For Quick Alerts
ALLOW NOTIFICATIONS  
For Daily Alerts

ಎಲ್ಲರ ಗೋಜಲು, ಪದೇಪದೇ ಉದುರುವ ತಲೆಕೂದಲು

By Deepu
|

ಇತ್ತೀಚಿನ ದಿನಗಳಲ್ಲಿ ಕೇಶ ಸೌಂದರ್ಯ ನಿಜಕ್ಕೂ ಪ್ರತಿಯೊಬ್ಬರ ನೈಸರ್ಗಿಕ ಆಭರಣವೆನಿಸಿದೆ. ಕೂದಲು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲೊಂದಾದ್ದು, ಅದನ್ನು ಕಳೆದುಕೊಳ್ಳಲು ಯಾರೊಬ್ಬರೂ ಇಚ್ಛಿಸುವುದಿಲ್ಲ. ಕೆಲವು ಕೂದಲೆಳೆಗಳು ಉದುರಿದರೂ ಸಹ ಜನರು ಹೆಚ್ಚು ಚಿಂತಿಸುವ ಕಾಲವಿದು. ಅದರಲ್ಲೂ ಪ್ರತಿಬಾರಿ ತಲೆ ಬಾಚಿಕೊಂಡ ಬಳಿಕ ಬಾಚಣಿಗೆಯಲ್ಲಿ ಅಂಟಿಕೊಂಡು ಬರುವ ಕೂದಲುಗಳಿಂದಾಗಿ ಇನ್ನಷ್ಟು ಬೇಸರ ತರಿಸುತ್ತದೆ.

ಇದು ಒಂದಿಬ್ಬರ ಕಥೆಯಲ್ಲ, ವಿಶ್ವದಾದ್ಯಂತ ಕೋಟ್ಯಂತರ ಯುವಜನರ ಚಿಂತೆಯಾಗಿದೆ. ವಾಸ್ತವವಾಗಿ ನಾವೆಲ್ಲರೂ ಪ್ರತಿದಿನವೂ ಸುಮಾರು ನೂರರಷ್ಟು ತಲೆಕೂದಲುಗಳನ್ನು ಕಳೆದುಕೊಳ್ಳುತ್ತೇವೆ. ದೇಹದ ಇತರ ಭಾಗಗಳಿಂದಲೂ ಕೂದಲು ಉದುರುತ್ತದಾದರೂ ಇದು ಪುನಃ ಹುಟ್ಟುತ್ತದೆ. ತಲೆಗೂದಲೂ ಅಷ್ಟೇ, ಉದುರಿದ ಪ್ರಮಾಣದಷ್ಟೇ ಹೊಸ ಕೂದಲು ಹುಟ್ಟಿದರೆ ಚಿಂತೆಗೆ ಕಾರಣವಿಲ್ಲ. ಆದರೆ ಕೆಲವು ಕಾರಣಕ್ಕೆ ತಲೆಗೂದಲುಗಳು ಪುನಃ ಹುಟ್ಟುವ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉದುರಿದರೆ ಮಾತ್ರ ಚಿಂತೆಯನ್ನು ಇನ್ನಷ್ಟು ಹೆಚ್ಚುತ್ತದೆ. ಕೂದಲು ಉದುರುವ ಕಿರಿಕಿರಿ - ಮನೆಮದ್ದೇ ಸರಿ

ಹೌದು, ಕೂದಲಿನ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದರ ಸೂಚನೆ ಇದು. ಕೂದಲು ಉದುರುವುದು, ಸಣ್ಣ ಆಗುವುದು, ತಲೆ ಹೊಟ್ಟು, ತಲೆಯಲ್ಲಿ ಶಿಲೀಂಧ್ರದ ಸಮಸ್ಯೆ, ಕೂದಲು ಸಿಕ್ಕು ಸಿಕ್ಕಾಗುವುದು, ತುಂಡಾಗುವುದು ಹೀಗೆ ಹಲವಾರು ಸಮಸ್ಯೆಗಳು ಕೂದಲನ್ನು ಕಾಡುತ್ತವೆ. ಒಂದು ವೇಳೆ ನೀವು ಕೂದಲನ್ನು ಬಾಚಿದ ಮೇಲೆ ನೆಲದ ಮೇಲೆ ಒಂದು ಉಂಡೆಯಾಗುವಷ್ಟು ಕೂದಲು ಬಿದ್ದಿರುವುದನ್ನು ನೋಡುತ್ತಿದ್ದೀರಾ? ನಿಮ್ಮ ಹಳೆಯ ಫೋಟೋಗಳಿಗೆ ಹೋಲಿಸಿದಾಗ ನಿಮ್ಮ ಇತ್ತೀಚಿನ ಫೋಟೋದಲ್ಲಿ ನಿಮ್ಮ ಕೂದಲು ಇಲ್ಲವಾಗುತ್ತಿರುವುದನ್ನು ನೀವು ಗಮನಿಸಿದ್ದೀರಾ? ಬಹುಶಃ ನೀವು ಕೂದಲು ಉದುರುವಿಕೆ ಸಮಸ್ಯೆಯಿಂದಾಗಿ ಬೊಕ್ಕ ತಲೆಯವರಾಗುವತ್ತ ಸಾಗುತ್ತಿದ್ದೀರಾ ಎಂದು ಕಾಣುತ್ತದೆ. ಇದಕ್ಕೆ ಕಾರಣಗಳು ಯಾವುವು ಎಂದು ತಲೆಕೆಡಿಸಿಕೊಂಡಿದ್ದೀರಾ? ಬನ್ನಿ ಈ ಮುಂದೆ ಅವುಗಳನ್ನು ವಿವರಿಸಿದ್ದೇವೆ, ಅವು ಯಾವುವು ಎಂದು ತಿಳಿಯಲು ಮುಂದೆ ಓದಿ...

ಒತ್ತಡ

ಒತ್ತಡ

ಅತಿ ವೇಗದ ಜೀವನ ಶೈಲಿಯು ನಿಮ್ಮ ಚೈತನ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಜೊತೆಗೆ ನಿಮ್ಮ ಮೇಲೆ ಒತ್ತಡವನ್ನು ಸಹ ಅಧಿಕಗೊಳಿಸುತ್ತದೆ. ಇದರಿಂದ ನಿಮಗೆ ತಲೆನೋವು ಮುಂತಾದ ಸಮಸ್ಯೆಗಳು ಬರುತ್ತವೆ ಎಂದು ಹಲವಾರು ಅಧ್ಯಯನಗಳು ಸಾಭೀತು ಮಾಡಿವೆ. ಇದಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕೆಲವರಿಗೆ ಇದರಿಂದ ಹೃದಯಾಘಾತ ಸಹ ಸಂಭವಿಸಬಹುದು. ಕೂದಲು ಉದುರಲು ಮೊದಲ ಕಾರಣವೆ ಇದು, ವಿಪರೀತ ಒತ್ತಡ. ವಿಪರೀತ ಒತ್ತಡವು ನಿಮ್ಮ ಬೊಕ್ಕ ತಲೆಗೆ ಕಾರಣವಾಗುತ್ತದೆ. ಆದ್ದರಿಂದ ಒತ್ತಡವನ್ನು ದೂರವಿರಿಸಿ. ಕೂದಲನ್ನು ಕಾಪಾಡಿಕೊಳ್ಳಿ.

ಕೌಟುಂಬಿಕ ಇತಿಹಾಸ

ಕೌಟುಂಬಿಕ ಇತಿಹಾಸ

ನಿಮ್ಮ ಕುಟುಂಬದಲ್ಲಿ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ, ನಿಮಗೆ ಸಹ ಅದು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದನ್ನು ನೀವು ಸಂಪೂರ್ಣವಾಗಿ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದಿದ್ದರು, ಸರಿಯಾದ ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.

ಹೇರ್ ಸ್ಟೈಲ್ ಸಾಧನಗಳು

ಹೇರ್ ಸ್ಟೈಲ್ ಸಾಧನಗಳು

ನಿಮ್ಮ ಕೂದಲಿಗೆ ಒಳ್ಳೆಯ ಆಕರ್ಷಣೆಯನ್ನು ನೀಡಬಹುದು. ಹೇರ್ ಡ್ರೈಯರ್ ಮತ್ತು ಹೇರ್ ಸ್ಟ್ರೈಟೆನರ್ ಮುಂತಾದ ಸಾಧನಗಳು ನಿಮ್ಮ ನೆಚ್ಚಿನ ಉಪಕರಣಗಳಾಗಿರಬಹುದು. ಆದರೆ ನೆನಪಿಡಿ, ಇವುಗಳಿಂದ ನಿಮ್ಮ ಕೂದಲಿಗೆ ಸೌಂದರ್ಯವು ಹೇಗೆ ಲಭಿಸುತ್ತದೆಯೋ, ಅಷ್ಟೇ ಹಾನಿ ಸಹ ಸಂಭವಿಸುತ್ತದೆ. ಇವುಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ಸಹ ಕೂದಲು ಉದುರುವುದು ಹೆಚ್ಚಾಗುತ್ತದೆ. ಹಾಗಾಗಿ ಹೇರ್ ಡ್ರೈಯರ್, ಸ್ಟ್ರೈಟೆನಿಂಗ್ ಮತ್ತು ಕರ್ಲಿಂಗ್‌ಗಳಿಂದ ದೂರವಿರಿ.

ಹಾರ್ಮೊನ್‍ಗಳ ಬದಲಾವಣೆ

ಹಾರ್ಮೊನ್‍ಗಳ ಬದಲಾವಣೆ

ಹಾರ್ಮೋನುಗಳ ಮಟ್ಟದಲ್ಲಿ ಹಾಗುವ ಏರುಪೇರುಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಅದರಲ್ಲಿಯೂ ಗರ್ಭಿಣಿ ಮತ್ತು ಪ್ರಸವದ ಸಂದರ್ಭದಲ್ಲಿ ಈ ಕೂದಲು ಉದುರುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಥೈರಾಯ್ಡ್ ಅಸಮತೋಲನ, ಋತು ಚಕ್ರ ಮತ್ತು ಇತರೆ ಹಾರ್ಮೋನ್ ಸಂಬಂಧಿತ ಸಮಸ್ಯೆಗಳು ನಿಮ್ಮ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.

ರಾಸಾಯನಿಕಗಳ ನಿಯಮಿತ ಬಳಕೆ

ರಾಸಾಯನಿಕಗಳ ನಿಯಮಿತ ಬಳಕೆ

ಶಾಂಪೂಗಳು, ಕಂಡೀಶನರ್‌ಗಳು ಮತ್ತು ಕೆಲವೊಂದು ಎಣ್ಣೆಗಳು ಸಹ ರಾಸಾಯನಿಕಗಳಿಂದ ಕೂಡಿರುತ್ತವೆ. ಇವುಗಳು ನಿಮ್ಮ ಕೂದಲಿಗೆ ಆರೈಕೆಯನ್ನು ನೀಡುವ ಬದಲಿಗೆ, ಅವುಗಳಿಗೆ ಹಾನಿಯನ್ನೆ ಹೆಚ್ಚಾಗಿ ಮಾಡುತ್ತವೆ. ನಾವು ಬಳಸುವ ಹಲವಾರು ಸೌಂದರ್ಯದ ಉತ್ಪನ್ನಗಳು ರಾಸಾಯನಿಕಗಳಿಂದ ಕೂಡಿರುತ್ತವೆ. ಇವುಗಳು ಕೂದಲಿನ ಬುಡವವನ್ನು ಮತ್ತು ಕಾಂಡ ಎರಡನ್ನು ದುರ್ಬಲಗೊಳಿಸುತ್ತವೆ. ಇದರಿಂದ ನಿಮಗೆ ಒಡೆದ ತುದಿ, ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಲಿಂಗ

ಲಿಂಗ

ಕೂದಲು ಉದುರುವಿಕೆಯು ಎರಡೂ ಲಿಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಕೂದಲು ಉದುರುವಿಕೆಯು ಎಲ್ಲಾ ಕಡೆ ಸಮಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಗಂಡಸರಲ್ಲಿ, ಕೆಲವೊಂದು ಭಾಗದಲ್ಲಿ ಮಾತ್ರ ಕೂದಲು ಉದುರುವಿಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗಂಡಸರಲ್ಲಿ ಕಾಣಿಸಿಕೊಳ್ಳುವ ಸ್ವಯಂಚಾಲಿತ ರೋಗ ನಿರೋಧಕ ಸ್ಥಿತಿಯು ಬೊಕ್ಕತಲೆಗೆ ನಿಜವಾದ ಕಾರಣವಾಗಿರುತ್ತದೆ.ಹೀಗೆ ಈ ಮೇಲಿನ ಸಮಸ್ಯೆಗಳು ಇರುವವರೆಗೆ ನಿಮ್ಮ ಕೂದಲು ಉದುರುವುದು ತಪ್ಪುವುದಿಲ್ಲ.

English summary

Top reasons why you may be losing hair

Does your hairbrush hold a big, black furry ball after you’ve combed your hair? Do your present photos show a receding hairline when compared to the older ones? Chances are you may be prone to baldness. Can’t figure out what may be causing this extensive hair fall? Read this list of the top causes of hair loss and baldness.
Story first published: Monday, January 18, 2016, 12:43 [IST]
X
Desktop Bottom Promotion