For Quick Alerts
ALLOW NOTIFICATIONS  
For Daily Alerts

ಕೂದಲು ಸಮಸ್ಯೆಯ ಕಿರಿಕಿರಿ-ಮನೆಮದ್ದೇ ಸರಿ

|

ಈಗಿನ ಜೀವನಶೈಲಿಯ ಕಾರಣದಿಂದಾಗಿ ನಿಮ್ಮ ಕೂದಲು ಒಣ ಅಥವಾ ಎಣ್ಣೆಯುಕ್ತ ನೆತ್ತಿ, ತಲೆಹೊಟ್ಟು, ಕೂದಲು ತುಂಡಾಗುವುದು, ಕೂದಲು ಉದುರುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು.

ಕೆಲವು ನಗರಗಳಲ್ಲಿ ನಲ್ಲಿಗಳಲ್ಲಿ ಬರುವ ಗಡಸು ನೀರಿನಿಂದ ಕೂದಲನ್ನು ತೊಳೆದುಕೊಳ್ಳುವಾಗ ನೀರಿನ ಗುಣಮಟ್ಟವೂ ಕೂದಲನ್ನು ಶಿಥಿಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಡಸು ನೀರಿನಲ್ಲಿ ಕರಗಿರುವ ಹಲವು ಲೋಹ ಮತ್ತು ಖನಿಜಗಳ ಕಾರಣ ಕೂದಲು ತನ್ನ ಹೊಳಪು ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಚಿಂತಿಸಬೇಡಿ ಇಂದು ಬೋಲ್ಡ್ ಸ್ಕೈ ಆರೋಗ್ಯಕರ ಕೂದಲು ಬೆಳೆಯಲು ನಿಮಗೆ ಸಹಾಯಕವಾಗುವ ಮನೆ ಮದ್ದನ್ನು ಪರಿಚಯಿಸುತ್ತಿದ್ದೇವೆ ಪ್ರಯತ್ನಿಸಿ ನೋಡಿ ಆರೋಗ್ಯಕಾರಿ ಕೂದಲಿಗಾಗಿ ಪೋಷಕಾಂಶಭರಿತ ಆಹಾರ ಪದ್ಧತಿಗಳು

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

Tips to Take Care of Your Hair

ಸ್ನಾನದ ಬಳಿಕ ನೈಸರ್ಗಿಕವಾದ ಕಂಡೀಶನರ್ ಉಪಯೋಗಿಸುವುದು ಕೂದಲಿಗೆ ಉತ್ತಮ ಆರೈಕೆ ಹಾಗೂ ಹೊಳಪನ್ನು ನೀಡುತ್ತವೆ. ಕೊಬ್ಬರಿ ಮತ್ತು ಬಾದಾಮಿ ಎಣ್ಣೆಗಳು ಅತ್ಯುತ್ತಮವಾದ ನೈಸರ್ಗಿಕ ಕಂಡೀಶನರ್ ಆಗಿವೆ. ಸುಮಾರು ಎರಡರಿಂದ ಮೂರು ತೊಟ್ಟು ಎಣ್ಣೆಯನ್ನು ಕೈಗಳಿಗೆ ಸವರಿಕೊಂಡು ಕೂದಲಿನ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಹೆಚ್ಚು ಎಣ್ಣೆ ಉಪಯೋಗಿಸುವುದರಿಂದ ಹೊಳಪಿನ ಬದಲಿಗೆ ಹೆಚ್ಚಿನ ಎಣ್ಣೆಯ ಜಿಡ್ಡು ತಗಲುವುದು ಹಾಗೂ ಇದಕ್ಕೆ ಧೂಳು ಅಂಟಿಕೊಳ್ಳುವುದರಿಂದ ಕೇವಲ ಹೊಳಪು ಬರುವಷ್ಟು ಮಾತ್ರ ಪ್ರಮಾಣವನ್ನು ಉಪಯೋಗಿಸಬೇಕು.

ನೀರಿನ ಕುರಿತು ಎಚ್ಚರಿಕೆವಿರಲಿ
ಒಂದು ವೇಳೆ ಗಡಸು ನೀರನ್ನು ಮೃದುಗೊಳಿಸಲು ಸುಲಭಸಾಧ್ಯವಿಲ್ಲದಿದ್ದಲ್ಲಿ ಅಥವಾ ಪ್ರವಾಸ ಮೊದಲಾದ ಕಾರಣದಿಂದ ಬೇರೆ ಕಡೆಯಲ್ಲಿ ಸ್ನಾನ ಮಾಡಬೇಕಾಗಿ ಬಂದಲ್ಲಿ ಸ್ನಾನದ ಬಳಿಕ ಅಂತಿಮವಾಗಿ ನೀರು ಹಾಕಿಕೊಳ್ಳಲು ಕುಡಿಯುವ ನೀರು ಅಥವಾ ಮಿನೆರಲ್ ನೀರನ್ನು ಬಳಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯುಂಟಾಗುವುದನ್ನು ತಪ್ಪಿಸಿಕೊಳ್ಳಬಹುದು.

ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್


ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಲು, ನೀವು ಹಣ್ಣಿನಿ೦ದ ರಸವನ್ನು ಹಿ೦ಡಿ ತೆಗೆದು ಅದನ್ನು ಮೊಸರು ಅಥವಾ ಕೆನೆಯೊ೦ದಿಗೆ ಮಿಶ್ರಗೊಳಿಸಿ, ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಬೇಕು. ಮೂಸ೦ಬಿ ಹಣ್ಣಿನ ರಸವು ನಿಮ್ಮ ತಲೆಗೂದಲು ಮತ್ತಷ್ಟು ನಯವಾಗಿರಲು ಸಹಕರಿಸುತ್ತದೆ. ಮಾತ್ರವಲ್ಲದೇ, ನಿಮ್ಮ ಕೇಶರಾಶಿಗೆ ಸಹಜವಾದ ಕಾ೦ತಿಯನ್ನೂ ಕೂಡ ನೀಡುತ್ತದೆ. ನೀವು ಈ ಹೇರ್ ಪ್ಯಾಕ್ ಅನ್ನು ನಿಮ್ಮ ತಲೆಗೆ ಹಚ್ಚಿಕೊ೦ಡು ಅದನ್ನು ಅರ್ಧ ಗಂಟೆಯ ಕಾಲ ಹಾಗೆಯೇ ಬಿಟ್ಟುಬಿಡಿ. ಅನ೦ತರ ನಿಮ್ಮ ಕೂದಲನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಕೊಳ್ಳಬೇಕು. ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!

ಪಪ್ಪಾಯಿ


ಇದು ತಲೆಯ ಶುಷ್ಕತೆ ಕಡಿಮೆ ಮಾಡುತ್ತದೆ ಮತ್ತು ಕೂದಲದುರುವಿಕೆಯನ್ನು ಕಡಿಮೆಮಾಡುತ್ತದೆ. ಹಾಲು ಮತ್ತು ಜೇನಿನೊಂದಿಗೆ ಹಿಸುಕಿದ ಪಪ್ಪಾಯಿಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ನಿಮ್ಮ ಕೂದಲಿನ ಹೊಳಪಿಗಾಗಿ ಈ ವಿಧಾನವನ್ನು ನಿಯಮಿತವಾಗಿ ಮಾಡಬಹುದು.

ಲಿಂಬೆ ಮಿಶ್ರಿತ ನೀರು


ಲಿಂಬೆ ಮಿಶ್ರಿತ ನೀರಿನಿಂದ ತೊಳೆದುಕೊಳ್ಳಿ ಒಂದು ವೇಳೆ ಕೂದಲು ತುಂಬಾ ಎಣ್ಣೆಯುಕ್ತವಾಗಿರುವಂತೆ ಕಂಡುಬಂದರೆ ಲಿಂಬೆ ಸೇರಿಸಿದ ನೀರಿನಿಂದ ತೊಳೆದುಕೊಳ್ಳುವುದರಿಂದ ಪರಿಹಾರ ದೊರಕುತ್ತದೆ. ಇದಕ್ಕಾಗಿ ಮೂರು ಲೋಟ ನೀರಿಗೆ ಒಂದು ದೊಡ್ಡ ಚಮಚ ಲಿಂಬೆಹಣ್ಣಿನ ರಸವನ್ನು ಸೇರಿಸಿ ದ್ರಾವಣವನ್ನು ತಯಾರಿಸಿ. ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಈ ದ್ರಾವಣದಿಂದ ಕೂದಲಿಗೆ ಹೆಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಲಿಂಬೆಯಲ್ಲಿರುವ ರೋಗನಿರೋಧಕ ಶಕ್ತಿಯ ಕಾರಣ ಕೂದಲಿಗೆ ಉತ್ತಮ ಆರೈಕೆ ದೊರೆಯುವುದರ ಜೊತೆಗೇ ತಲೆಹೊಟ್ಟಿನಿಂದಲೂ ಮುಕ್ತಿ ದೊರಕುತ್ತದೆ.
English summary

Tips to Take Care of Your Hair

Hair is made of protein, so keeping a healthy diet and good hygiene is an essential part of maintaining luscious locks. At the same time, here are some other tips about hair care, and what you can do at home to get unbelievably beautiful hair.
X
Desktop Bottom Promotion