Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್! ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ಸೀಕ್ರೆಟ್ ಮನೆಮದ್ದು!
ಇತ್ತೀಚೆಗೆ ಯಾಕೋ ಯಾವುದೇ ಕಾರ್ಯಕ್ರಮವಾಗಲಿ, ಪಾರ್ಟಿಗಳೇ ಆಗಲಿ ಅದಕ್ಕೆ ಹೋಗಲು ನಿಮಗೆ ಮನಸ್ಸಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ತಲೆ ಕೂದಲು ಬಿಳಿಯಾಗಿರುವುದು. ಕೂದಲು ಬಿಳಿಯಾಗುವ ವಯಸ್ಸು ನಿಮ್ಮದಲ್ಲ, ಆದರೂ ಕೂದಲು ಬಿಳಿಯಾಗಿದೆ ಎಂದರೆ ಇದು ಅನುವಂಶೀಯತೆ ಅಥವಾ ಇನ್ನಿತರ ಕಾರಣಗಳಿಂದ ಆಗಿರಬಹುದು.
ಹೇರ್ ಡೈ ಬಳಸಿಕೊಂಡು ಕೂದಲು ಕಪ್ಪಗೆ ಹೊಳೆಯುವಂತೆ ಮಾಡಿ ನೀವು ಹೊರಗಡೆ ಹೋಗಬಹುದು. ಆದರೆ ಅದು ಎಷ್ಟು ದಿನದವರೆಗೆ ಇರುತ್ತದೆ ಎನ್ನುವುದು ಮುಖ್ಯ ಪ್ರಶ್ನೆ. ನೀವು ಮೂವತ್ತರ ಆಸುಪಾಸಿನ ವಯಸ್ಸಿನವರಾದರೆ ಕೂದಲು ಬಿಳಿಯಾಗುವುದು ದೊಡ್ಡ ಚಿಂತೆಯನ್ನು ಉಂಟು ಮಾಡುತ್ತದೆ.

ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬಂದರೆ ಅವರ ಸಂಕಟ ಹೇಳುವುದೇ ಬೇಡ. ದೇಹದಲ್ಲಿರುವ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಬರುತ್ತದೆ. ಬಣ್ಣ ತಯಾರಿಸುವ ಕೋಶಗಳು ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಲು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಓದುತ್ತಾ ತಿಳಿದುಕೊಳ್ಳಿ. ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದು!
ಅನುವಂಶೀಯತೆ
ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭಾವ್ಯತೆಯನ್ನು ನಿಮ್ಮ ಜಿನ್‌ಗಳು ನಿರ್ಧರಿಸುತ್ತದೆ.
ಹೈಡ್ರೋಜನ್ ಪೆರಾಕ್ಸೈಡ್
ಕೂದಲು ಬಿಳಿಯಾಗಲು ಇದು ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ನಿಮಗೆ ವಯಸ್ಸಾಗುತ್ತಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಬಿಳಿಯಾಗುತ್ತದೆ.
ಧೂಮಪಾನ
ಧೂಮಪಾನದಿಂದ ಕೂದಲು ಬೇಗನೆ ಬಿಳಿಯಾಗುವುದು
ಒತ್ತಡ
ಒತ್ತಡದಿಂದಾಗಿ ರ್ಯಾಡಿಕಲ್‌ಗಳು ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಶೃಂಗದ್ರವ್ಯ ಒಡೆದು ಹೋಗಿ ಬಿಳಿ ಕೂದಲು ಬರುತ್ತದೆ.
ಬಿಳಿ ಕೂದಲಿಗೆ ಕಾರಣವೇನೆಂದು ನಿಮಗೀಗ ಅರ್ಥವಾಗಿದೆ. ಹಾಗಾಗಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಮನೆಮದ್ದನ್ನು ಬಳಸಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಇಲ್ಲಿ ಬಿಳಿ ಕೂದಲು ನಿವಾರಿಸಲು ಕರಿಬೇವಿನ ಎಲೆಯ ಎಣ್ಣೆಯನ್ನು ಬಳಸಿ ನೋಡಿ. ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?
ಬೇಕಾಗುವ ಸಾಮಗ್ರಿಗಳು
*ಒಂದು ಹಿಡಿ ಕರಿಬೇವು
*200 ಮಿ.ಗ್ರಾಂ. ಶುದ್ಧ ತೆಂಗಿನ ಎಣ್ಣೆ
ಮಾಡುವ ಮತ್ತು ಬಳಸುವ ವಿಧಾನ
2.ಒಣಗಿದ ಎಲೆಗಳನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.
3.ಸಣ್ಣ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಹುಡಿಯನ್ನು ಹಾಕಿ. ಎಣ್ಣೆ ಸರಿಯಾಗಿ ಕುದಿಯಲಿ.
4.ಎಣ್ಣೆಯನ್ನು ತಣ್ಣಗಾಗಲು ಬಿಡಿ. ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ.
ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗಿ ರೇಷ್ಮೆಯಂತಾಗುವುದು. ಬಿಳಿ ಕೂದಲು ನಿವಾರಣೆಗೆ ನಿಮ್ಮಲ್ಲಿ ಯಾವುದೇ ಮನೆಮದ್ದುಗಳು ಇದ್ದರೆ ಅದನ್ನು ಕೆಳಗೆ ಕಮೆಂಟ್ ಸೆಕ್ಸನ್‌ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications


