For Quick Alerts
ALLOW NOTIFICATIONS  
For Daily Alerts

ಪುರುಷರೇ, ಇದೇ ತಪ್ಪಿನಿಂದ ಕೂದಲು ಉದುರುತ್ತಿರುವುದು!

By Hemanth
|

ಮಹಿಳೆಯರಲ್ಲಿ ಮಾತ್ರ ಕೂದಲು ಉದುರುವ ಸಮಸ್ಯೆ ಕಾಡುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಈ ಸಮಸ್ಯೆ ಇಂದು ಕೇವಲ ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಕಾಡುತ್ತದೆ. ಕಲುಷಿತವಾಗಿರುವ ನೀರು, ವಾತಾವರಣ, ಒತ್ತಡ ಇದು ಕೂದಲು ಉದುರುವ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಅದರಲ್ಲೂ ಯುವಕರಲ್ಲಿ ಕೂದಲು ಉದುರುವ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕೂದಲು ಉದುರಿದರೆ ಯುವಕರು ಕೂಡ ವಯಸ್ಸಾದವರಂತೆ ಕಾಣುತ್ತಾರೆ. ಕೂದಲು ಉದುರಿ ತಲೆ ಬೋಳು ಆಗುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕವಾಗಿ ಬೆರೆಯಲು ಹಿಂಜರಿಯಬಹುದು.

mens baldness

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ 40ರ ಬಳಿಕ ಕಾಡುತ್ತದೆ. ಯೌವನದಲ್ಲಿ ಅತಿಯಾಗಿ ಕೂದಲು ಉದುರುವ ಸಮಸ್ಯೆಯಿದ್ದರೆ ಆಗ ಏನಾದರೂ ಸಮಸ್ಯೆ ಇದೆ ಎಂದರ್ಥ. ಕೂದಲು ಹದಿಹರೆಯದಲ್ಲಿ ಉದುರಲು ಕಾರಣವೇನೆಂದು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಪುರುಷರ ಕೂದಲು ಉದುರುವುದಕ್ಕೆ ಕಾರಣಗಳು

1. ಒತ್ತಡ

ಅತಿಯಾದ ಒತ್ತಡದಿಂದಾಗಿ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಒತ್ತಡವನ್ನು ಕಡಿಮೆ ಮಾಡುವಂತಹ ಯೋಗ, ಧ್ಯಾನ ಮಾಡಿ. ನಿಮ್ಮ ನರಗಳನ್ನು ಆರಾಮವಾಗಿರುವಂತೆ ನೋಡಿಕೊಳ್ಳಿ.

2. ಸಾಬೂನಿನಿಂದ ಕೂದಲು ತೊಳೆಯುವುದು

ಹೆಚ್ಚಾಗಿ ಪುರುಷರು ಸ್ನಾನ ಮಾಡುವ ಸಾಬೂನನ್ನೇ ಕೂದಲಿಗೆ ಬಳಸುತ್ತಾರೆ. ತಮಗೆ ಶಾಂಪೂ ಅಗತ್ಯವಿಲ್ಲವೆಂದು ಅವರು ಭಾವಿಸುತ್ತಾರೆ. ಆದರೆ ಕೂದಲಿಗೆ ಸಾಬೂನು ಬಳಸುವುದರಿಂದ ಕೂದಲು ಉದುರಬಹುದು.

mens baldness

3. ಸ್ವಚ್ಛತೆ ಸಮಸ್ಯೆ

ಆರೋಗ್ಯಕರವಾದ ಕೂದಲನ್ನು ಹೊಂದಬೇಕಾದರೆ ಸ್ವಚ್ಛತೆ ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಹೆಚ್ಚಿನ ಪುರುಷರು ಮರೆತಿರುತ್ತಾರೆ. ಕೂದಲನ್ನು ಸರಿಯಾಗಿ ತೊಳೆಯದೆ ಇರುವುದು ಇತ್ಯಾದಿ ಕೂದಲು ಉದುರುವ ಸಮಸ್ಯೆಗೆ ಕಾರಣವಾಗಬಹುದು.

4. ಹೆಲ್ಮೆಟ್

ಯಾವುದೇ ಬಟ್ಟೆ ಅಥವಾ ಸ್ಕಾರ್ಪ್ ಧರಿಸದೆ ಹೆಲ್ಮೆಟ್ ಹಾಕುವುದು ಹೆಚ್ಚಿನವರ ಅಭ್ಯಾಸವಾಗಿದೆ. ಹೆಲ್ಮೆಟ್ ಹಾಕುವಾಗ ಸುರಿಯುವ ಬೆವರಿನಿಂದಾಗಿ ಸೋಂಕು ತಗುಲಿ ಕೂದಲು ಉದುರಬಹುದು.

wearing helmet

5. ಪುರುಷ ಸಂಬಂಧಿ ತಲೆಬೋಳಾಗುವುದು

ಈ ಸಮಸ್ಯೆಯು ಪುರುಷರಲ್ಲಿ ಸಾಮಾನ್ಯವಾಗಿ 30ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅತಿಯಾಗಿ ಕೂದಲು ಉದುರಬಹುದು.

6. ಕೆಲವು ಉತ್ಪನ್ನಗಳು

ಕೂದಲನ್ನು ವಿನ್ಯಾಸಗೊಳಿಸಲು ಬಳಸುವಂತಹ ಕೆಲವೊಂದು ಉತ್ಪನ್ನಗಳಲ್ಲಿ ಅತಿಯಾದ ರಾಸಾಯನಿಕ ಒಳಗೊಂಡಿರುವ ಕಾರಣ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು.

 smooking

7. ಧೂಮಪಾನ

ಧೂಮಪಾನದಿಂದಾಗಿ ಕೂದಲು ಉದುರುವ ಸಮಸ್ಯೆ ಮಾತ್ರವಲ್ಲದೆ ಮಹಿಳೆಯರು ಹಾಗೂ ಪುರುಷರಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು.

8. ಬಿಗಿಯಾಗಿ ಕಟ್ಟುವುದು

ಇತ್ತೀಚಿನ ಕೆಲವೊಂದು ಸ್ಟೈಲ್‌ಗೆ ಅನುಗುಣವಾಗಿ ಪುರುಷರು ಸ್ವಲ್ಪ ಉದ್ದ ಕೂದಲು ಬಿಟ್ಟುಕೊಂಡು ಅದನ್ನು ಹಿಂದಕ್ಕೆ ಎಳೆದು ಬಿಗಿಯಾಗಿ ಕಟ್ಟುತ್ತಾರೆ. ದೀರ್ಘ ಸಮಯದವರೆಗೆ ಇದನ್ನು ಕಟ್ಟುವುದರಿಂದ ಕೂದಲಿನ ಕೋಶಗಳಿಗೆ ಹಾನಿಯಾಗುವುದು.

English summary

Reasons why men losing their hair in their young age?

Baldness is also a natural phenomenon that is seen more in men compared to women. However, this condition will usually set in only during the late 30s or early 40s. So, if you are experiencing extreme hair loss during a younger age, there could be other reasons. Here are a few other surprising reasons why you could be experiencing hair loss, have a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more