For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆ: ಆಹಾರ ಕ್ರಮ ಹೀಗಿರಲಿ

By Deepak
|

ಸೊಂಪಾದ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಕನಸು. ಇದಕ್ಕಾಗಿ ಮಾಡದ ಆರೈಕೆಯಿಲ್ಲ, ಬಳಸದ ಎಣ್ಣೆಯಿಲ್ಲ. ಆದರೂ ಸತತವಾಗಿ ಉದುರುವ ಕೂದಲು ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ದಿನಂಪ್ರತಿ ಐವತ್ತರಿಂದ ನೂರು ಕೂದಲುಗಳು ಉದುರುವುದು ಸ್ವಾಭಾವಿಕ. ಕೆಲವರಲ್ಲಿ ಇದು ನೂರೈವತ್ತಕ್ಕೂ ಹೆಚ್ಚು ಉದುರಬಹುದು. ಆದರೆ ಇಷ್ಟೇ ಪ್ರಮಾಣದ ಕೂದಲುಗಳು ಹೊಸದಾಗಿ ಹುಟ್ಟುವುದರಿಂದ ಆತಂಕಕ್ಕೆ ಕಾರಣವಿಲ್ಲ.

ಆದರೆ ಕೂದಲು ಹುಟ್ಟುವ ಪ್ರಮಾಣಕ್ಕಿಂತಲೂ ಉದುರುವ ಪ್ರಮಾಣವೇ ಹೆಚ್ಚಾದರೆ ಮಾತ್ರ ಆತಂಕ ಎದುರಾಗುವುದು ಸಹಜ. ಇದಕ್ಕೆ ನಿಮ್ಮ ಆರೈಕೆಯಲ್ಲಿ ಕೊರತೆಯನ್ನೇ ಹುಡುಕುವ ಬದಲು ನಿಮ್ಮ ಆಹಾರ ಕ್ರಮ ಅಭ್ಯಾಸಗಳ ಬಗ್ಗೆಯೂ ಕೊಂಚ ಚಿಂತಿಸಿದರೆ ಇದಕ್ಕೆ ಕಾರಣ ಕಂಡುಕೊಳ್ಳಬಹುದು.

ಅಸಲಿಗೆ ಕೂದಲು ಉದುರುವಿಕೆಯು ಕಾಣಿಸಿಕೊಳ್ಳಲು ಪ್ರಮುಖ ಕಾರಣವೇನೆಂದರೆ, ಸೇವಿಸುವ ಆಹಾರ ಕ್ರಮದಲ್ಲಿ ಪೋಷಕಾಂಶದ ಕೊರತೆ ಎಂಬುದನ್ನು ನಾವು ಮರೆಯಬಾರದು. ಹೌದು, ಕೂದಲಿನ ಆರೋಗ್ಯವನ್ನು ನಿರ್ಧರಿಸುವಲ್ಲಿ, ಪೋಷಕಾಂಶಗಳು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಪೋಷಕಾಂಶಗಳಾದ ಸತು, ತಾಮ್ರ, ವಿಟಮಿನ್ ಸಿ, ಕಬ್ಬಿಣಾಂಶ, ಪ್ರೋಟಿನ್ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಮುಂತಾದುವುಗಳು ಕೂದಲನ್ನು ಬೆಳೆಸಲು ಮತ್ತು ಉದುರದಂತೆ ಹಾಗು ತೆಳ್ಳಗಾಗದಂತೆ ತಡೆಯಲು ಸಹಾಯ ಮಾಡುತ್ತವೆ. ಬನ್ನಿ ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಕೂದಲ ಆರೋಗ್ಯಕ್ಕೆ ಸಹಾಯ ಮಾಡಿ, ಅದು ಉದುರದಂತೆ ಮತ್ತು ತೆಳ್ಳಗಾಗದಂತೆ ಕಾಪಾಡುವಂತಹ ಪೋಷಕಾಂಶಗಳ ಕುರಿತು ತಿಳಿಸಿಕೊಡುತ್ತದೆ. ಮುಂದೆ ಓದಿ...

Nutrients That Prevents Hair loss

ಪ್ರೋಟೀನ್
ಪ್ರೋಟಿನ್ ಕೂದಲ ಆರೋಗ್ಯವನ್ನು ಕಾಪಾಡುವಂತಹ ಅಂಶಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತದೆ. ಇದು ಕೂದಲ ಬೆಳವಣಿಗೆಗೆ ಸಹಕರಿಸುವುದರ ಜೊತೆಗೆ, ಕೂದಲುದುರುವ ಸಮಸ್ಯೆಯಿಂದ ಕೊಂಚ ಸಾಂತ್ವಾನ ನೀಡುತ್ತದೆ. ಹಾಗಾಗಿ ಪ್ರೋಟಿನ್ ಯುಕ್ತ ಆಹಾರಗಳಾದ ಮೊಟ್ಟೆಗಳು, ಬೀನ್ಸ್, ಒಣಹಣ್ಣುಗಳು, ಕೋಳಿ ಮಾಂಸ ಮತ್ತು ಚೀಸ್‌ ಗಳಂತಹ ಆಹಾರ ಪದಾರ್ಥಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.

ವಿಟಮಿನ್ ಬಿ ಕಾಂಪ್ಲೆಕ್ಸ್
ವಿಟಮಿನ್ ಬಿ ಕಾಂಪ್ಲೆಕ್ಸ್ ಕೂದಲ ಬುಡಕ್ಕೆ ಮತ್ತು ಬೇರುಗಳಿಗೆ ಬೇಕಾದ ಆಮ್ಲಜನಕವನ್ನು ಮತ್ತು ಹಿಮೋಗ್ಲೋಬಿನ್ ಅನ್ನು ಒದಗಿಸುತ್ತದೆ. ಇದರ ಮೂಲಕ ಕೂದಲಿನ ಬೆಳವಣಿಗೆಯನ್ನು ಇದು ಸುಗಮಗೊಳಿಸುತ್ತದೆ. ಹಾಗಾಗಿ ವಿಟಮಿನ್ ಬಿ ಕಾಂಪ್ಲೆಕ್ಸ್ ಯುಕ್ತ ಆಹಾರಗಳಾದ ಹಾಲು, ಕೋಳಿ ಮಾಂಸ, ಸಾಲ್ಮನ್ ಮೀನು, ಗಳಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ

ಸತು
ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟು ಸಮಸ್ಯೆಯು ಸತುವಿನ ಕೊರತೆಯ ಜೊತೆಗೆ ಸಂಬಂಧಪಟ್ಟಿರುತ್ತದೆ. ಸತುವು ಕೋಶಗಳ ಅಭಿವೃದ್ಧಿಗೆ ಮತ್ತು ಅದರ ರಿಪೇರಿಗೆ ನೆರವಾಗುತ್ತದೆ. ಕೂದಲಿನ ಬುಡದಲ್ಲಿರುವ ಗ್ರಂಥಿಗಳಲ್ಲಿ ಜಿಡ್ಡಿನಂಶ ಕಾಪಾಡಿಕೊಳ್ಳುವಂತೆ ಮಾಡಿ, ತಲೆ ಹೊಟ್ಟು ಮತ್ತು ಒಣ ಕೂದಲು ಸಮಸ್ಯೆ ಬರದಂತೆ ಮಾಡುತ್ತದೆ. ಹಾಗಾಗಿ ಮಾಂಸ, ಒಣಹಣ್ಣುಗಳು ಮತ್ತು ಧವಸ ಧಾನ್ಯಗಳಂತಹ ಆಹಾರ ಪದಾರ್ಥಗಳನ್ನು ಸೇವಿಸಿ.

ತಾಮ್ರ
ತಾಮ್ರವು ಹೊಸ ಹಿಮೋಗ್ಲೋಬಿನ್ ಉತ್ಪತ್ತಿಯಾಗಲು ನೆರವಾಗುತ್ತದೆ. ಹಿಮೋಗ್ಲೋಬಿನ್ ಕೂದಲ ಬೆಳವಣಿಗೆಗೆ ಅತ್ಯಾವಶ್ಯಕ. ಸೋಯಾ, ಜೀರಿಗೆ, ಒಣ ಹಣ್ಣುಗಳು, ಮತ್ತು ದಂಟು ಹಾಗು ಮಾಂಸದಲ್ಲಿ ಈ ತಾಮ್ರದ ಅಂಶವು ಹೆಚ್ಚಾಗಿ ಕಂಡುಬರುತ್ತದೆ

ವಿಟಮಿನ್ ಸಿ

ವಿಟಮಿನ್ ಸಿ ಅಧಿಕವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಒಡೆದ ಕೂದಲು ಮತ್ತು ತುಂಡಾಗುವ ಕೂದಲ ಸಮಸ್ಯೆಯನ್ನು ತಡೆಯಬಹುದು. ಕಿತ್ತಳೆ, ಲಿಂಬೆ, ಬೆರ್ರಿಗಳು, ಕಲ್ಲಂಗಡಿ ಮತ್ತು ಟೊಮೇಟೊಗಳಂತಹ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸುವುದನ್ನು ಮರೆಯಬೇಡಿ.

ಕಬ್ಬಿಣಾಂಶ
ಕಬ್ಬಿಣಾಂಶದ ಕೊರತೆಯು ಕೂದಲು ಒಡೆಯುವ ಸಮಸ್ಯೆಯನ್ನು ತರುತ್ತದೆ. ಕಬ್ಬಿಣಾಂಶದ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ತಡೆಯಲು ಕಬ್ಬಿಣಾಂಶ ಅಧಿಕವಾಗಿರುವ ಕೋಳಿ ಮಾಂಸ, ಮೊಟ್ಟೆ, ಮೀನು, ಬಸಳೆ ಮತ್ತು ಸೋಯಾಬೀನ್‌ಗಳನ್ನು ಸೇವಿಸಿ.

ಹಸಿರು ಸೊಪ್ಪು ಮತ್ತು ತರಕಾರಿಗಳು
ಪಾಲಾಕ್ ಸೊಪ್ಪು, ಬ್ರೊಕೋಲಿ, ನುಗ್ಗೆ ಕಾಯಿ ಸೊಪ್ಪು ಈ ರೀತಿಯ ಹಸಿರು ಸೊಪ್ಪುಗಳಲ್ಲಿ ಕಬ್ಬಿಣದಂಶ ಮತ್ತು ವಿಟಮಿನ್ ಎ ಇರುವುದರಿಂದ ಕೂದಲಿಗೆ ತುಂಬಾ ಒಳ್ಳೆಯದು.

ದವಸ ಧಾನ್ಯಗಳು
ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

English summary

Nutrients That Prevents Hair loss

Hair loss of hair is one of the major problem faced by everyone these days. To avoid this, we go through various processes such as hair treatments, spa and vitamin tablets. Intake of food decides the health of hair. It is essential to choose right kind of foods to nourish our hair from deep within. One of the major reasons for hair fall is lack of essential nutrients. Boldsky will share the nutrients that are very much required for healthy hair and the foods that contain these nutrients. Read on to know more about it.
X
Desktop Bottom Promotion