For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ ಅಡುಗೆ ಮನೆಯ ಉತ್ಪನ್ನಗಳೇ ಸಾಕು

|

ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರಲು ಆರಂಭವಾಗಿದ್ದು, ಇದು ದಿನೇ ದಿನೇ ಹೆಚ್ಚುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ದೂಷಿಸಬಹುದು.

ಈ ಕಾರಣಗಳು ಮಾತ್ರವಲ್ಲದೆ ಕ್ರಮಬದ್ಧವಲ್ಲದ ಆಹಾರಕ್ರಮ, ಕಲವು ಔಷಧಿಗಳು, ವಿಟಮಿನ್ ಮತ್ತು ಖನಿಜಾಂಶ ಕೊರತೆಯಿಂದ ಕೂದಲು ಉದುರುತ್ತದೆ.
ಹಾಗಾದರೆ ಇಂತಹ ಸಮಸ್ಯೆಯಿಂದ ಪಾರಾಗುವುದು ಹೇಗೆ..? ಚಿಂತಿಸಬೇಡಿ ಇಲ್ಲಿ ಕೆಲವೊಂದು ಮನೆಮದ್ದನ್ನು ನಿಮಗಾಗಿ ನಾವು ಪರಿಚಯಿಸುತ್ತಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳಿ

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಸ್ವಲ್ಪ ಹಾಲನ್ನು ತೆಗೆದುಕೊ೦ಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಅದನ್ನು ಒ೦ದು ಪೇಸ್ಟ್ ನ ರೂಪಕ್ಕೆ ತ೦ದುಕೊಳ್ಳಿರಿ. ಫಲಿತಾ೦ಶವನ್ನು ಮತ್ತಷ್ಟು ಉತ್ತಮಗೊಳಿಸಲು ಈ ಮಿಶ್ರಣಕ್ಕೆ ಒ೦ದಿಷ್ಟು ಸ್ಟ್ರಾಬೆರಿ ಅಥವಾ ಬಾಳೆಹಣ್ಣುಗಳನ್ನು ಜಜ್ಜಿ ಸೇರಿಸಿರಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿರಿ. ಅದು ಕೂದಲಲ್ಲಿ ಒಣಗಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ಒ೦ದೂವರೆ ಗಂಟೆಯಷ್ಟು ಕಾಲಾವಧಿಯು ಕಳೆದ ಬಳಿಕ ನಿಮ್ಮ ಕೇಶರಾಶಿಯನ್ನು ನೀರಿನಿ೦ದ ತೊಳೆಯಿರಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಕೂದಲು ಉದುರುವಿಕೆಗೆ ಸತುವಿನ ಕೊರತೆಯಿಂದ ಒಮ್ಮೊಮ್ಮೆ ಕೂದಲು ಉದುರುವಿಕೆ ಕಂಡು ಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತದೆ.ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡಿ ಸಾಕು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೂದಲಿನ ಆರೈಕೆಗೆ ಅತ್ಯುತ್ತಮ ಅಡುಗೆ ಎಣ್ಣೆ ಹುಡುಕುತ್ತಿದ್ದರೆ ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ನೀವು ಶಾಂಪೂ ಬಳಸುತ್ತಿದ್ದರೆ ಆಗ ಕೂದಲು ತೊಳೆದ ಬಳಿಕ ನೀವು ಸಂಪೂರ್ಣ ಕೂದಲಿಗೆ ಆಲಿವ್ ಎಣ್ಣೆ ಹಚ್ಚಿ. ಇದರಿಂದ ನಿಮ್ಮ ಕೂದಲನ್ನು ಕಂಡೀಷನರ್ ಮಾಡಲು ನೆರವಾಗುತ್ತದೆ.

ಕರಿಬೇವಿನ ಸೊಪ್ಪು

ಕರಿಬೇವಿನ ಸೊಪ್ಪು

ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಬಿ ಧಾರಾಳವಾಗಿದ್ದು, ಇದು ನಿಮ್ಮ ಕೇಶರಾಶಿಯು ತನ್ನ ಮೂಲಬಣ್ಣವನ್ನು ಮರಳಿ ಪಡೆದುಕೊಳ್ಳಲು ನೆರವಾಗುತ್ತದೆ, ಕೇಶರಾಶಿಗೆ ಪೋಷಕಾ೦ಶಗಳನ್ನೊದಗಿಸುತ್ತದೆ, ಹಾಗೂ ಕೇಶರಾಶಿಯನ್ನು ಬೇರಿನಿ೦ದಲೇ ಬಲಯುತಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೇ ಕರಿಬೇವಿನ ಸೊಪ್ಪು, ಢಾಳಾದ ಕಪ್ಪು ವರ್ಣವುಳ್ಳ ಹೊಸ ಕೂದಲ ಹುಟ್ಟು ಹಾಗೂ ಬೆಳವಣಿಗೆಗೂ ಕೂಡ ಸಾಧಕವಾಗುತ್ತದೆ.ಹೀಗಾದಾಗ ನೀವು ದಟ್ಟವಾದ, ಕಣ್ಣು ಕೋರೈಸುವಷ್ಟು ಕಾ೦ತಿಯುತವಾದ ದಟ್ಟ ಕಪ್ಪು ವರ್ಣದ ಕೇಶರಾಶಿಯ ಒಡತಿ ಎ೦ದೆನಿಸಿಕೊಳ್ಳುವಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಕೂದಲಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಲಭ್ಯವಿವೆ. ಹಾಗಾಗಿ ಇದು ಕೂದಲ ಆರೈಕೆಯಲ್ಲಿ ಅತ್ಯಂತ ಪ್ರಧಾನವಾಗಿ ಬಳಸಲ್ಪಡುತ್ತದೆ. ಇದರಲ್ಲಿ ಕೊಬ್ಬಿನ ಆಮ್ಲಗಳು ಇರುತ್ತವೆ, ಇವು ಕೂದಲನ್ನು ಮೊಯಿಶ್ಚರೈಸ್ ಮಾಡುತ್ತವೆ. ಅತ್ಯಗತ್ಯವಾದ ಕೊಬ್ಬಿನ ಆಮ್ಲಗಳು ಕೂದಲು ಒಡೆಯುವಿಕೆಯನ್ನು ಮತ್ತು ಒಣಗುವಿಕೆ ಹಾಗು ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತವೆ. ನೆಲ್ಲಿಕಾಯಿಯಲ್ಲಿ ಸಮೃದ್ಧವಾದ ಪ್ರೋಟಿನ್‍ಗಳು, ಫ್ಲಾವೊನಾಯ್ಡ್‌ಗಳು, ವಿಟಮಿನ್‍ಗಳು ಮತ್ತು ಖನಿಜಗಳು ಇರುತ್ತವೆ. ಇವು ಕೂದಲು ಉದುರುವಿಕೆಯನ್ನು ತಡೆಗಟ್ಟಿ, ಕೂದಲ ಬೆಳವಣಿಗೆಗೆ ಸಹಕರಿಸುತ್ತವೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇವು ಸಹ ಕೂದಲ ಬುಡವನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ಇದು ಕೂದಲಿನ ಮೇಲೆ ಒಂದು ಅದ್ಭುತವಾದ ಕಂಡೀಶನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ. ಇದರಿಂದ ನಿಮ್ಮ ಕೂದಲು ನಳನಳಿಸುತ್ತದೆ.

ಹಾಲಿನ ಸಿ೦ಪಡಿಕೆ

ಹಾಲಿನ ಸಿ೦ಪಡಿಕೆ

ನಿಮ್ಮ ಕೂದಲನ್ನು ಚಪ್ಪಟೆಯಾಗಿಸುವ ವಿಚಾರದಲ್ಲಿ ಹಾಲು ಬಹಳ ಪ್ರಯೋಜನಕಾರಿ. ಹಾಲನ್ನು ಪಿಚಕಾರಿಯ೦ತಹ ಬಾಟಲಿಯೊ೦ದರಲ್ಲಿ ತು೦ಬಿಸಿಕೊ೦ಡು ಅದನ್ನು ನಿಮ್ಮ ತಲೆಯ ಮೇಲೆಲ್ಲಾ ಸಿ೦ಪಡಿಸಿಕೊಳ್ಳಿರಿ.ನಿಮ್ಮ ಕೂದಲು ಹೀಗೆ ಚಿಮುಕಿಸಿದ ಹಾಲನ್ನು ಹೀರಿಕೊಳ್ಳುವ೦ತಾಗಲು ಅದನ್ನು ಅರ್ಧ ಗಂಟೆಯ ಕಾಲ ತಲೆಯ ಮೇಲೆ ಹಾಗೆಯೇ ಇರಗೊಡಿರಿ. ಅನ೦ತರ ಶ್ಯಾ೦ಪೂವನ್ನು ಬಳಸಿಕೊ೦ಡು ನಿಮ್ಮ ಕೇಶರಾಶಿಯನ್ನು ಚೆನ್ನಾಗಿ ತೊಳೆಯಿರಿ ಹಾಗೂ ಬದಲಾವಣೆಯನ್ನು ಗಮನಿಸಿರಿ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಕೂದಲು ಹಾಗೂ ತ್ವಚೆಯ ಆರೈಕೆಗೆ ಬಳಸುವಂತಹ ಸಾಮಾನ್ಯ ಅಡುಗೆ ಎಣ್ಣೆಯೆಂದರೆ ಅದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಕಂಡೀಷನರ್ ಮಾಡುವುದಲ್ಲದೆ ಅದು ದಪ್ಪವಾಗಿ ಬೆಳೆಯಲು ನೆರವಾಗುತ್ತದೆ. ತೆಂಗಿನಎಣ್ಣೆಯಲ್ಲಿ ಸೋಂಕು ನಿವಾರಕ ಗುಣಗಳಿರುವ ಕಾರಣ ಇದು ತಲೆ ಬುರುಡೆಗೆ ಸೋಂಕು ಬರದಂತೆ ತಡೆಯುತ್ತದೆ.

English summary

Top Hair Treatments From Your Kitchen

If you have dry hair, you may have been trying to find out the best ways to treat dryness and restore its natural moisture. A good place to start is to look around in your kitchen where you can find some cost-effective as well as safe remedies. These will not only soothe your dry hair problems, but also bring back life into your locks.
X
Desktop Bottom Promotion