆತ್ತಿಯ ಮೇಲೆ ಉಂಟಾಗುವ ಅಹಿತಕರವಾದ ಸ್ಥಿತಿಯನ್ನು ರಕ್ಷಿಸುತ್ತದೆ. ಒಮ್ಮೆ ಇದರ ಬಳಕೆ ಮಾಡಿದರೆ ಭವಿಷ್ಯದಲ್ಲಿ ಹೊಟ್ಟಿನ ಸಮಸ್ಯೆ ಮರುಕಳಿಸುವುದನ್ನು ತಡೆಯುತ್ತದೆ.

ಔಷಧ ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು

ಔಷಧ ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು

ಒಂದು ಟೀ ಚಮಚ ನೆಲ್ಲಿಕಾಯಿ ಪುಡಿ

5-6 ಬೇವಿನ ಎಲೆ

1 ಟೀ ಚಮಚ ಸೀಗೇಕಾಯಿ ಪುಡಿ

1 ಟೀ ಚಮಚ ಮೇಥಿ ಪುಡಿ

1 ಟೀ ಚಮಚ ರೀಟಾ ಪುಡಿ

1 ಕಪ್ ನೀರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಸೇರಿಸಿ, ಬಿಸಿಯಾಗಲು ಇಡಿ.

2. ಈ ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. 10 ನಿಮಿಷಗಳಕಾಲ ಕುದಿಯಲು ಬಿಡಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

3. ಮುಚ್ಚಳವನ್ನು ತೆಗೆಯಿರಿ. ಸ್ಟೋವ್ ನಿಂದ ಕೆಳಗಿಳಿಸಿ.

4. ಮಿಶ್ರಣವು ತಣಿಯುವ ವರೆಗೆ ಚೆನ್ನಾಗಿ ಕೈಯಾಡಿಸುತ್ತಲೇ ಇರಿ.

5. ನಂತರ ಒಂದು ಬೌಲ್‍ಗೆ ಸೋಸಿ, ವರ್ಗಾಯಿಸಿ.

ಬಳಸುವ ವಿಧಾನ

ಬಳಸುವ ವಿಧಾನ

1. ತಯಾರಿಸಿಕೊಂಡ ಮಿಶ್ರಣವನ್ನು ತಲೆಗೆ ಅನ್ವಯಿಸಿ.

2. ನಂತರ ಕೈಬೆರಳುಗಳಿಂದ ತಲೆ ಹಾಗೂ ಪೀಡಿತ ಪ್ರದೇಶಗಳ ಮೇಲೆ ಮೃದುವಾಗಿ ಮಸಾಜ್ ಮಾಡಿ.

3. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ಕೇಶರಾಶಿಯನ್ನು ತೊಳೆಯಿರಿ.

ಈ ಸಂಗತಿಗಳನ್ನು ನೆನಪಿಡಿ

ಈ ಸಂಗತಿಗಳನ್ನು ನೆನಪಿಡಿ

ಉತ್ತಮ ಫಲಿತಾಂಶಕ್ಕಾಗಿ ಈ ವಿಧಾನವನ್ನು ವಾರದಲ್ಲಿ 2-3 ಬಾರಿ ಅನ್ವಯಿಸಿ.

ಈ ಸೋಂಕುಗಳನ್ನು ನಿಯಂತ್ರಣಕ್ಕೆ ಬರುವವರೆಗೂ ಈ ವಿಧಾನವನ್ನು ಅನ್ವಯಿಸಿ, ತಲೆಕೂದಲ ಸೂಕ್ತ ಆರೈಕೆಗೆ ಮಾಡಿ.

ನೆತ್ತಿಯ ಭಾಗದಲ್ಲಿ ಉಂಟಾದ ಸೋಂಕನ್ನು ತಡೆಯಲು ನಿಯಮಿತವಾಗಿ ಕೇಶರಾಶಿಯನ್ನು ಸ್ವಚ್ಛ/ತೊಳೆಯುತ್ತಿರಿ.

ಕೂದಲ ಸಂರಕ್ಷಣೆಯ ಉತ್ಪನ್ನಗಳನ್ನು ನಿಯಮಿತವಾಗಿ ಉಪಯೋಗಿಸಿ.

English summary

Hair Solution To Cure Dandruff

Certain age-old herbal ingredients like amla powder,reetha powder, shikakai powder, etc., are known to inhibit the growth of dandruff-causing fungus and prevent flaking of the skin on your scalp. Just whisk them together and create your very own anti-dandruff solution. Free of chemicals, effective and inexpensive, this solution is all you need to leave those dandruff days behind. Here we've listed all the information you need regarding this effective hair solution:
X
Desktop Bottom Promotion