For Quick Alerts
ALLOW NOTIFICATIONS  
For Daily Alerts

ಸುಂದರ ಕೇಶದ ಆರೈಕೆಗೆ-ಬಾಳೆಹಣ್ಣಿನ ಜ್ಯೂಸ್

|

ಬಾಳೆಹಣ್ಣು ಆರೋಗ್ಯಕ್ಕೆ ಹೇಗೆ ಉತ್ತಮವೋ ಅಂತೆಯೇ ಕೂದಲ ಆರೈಕೆಗೂ ಪೂರಕವೆಂಬುದನ್ನು ಕೇಳಿ ನಿಮಗೆಲ್ಲಾ ಅಚ್ಚರಿವಾಗಬಹುದು ಅಲ್ಲವೇ ? ಹೌದು, ಬಾಳೆಹಣ್ಣನ್ನು ನಿತ್ಯವೂ ಸೇವಿಸುವ ಮೂಲಕ ದೇಹದ ಇತರ ಅಂಗಗಳ ಜೊತೆಗೇ ಕೂದಲಿಗೂ ಉತ್ತಮ ಆರೈಕೆ ದೊರಕುತ್ತದೆ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಬಾಳೆಹಣ್ಣಿನ ಪೋಷಕಾಂಶಗಳು ಸುಲಭವಾಗಿ ಜೀರ್ಣವಾಗುವ ಮೂಲಕ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಮಲದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. ಕೂದಲ ಆರೈಕೆಗೂ ಬಾಳೆಹಣ್ಣು ಯಾವ ರೀತಿಯಲ್ಲಿ ಪೂರಕವಾಗಿದೆ ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ....

ವಿವಿಧ ವಿಟಮಿನ್‌ಗಳ ಆಗರ

ವಿವಿಧ ವಿಟಮಿನ್‌ಗಳ ಆಗರ

ಬಾಳೆಹಣ್ಣಿನಲ್ಲಿ ವಿವಿಧ ವಿಟಮಿನ್‌ಗಳ ಆಗರವೇ ಇದ್ದು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಸಹಕರಿಸುತ್ತವೆ. ವಿಟಮಿನ್ B3, B5, B6 ಮತ್ತು C ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ವಿಶೇಷವಾಗಿ ಕೂದಲ ಬುಡಕ್ಕೆ ಉತ್ತಮ ಪೋಷಣೆ ದೊರಕುತ್ತದೆ. ಪರಿಣಾಮವಾಗಿ ಮಹಿಳೆಯರು ಇಚ್ಛಿಸುವ ಉದ್ದ ಮತ್ತು ದಟ್ಟವಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.

ಪೊಟ್ಯಾಶಿಯಂ

ಪೊಟ್ಯಾಶಿಯಂ

ಕೂದಲ ಉದುರುವಿಕೆಗೆ ಪೊಟ್ಯಾಶಿಯಂ ಕೊರತೆ ಪ್ರಮುಖ ಕಾರಣವಾಗಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು ಕೂದಲ ಪೋಷಣೆಗೆ ಹೆಚ್ಚಿನ ನೆರವು ನೀಡುತ್ತದೆ.

ಆರ್ದತೆ

ಆರ್ದತೆ

ಚರ್ಮಕ್ಕೆ ಮತ್ತು ಕೂದಲ ಬುಡಗಳಿಗೆ ಆರ್ದ್ರತೆ ಅತಿ ಅಗತ್ಯ. ಆದ್ರತೆಯಿಲ್ಲದಿದ್ದರೆ ಚರ್ಮ ಒಣಗಿ ಪಕಳೆಯೇಳುತ್ತದೆ. ಹಾಗೂ ಕೂದಲ ಬುಡಗಳು ಶಿಥಿಲವಾಗಿ ಕೂದಲು ಸುಲಭವಾಗಿ ಕಿತ್ತುಬರಲು ಸಾಧ್ಯವಾಗುತ್ತದೆ. ಬಾಳೆಯಹಣ್ಣು ದೇಹಕ್ಕೆ ಉತ್ತಮ ಪ್ರಮಾಣದ ಆರ್ದ್ರತೆ ನೀಡುವ ಮೂಲಕ ಚರ್ಮ ಮತ್ತು ಕೂದಲ ಬುಡಗಳಿಗೆ ಪೋಷಣೆ ನೀಡಿ ಭದ್ರವಾಗಿಸುತ್ತದೆ ಹಾಗೂ ಚರ್ಮವನ್ನು ಕಾಂತಿಯುಕ್ತವಾಗಿಸುತ್ತದೆ

ಕಂಡೀಶನರ್

ಕಂಡೀಶನರ್

ಹೊಳಪುಳ್ಳ ಕೂದಲಿಗೆ ಕಂಡೀಶನರ್ ಬಳಸುವುದು ಅಗತ್ಯ. ಬಾಳೆ ಹಣ್ಣಿನ ರಸವನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಕಂಡೀಶನರ್‌ನ ಉತ್ತಮ ಗುಣಗಳನ್ನು ಪಡೆಯಬಹುದು.

ಮೊಟ್ಟೆ ಮತ್ತು ಬಾಳೆಹಣ್ಣು

ಮೊಟ್ಟೆ ಮತ್ತು ಬಾಳೆಹಣ್ಣು

ಕೂದಲ ಪೋಷಣೆಗೆ ಮೊಟ್ಟೆ ಸಹಾ ಉತ್ತಮವಾಗಿದೆ. ಬಾಳೆಹಣ್ಣಿನ ರಸ ಮತ್ತು ಮೊಟ್ಟೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚಿಕೊಳ್ಳುವ ಮೂಲಕ ಕೂದಲಿಗೆ ಹೆಚ್ಚಿನ ಪೋಷಣೆಯನ್ನು ಪಡೆಯಬಹುದು.

ಮೊಟ್ಟೆ ಮತ್ತು ಬಾಳೆಹಣ್ಣು

ಮೊಟ್ಟೆ ಮತ್ತು ಬಾಳೆಹಣ್ಣು

ಆಹಾರದಲ್ಲಿಯೂ ಮೊಟ್ಟೆ ಮತ್ತು ಬಾಳೆಹಣ್ಣು ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವ ಮೂಲಕ ದೇಹಕ್ಕೆ ಒಳಗಿನಿಂದಲೂ ಹೆಚ್ಚಿನ ಪೋಷಣೆಯನ್ನು ನೀಡಬಹುದು.

ಜೇನು ಮತ್ತು ಬಾಳೆಹಣ್ಣು

ಜೇನು ಮತ್ತು ಬಾಳೆಹಣ್ಣು

ದೇಹದ ಆರೋಗ್ಯಕ್ಕೆ ಉತ್ತಮವಾದ ಜೇನು ಕೂದಲ ಆರೈಕೆಗೂ ಉತ್ತಮವಾಗಿದೆ. ಸಮಪ್ರಮಾಣದಲ್ಲಿ ಜೇನು ಮತ್ತು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಂಡಾಗ ಕೂದಲು ಕಾಂತಿಯುಕ್ತ ಮತ್ತು ದೃಢವಾಗುತ್ತದೆ.

ಮೊಸರು ಮತ್ತು ಬಾಳೆಹಣ್ಣು

ಮೊಸರು ಮತ್ತು ಬಾಳೆಹಣ್ಣು

ಮೊಸರು ಸಹಾ ಕೂದಲಿಗೆ ಪೋಷಣೆ ನೀಡುವ ಇನ್ನೊಂದು ಸಾಮಾಗ್ರಿಯಾಗಿದೆ. ಬಾಳೆಹಣ್ಣಿನೊಂದಿಗೆ ಮೊಸರನ್ನು ಸೇರಿಸಿ ನೀಡುವ ಆರೈಕೆಯ ಬಳಿಕ ಬೆಳೆಯುವ ಸೊಂಪಾದ ಕೂದಲು ಯಾವುದೇ ವೃತ್ತಿಪರ ಸೌಂದರ್ಯಮಳಿಗೆಯಲ್ಲಿ ಸಿಗಬಹುದಾದ ಸೇವೆಗಿಂತಲೂ ಉತ್ತಮವಾಗಿದೆ.

ಮೊಸರು ಮತ್ತು ಬಾಳೆಹಣ್ಣು

ಮೊಸರು ಮತ್ತು ಬಾಳೆಹಣ್ಣು

ಇದು ಕೂದಲಿನ ಕಾಂತಿಯನ್ನು ಹೆಚ್ಚಿಸುವ ಮೂಲಕ ಎಲ್ಲರ ಗಮನ ನಿಮ್ಮತ್ತ ತಿರುಗುವಂತೆ ಮಾಡುತ್ತದೆ. ಸಮಪ್ರಮಾಣದಲ್ಲಿ ಮೊಸರು ಮತ್ತು ಬಾಳೆಹಣ್ಣಿನ ತಿರುಳನ್ನು ಮಿಶ್ರಣ ಮಾಡಿ ಕೂದಲಿಗೆ ಲೇಪಿಸಿಕೊಂಡು ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಕೂದಲು ಮತ್ತು ಕೂದಲ ಬುಡಕ್ಕೆ ಉತ್ತಮ ಪೋಷಣೆ ಲಭ್ಯವಾಗುತ್ತದೆ.

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಒಂದು ವೇಳೆ ಕೂದಲು ಗಿಡ್ಡವಾಗಿದ್ದು ಇದು ತುಂಬಾ ಉದ್ದವಾಗಿ ಬೆಳೆಯುವಂತೆ ಮಾಡಬೇಕಾದರೆ ಕಡ್ಲೆಹಿಟ್ಟು ಮತ್ತು ಬಾಳೆಹಣ್ಣಿನ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸಂಯೋಜನೆಯಲ್ಲಿ ಕೂದಲಿಗೆ ಅಗತ್ಯವಿರುವ ಪ್ರೋಟೀನು ಮತ್ತು ವಿಟಮಿನ್ನುಗಳಿದ್ದು ಕೂದಲಿಗೆ ಒದಗಿಸಲು ಸಮರ್ಥವಾಗಿವೆ.

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಇದಕ್ಕಾಗಿ ಸಮಪ್ರಮಾಣದಲ್ಲಿ ಕಡ್ಲೆಹಿಟ್ಟು ಮತ್ತು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಂಡು ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಬಾಳೆಹಣ್ಣಿನ ವಿಟಮಿನ್ ಮತು ಕಡ್ಲೆಹಿಟ್ಟಿನ ಪ್ರೋಟೀನ್ ಜೋಡಿ ಕೂದಲಿಗೆ ಪೋಷಣೆ ಮತ್ತು ದೃಢತೆಗಳನ್ನು ನೀಡುವ ಮೂಲಕ ಸೊಂಪಾದ ಮತ್ತು ದೃಢವಾದ ಕೂದಲನ್ನು ಪಡೆಯಲು ಸಹಕರಿಸುತ್ತವೆ.

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು

ಒಂದು ವೇಳೆ ಬೇರೆ ಸಾಮಾಗ್ರಿಗಳೊಡನೆ ಮಿಶ್ರಣ ಮಾಡಲು ಇಚ್ಛಿಸದಿದ್ದಲ್ಲಿ ಕೇವಲ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಕೂದಲಿಗೆ ಹಚ್ಚಿಕೊಳ್ಳಬಹುದು. ಇದರ ಕಂಡೀಶನರ್ ಗುಣ ಪ್ರತಿ ಕೂದಲಿಗೂ ಹೊರಗಿನಿಂದ ದೃಢತೆ ನೀಡುವ ಜೊತೆಗೇ ತಲೆಗೂದಲ ಬುಡಕ್ಕೆ ಆರ್ದ್ರತೆಯನ್ನೂ ನೀಡುತ್ತದೆ. ಇದರಿಂದಾಗಿ ಕೂದಲ ಉದ್ದ ಹೆಚ್ಚುವ ಜೊತೆಗೇ ಕೂದಲು ಉದುರುವುದು ಕಡಿಮೆಯಾಗಿ ಆರೋಗ್ಯವಂತವಾಗುತ್ತದೆ.

English summary

How Banana Juice Helps Your Hair

Want to go bananas with a headful of healthy glowing hair? The best way is to use bananas. That is right! Banana juice is proven to improve hair health. So what is it that makes bananas so good 
 
 for hair? We all know that this humble fruit is excellent for the digestive system and helps keep an upset stomach well within control. But how is it that it benefits hair? There are several reasons for this. Consider the following. 
Story first published: Tuesday, September 22, 2015, 11:37 [IST]
X
Desktop Bottom Promotion