For Quick Alerts
ALLOW NOTIFICATIONS  
For Daily Alerts

ಹೇರ್‌ಲೈನ್ ಸಾಧನೆ- 'ಅಲರ್ಜಿ ಪರೀಕ್ಷಾ ಸೇವೆ' ಯಶಸ್ವಿ ಮುನ್ನುಡಿ

By Hairline International Clinic
|

ಹೇರ್‌ಡೈನಿಂದ ಅಲರ್ಜಿ ಅನುಭವಿಸುತ್ತಿರುವವರು, ಹೇರ್‌ಡೈ ಬಳಕೆ ಆರಂಭಿಸಲು ಚಿಂತಿಸುತ್ತಿರುವವರು ಅಥವಾ ಈಗಾಗಲೇ ಹೇರ್‌ಡೈ ಬಳಸುತ್ತಿರುವವರಿಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್ ಸೂಕ್ತ ಪರಿಹಾರವನ್ನು ಒದಗಿಸಲಿದೆ. ನೀವು ಮಾರುಕಟ್ಟೆಯಲ್ಲಿ ದೊರೆಯುವ ಹಲವು ಬಗೆಯ ಹೇರ್‌ಡೈಗಳನ್ನು ಬಳಸಿ ಬೇಸತ್ತಿದ್ದರೆ ಅಥವಾ ಅವುಗಳು ಹೊಂದಿಕೆಯಾಗದಿದ್ದಲ್ಲಿ ಅಥವಾ ಅದರಿಂದ ಅಲರ್ಜಿಯಾಗುತ್ತಿರುವುದನ್ನು ತಪ್ಪಿಸಲೆಂದೇ ಹೇರ್‍ಲೈನ್ ಕ್ಲಿನಿಕ್ ಅಲರ್ಜಿ ಪರೀಕ್ಷಾ ಸೇವೆಯನ್ನು ಆರಂಭಿಸಿದೆ.

ಈ ಅಲರ್ಜಿ ಪರೀಕ್ಷೆಯನ್ನು ಪರಿಚಯಿಸಿ ಮಾತನಾಡಿದ ಹೇರ್‍ಲೈನ್ ಇಂಟರ್‌ನ್ಯಾಷನಲ್‌ನ ಡರ್ಮೆಟೋಸರ್ಜನ್ ಡಾ.ಪ್ರೇಮಲತಾ ಅವರು, "ಹೇರ್‌ಡೈ ಬಳಸುವ ಬಹತೇಕ ಜನರು ಕೂದಲು ಉದುರುವ ಬಗ್ಗೆ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ, ಈ ಸಮಸ್ಯೆ ಹೇರ್‌ಡೈ ಬಳಸುವುದರಿಂದ ಬರುತ್ತದೆ ಎಂಬುದು ಅವರಿಗೆ ತಿಳಿದಿರುವುದೇ ಇಲ್ಲ. ದೀರ್ಘಕಾಲದ ಅಲರ್ಜಿಯಿಂದಾಗಿ ಕೂದಲು ಉದುರುವುದು ಅಥವಾ ಹಣೆಯಲ್ಲಿ ಅಲರ್ಜಿ ಕಾಣಿಸಿಕೊಳ್ಳುವುದು ಸೇರಿದಂತೆ ಮತ್ತಿತರೆ ರೀತಿಯಲ್ಲಿ ಅಲರ್ಜಿ ಉಂಟಾಗುತ್ತದೆ.

hair dye allergy

ಅಲರ್ಜಿಯಾದವರು ತಲೆಯಲ್ಲಿ ಕಡಿತ ಉಂಟಾಗುವುದು, ನೆತ್ತಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು, ಮೊಡವೆ ಮೂಡುವುದು ಸೇರಿದಂತೆ ಹಲವು ರೀತಿಯಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಾರೆ. ಈ ಅಲರ್ಜಿ ಜೀವಕ್ಕೆ ಅಪಾಯ ತರಬಲ್ಲದು. ಕಣ್ಣು ರೆಪ್ಪೆಗೆ ಮಾರಕವಾಗಬಹುದು, ರೆಪ್ಪೆಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಅಥವಾ ಉಸಿರುಗಟ್ಟುವಂತಹ ಸ್ಥಿತಿ (Angio Edema) ಬರಬಹುದು'' ಎಂದು ಎಚ್ಚರಿಕೆ ನೀಡಿದರು.

ಪರೀಕ್ಷೆ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ಹೇರ್‍ಲೈನ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಬನಿ ಆನಂದ್ ಅವರು, "ಈಗಿನ ದಿನಗಳಲ್ಲಿ ಜನರು ತಮ್ಮ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಉತ್ಪನ್ನಗಳಿಂದ ತಮಗೆ ಯಾವುದೇ ಅನಾನುಕೂಲ ಅಥವಾ ತೊಂದರೆ ಆಗಬಾರದು ಎಂದು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಅಲರ್ಜಿಮುಕ್ತ

ಉತ್ಪನ್ನಗಳ ಬಳಕೆ ಮತ್ತು ಆರೋಗ್ಯದ ಸುರಕ್ಷತೆಗೆ ಈ ಅಲರ್ಜಿ ಪರೀಕ್ಷಾ ವಿಧಾನ ಸಹಕಾರಿಯಾಗುತ್ತದೆ'' ಎಂದು ಭರವಸೆ ನೀಡಿದರು.
ಹೇರ್‍ಲೈನ್ ಹೊರತಂದಿರುವ ಈ ಪರೀಕ್ಷಾ ಕಿಟ್‍ನಲ್ಲಿ ಅಲರ್ಜಿ ನಿರೋಧಕ ಇಂಜಕ್ಷನ್ ಸಿರಿಂಜ್ ಇರುತ್ತದೆ. ಇದರ ಜತೆಗೆ ಅಮೋನಿಯಾ ಮತ್ತು ಪಿಪಿಟಿ ಸೇರಿದಂತೆ ಮತ್ತಿತರೆ ಔಷಧಗಳು ಇರುತ್ತವೆ.

ಒಬ್ಬ ವ್ಯಕ್ತಿಗೆ ಇಂಜಕ್ಷನ್ ನೀಡಲಾಗುತ್ತದೆ. ಈ ಜಾಗದಲ್ಲಿ ಪೆಟ್ರೋಲಿಯಂ ಜೆಲ್ಲಿಯೊಂದಿಗೆ ಸಿಲ್ವರ್ ಫಾಯಲ್ ಅನ್ನು ಅಚಿಟಿಸಲಾಗುತ್ತದೆ. 48 ಗಂಟೆಗಳ ನಂತರ ಈ ಸಿಲ್ವರ್ ಫಾಯಲ್ ಅನ್ನು ತೆಗೆಯಲಾಗುತ್ತದೆ. ಆಗ ಆ ಜಾಗದಲ್ಲಿ ಕೆಂಪು ಬಣ್ಣ ಇದೆಯೇ ಅಥವಾ ಇನ್ನಿತರೆ ಲಕ್ಷಣಗಳು ಕಾಣುತ್ತವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇದರ ಆಧಾರದಲ್ಲಿ ಹೇರ್‍ಲೈನ್ ಇಂಟರ್‌ನ್ಯಾಷನಲ್‌ನ ವೃತ್ತಿಪರರು ಪರೀಕ್ಷಿಸುತ್ತಾರೆ.

ಈ ಪರೀಕ್ಷೆಯನ್ನು ಲಿಪ್‍ಸ್ಟಿಕ್ಸ್, ಐ ಶಾಡೋಸ್, ಕ್ರೀಂಗಳಿಗೂ ಮಾಡಲಾಗುತ್ತದೆ. ಸುಮಾರು 5-10 ವರ್ಷಗಳಿಂದ ನಿರಂತರವಾಗಿ ಹೇರ್‌ಡೈ ಬಳಸುತ್ತಾ ಬಂದಿದ್ದರೂ ಅಲರ್ಜಿ ಅಥವಾ ಕೂದಲು ಉದುರುತ್ತಿರುತ್ತದೆ. ಆದರೆ, ಇದು ಗಮನಕ್ಕೆ ಬಂದಿರುವುದಿಲ್ಲ. ಸಾಮಾನ್ಯವಾಗಿ ಕಡಿಮೆ ದರದ ಹೇರ್‌ಡೈಗಳಿಂದ ಹೆಚ್ಚು ಅಲರ್ಜಿ ಉಂಟಾಗುತ್ತದೆ.

ದೀರ್ಘಕಾಲದವರೆಗೆ ಬಣ್ಣ ಇರುವಂತೆ ಮಾಡಲು ಈ ಉತ್ಪನ್ನಗಳಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇದರಿಂದಾಗಿ ಅಲರ್ಜಿ ಪ್ರಮಾಣ ಹೆಚ್ಚುತ್ತದೆ. ಹೆಚ್ಚಿನ ಮಾಹಿತಿಗಾಗಿ ವೇದ: 080 48874972, 9739943112 ಅಥವಾ ವೆಬ್‍ಸೈಟ್ www.hairline.in ಇಲ್ಲಿಗೆ ಸಂಪರ್ಕಿಸಬಹುದು.

English summary

Hairline International introducing hair dye allergy test

Hair line International organization now brings good treatment for the development of hair and skin. These organization Always bring quality service to its customers and providing treatment by experts.... The same way Hairline International introducing simple hair dye allergy test... have a look
X
Desktop Bottom Promotion