For Quick Alerts
ALLOW NOTIFICATIONS  
For Daily Alerts

ಇನ್ನು ಹೇರ್ ಸ್ಟ್ರೈಟ್ನಿಂಗ್‌‌ಗೆ ಬ್ಯೂಟಿ ಪಾರ್ಲರ್‌ಗಳ ಹಂಗೇಕೆ?

By Jaya subramanya
|

ಸುಂದರವಾದ ಕೂದಲು ಪಡೆಯುವುದು ಎಲ್ಲಾ ಹೆಂಗಳೆಯರ ಕನಸಾಗಿರುತ್ತದೆ. ಆದರೆ ಕೆಲವು ಮಹಿಳೆಯರು ತಾವು ಬಯಸಿದಂತಹ ಕೂದಲನ್ನು ಪಡೆದುಕೊಂಡಿದ್ದರೆ ಇನ್ನು ಕೆಲವರು ಹರಸಾಹಸ ಪಡಬೇಕಾಗುತ್ತದೆ. ಕೂದಲು ನೇರವಾಗಿ ದಟ್ಟವಾಗಿದ್ದರೆ ಬೇಕಾದ ಅಲಂಕಾರಗಳನ್ನು ಕೂದಲಿಗೆ ಮಾಡಿಕೊಳ್ಳಬಹುದು ಎಂಬುದು ಹೆಂಗಳೆಯರ ಬಯಕೆಯಾಗಿರುತ್ತದೆ.

ಅದರಲ್ಲೂ ನೇರವಾದ ಕೂದಲು ಎಲ್ಲರಿಗೂ ಹುಟ್ಟುತ್ತಲೇ ಬಂದಿರುವುದಿಲ್ಲ. ಕೆಲವರಿಗೆ ಮಾತ್ರವೇ ಆ ಭಾಗ್ಯ ದೊರಕಿರುತ್ತದೆ. ಇನ್ನು ನೇರ ಕೂದಲನ್ನು ಪಡೆಯದೇ ಇದ್ದವರು ಅದನ್ನು ಪಡೆದುಕೊಳ್ಳುವ ವಿಧಾನವನ್ನು ಅರಿತುಕೊಂಡಿರುವುದೂ ಕೂಡ ಕೂದಲು ಮೊಂಡಾಗಿದ್ದರೆ ಅದನ್ನು ನೇರ ಮತ್ತು ನೀಳ ದಪ್ಪಗೊಳಿಸಲು ನೆರವಾಗಲಿದೆ. ನೈಸರ್ಗಿಕ ಹೇರ್ ಸ್ಟ್ರೈಟ್ನಿಂಗ್‌ಗೆ ಕೆಲ ವಿಧಾನಗಳು

ಈಗಿನ ಅತ್ಯಾಧುನಿಕ ದಿನಗಳಲ್ಲಿ ಹೇರ್ ಸ್ಟ್ರೇಟ್‌ನರ್‎ಗಳ ಬಳಕೆಯನ್ನು ಮಾಡಿ ಕೂದಲನ್ನು ಸ್ವಲ್ಪ ಸಮಯದವರೆಗೆ ನೇರವಾಗಿಸುತ್ತಿದ್ದಾರೆ. ಆದರೆ ಇದರಿಂದ ಕೇಶಕ್ಕೆ ಹಾನಿಖಂಡಿತ. ಅಂತೆಯೇ ರಾಸಾಯನಿಕಗಳ ಬಳಕೆಯನ್ನು ಕೇಶಕ್ಕೆ ಮಾಡುವುದರಿಂದ ಇದ್ದ ಕೂದಲನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿಮಗೆ ಬಂದೊದಗಬಹುದು. ಮನೆಯಲ್ಲೇ ಕೆಲವೊಂದು ಗಿಡಮೂಲಿಕೆ ನೈಸರ್ಗಿಕ ಪರಿಹಾರಗಳನ್ನು ಬಳಸಿಕೊಂಡು ನಿಮ್ಮ ಕೂದಲನ್ನು ನೇರವಾಗಿಸುವ ವಿಧಾನವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಬನ್ನಿ ಆ ವಿಧಾನಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‎ಗಳಿಂದ ಅರಿತುಕೊಳ್ಳೋಣ. ರೇಷ್ಮೆಯಂತಹ ಕೂದಲಿಗಾಗಿ ಸ್ಟ್ರೈಟ್ನಿಂಗ್ ಮೆಷಿನ್

ಹಾಟ್ ಆಯಿಲ್ ಚಿಕಿತ್ಸೆ

ಹಾಟ್ ಆಯಿಲ್ ಚಿಕಿತ್ಸೆ

ನಿಮ್ಮ ಗುಂಗುರು ಕೂದಲನ್ನು ನೇರವಾಗಿಸುವ ಗುಣವನ್ನು ಹಾಟ್ ಆಯಿಲ್ ಪಡೆದುಕೊಂಡಿದೆ. ನಿಮ್ಮ ತಲೆಬುರುಡೆ ಮತ್ತು ಕೂದಲಿಗೆ ಮಾಯಿಶ್ಚರೈಸರ್ ಅನ್ನು ಒದಗಿಸಿ ಪೋಷಕಾಂಶವನ್ನು ಕೂದಲಿಗೆ ನೀಡುತ್ತದೆ. ಇದಕ್ಕಾಗಿ ತೆಂಗಿನೆಣ್ಣೆ, ಆಲೀವ್ ಆಯಿಲ್, ಎಳ್ಳೆಣ್ಣೆಯನ್ನು ಬಳಸಿ.

ತೆಂಗಿನ ಹಾಲು ಮತ್ತು ಲಿಂಬೆ ರಸ

ತೆಂಗಿನ ಹಾಲು ಮತ್ತು ಲಿಂಬೆ ರಸ

ಈ ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿದಾಗ, ನಿಮ್ಮ ಕೂದಲಿಗೆ ನೈಸರ್ಗಿಕ ಕಂಡೀಶನರ್‎ನಂತೆ ಇದು ಕೆಲಸಮಾಡಿ ಕೂದಲನ್ನು ನೇರಗೊಳಿಸುತ್ತದೆ. ಶಾಂಪೂ ಮಾಡಿದ ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಇದನ್ನು ಮಾಡಿ, ನಿಮಗೆ ಉತ್ತಮ ಫಲಿತಾಂಶಗಳು ದೊರೆಯುತ್ತದೆ.

ಹಾಲು, ಜೇನು ಮತ್ತು ಸ್ಟ್ರಾಬೆರ್ರಿ

ಹಾಲು, ಜೇನು ಮತ್ತು ಸ್ಟ್ರಾಬೆರ್ರಿ

ನಿಮ್ಮ ಕೂದಲನ್ನು ನೈಸರ್ಗಿಕವಾಗಿ ನೇರವಾಗಿಸುವ ಸಾಮಾಗ್ರಿಗಳಲ್ಲಿ ಇವುಗಳೂ ಒಂದು. ಒಂದು ಕಪ್‎ನಷ್ಟು ಹಾಲನ್ನು ತೆಗೆದುಕೊಂಡು ಇದಕ್ಕೆ ಜೇನು ಸೇರಿಸಿ ಇದಕ್ಕೆ ಸ್ಮ್ಯಾಶ್ ಮಾಡಿದ ಸ್ಟ್ರಾಬೆರ್ರಿಯನ್ನು ಸೇರಿಸಿ. ಕೂದಲಿಗೆ ಇದನ್ನು ಹಚ್ಚಿಕೊಂಡು ಟವೆಲ್‎ನೊಂದಿಗೆ ಸುತ್ತಿಕೊಳ್ಳಿ. ಗಂಟೆಗಳ ಕಾಲ ಹಾಗೆಯೇ ಬಿಟ್ಟು ಕೂದಲಿಗೆ ಶಾಂಪೂ ಮಾಡಿ.

ಹರಳೆಣ್ಣೆ

ಹರಳೆಣ್ಣೆ

ನಿಮ್ಮ ಕೂದಲನ್ನು ನೇರವಾಗಿಸುವ ಅದ್ಭುತ ಸಾಮರ್ಥ್ಯವನ್ನು ಈ ಎಣ್ಣೆ ಪಡೆದುಕೊಂಡಿದೆ. ಎಣ್ಣೆಯನ್ನು ಬಿಸಿ ಮಾಡಿ ನಿಮ್ಮ ತಲೆಬುಡಕ್ಕೆ ಹಚ್ಚಿಕೊಳ್ಳಿ ನಂತರ ಹಾಗೆಯೇ ಬಿಡಿ. ಬಿಸಿ ನೀರಿನಲ್ಲಿ ಟವೆಲ್ ಅದ್ದಿಕೊಂಡು ನಿಮ್ಮ ಕೂದಲಿನ ಸುತ್ತಲೂ ಕಟ್ಟಿಕೊಳ್ಳಿ. ಅರ್ಧಗಂಟೆ ಕಾಯಿರಿ ಮತ್ತು ತೊಳೆದುಕೊಳ್ಳಿ.

ಆಲೀವ್ ಆಯಿಲ್ ಮತ್ತು ಮೊಟ್ಟೆ

ಆಲೀವ್ ಆಯಿಲ್ ಮತ್ತು ಮೊಟ್ಟೆ

ಆಲೀವ್ ಆಯಿಲ್ ಕೂದಲಿಗೆ ಮಾಯಿಶ್ಚರೈಸ್ ಮಾಡುತ್ತದೆ ಹಾಗೂ ಮೊಟ್ಟೆ ಕೂದಲಿಗೆ ಹೊಳಪನ್ನು ನೀಡಿ ಕೂದಲಿನ ಪೋಷಣೆ ಹೊರಹೋಗದಂತೆ ಲಾಕ್ ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಇದಕ್ಕೆ ಆಲೀವ್ ಆಯಿಲ್ ಸೇರಿಸಿ ಕೂದಲಿಗೆ ಮಸಾಜ್ ಮಾಡಿ. ಅಗಲ ಹಲ್ಲುಗಳಿರುವ ಬಾಚಣಿಗೆಯಿಂದ ಕೂದಲನ್ನು ತೊಳೆದುಕೊಳ್ಳಿ ಮತ್ತು 45 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ನಿಮಗೆ ನೇರವಾದ ಕೂದಲನ್ನು ಹೆಚ್ಚು ಶ್ರಮವಿಲ್ಲದೆ ಪಡೆದುಕೊಳ್ಳಬಹುದು.

ಬಾಳೆಹಣ್ಣು ಹೇರ್ ಮಾಸ್ಕ್

ಬಾಳೆಹಣ್ಣು ಹೇರ್ ಮಾಸ್ಕ್

ಹಣ್ಣಾದ ಬಾಳೆಹಣ್ಣನ್ನು ಸ್ಮ್ಯಾಶ್ ಮಾಡಿ ಮತ್ತು ಮೊಸರು ಜೇನನ್ನು ಇದಕ್ಕೆ ಬೆರೆಸಿಕೊಳ್ಳಿ. ನಿಮ್ಮ ಕೂದಲು ತುಂಬಾ ಒಣಗಿದ್ದರೆ, ಇದಕ್ಕೆ ಆಲೀವ್ ಆಯಿಲ್ ಸೇರಿಸಿ. ನಿಮ್ಮ ಕೂದಲು ಮತ್ತು ತಲೆಬುರುಡೆಗೆ ಪ್ಯಾಕ್ ಅನ್ನು ಹಚ್ಚಿ ನಂತರ ಶವರ್ ಕ್ಯಾಪ್‎ನಿಂದ ಇದನ್ನು ಮುಚ್ಚಿ. 30 ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಿ. ನೇರವಾದ ಮತ್ತು ಹೊಳೆಯುವ ಕೂದಲನ್ನು ಈ ರೀತಿ ಪಡೆದುಕೊಳ್ಳಿ.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ

ನಿಮ್ಮ ಹೊಳೆಯುವ ತ್ವಚೆಗೆ ಮುಲ್ತಾನಿ ಮಿಟ್ಟಿಯನ್ನು ಬಳಸುತ್ತೀರಿ ತಾನೇ? ನಿಮ್ಮ ಕೂದಲನ್ನು ನೇರವಾಗಿಸು ಮತ್ತು ಹೊಳೆಯಿಸುವ ಸಾಮರ್ಥ್ಯವನ್ನು ಈ ಮಣ್ಣು ಪಡೆದುಕೊಂಡಿದೆ. ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಸಿದ್ಧಪಡಿಸಿಕೊಂಡು ಇದಕ್ಕೆ ಅಕ್ಕಿಹುಡಿ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿಕೊಳ್ಳಿ. ತೆಳುವಾದ ಮಿಶ್ರಣ ಸಿದ್ಧಮಾಡಿ. ಚೆನ್ನಾಗಿ ಹಚ್ಚಿಕೊಳ್ಳಿ. ಅಗಲ ಹಲ್ಲುಳ್ಳ ಬಾಚಣಿಗೆಯಿಂದ ಕೂದಲನ್ನು ಬಾಚಿ ಅರ್ಧಗಂಟೆ ಕಾಯಿರಿ. ನಂತರ ತೊಳೆದುಕೊಳ್ಳಿ.

ಸಿಲರಿ ರಸ

ಸಿಲರಿ ರಸ

ಸಿಲರಿ ಎಲೆಗಳಿಂದ ರಸವನ್ನು ಬೇರ್ಪಡಿಸಿಕೊಂಡು ರಾತ್ರಿ ಫ್ರಿಡ್ಜ್‎ನಲ್ಲಿರಿಸಿ. ಬೆಳಗ್ಗೆ, ಕೂದಲಿನ ಬುಡದಿಂದ ತುದಿಯವರೆಗೆ ಈ ರಸವನ್ನು ಹಚ್ಚಿಕೊಳ್ಳಿ. ಚೆನ್ನಾಗಿ ಬಾಚಿಕೊಳ್ಳಿ ಮತ್ತು ಶವರ್ ಕ್ಯಾಪ್‎ನಿಂದ ಅಥವಾ ಟವೆಲ್‎ನಿಂದ ಕೂದಲನ್ನು ಕಟ್ಟಿಕೊಳ್ಳಿ. 30 ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಿ.

ಅಲೋವೇರಾ ಮಾಸ್ಕ್

ಅಲೋವೇರಾ ಮಾಸ್ಕ್

ಮಾಯಿಶ್ಚರೈಸಿಂಗ್ ಅಂಶಗಳನ್ನು ಒಳಗೊಂಡಿರುವ ಅಲೋವೇರಾ ನಿಮ್ಮ ಕೂದಲನ್ನು ನೇರವಾಗಿಸುವ ಸೂಕ್ತ ಮನೆಮದ್ದಾಗಿದೆ. ಈ ಪ್ಯಾಕ್ ಅನ್ನು ಅಲೋ ಜೆಲ್ ಮತ್ತು ಆಲೀವ್ ಆಯಿಲ್‎ನಿಂದ ಪ್ಯಾಕ್ ತಯಾರಿಸಿಕೊಳ್ಳಿ. ಇದಕ್ಕೆ ಗಂಧದೆಣ್ಣೆಯನ್ನು ಸೇರಿಸಬಹುದು. ಚೆನ್ನಾಗಿ ಕೂದಲಿಗೆ ಇದನ್ನು ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಬೇಬಿ ಶಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ

English summary

Excellent Home Remedies For Straight Hair

Though curly hair has its own charm, girls prefer to have long and straight hair, as it is flowing and goes with every face type. If you have those long, straight and flowing locks, you are blessed. But, everyone is not so lucky. They tend to go to a saloon for hair straightening. But, the process of hair straightening is not always good for your hair.
X
Desktop Bottom Promotion