For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಯೇ? ಒಮ್ಮೆ ಮನೆಮದ್ದು ಪ್ರಯತ್ನಿಸಿ

By Manu
|

ಕೂದಲು ಉದುರುವ ಸಮಸ್ಯೆ ಈಗ ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಹಲವಾರು ಮಾತ್ರೆಗಳು, ಎಣ್ಣೆಗಳು, ಔಷಧಿಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳೆಲ್ಲದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನು ಅವರು ನೀಡುವುದಿಲ್ಲ. ಜೊತೆಗೆ ಅವುಗಳೆಲ್ಲವೂ ನಿಮಗೆ ಹೊಂದಿಕೊಳ್ಳುತ್ತವೆ ಎಂಬ ಭರವಸೆಯನ್ನು ಸಹ ನೀಡಲಾಗುವುದಿಲ್ಲ. ಆದರೂ ಅವುಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬುದು ಸುಳ್ಳಲ್ಲ. ಆಲಿವ್ ಎಣ್ಣೆ-ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣ

ಹಾಗಾಗಿ ಬೋಲ್ಡ್ ಸ್ಕೈ ಇಂದು ಕೆಲವೊಂದು ಕೇಶರಾಶಿಯ ಆರೈಕೆಯ ಉಪಾಯಗಳನ್ನು ಸೂಚಿಸಿದ್ದು ಇವು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡದೇ ತ್ವರಿತ ಪರಿಣಾಮಗಳನ್ನು ನೀಡಬಲ್ಲವು. ಅಲ್ಲದೇ, ಬ್ಯೂಟಿ ಪಾರ್ಲರ್‌ನಲ್ಲಿ ನೀವು ವ್ಯಯಿಸಬೇಕಾದಷ್ಟು ಸಮಯವನ್ನಾಗಲಿ ಅಥವಾ ಹಣವನ್ನಾಗಲಿ ಈ ವಿಧಾನಗಳು ಬಯಸುವುದಿಲ್ಲ. ಕೇಶಸಂರಕ್ಷಣೆಯ ಈ ಕೆಳಗಿನ ವಿಧಾನಗಳನ್ನು ಕಲಿಯಿರಿ ಮತ್ತು ಹೇಗೆ ಅವು ನಿಮ್ಮ ಕೇಶರಾಶಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುತ್ತವೆ ಎಂಬುದನ್ನು ಸ್ವತಃ ನೀವೇ ಕಂಡುಕೊಳ್ಳಿರಿ.
ಕೂದಲು ಉದುರುವುದನ್ನು ತಡೆಗಟ್ಟಲು:
ಬೆಚ್ಚಗಿನ ಎಣ್ಣೆಯ ಚಿಕಿತ್ಸೆ
ಅವಶ್ಯಕ ಸಾಮಗ್ರಿ: ಯಾವುದೇ ಸ್ವಾಭಾವಿಕ ಎಣ್ಣೆ - ಆಲಿವ್ ಎಣ್ಣೆ, canola ಎಣ್ಣೆ, ಅಥವಾ castor ಎಣ್ಣೆ

Simple Home Remedies To Control Hair Fall

ವಿಧಾನ:
1. ಮೇಲಿನ ಯಾವುದೇ ಎಣ್ಣೆಯನ್ನು ಅದು ಬೆಚ್ಚಗಾಗುವವರೆಗೆ ಬಿಸಿ ಮಾಡಿಕೊಳ್ಳಿ
2. ಇನ್ನು ಬೆಚ್ಚಗಿನ ಈ ಎಣ್ಣೆಯನ್ನು ನಿಮ್ಮ ತೆಲೆಗೆ ನಯವಾಗಿ ಮಸಾಜ್ ಮಾಡಿ
3. ತದನಂತರ ಮಸಾಜ್ ಮಾಡಿದ ಎಣ್ಣೆಯನ್ನು ಹಾಗೆಯೇ ನಿಮ್ಮ ಕೇಶರಾಶಿಯಲ್ಲಿ ಒಂದು ರಾತ್ರಿಯಿಡೀ ಅಥವಾ ಒಂದು ಗಂಟೆಯವರೆಗೆ ಇರಗೊಡಿರಿ, ನಂತರ ನಿಮ್ಮ ಕೇಶರಾಶಿಯನ್ನು ಶಾಂಪೂ ಉಪಯೋಗಿಸಿ ತೊಳೆಯಿರಿ.

ತೆಂಗಿನ ಹಾಲು

ಅವಶ್ಯಕ ಸಾಮಗ್ರಿ: ತೆಂಗಿನ ಹಾಲು (ಸ್ವಲ್ಪ ಕಾಯಿತುರಿಯನ್ನು (coconut shaving) ಅರೆದು ಅದನ್ನು ಚೆನ್ನಾಗಿ ಹಿಂಡಿ ತೆಗೆದ ರಸ)
ವಿಧಾನ:

1.ನಿಮ್ಮ ತಲೆಯ ಮೇಲಿನ ಎಲ್ಲಾ ಭಾಗಗಳಿಗೆ ಸ್ವಲ್ಪ ತೆಂಗಿನ ಹಾಲನ್ನು ಸುರಿದು, ಅದನ್ನು ತಲೆಗೂದಲ ಬೇರುಗಳೊಳಗೆ ಮಸಾಜ್ ಮಾಡಿರಿ.
2.ಅದನ್ನು ಹಾಗೆಯೇ ತಲೆಯಲ್ಲಿ 1 ರಿಂದ 2 ಗಂಟೆಗಳ ಕಾಲ ಇರಗೊಟ್ಟು, ಅನಂತರ ಚೆನ್ನಾಗಿ ತೊಳೆಯಿರಿ. ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ಶಾಂಪೂ!

ಸಾಸಿವೆ ಮತ್ತು ಮದರಂಗಿ ಎಲೆಗಳು
ಅವಶ್ಯಕ ಸಾಮಗ್ರಿಗಳು
1. ಸಾಸಿವೆ ಎಣ್ಣೆ
2. ಮದರಂಗಿ ಎಲೆಗಳು


ವಿಧಾನ:
1. ಸ್ವಲ್ಪ ಸಾಸಿವೆ ಎಣ್ಣೆಯನ್ನು ತಳ ಆಳವಿರುವ ಪಾತ್ರೆಯಲ್ಲಿ ಕುದಿಸಿರಿ ಹಾಗೂ ಒಂದು ಚಿಟಿಕೆಯಷ್ಟು ಮದರಂಗಿ ಎಲೆಗಳನ್ನು ಕ್ರಮಕ್ರಮವಾಗಿ ಎಲ್ಲಾ ಎಲೆಗಳೂ ಸಹ ಈ ಎಣ್ಣೆಯಲ್ಲಿ ಸುಟ್ಟು ಹೋಗುವವರೆಗೆ ಸೇರಿಸಿರಿ.
2. ನಂತರ ಒಂದು ಸ್ವಚ್ಛವಾದ ಬಟ್ಟೆಯನ್ನುಪಯೋಗಿಸಿ ಈ ಎಣ್ಣೆಯನ್ನು ಸೋಸಿರಿ.
3. ನಿಯಮಿತವಾಗಿ ಈ ಎಣ್ಣೆಯನ್ನು ನಿಮ್ಮ ಕೇಶರಾಶಿಗೆ ಮಸಾಜ್ ಮಾಡಿರಿ ಹಾಗೂ ತನ್ಮೂಲಕ ಕೂದಲ ಬೆಳವಣಿಗೆಯನ್ನು ವೃದ್ಧಿಗೊಳಿಸಿರಿ.

ಕಡಲೆ ಹಿಟ್ಟು ಮತ್ತು ಮೊಸರು

ಅವಶ್ಯಕ ಸಾಮಗ್ರಿಗಳು: ಕಡಲೆ ಹಿಟ್ಟು, ಅರಿಶಿಣ, ಮೊಸರು.
ವಿಧಾನ:
1. ಸ್ವಲ್ಪ ಅರಿಶಿನ, ಕಡಲೆಹಿಟ್ಟು, ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿರಿ
2. ಈ ಪೇಸ್ಟ್ ಅನ್ನು ಭಾದಿತ ಭಾಗಕ್ಕೆ ಲೇಪಿಸಿರಿ ಹಾಗೂ ಅದನ್ನು ಒಣಗಲು ಬಿಡಿರಿ
3. ಒಣಗಿದ ಪೇಸ್ಟ್ ಅನ್ನು ಹಾಗೆಯೇ ಸ್ವಲ್ಪ ಕಾಲ ಉಜ್ಜಿರಿ ನಂತರ ಅದನ್ನು ನಯವಾಗಿ ತೊಳೆಯಿರಿ
4. ತದನಂತರ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಈ ಜಾಗಕ್ಕೆ ಲೇಪಿಸಿರಿ
English summary

Simple Home Remedies To Control Hair Fall

In this post, we talk about some of the best home remedies you can use to get rid of the problem. And in addition to those, there are certain other tips that can help you say good bye to hair loss – once and for all! Trust us when we say this – these remedies can go a long way in treating your hair troubles!
X
Desktop Bottom Promotion