For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!

By manu
|

ಆರೋಗ್ಯವನ್ನು ಕಾಪಾಡಿಕೊಳ್ಳಲು ಲಿಂಬೆಯ ಮಹತ್ವವನ್ನು ಎಲ್ಲರೂ ಅರಿತಿದ್ದೇವೆ. ಆದರೆ ಈ ಲಿಂಬೆರಸ ಕೂದಲಿಗೂ ಉತ್ತಮ ಎಂಬ ಮಾಹಿತಿಯನ್ನು ಮಾತ್ರ ಹೆಚ್ಚಿನವರಿಗೆ ಅರಿವಿಲ್ಲ. ಇದರಲ್ಲಿ ಪ್ರಮುಖವಾಗಿರುವ ಸಿಟ್ರಿಕ್ ಆಮ್ಲ, ವಿಟಮಿನ್ ಸಿ, ಫೋಲಿಕ್ ಆಮ್ಲ. ವಿಟಮಿನ್ ಬಿ ಮತ್ತು ಇತರ ಖನಿಜಗಳಾದ ಕ್ಯಾಲ್ಸಿಯಂ, ಗಂಧಕ ಮತ್ತು ಮೆಗ್ನೀಶಿಯಂ ಆರೋಗ್ಯಕ್ಕೆ ಪೂರಕವಾಗಿವೆ. ಈ ಖನಿಜಗಳಿರುವ ಲಿಂಬೆರಸವನ್ನು ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ತಲೆಗೂದಲ ಬೆಳವಣಿಗೆಯನ್ನು ಉತ್ತೇಜಿಸುವುದು ಹಾಗೂ ಕೂದಲ ಇತರ ತೊಂದರೆಗಳನ್ನು ನಿವಾರಿಸಲೂ ಸಾಧ್ಯ. ಕೂದಲುದುರುವ ಸಮಸ್ಯೆಗೆ ಒಂದಿಷ್ಟು ಸರಳ ಟಿಪ್ಸ್

ಆದರೆ ಈ ರಸವನ್ನು ಅದೇ ರೂಪದಲ್ಲಿ ಹಚ್ಚಬಾರದು, ಏಕೆಂದರೆ ಇದರಲ್ಲಿರುವ ಆಮ್ಲೀಯತೆ ಕೂದಲಿಗೆ ಹಾನಿಯುಂಟು ಮಾಡಬಹುದು. ಬದಲಿಗೆ ಗುಲಾಬಿ ನೀರು, ಜೇನು ಅಥವಾ ಮೊಟ್ಟೆಯ ಬಿಳಿಭಾಗದೊಂದಿಗೆ ಮಿಶ್ರಣ ಮಾಡಿ ಹಚ್ಚುವ ಮೂಲಕ ಉತ್ತಮ ಪೋಷಣೆ ಮತ್ತು ಆರೈಕೆಯನ್ನು ಪಡೆಯಬಹುದು.

ಪರ್ಯಾಯವಾಗಿ ಲಿಂಬೆರಸಕ್ಕೆ ಏನನ್ನೂ ಸೇರಿಸದೇ ಕೇವಲ ಹದಿನೈದು ನಿಮಿಷಗಳ ಅವಧಿಗಾಗಿ ಕೂದಲನ್ನು ತೋಯಿಸಿ ಹೆಚ್ಚಿನ ಪ್ರಯೋಜನ ಪಡೆಯಬಹುದು. ಆದರೆ ಈ ಅವಧಿ ಹೆಚ್ಚಾದರೆ ಕೂದಲು ಬಿಳಿಚಿಕೊಳ್ಳುತ್ತದೆ. ಆದ್ದರಿಂದ ಇದನ್ನು ಸರಿಯಾಗಿ ಹಚ್ಚಿಕೊಳ್ಳುವ ವಿಧಾನವನ್ನು ಮೊದಲು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಲಿಂಬೆಹಣ್ಣನ್ನು ಬಳಸಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯಿರಿ

 ಕೂದಲ ಬೆಳವಣಿಗೆಗೆ

ಕೂದಲ ಬೆಳವಣಿಗೆಗೆ

ಸಮಪ್ರಮಾಣದಲ್ಲಿ ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ, ಹಾಗೂ ಲಿಂಬೆರಸವನ್ನು ಕದಡಿ ಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣ ದೊರಕುತ್ತದೆ ಹಾಗೂ ಕೂದಲ ಬೆಳವಣಿಗೆ ಹೆಚ್ಚುತ್ತದೆ. ಅಲ್ಲದೇ ದಟ್ಟ ಮತ್ತು ನೈಸರ್ಗಿಕ ಹೊಳಪನ್ನು ಪಡೆಯಲೂ ಸಾಧ್ಯವಾಗುತ್ತದೆ.

ಕೂದಲ ತುದಿ ಸೀಳುವ ತೊಂದರೆಗೆ

ಕೂದಲ ತುದಿ ಸೀಳುವ ತೊಂದರೆಗೆ

ಕೂದಲಿಗೆ ಸೂಕ್ತ ವಾದ ಪೋಷಣೆ ದೊರಕದಿದ್ದರೆ ಕೂದಲು ತನ್ನ ಸಾಮರ್ಥ್ಯ ಕಳೆದುಕೊಂಡು ತುದಿಗಳಲ್ಲಿ ಸೀಳುಬಿಡುತ್ತವೆ. ಇದು ಕೂದಲ ಅನಾರೋಗ್ಯದ ಸ್ಪಷ್ಟ ಲಕ್ಷಣವಾಗಿದ್ದು ನೋಡಲು ಅನಾಕರ್ಷಕವಾಗಿರುತ್ತದೆ. ಇದರಿಂದ ಪಾರಾಗಲು ಸಮಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿ ಕೂದಲ ತುದಿಗಳಿಗೆ ಹಚ್ಚಬೇಕು. ಮೂರು ವಾರಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸುವ ಮೂಲಕ ಉತ್ತಮ ಪರಿಣಾಮವನ್ನು ಪಡೆಯಬಹುದು.

ತಲೆಬುರುಡೆಯ ಚರ್ಮಕ್ಕೆ ಉತ್ತಮವಾಗಿದೆ

ತಲೆಬುರುಡೆಯ ಚರ್ಮಕ್ಕೆ ಉತ್ತಮವಾಗಿದೆ

ತಲೆಯ ಚರ್ಮದಲ್ಲಿ ಅತಿ ಹೆಚ್ಚು ಕೂದಲುಗಳಿವೆ. ಆದ್ದರಿಂದಲೇ ಈ ಭಾಗದಲ್ಲಿ ಚರ್ಮದ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗದೇ ತಲೆಹೊಟ್ಟಿನ ರೂಪದಲ್ಲಿ ಅಲ್ಲಿಯೇ ಅಂಟಿಕೊಂಡಿರುತ್ತವೆ. ಇದು ತುರಿಕೆ ಮತ್ತು ಇತರ ತೊಂದರೆಗಳನ್ನು ಹುಟ್ಟುಹಾಕುತ್ತದೆ. ಇದಕ್ಕಾಗಿ ಒಂದು ಲಿಂಬೆಯನ್ನು ಕತ್ತರಿಸಿ ನಯವಾಗಿ ಹಿಂಡುತ್ತಾ ನೇರವಾಗಿ ಕೂದಲ ಬುಡಗಳಿಗೆ ಹಚ್ಚಿಕೊಳ್ಳುತ್ತಾ ಹೋಗಿ ಇಡಿಯ ತಲೆಯನ್ನು ಆವರಿಸಬೇಕು. ಬರೆಯ ಐದು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಂಡು ಬಿಡಿ. ಇದು ತುರಿಕೆಯನ್ನು ನಿವಾರಿಸಿ ಕೂದಲನ್ನು ನಯವಾಗಿಸುವುದರ ಜೊತೆಗೇ ನವಿರಾದ ಪರಿಮಳವನ್ನೂ ನೀಡುತ್ತದೆ.

ಕೂದಲ ನುಣುಪಿಗಾಗಿ

ಕೂದಲ ನುಣುಪಿಗಾಗಿ

ಒಂದು ಚಿಕ್ಕ ಪಾತ್ರೆಯಲ್ಲಿ ಎರಡು ದೊಡ್ಡ ಚಮಚ ಕೊಬ್ಬರಿ ಎಣ್ಣೆಗೆ ಒಂದು ದೊಡ್ಡ ಗಾತ್ರದ ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಬಳಿಕ ಈ ಪಾತ್ರೆಯನ್ನು ಫ್ರಿಜ್ಜಿನಲ್ಲಿಡಿ. ಕೊಂಚ ಹೊತ್ತಿನ ಬಳಿಕ ಈ ದ್ರವ ಗಾಢವಾಗುತ್ತದೆ. ಈ ದ್ರವವನ್ನು ಕೂದಲ ಬುಡಕ್ಕೆ ಬರುವಂತೆ ಇಡಿಯ ತಲೆಗೆ ಹಚ್ಚಿ. ಬಳಿಕ ಅಗಲವಾದ ಬಾಚಣಿಗೆಯನ್ನು ಬಳಸಿ ತಲೆಬಾಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.ಇದರಿಂದ ಕೂದಲು ನಯವಾಗಿ, ಗುಂಗುರುಗಳಿಲ್ಲದೇ ಮತ್ತು ಕಾಂತಿಯುಕ್ತವಾಗಿ ಹೊಳೆಯುತ್ತದೆ.

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟು ನಿವಾರಣೆಗೆ

ವಿಶ್ವದ ಶೇಖಡಾ ಐವತ್ತರಷ್ಟು ಜನರಿಗೆ ತಲೆಹೊಟ್ಟಿನ ತೊಂದರೆಯಿದೆ. ಇದಕ್ಕೆ ನೈಸರ್ಗಿಕವಾದ ಉತ್ತರವೆಂದರೆ ಲಿಂಬೆರಸ. ಇದಕ್ಕಾಗಿ ಒಂದು ಲಿಂಬೆಯ ರಸವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಿಂಡಿ ಕೊಂಚ ನೀರು ಸೇರಿಸಿ ಬಳಿಕ ತಲೆಗೂದಲಿಗೆ ಹಚ್ಚಿಕೊಳ್ಳಿ. ಇದರ ಆಮ್ಲೀಯತೆ ತಲೆಗೂದಲಿನ ಬುಡದಲ್ಲಿರುವ ಪಕಳೆಗಳನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ.

ತಲೆಯಲ್ಲಿ ಯಾವಾಗಲೂ ಎಣ್ಣೆ ಪಸೆಯೇ, ಚಿಂತೆ ಬಿಡಿ

ತಲೆಯಲ್ಲಿ ಯಾವಾಗಲೂ ಎಣ್ಣೆ ಪಸೆಯೇ, ಚಿಂತೆ ಬಿಡಿ

ಎಣ್ಣೆಚರ್ಮದವರಿಗೆ ತಲೆಯ ಭಾಗದಲ್ಲಿಯೂ ಎಣ್ಣೆಯ ಪಸೆ ಇರುತ್ತದೆ. ಇದಕ್ಕಾಗಿ ಉತ್ತಮ ಮನೆಮದ್ದು ಎಂದರೆ ಲಿಂಬೆರಸದ ಬಳಕೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿಯೂ ಈ ಗುಣದ ರಾಸಾಯನಿಕಗಳಿವೆಯಾದರೂ ಇವು ಚರ್ಮದಡಿಯ ಮೇದೋ ಗ್ರಂಥಿ (sebaceous gland) ಗಳ ಮೇಲೇ ಪ್ರಭಾವ ಬೀರಿ ಚರ್ಮದ ಆರೋಗ್ಯವನ್ನೇ ಕೆಡಿಸಬಹುದು. ಆದರೆ ಲಿಂಬೆರಸ ಈ ಗ್ರಂಥಿಗಳಿಗೆ ಸುರಕ್ಷಿತವಾಗಿದೆ. ಚರ್ಮ ಮತ್ತು ಕೂದಲಿನಲ್ಲಿ ಸದಾ ಎಣ್ಣೆಪಸೆ ಇರುವವರಿಗೆ ಲಿಂಬೆರಸ ಒಂದು ವರದಾನವಾಗಿದೆ.

ಕೂದಲ ಉದುರುವಿಕೆ ಕಡಿಮೆಯಾಗುತ್ತದೆ

ಕೂದಲ ಉದುರುವಿಕೆ ಕಡಿಮೆಯಾಗುತ್ತದೆ

ಕೂದಲ ಉದುರುವಿಕೆಗೆ ಕೂದಲ ಬುಡದಲ್ಲಿ ಸಾಕಷ್ಟು ಪೋಷಣೆ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಇದಕ್ಕೆ ಲಿಂಬೆರಸ, ಶಿರ್ಕಾ ಮತ್ತು ಉಪ್ಪು ಸೇರಿಸಿ ಕೂದಲ ಬುಡಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲುದುರುವ ತೊಂದರೆ ನಿವಾರಣೆಯಾಗುತ್ತದೆ.

ಹೇನುಗಳ ಕಾಟಕ್ಕೆ

ಹೇನುಗಳ ಕಾಟಕ್ಕೆ

ಹೇನು ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ದಾಟುವ ಕ್ರಿಮಿಗಳಾಗಿದ್ದು ತಲೆಯಲ್ಲಿ ತುರಿಕೆ ಮತ್ತಿತರ ತೊಂದರೆಗಳನ್ನು ನೀಡುತ್ತದೆ. ಅಲ್ಲದೇ ಕೂದಲ ಬುಡದಲ್ಲೆಲ್ಲಾ ಮೊಟ್ಟೆಗಳನ್ನಿಟ್ಟು ಅದರಿದ ಮರಿಗಳಾದ ಬಳಿಕ(ಸೀರು) ಇವು ಕೂದಲಿಗೆ ಅಂಟಿಕೊಂಡಿದ್ದು ಸುಲಭವಾಗಿ ಕೀಳಲು ಬರುವುದೇ ಇಲ್ಲ. ಮಕ್ಕಳಿಗೆ ಈ ತೊಂದರೆ ಹೆಚ್ಚು. ಇದರಿಂದ ಪಾರಾಗಲು ಅರ್ಧ ಲೋಟದಷ್ಟು ಶಿರ್ಕಾ ಮತ್ತು ಒಂದು ಲಿಂಬೆಹಣ್ಣಿನ ರಸ ಸೇರಿಸಿ ಕಲಕಿ ಕೂದಲಿಗೆ ಹಚ್ಚಿ. ಕೊಂಚ ಹೊತ್ತಿನ ಬಳಿಕ ಸ್ನಾನ ಮಾಡಿ ಚಿಕ್ಕ ಹಲ್ಲುಗಳ ಬಾಚಣಿಗೆ ಬಳಸಿ ತಲೆಬಾಚಿ. ಹೇನು ಮತ್ತು ಸೀರುಗಳೆಲ್ಲಾವೂ ಸತ್ತು ಹೊರಬರುತ್ತವೆ. (ಸೂಚನೆ ಈ ಕ್ರಮ ಅನುಸರಿಸುವಾಗ ಸರ್ವಥಾ ಮಗು ಕಣ್ಣು ತೆರೆಯದಂತೆ ಎಚ್ಚರ ವಹಿಸಿ, ಏಕೆಂದರೆ ಕಣ್ಣಿಗೆ ಒಂದು ತೊಟ್ಟು ಹೋದರೂ ಭಾರೀ ಉರಿಯಾಗುತ್ತದೆ)

ಕೂದಲನ್ನು ನುಣುಪಾಗಿಸಲು (conditioning)

ಕೂದಲನ್ನು ನುಣುಪಾಗಿಸಲು (conditioning)

ಮಾರುಕಟ್ಟೆಯಲ್ಲಿ ನೂರಾರು ಕಂಡೀಶನರುಗಳಿವೆ. ಒಂದೇ ಪ್ರಯೋಗದಲ್ಲಿ ಇದು ಉತ್ತಮ ಎಂದೆನ್ನಿಸಿದರೂ ಸತತ ಬಳಕೆಯಿಂದ ಹಾನಿಯಾಗುವ ಸಂಭವವಿದೆ. ಬದಲಿಗೆ ಒಂದು ಎಳನೀರಿಗೆ ಒಂದು ಇಡಿಯ ಲಿಂಬೆಯ ರಸವನ್ನು ಸೇರಿಸಿ ಕೂದಲನ್ನು ನೆನೆಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲನ್ನು ನುಣುಪಾಗಿಸಲು (conditioning)

ಕೂದಲನ್ನು ನುಣುಪಾಗಿಸಲು (conditioning)

ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಘಂಟೆಯ ಬಳಿಕ ಸೌಮ್ಯ ಶಾಂಪೂ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎರಡು ನೈಸರ್ಗಿಕ ಘಟಕಗಳು ಕೂದಲನ್ನು ನುಣುಪಾಗಿಸಿ ಸೌಂದರ್ಯವನ್ನು ಹೆಚ್ಚಿಸುತ್ತದೆ ಹಾಗೂ ಬಹುಕಾಲದವರೆಗೆ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

English summary

Benefits Of Lemon Juice For Hair

Lemon is indisputably one of the best fruits you can add to your beauty regime. This citrus fruit is packed with vitamin C, folic acid, vitamin B and other minerals like calcium, phosphorus and magnesium. When all these minerals are applied on your hair, it promotes hair growth and decreases problems like dandruff and hair fall. When you use this ingredient on your hair
Story first published: Thursday, October 29, 2015, 10:06 [IST]
X
Desktop Bottom Promotion