Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಆರೋಗ್ಯದ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!
ಒತ್ತಡ, ಕಲುಷಿತ ವಾತಾವರಣ ಮತ್ತು ಜೀವನ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಲೇ ಇರುತ್ತದೆ. ಕೂದಲು ಉದುರುವುದು, ತುಂಡಾಗುವುದು ಮೊದಲಾದ ಸಮಸ್ಯೆಗಳು ಸಾಮಾನ್ಯ.
ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಶಾಂಪೂಗಳನ್ನು ಬಳಸಿದರೂ ಪ್ರಯೋಜವಾಗುವುದಿಲ್ಲ. ಇಂತಹ ಶಾಂಪೂಗಳಲ್ಲಿ ರಾಸಾಯನಿಕಗಳನ್ನು ಹಾಕಿರುವುದರಿಂದ ಇತರ ಅಡ್ಡಪರಿಣಾಮಗಳು ಕಾಡಬಹುದು. ಇದರ ಬದಲಿಗೆ ಲಿಂಬೆರಸವನ್ನು ಬಳಸಿಕೊಂಡು ಕೂದಲು ಉದುರುವುದನ್ನು ತಪ್ಪಿಸಬಹುದು ಮತ್ತು ಅದು ಬೆಳೆಯುವಂತೆ ಮಾಡಬಹುದು.

ವಿಟಮಿನ್, ಎ, ಬಿ, ಪ್ರೊಸ್ಪರಸ್ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಲಿಂಬೆರಸವು ಕೂದಲಿನ ಬೆಳೆವಣಿಗೆಯನ್ನು ವೃದ್ಧಿಸುವಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲದೆ, ಲಿಂಬೆರಸವು ಕೂದಲಿಗೆ ಆರೋಗ್ಯ ನೀಡುವುದು ಮಾತ್ರವಲ್ಲದೆ, ಕೆಲವೊಂದು ಸಮಸ್ಯೆಗಳಿಗೂ ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ.
ಉದಾಹರಣೆಗೆ ಉಗುರುಬೆಚ್ಚಗಿನ ಎಣ್ಣೆಗೆ ಕೆಲವು ಹನಿ ಲಿಂಬೆರಸವನ್ನು ಹಾಕಿಕೊಂಡು ತಲೆಬುರುಡೆಗೆ ಮಸಾಜ್ ಮಾಡಿಕೊಂಡರೆ, ಕೂದಲು ಉದುರುವುದು ಮತ್ತು ತಲೆಹೊಟ್ಟನ್ನು ನಿವಾರಿಸಲು ಸಹಕಾರಿಯಾಗಲಿದೆ, ಬನ್ನಿ ಕೂದಲಿಗೆ ಲಿಂಬೆರಸವನ್ನು ಬಳಸುವ ಕೆಲವು ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ, ಮುಂದೆ ಓದಿ....
1. ಒಂದು ಮೊಟ್ಟೆ, ಐದು ಚಮಚ ಮೆಹಂದಿ ಪೌಡರ್ ಅನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ. ಅರ್ಧ ಲಿಂಬೆಯ ರಸವನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಮಸಾಜ್ ಮಾಡಿ. ಸುಮಾರು ಎರಡು ಗಂಟೆಗಳ ಕಾಲ ಇದು ಒಣಗಲಿ. ಬಳಿಕ ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿ ಮಾಡಿ ನೋಡಿ
2. ಲಿಂಬೆರಸ ಮತ್ತು ತೆಂಗಿನ ಕಾಯಿ ನೀರನ್ನು ಸಮಪ್ರಮಾಣದಲ್ಲಿ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. 30 ನಿಮಿಷಗಳ ಕಾಲ ಹಾಗೆ ಬಿಟ್ಟು ಬಳಿಕ ಶಾಂಪೂವಿನಿಂದ ತೊಳೆಯಿರಿ. ಇದು ತಲೆಕೂದಲು ಉದುರುವುದಕ್ಕೆ ನೈಸರ್ಗಿಕ ಮದ್ದು, ಜೊತೆಗೆ ಕೂದಲು ಬೆಳೆದು ಕಾಂತಿಯುತವಾಗುವುದರಲ್ಲಿ ಸಂಶಯವೇ ಇಲ್ಲ.
3. ಸೂರ್ಯನ ಬೆಳಕಿಗೆ ಹೊರಗಡೆ ಹೋಗುವ ಮೊದಲು ಸ್ವಲ್ಪ ಮಾಯಿಶ್ಚರೈಸರ್ ಜತೆಗೆ ಲಿಂಬೆರಸವನ್ನು ಹಾಕಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಕೂದಲು ಬಣ್ಣ ಮಾಸದಂತೆ ಇರಲು ಇದು ನೈಸರ್ಗಿಕ ಮದ್ದು.
4. ಕೂದಲು ಯಾವುದೇ ರೀತಿಯಲ್ಲಿದ್ದರೂ ಲಿಂಬೆರಸದ ಹೇರ್ ಸ್ಪ್ರೇಯನ್ನು ಬಳಸಬಹುದು. ಲಿಂಬೆಯನ್ನು ತುಂಡು ಮಾಡಿಕೊಂಡು ಅದನ್ನು ಸ್ವಲ್ಪ ನೀರಿರುವ ಒಂದು ತವಾಗೆ ಹಾಕಿಕೊಳ್ಳಿ.15 ನಿಮಿಷ ಹಾಗೆ ಕುದಿಸಿದಾಗ ನೀರು ಅರ್ಧದಷ್ಟು ಖಾಲಿಯಾಗಲಿ. ಬಳಿಕ ಉಳಿದ ರಸವನ್ನು ತೆಗೆದು ಎಸೆನ್ಶಲ್ ಆಯಿಲ್ ಜತೆ ಸೇರಿಸಿ ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಇದನ್ನು ಒಂದು ವಾರ ತನಕ ಬಳಸಬಹುದು.
5. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ನಿಂಬೆಯನ್ನು ನೈಸರ್ಗಿಕ ಶಾಂಪೂ ಆಗಿ ಬಳಸಬಹುದು. ಬಿಸಿ ನೀರಿನಲ್ಲಿ ಕೆಲವು ತುಂಡು ಸಾಬೂನನ್ನು ಕರಗಲು ಬಿಡಿ. ಇದಕ್ಕೆ ಆಲಿವ್ ಎಣ್ಣೆ ಮತ್ತು ಸ್ವಲ್ಪ ನಿಂಬೆರಸವನ್ನು ಹಾಕಿಕೊಂಡು ಶಾಂಪೂ ರೀತಿಯಲ್ಲಿ ಬಳಸಿಕೊಳ್ಳಿ. ಒಂದು ವಾರ ಕಾಲ ಇದನ್ನು ಬಳಸಬೇಕಿದ್ದರೆ ಪ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಅತಿಯಾಗಿ ಲಿಂಬೆರಸವನ್ನು ಬಳಸುವುದರಿಂದ ಸಮಸ್ಯೆಯಾಗಬಹುದು. ಯಾಕೆಂದರೆ ಇದರಲ್ಲಿನ ಸಿಟ್ರಿಕ್ ಆ್ಯಸಿಡ್ ಕೂದಲನ್ನು ಸುಡಬಹುದು. ಇದರ ಬಗ್ಗೆ ಎಚ್ಚರವಿರಲಿ. ನಿಮ್ಮ ಕೂದಲಿಗೆ ಹೊಂದಿಕೊಳ್ಳದೆ ಇದ್ದರೆ ಅದನ್ನು ಹಚ್ಚಿಕೊಳ್ಳಬೇಡಿ.



Click it and Unblock the Notifications



