For Quick Alerts
ALLOW NOTIFICATIONS  
For Daily Alerts

  ಬಿಳಿ ಕೂದಲಿನ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಮದ್ದು!

  By Manu
  |

  ಕಪ್ಪನೆಯ ಮಿರಮಿರನೆ ಮಿಂಚುವ ಕೂದಲು ಸೌಂದರ್ಯ ಮತ್ತು ಯವ್ವೌನದ ಸಂಕೇತ. ಕಪ್ಪು ಮೋಡದ ರಾಶಿಯಲ್ಲಿ ಬಿಳಿಗೂದಲು ತನ್ನ ಅಸ್ತಿತ್ವವನ್ನು ಉಂಟುಮಾಡಿದೆ ಎಂದಾದಲ್ಲಿ ನೀವು ಅಧೀರರಾಗುವುದು ಖಂಡಿತ. ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ ನಿಮ್ಮನ್ನು ಆಳಕ್ಕೆ ತಳ್ಳುತ್ತದೆ ಈ ಬಿಳಿಗೂದಲು. ಮೊದಲೆಲ್ಲಾ ವಯಸ್ಸಾದಾಗ ನೆರೆಯುತ್ತಿದ್ದ ಕೂದಲು ಈಗ 20 ಹರೆಯದಲ್ಲೇ ತನ್ನ ಹಾಜರಾತಿಯನ್ನು ಪ್ರದರ್ಶಿಸುತ್ತಿದೆ. ಕೂದಲಿನಲ್ಲಿ ಮೆಲಾನಿಯನ್ ಉತ್ಪಾದನೆ ಕಡಿಮೆಯಾದಾಗ ಕೂದಲಿನ ಬಣ್ಣವು ಮಾರ್ಪಡುತ್ತದೆ.  ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

  ಬಿಳಿಗೂದಲು ಬರುವುದು ವಯಸ್ಸಾದಾಗ ಎಂಬುದು ಒಂದು ಕಾರಣವಾಗಿದ್ದರೆ ವಂಶಪಾರಂಪರ್ಯ, ಒತ್ತಡ, ಅನೀಮಿಯಾ, ವಿಟಮಿನ್ ಕೊರತೆ, ಕೂದಲಿನ ಅಕಾಲಿಕ ನೆರೆತ ಬಿಳಿಗೂದಲಿಗೆ ಕಾರಣವಾಗಿವೆ. ಕಲುಷಿತ ವಾತಾವರಣ ಕೂಡ ನಿಮ್ಮ ಹೊಳೆಯುವ ಕಪ್ಪು ಕೂದಲನ್ನು ಬಿಳಿಗೂದಲನ್ನಾಗಿ ಮಾರ್ಪಡಿಸುತ್ತದೆ.

  ಬಿಳಿಗೂದಲನ್ನು ಮರೆಮಾಚುವುದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕಗಳನ್ನು ಬಳಸುತ್ತೀರಿ ಅಲ್ಲವೇ? ಈ ಹೇರ್ ಕಲರ್‎ಗಳು ಪರಿಣಾಮಕಾರಿ ಹೆಚ್ಚಿನ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಅಂತೆಯೇ ಈ ಕೂದಲಿನ ಬಣ್ಣಗಳು ನಿಮಗೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ಒದಗಿಸುತ್ತವೆ.

   One Recipe To Get Rid Of Grey Hair Completely
   

  ಆದರೆ ನೈಸರ್ಗಿಕ ರೀತಿಯಲ್ಲಿ ಕೂದಲಿಗೆ ಕಪ್ಪು ಬಣ್ಣ ನೀಡುವ ರೆಸಿಪಿ ಬಗ್ಗೆ ನಿಮಗೆ ಗೊತ್ತಿದೆಯೇ? ಇದು ಕೆಲವೊಂದು ಉತ್ಪನ್ನಗಳ ಮಿಶ್ರಣದೊಂದಿಗೆ ಬಂದಿದ್ದು ನಿಮ್ಮ ಬಿಳಿಗೂದಲಿನ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದೊಂದು ಹಳೆಯ ಪರಿಹಾರ ಎಂದೆನಿಸಿದ್ದು ಆಲೂಗಡ್ಡೆಯ ಸಿಪ್ಪೆಯನ್ನು ಇದರಲ್ಲಿ ಬಳಸಲಾಗುತ್ತದೆ. ಇದನ್ನು ಪರೀಕ್ಷಿಸಿ ಈಗಾಗಲೇ ಪರಿಶೀಲನೆ ಕೂಡ ಮಾಡಲಾಗಿದ್ದು ಬಿಳಿಗೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಿ ಕೂದಲಿನ ಕಿರುಚೀಲಗಳನ್ನು ಆರೋಗ್ಯಕರವಾಗಿಸುತ್ತದೆ. ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ! 

  ಆಲೂಗಡ್ಡೆ ಸಿಪ್ಪೆಯಲ್ಲಿ ಸಾಕಷ್ಟು ಅಂಶಗಳಿದ್ದು ಬಿಳಿಗೂದಲಿನ ಸಮಸ್ಯೆಯನ್ನು ನಿವಾರಿಸುವ ಪ್ರಬಲ ಅಂಶವನ್ನು ಇದು ಪಡೆದುಕೊಂಡಿದೆ. ಈ ರೆಸಿಪಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ಕೆಳಗೆ ನಾವು ನೀಡಿದ್ದು ಇವುಗಳನ್ನು ಬಳಸಿ ಈ ಕೂದಲಿನ ರೆಸಿಪಿಯನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ.

  ಬೇಕಾಗುವ ಸಾಮಾಗ್ರಿಗಳು

  *ಆಲೂಗಡ್ಡೆ ಸಿಪ್ಪೆ

  *ಲ್ಯಾವೆಂಡರ್ ಎಣ್ಣೆ (ಆಯ್ಕೆ)

   One Recipe To Get Rid Of Grey Hair Completely
   

  ಸಿದ್ಧತೆ ಹೇಗೆ?

  *3-4 ಆಲೂಗಡ್ಡೆಗಳನ್ನು ತೆಗೆದುಕೊಂಡು ಅವುಗಳ ಸಿಪ್ಪೆ ಸುಲಿಯಿರಿ. ನಂತರ ಇವುಗಳನ್ನು ತಣ್ಣೀರಿನಲ್ಲಿ ನೆನೆಸಿಡಿ. ಸಾಸ್ ಪ್ಯಾನ್‎ನಲ್ಲಿ ಇವುಗಳನ್ನು ಹಾಕಿ ಕುದಿಸಿಕೊಳ್ಳಿ. ಇದು ಸಂಪೂರ್ಣವಾಗಿ ಕುದಿದ ನಂತರ, 5-10 ನಿಮಿಷಗಳ ಕಾಲ ಸಿಮ್‎ನಲ್ಲಿ ಹಾಗೆಯೇ ಇಡಿ. ತದನಂತರ ಮಿಶ್ರಣ ತಣಿಯಲು ಬಿಡಿ.

  *ಆಲೂಗಡ್ಡೆ ಸಿಪ್ಪೆಯ ವಾಸನೆಯನ್ನು ಹೋಗಲಾಡಿಸಲು ಇದಕ್ಕೆ ಸ್ವಲ್ಪ ಹನಿಗಳಷ್ಟು ಲ್ಯಾವೆಂಡರ್ ಎಣ್ಣೆಯನ್ನು ಹಾಕಿ ನಂತರ ಈ ದ್ರಾವಣವನ್ನು ಗಾಳಿಯಾಡದೇ ಇರುವ ಜಾರ್‎ಗೆ ವರ್ಗಾಯಿಸಿ. ಬಿಳಿ ಕೂದಲಿನ ಬಗ್ಗೆ, ತಿಳಿಯಬೇಕಾದ ಒಂದಿಷ್ಟು ಸಂಗತಿ

  ಬಳಸುವ ವಿಧಾನ?

  ಸ್ವಚ್ಛವಾದ ಒದ್ದೆ ಕೂದಲಿಗೆ ಆಲೂಗಡ್ಡೆ ಸಿಪ್ಪೆ ನೀರನ್ನು ಬಳಸುವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ನೆತ್ತಿಗೆ ಸಂಪೂರ್ಣವಾಗಿ ಈ ನೀರನ್ನು ಹಚ್ಚಿಕೊಳ್ಳಿ ನಂತರ ಇದನ್ನು ಹಾಗೆಯೇ ಬಿಡಿ. ನೀರಿನಲ್ಲಿ ಇದನ್ನು ತೊಳೆದುಕೊಳ್ಳಬೇಡಿ, ಕೂದಲಿನಲ್ಲಿ ಹಾಗೆಯೇ ಇದ್ದಾಗ ಈ ದ್ರಾವಣ ಚೆನ್ನಾಗಿ ಕೆಲಸ ಮಾಡುತ್ತದೆ.

  English summary

  One Recipe To Get Rid Of Grey Hair Completely

  Grey hair is a nightmarish tell-tale sign of ageing that can hamper a person's confidence and make them look old and dull. But, nowadays, because of the rapid pace of our lives, most of us have started getting grey hair in our 20s. Take a look at the amount of ingredients required, the method of preparation and the directions to use this recipe to obtain best results:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more