Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೇಷ್ಮೆಯಂತಹ ಕೂದಲಿಗೆ, ಹರಳೆಣ್ಣೆ-ಜೇನಿನ ಹೇರ್ ಪ್ಯಾಕ್!
ಹೊಳೆಯುವ ರೇಷ್ಮೆಯಂತಹ ಕೂದಲನ್ನು ಪಡೆಯುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂತಹ ಕೂದಲು ಹೊಂದಿದ್ದರೆ ಎಲ್ಲರ ಕಣ್ಣು ನಿಮ್ಮ ಕೂದಲ ಮೇಲೆಯೇ ನೆಟ್ಟಿರುತ್ತದೆ. ಅಂದವಾದ ಕೂದಲನ್ನು ಗಾಳಿಗೆ ಹಾರಾಡಲು ಬಿಡುತ್ತಾ ನೀವು ಮಿಂಚಬಹುದು ಅಲ್ಲವೇ? ಆದರೆ ಇಂತಹ ಕೂದಲನ್ನು ಪಡೆಯುವುದು ಹೇಗೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಸುತ್ತಲಿನ ಧೂಳುಮಯ ವಾತಾವರಣ, ಕಲುಷಿತ ಗಾಳಿ, ಒತ್ತಡ, ಸಮಸ್ಯೆಗಳು ಹೀಗೆ ನೂರಾರು ತಾಪತ್ರಯಗಳು ಕೂದಲಿನ ಅಂದಕ್ಕೆ ಕೊಡಲಿಯೇಟನ್ನು ಹಾಕುತ್ತಿವೆ. ಇನ್ನು ಕೂದಲಿನ ಪೋಷಣೆಗೆ ಬೇಕಾದ ಸಮಯವನ್ನು ನೀಡಲು ನಮಗೆ ಸಮಯ ಇಲ್ಲದಂತಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಕೂದಲು ಸೊರಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಅಂತೆಯೇ ಬುಡ ದುರ್ಬಲಗೊಂಡು ಉದುರಲು ಆರಂಭವಾಗಿ ಈ ಚಿಂತೆಯಿಂದಾಗಿ ಇನ್ನಷ್ಟು ಸೊರಗಿ ಕೃಷವಾಗುತ್ತದೆ. ನಂತರ ಜಾಹೀರಾತಿನಲ್ಲಿ ಪ್ರಸಾರವಾಗುವ ಎಣ್ಣೆ ಮತ್ತು ಶಾಂಪೂಗಳಿಗಾಗಿ ಒಂದಿಷ್ಟು ದುಡ್ಡು ಸುರಿಯುತ್ತೇವೆ. ಆದರೂ ಕೂದಲು ಏನೂ ಬೆಳವಣಿಗೆಯನ್ನು ಹೊಂದುವುದಿಲ್ಲ. ಇಲ್ಲಿ ನಾವು ಮಾಡುತ್ತಿರುವ ತಪ್ಪೆಂದರೆ ಕೂದಲಿಗೆ ಚೆನ್ನಾಗಿ ಅರೈಕೆ ಮಾಡದಿರುವುದೇ ಆಗಿದೆ. ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಂಡು ಕೂದಲಿನ ಚೆಲುವನ್ನು ದುಪ್ಪಟ್ಟುಗೊಳಿಸುವ ಹೇರ್ ಪ್ಯಾಕ್ ವಿಧಾನವನ್ನು ನಿಮ್ಮದಾಗಿಸಿದಲ್ಲಿ ಕೂದಲು ಸಮೃದ್ಧವಾಗಿರುವುದು ಖಂಡಿತ. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು
ಹಾಗಿದ್ಗಿದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಕೊಂಚ ಸಮಯವನ್ನು ಮಾತ್ರ ತೆಗೆದುಕೊಳ್ಳುವ ಅತಿ ಸರಳ ಹೇರ್ ಪ್ಯಾಕ್ ರೆಸಿಪಿಯನ್ನು ಇಂದು ನಾವು ನೀಡುತ್ತಿದ್ದು ಇದು ಹರಳೆಣ್ಣೆ ಮತ್ತು ಜೇನನ್ನು ಒಳಗೊಂಡಿದೆ. ನಿಮ್ಮ ಕೂದಲಿನ ಬುಡವನ್ನು ಗಟ್ಟಿಮಾಡಿ ಸುಂದರ ಹೊಳೆಯುವ ಕೂದಲನ್ನು ಇದು ನಿಮಗೆ ನೀಡುವುದು ಖಂಡಿತ. ಹಾಗಿದ್ದರೆ ಬನ್ನಿ ಈ ಹೇರ್ ಪ್ಯಾಕ್ ತಯಾರಿಯನ್ನು ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.
ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿ
*3 ಚಮಚದಷ್ಟು ಹರಳೆಣ್ಣೆ
*3 ಚಮಚದಷ್ಟು ಜೇನು ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?
ಹರಳೆಣ್ಣೆ ಹಿಂದಿನಿಂದಲೂ ಕೂದಲಿನ ಪೋಷಣೆಯಲ್ಲಿ ಎತ್ತಿದ ಕೈ ಎಂದೇ ಅನ್ನಿಸಿಕೊಂಡಿದ್ದು ನೈಸರ್ಗಿಕ ಕೂದಲಿನ ಪೋಷಣಾ ಮದ್ದಾಗಿದೆ. ವಿಟಮಿನ್ಗಳು ಮತ್ತು ನ್ಯೂಟ್ರಿನ್ಗಳ ಹೇರಳ ಅಂಶಗಳೊಂದಿಗೆ ಈ ಎಣ್ಣೆ ಬಂದಿದ್ದು ಕೂದಲನ್ನು ಆರೋಗ್ಯಕರವಾಗಿ ಮತ್ತು ಸುಭದ್ರವಾಗಿ ಇರಿಸುತ್ತದೆ. ಜೇನು ನೈಸರ್ಗಿಕ ಹೈಡ್ರೇಟಿಂಗ್ ಏಜೆಂಟ್ ಎಂದೆನಿಸಿದ್ದು ಕೂದಲನ್ನು ಮಾಯಿಶ್ಚರೈಸ್ ಮಾಡಿ ಮೃದು ಮತ್ತು ರೇಷ್ಮೆಯಂತೆ ಹೊಳೆಯಿಸುತ್ತದೆ. ಅಂತೆಯೇ ತಲೆ ತುರಿಕೆ ಮತ್ತು ಹೊಟ್ಟನ್ನು ನಿವಾರಣೆ ಮಾಡುತ್ತದೆ.
ಸಿದ್ಧಮಾಡುವುದು ಹೇಗೆ?
*ಮೇಲೆ ತಿಳಿಸಿದ ಪ್ರಮಾಣದಲ್ಲಿ ಜೇನು ಮತ್ತು ಎಣ್ಣೆಯನ್ನು ಮಿಕ್ಸಿಂಗ್ ಬೌಲ್ನಲ್ಲಿ ತೆಗೆದುಕೊಳ್ಳಿ
*ಪೇಸ್ಟ್ ತಯಾರಿಸಲು ಈ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
*ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ
*ಕೂದಲಿನ ಬುಡದಿಂದ ತುದಿಯವರೆಗೆ ಮಿಶ್ರಣವನ್ನು ಹರಡಿಸಿಕೊಳ್ಳಿ
*ಸ್ವಲ್ಪ ನಿಮಷ ನೆತ್ತಿಗೆ ಮಸಾಜ್ ಮಾಡಿ
*20 ನಿಮಿಷಗಳ ಕಾಲ ಮಾಸ್ಕ್ ಅನ್ನು ಹಾಗೆಯೇ ಬಿಡಿ
*ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.



Click it and Unblock the Notifications


