ತಲೆಯಲ್ಲಿ ತುರಿಕೆಯೇ? ಕರಿಬೇವಿನ ಹೇರ್ ಪ್ಯಾಕ್ ಪ್ರಯತ್ನಿಸಿ

By: manu
Subscribe to Boldsky

ತಲೆಯಲ್ಲಿ ತುರಿಕೆಯುಂಟಾಗಲು ಪ್ರಮುಖ ಕಾರಣ ತಲೆಯ ಚರ್ಮ ಒಣಗಿದ್ದು ಹೊರಪದರದ ಚರ್ಮ ಒಣಗಿ ಪಕಳೆಯಂತೆ ಏಳುವುದು. ಇದು ಅರ್ಧಭಾಗ ಚರ್ಮಕ್ಕೆ ಅಂಟಿಕೊಂಡು ನಿಧಾನವಾಗಿ ಪಕಳೆಯೇಳುತ್ತಾ ಹೋಗುವಾಗ ಚರ್ಮಕ್ಕೆ ನೀಡುವ ಸಂವೇದನೆಯೇ ತುರಿಕೆ. ವಿಶೇಷವಾಗಿ ಚಳಿಗಾಲದಲ್ಲಿ ಅಥವಾ ವಾತಾವರಣವನ್ನು ಅತಿ ಹೆಚ್ಚು ತಂಪಾಗಿಸಿರುವ ಸ್ಥಳಗಳಲ್ಲಿ ಹೆಚ್ಚು ಹೊತ್ತು ಕಳೆಯುವವರಿಗೆ ಈ ತೊಂದರೆ ಸಾಮಾನ್ಯವಾಗಿ ಕಾಡುತ್ತದೆ. ತಲೆಯಲ್ಲಿ ತುರಿಕೆಯೇ? ಹಾಗಾದರೆ ಚೆಂಡುಹೂವನ್ನು ಪ್ರಯತ್ನಿಸಿ

ಇದಕ್ಕೆ ಸೂಕ್ತ ಪರಿಹಾರವೆಂದರೆ ಲೇಪವನ್ನು ಹಚ್ಚಿಕೊಂಡು ಸಡಿಲವಾಗಿ ಅಂಟಿಕೊಂಡಿರುವ ಒಣ ಪಕಳೆಗಳನ್ನು ನಿವಾರಿಸುವುದು. ಅತಿ ಹೆಚ್ಚು ಒಣಗಿದ ಚರ್ಮದಲ್ಲಿ ಈ ಪಕಳೆಗಳು ಪುಡಿಯಂತೆ ಉದುರಿ ತಲೆಹೊಟ್ಟಿಗೂ ಕಾರಣವಾಗುತ್ತವೆ. ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ? 

ಹಾಗಾದರೆ ಯಾವುದರಿಂದ ಲೇಪ ತಯಾರಿಸಬೇಕು? ಇದಕ್ಕೆ ತಕ್ಕ ಉತ್ತವೆಂದರೆ 'ಕರಿಬೇವಿನ ಎಲೆ'. ಈ ಎಲೆಗಳನ್ನು ಅರೆದು ತಯಾರಿಸಿದ ಲೇಪವನ್ನು ಹಚ್ಚಿಕೊಳ್ಳುವ ಮೂಲಕ ತಲೆಯ ತುರಿಕೆ, ತಲೆಹೊಟ್ಟು ಹಾಗೂ ಇತರ ಕೂದಲು ಸಂಬಂಧಿತ ತೊಂದರೆಗಳೆಲ್ಲಾ ಸುಲಭವಾಗಿ ನಿವಾರಣೆಯಾಗುತ್ತವೆ. ಬನ್ನಿ, ಈ ಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*10-15 ಕರಿಬೇವಿನ ಎಲೆಗಳು

*2 ಚಿಕ್ಕ ಚಮಚ ಕಡ್ಲೆಹಿಟ್ಟು

*2 ಚಿಕ್ಕ ಚಮಚ ಮೊಸರು

*1 ಚಿಕ್ಕ ಚಮಚ ಗ್ಲಿಸರಿನ್

ವಿಧಾನ

ವಿಧಾನ

* ಮೊದಲು ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ

* ಬಳಿಕ ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಹಾಕಿ

* ಇನ್ನು ಇದಕ್ಕೆ ಕಡ್ಲೆ ಹಿಟ್ಟು ಮತ್ತು ಮೊಸರನ್ನು ಸೇರಿಸಿ ಮಿಶ್ರಣ ಮಾಡಿ

ವಿಧಾನ

ವಿಧಾನ

* ಬಳಿಕ ಈ ಮಿಶ್ರಣವನ್ನು ನುಣ್ಣಗೆ ಅರೆಯಿರಿ

* ನಂತರ ಗ್ಲಿಸರಿನ್ ಸೇರಿಸಿ ಮಿಶ್ರಣ ಮಾಡಿ.

* ಈ ಲೇಪನವನ್ನು ಕೂದಲ ಬುಡಕ್ಕೆ ತಲುಪುವಂತೆ ಬೆರಳುಗಳಿಂದ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ

* ಕೊಂಚ ಹೊತ್ತು ಕಳೆದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕರಿಬೇವಿನ ಎಲೆಗಳ ಪ್ರಯೋಜನಗಳು

ಕರಿಬೇವಿನ ಎಲೆಗಳ ಪ್ರಯೋಜನಗಳು

* ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ತಲೆಯಲ್ಲಿ ತುರಿಕೆ ಬರುವುದರಿಂದ ರಕ್ಷಿಸುತ್ತದೆ.

* ಇದರಲ್ಲಿರುವ ಅವಶ್ಯಕ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಕೂದಲು ಅಕಾಲವಾಗಿ ನೆರೆಯುವುದನ್ನು ತಡೆಯುತ್ತದೆ.

* ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಕೂದಲ ಬುಡದಲ್ಲಿ ಹೆಚ್ಚಿನ ಪ್ರಚೋದನೆ ದೊರೆತು ಕೂದಲ ಬುಡ ಹೆಚ್ಚು ದೃಢಗೊಳ್ಳುವ ಮೂಲಕ ಕೂದಲ ಬೆಳವಣಿಗೆ ಉತ್ತಮವಾಗುತ್ತದೆ ಹಾಗೂ ಕೂದಲು ಇನ್ನಷ್ಟು ಗಾಢವಾಗುತ್ತದೆ.

ಕೂದಲಿಗೆ ಕಡ್ಲೆಹಿಟ್ಟಿನಿಂದ ಲಭ್ಯವಾಗುವ ಪ್ರಯೋಜನಗಳು

ಕೂದಲಿಗೆ ಕಡ್ಲೆಹಿಟ್ಟಿನಿಂದ ಲಭ್ಯವಾಗುವ ಪ್ರಯೋಜನಗಳು

* ಕಡ್ಲೆಹಿಟ್ಟಿನಲ್ಲಿರುವ ಶಮನಕಾರಕ ಗುಣ ಕೂದಲ ಬುಡದಲ್ಲಿ ತುರಿಕೆಗೆ ಕಾರಣವಾದ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ಉರಿಯೂತದ ಪರಿಣಾಮವಾಗಿ ಕೆಂಪಗಾಗಿದ್ದ ಚರ್ಮವನ್ನು ಶಾಂತಗೊಳಿಸಿ ಉರಿಯನ್ನು ಕಡಿಮೆ ಮಾಡುತ್ತದೆ.

* ಪಕಳೆಗಳ ಕಾರಣ ತಲೆಯ ಚರ್ಮದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ಕಣಗಳನ್ನು ನಿವಾರಿಸಲು ಕಡ್ಲೆಹಿಟ್ಟು ನೆರವಾಗುತ್ತದೆ.

* ಕೂದಲು ಹೆಚ್ಚು ಉದ್ದವಾಗಲು ನೆರವಾಗುವ ಪೋಷಕಾಂಶಗಳನ್ನು ಕಡ್ಲೆಹಿಟ್ಟು ಪೂರೈಸುತ್ತದೆ.

ಕೂದಲಿಗೆ ಮೊಸರಿನಿಂದ ಲಭ್ಯವಾಗುವ ಪ್ರಯೋಜನಗಳು

ಕೂದಲಿಗೆ ಮೊಸರಿನಿಂದ ಲಭ್ಯವಾಗುವ ಪ್ರಯೋಜನಗಳು

* ಮೊಸರಿನಲ್ಲಿರುವ ಅಮೈನೋ ಆಮ್ಲಗಳು ಕೂದಲಿಗೆ ಹೆಚ್ಚಿನ ಬಲ ನೀಡುತ್ತದೆ ಹಾಗೂ ಕೂದಲಿನ ರಚನೆಯಲ್ಲಿ ಹೆಚ್ಚಿನ ಪ್ರೋಟೀನು ಅಡಕಗೊಳ್ಳುವಂತೆ ಮಾಡಿ ಕೂದಲ ಸೊಂಪನ್ನು ಹೆಚ್ಚಿಸುತ್ತದೆ.

* ಮೊಸರಿನ ಬಳಕೆಯಿಂದ ಕೂದಲ ಬುಡಗಳು ಹೆಚ್ಚು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು

 
English summary

DIY: Curry Leaves Hair Mask For Itchy Scalp

Curry leaves is known to be one of the best ingredients to darken grey hair; however, it can also be used to treat itchy scalp. Read this DIY recipe of curry leaves hair mask to treat itchy scalp.
Please Wait while comments are loading...
Subscribe Newsletter